Latest Videos

ದತ್ತು ಪಡೆದ ವರ್ಷವೇ ಮಗನಿಗೆ ಸೆರೆಬ್ರಲ್ ಪಾಲ್ಸಿ, 26 ವರ್ಷವಾದ್ರೂ ಕಣ್ಣಲ್ಲಿ ಕಣ್ಣಿಟ್ಟು ಸಾಕ್ತಿದ್ದಾರೆ ಅಪ್ಪ!

By Roopa HegdeFirst Published Jun 17, 2024, 1:13 PM IST
Highlights

ಮಕ್ಕಳು ವಿಕಲಾಂಗರಾಗಿ ಜನಿಸೋದು ಪಾಲಕರ ಕೈನಲ್ಲಿಲ್ಲ. ಹುಟ್ಟಿದ ಮಗುವಿಗೆ ಸಮಸ್ಯೆ ಕಾಡಿದಾಗ ಅವರನ್ನು ದೂರ ಮಾಡಲು ಸಾಧ್ಯವಿಲ್ಲ. ದುಃಖದಲ್ಲೇ ಮಗುವನ್ನು ಕೆಲವರು ಬೆಳೆಸಿದ್ರೆ ಮತ್ತೆ ಕೆಲವರು ಇಂಥ ಮಕ್ಕಳನ್ನೂ ಸಾಧನೆ ಶಿಖರದಲ್ಲಿ ನಿಲ್ಲಿಸ್ತಾರೆ. ಈ ತಂದೆ ದತ್ತು ಪಡೆದ ಮಗನಿಗೆ ಪಾಲಕನಲ್ಲ, ದೇವರಾಗಿದ್ದಾನೆ. 
 

ಮಕ್ಕಳಿಲ್ಲದೆ ಚಡಪಡಿಸುವ ದಂಪತಿ ಮಡಿಲಿಗೊಂದು ಮಗು ಬಂದ್ರೆ ಅವರ ಸಂತೋಷಕ್ಕೆ ಮಿತಿ ಇರೋದಿಲ್ಲ. ಇದ್ರಲ್ಲಿ ಮಹೇಶ್ ಮತ್ತು ಜಯಶ್ರೀ ಗಂಗ್ಡಿಯಾ ಸೇರಿದ್ದಾರೆ. 1998ರಲ್ಲಿ ಅವರ ಜೀವನ ಹಸನಾಗಿತ್ತು. ಅವರು ಒಂದು ಮಗುವನ್ನು ದತ್ತು ತಗೆದುಕೊಂಡ್ರು. ಮಗುವಿಗೆ ಜಯ್ ಎಂದು ನಾಮಕರಣ ಮಾಡಿ, ಸಂಭ್ರಮಿಸಿದ್ರು. ಅವರ ಈ ಖುಷಿ ತುಂಬಾ ದಿನ ಇರಲಿಲ್ಲ. ಒಂದು ವರ್ಷದ ನಂತ್ರ ಇಡೀ ಕುಟುಂಬದ ಚಿತ್ರಣವೇ ಬದಲಾಯ್ತು. ಕಾಮಾಲೆ ರೋಗಕ್ಕೆ ತುತ್ತಾದ ಜೈ ನರಮಂಡಲದ ಮೇಲೆ ಇದು ಕೆಟ್ಟ ಪರಿಣಾಮ ಬೀರಿತು. ಸೆರೆಬ್ರಲ್ ಪಾಲ್ಸಿಗೆ ಜೈ ತುತ್ತಾದ. ಇದ್ರಿಂದಾಗಿ ಕುತ್ತಿಗೆಯ ಕೆಳಗೆ ತನ್ನ ಅಂಗಗಳನ್ನು ಚಲಿಸಲು ಸಾಧ್ಯವಾಗಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಅವರ ತಂದೆ ಮಹೇಶ್, ಮಗನ ಜೊತೆ ನಿಂತಿದ್ದಾರೆ. ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ತಂದೆ – ಮಗನ ಕಥೆ ಕಣ್ಣಲ್ಲಿ ನೀರು ತರಿಸುವಂತಿದೆ.

ಘಟ್ಲೋಡಿಯ ನಿವಾಸಿ 62 ವರ್ಷದ ಮಹೇಶ್, ಕಳೆದ 26 ವರ್ಷಗಳಿಂದ ಮಗ (Son) ನಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಮಗನ ಸಾಧನೆಗೆ ಪಣತೊಟ್ಟಿದ್ದಾರೆ. ಜೈ ಒಂದು ವರ್ಷದಲ್ಲಿದ್ದಾಗ ನಡೆದ ಘಟನೆಯನ್ನು ನೆನೆದ ಮಹೇಶ್, ಇದೊಂದು ದೊಡ್ಡ ಆಘಾತವಾಗಿತ್ತು. ನಾವು ನಮ್ಮ ಅದೃಷ್ಟ (Good Luck) ವನ್ನು ಪ್ರಶ್ನೆ ಮಾಡಿದ್ವಿ. ಮಗುವೊಂದು ಮನೆ ಸೇರಿತ್ತು. ಆದ್ರೆ ಮಗು ಸ್ವಂತ ಇಚ್ಛೆಯಿಂದ ದೇಹವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ. ಈ ನೋವನ್ನು ಕ್ಷಣಿಕವಾಗಿ ಸ್ವೀಕರಿಸಿದ ನಾವು, ಇದನ್ನೇ ಚಾಲೆಂಜ್ (Challenge) ಆಗಿ ಸ್ವೀಕರಿಸಿದೆವು ಎಂದು ಮಹೇಶ್ ಹೇಳ್ತಾರೆ. 

SPERM DONOR: ವೀರ್ಯ ದಾನ ಮಾಡಿ, 165 ಮಕ್ಕಳಿಗೆ ತಂದೆಯಾದವ 50ರಲ್ಲಿ ನಿಲ್ಲಿಸ್ತಾನಂತೆ ಈ ಕೆಲಸ!

2019ರವರೆಗೆ ಮಹೇಶ್ ಪತ್ನಿ ಜಯಶ್ರೀ ಜೊತೆಗಿದ್ರು. ಅವರ ಸಾವಿನ ನಂತ್ರ ಮೊದಲನೇ ಮಹಡಿಗೆ ಶಿಫ್ಟ್ ಆದ ಮಹೇಶ್, ಮಗ ಜೈನ ಪ್ರತಿಯೊಂದು ಕೆಲಸದಲ್ಲಿ ಜೊತೆಗಿರ್ತಾರೆ. ಮಹೇಶ್, ಬಸ್, ಹೊಟೇಲ್ ಟಿಕೆಟ್ ಬುಕ್ ಮಾಡುವ ಕೆಲಸ ಮಾಡುವ ಜೊತೆಗೆ ಮಿನರಲ್ ವಾಟರ್ ಸಪ್ಲೈ ಏಜೆನ್ಸಿ ಇದೆ. ಈ ಎರಡೂ ಕೆಲಸವನ್ನು ಮನೆಯಲ್ಲೇ ಮಾಡುವ ಮಹೇಶ್, ಮಗನ ಆರೈಕೆ ಮಾಡ್ತಿದ್ದಾರೆ.

ಜೈ ಭವಿಷ್ಯ ಬದಲಿಸಿದ ಘಟನೆ : 2016ರಲ್ಲಿ ವಿಕಲಾಂಗ ವ್ಯಕ್ತಿಗಳಿಗಾಗಿ ಸಿಎನ್ ವಿದ್ಯಾಲಯ ಚಿತ್ರಕಲೆ ಸ್ಪರ್ಧೆ (Painting Competation) ಇಟ್ಟಿತ್ತು. ಮೊದಲಿನಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಜೈ ಇದ್ರಲ್ಲಿ ಭಾಗವಹಿಸಿದ್ದ. 60 ಜನರನ್ನು ಹಿಂದಿಕ್ಕಿ ಜೈ ಮೊದಲ ಸ್ಥಾನ ಪಡೆದುಕೊಂಡ್ರು. ಅವರ ಪ್ರತಿಭೆ ನೋಡಿದ ಶಿಕ್ಷಕರು, ಇದನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದ್ದರು. ತಂದೆ ಮಹೇಶ್ ಅದಕ್ಕೆ ಸಂಪೂರ್ಣ ಸಹಕಾರ ನೀಡಿದರು. ಜೈ ಅವರು 2023 ರಲ್ಲಿ ಕೀರ್ತಿ ಪತಾಕೆಯ ಉತ್ತುಂಗಕ್ಕೇರಿದರು. ಡಿಸೆಂಬರ್ 3 ರಂದು ಭಾರತದ ರಾಷ್ಟ್ರಪತಿಗಳಿಂದ ಅವರ ಪ್ರತಿಭೆಗಾಗಿ ರಾಷ್ಟ್ರೀಯ ಶ್ರೇಷ್ಠ ವಿಕಲಾಂಗ ಪ್ರಶಸ್ತಿಯನ್ನು (National Award for the Empowerment of Persons with Disabilities) ನೀಡಿ ಗೌರವಿಸಲಾಯಿತು. ಜೈ, ಗುಜರಾತ್ ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಗಣ್ಯರು ಹಾಗೂ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಚಿತ್ರಕಲೆ ಮಾರಾಟ ಮಾಡಿ ಅವರು ಹಣ ಗಳಿಸುತ್ತಿದ್ದಾರೆ. 

ಜೈ ಕೂಡ ತಮ್ಮ ತಂದೆ ಬಗ್ಗೆ ಮಾತನಾಡಿದ್ದಾರೆ. ತಂದೆ ಸದಾ ತಮ್ಮ ಜೊತೆಗಿರೋದು ತಮಗೆ ಇಷ್ಟವಾಗುವ ವಿಷ್ಯ ಎಂದು ಜೈ ಹೇಳಿದ್ದಾರೆ. ಪ್ರದರ್ಶನಗಳಿಗೆ ತನ್ನನ್ನು ಕರೆದೊಯ್ಯುವುದಲ್ಲದೆ ಅಲ್ಲಿನ ಕೆಲಸಕ್ಕೆ ತಂದೆ ನೆರವಾಗ್ತಾರೆಂದು ಜೈ, ತಂದೆಯನ್ನು ಹೊಗಳಿದ್ದಾರೆ. 

Trending : ಗಂಡ ಹೆಂಡತಿ ವಿಚ್ಛೇದನಕ್ಕೆ ಕಾರಣವಾಯ್ತಾ ಆಪಲ್ ಫೋನ್…? ಕೋರ್ಟ್ ಮೆಟ್ಟಿಲೇರಿದ ಪತಿ

ವಿಕಲಾಂಗ ಮಕ್ಕಳಿಗೆ ಮಹೇಶ್ ಹೇಳೋದೇನು? : ಒಂಟಿ ಪಾಲಕರಿಗೆ ವಿಕಲಾಂಗ ಮಕ್ಕಳನ್ನು ನೋಡಿಕೊಳ್ಳೋದು ಸುಲಭವಲ್ಲ ಎನ್ನುತ್ತಾರೆ ಮಹೇಶ್. ಅವರ ಶಿಕ್ಷಣ (Education), ಆರೋಗ್ಯ (Health), ಆಹಾರ (Food) ಎಲ್ಲವೂ ಕಷ್ಟ. ಅನೇಕ ವಿಕಲಾಂಗ ಮಕ್ಕಳ ಪಾಲಕರನ್ನು ಭೇಟಿಯಾಗಿ ನಾನು ಮಾತನಾಡ್ತೇನೆ. ಅವರ ಮೊದಲ ಕೆಲಸ ಸ್ವೀಕಾರ. ಮಗು ವಿಕಲಾಂಗ ಎಂಬುದನ್ನು ಒಪ್ಪಿಕೊಳ್ಳುವ ಜೊತೆಗೆ ಮುಂದೊಂದು ದಿನ ಚಮತ್ಕಾರವಾಗುತ್ತದೆ ಎಂಬ ಭರವಸೆಯಲ್ಲಿರಬೇಕು ಎನ್ನುತ್ತಾರೆ ಮಹೇಶ್. 
 

click me!