Latest Videos

ದೀಪಿಕಾ ಪಡುಕೋಣೆ ಮೊದಲ ಪ್ರೇಮಿ, ಮಲ್ಯ ಮಗನಿಗೆ ಕಂಕಣ ಭಾಗ್ಯ, ಹುಡ್ಗಿ ಯಾರು?

By Chethan KumarFirst Published Jun 17, 2024, 10:56 PM IST
Highlights

ಬ್ಯಾಂಕ್‌ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.  ಭಾರತದಲ್ಲಿರುವಾಗ ದೀಪಿಕಾ ಪಡುಕೋಣೆ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ ಸಿದ್ದಾರ್ಥ್ ಮಲ್ಯ ಬಳಿಕ ಜಾಸ್ಮಿನ್ ತೆಕ್ಕೆಗೆ ಜಾರಿದ್ದರು. 
 

ಲಂಡನ್(ಜೂ.17)  ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ಬೀಡು ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ ಕೋರ್ಟ್, ಕೇಸ್ ಅಂತಾ ಅಲೆದಾಡುತ್ತಿದ್ದಾರೆ. ಇದರ ನಡುವೆ ಮಲ್ಯ ಕುಟುಂಬದಲ್ಲಿ ಸಂಭ್ರಮ ಮನೆಮಾಡುತ್ತಿದೆ. ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು, ಶೀಘ್ರದಲ್ಲೇ ಸಿದ್ದಾರ್ಥ್ ಮಲ್ಯ ಹಾಗೂ ಜಾಸ್ಮಿನ್ ವಿವಾಹ ಮಹೋತ್ಸವ ನಡೆಯಲಿದೆ.

ಈ ಕುರಿತು ಸ್ವತಃ ಸಿದ್ದಾರ್ಥ್ ಮಲ್ಯ ಸಂತಸ ಹಂಚಿಕೊಂಡಿದ್ದಾರೆ. ಮದುವೆ ವಾರ ಆಗಮಿಸಿದೆ ಎಂದು ಜಾಸ್ಮಿನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಹಾಗೂ ಜಾಸ್ಮಿನ್ 2023ರ ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಮದುವೆ ಕುರಿತು ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇನೆ ಎಂದಿದ್ದ ಸಿದ್ದಾರ್ಥ್ ಮಲ್ಯ ಒಂದು ವರ್ಷದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಪ್ರಿಯಾಂಕಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿ ರಿಜೆಕ್ಟ್‌ ಆದ ದೀಪಿಕಾರ ಎಕ್ಸ್!

ಬಹುಕಾಲದ ಗೆಳತಿ ಜಾಸ್ಮಿನ್‌ಗೆ 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜೊತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಸಿದ್ದಾರ್ಥ್ ಪ್ರೀತಿಗೆ ಜಾಸ್ಮಿನ್ ಹೂವು ನಗೆ ಬೀರಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಉದ್ಯಮಿ ವಿಜಯ್ ಮಲ್ಯ ತಮ್ಮ ಉತ್ತುಂಗದಲ್ಲಿದ್ದಾಗ ಪುತ್ರ ಸಿದ್ಧಾರ್ಥ್ ಮಲ್ಯ ಕೂಡ ಅದೇ ಖದರ್‌ನಲ್ಲಿದ್ದರು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸಿದ್ದಾರ್ಥ್ ಮಲ್ಯ, ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ ಅಷ್ಟೇ ವೇಗದಲ್ಲಿ ಸಿದ್ದಾರ್ಥ್‌ನಿಂದ ದೀಪಿಕಾ ಪಡುಕೋಣೆ ದೂರವಾಗಿದ್ದಳು. ಏಕಾಂಗಿಯಾದ ಸಿದ್ಧಾರ್ಥ್ ಮಲ್ಯಗೆ ತಂದೆ ವಿಜಯ್ ಮಲ್ಯ ಕೂಡ ಶಾಕ್ ನೀಡಿದ್ದರು. ಹೀಗಾಗಿ ಲಂಡನ್‌ನಲ್ಲಿ ಉಳಿಯಬೇಕಾಯಿತು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಜಾಸ್ಮಿನ್ ಜೊತೆಗಿನ ಸ್ನೇಹ ಆತ್ಮೀಯವಾಗಿತ್ತು.

ಹೋಟೆಲ್‌ ಬಿಲ್‌ ಕೊಡೋಕೆ ಹೇಳಿದ ಸಿದ್ಧಾರ್ಥ್ ಮಲ್ಯ; ಈ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡ್ರಾ ದೀಪಿಕಾ?

ಸಿದ್ದಾರ್ಥ್ ಹಾಗೂ ದೀಪಿಕಾ ಪಡುಕೋಣೆ ನಡುವಿನ ಪ್ರೀತಿ ಹಲವು ಕಾರಣಗಳಿಂದ ಮುರಿದು ಬಿದ್ದಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು. ಡಿನ್ನರ್ ಡೇಟ್‌ನಲ್ಲಿ ಬಿಲ್ ಪಾವತಿಸಲು ಹೇಳಿದ್ದ. ಇದು ನನಗೆ ಮುಜುಗರವಾಗಿತ್ತು. ಆತನ ನಡೆ, ವರ್ತನೆ ಅಸಹ್ಯ ತರಿಸುತ್ತಿತ್ತ. ದೂರವಾಗುವುದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ ಎಂದು ದೀಪಿಕಾ ಹೇಳಿದ್ದರು ಎಂಬುದನ್ನು ಮಾಧ್ಯಮಗಳು ವರದಿ ಮಾಡಿತ್ತು.
 

click me!