
ಬಡತನ ಹಲವರ ಪಾಲಿಗೆ ದೊರಕಿರುವ ಶಾಪ. ಹೊತ್ತಿಗೆ ಸರಿಯಾಗಿ ಊಟವಿಲ್ಲದೆ, ತಲೆಯ ಮೇಲೊಂದು ಸೂರಿಲ್ಲದೆ ಇವತ್ತಿಗೂ ಅದೆಷ್ಟೋ ಮಂದಿ ರಸ್ತೆಬದಿಯಲ್ಲಿ ಕಾಲ ಕಳೆಯುವುದನ್ನು ನಾವು ನೋಡಬಹುದು. ಸಾಮಾನ್ಯ ಜನರಂತೆ ಇಲ್ಲದೆ ಎಲ್ಲಾ ರೀತಿಯ ಖುಷಿಯನ್ನು ಕಳೆದುಕೊಂಡು ಅವರು ವಂಚಿತರಾಗಿರುತ್ತಾರೆ. ಅದರಲ್ಲೂ ಟಿವಿ, ಮೊಬೈಲ್ ಮೊದಲಾವುಗಳು ಎಲ್ಲರ ಮನೆಗಳಲ್ಲಿರುವ ಈ ಕಾಲ ಘಟ್ಟದಲ್ಲೂ ಬೀದಿಯಲ್ಲಿ ಕಾಲ ಕಳೆಯುವ ಅದೆಷ್ಟೋ ಮಂದಿಗೆ ಇದು ಇವತ್ತು ಕೂಡಾ ಮರೀಚಿಕೆಯಾಗಿದೆ. ಅಂಥವರನ್ನು ಗಮನಿಸುವವರೂ ಇಲ್ಲ, ಅವರ ಕಷ್ಟಗಳನ್ನು, ಆಸೆಗಳನ್ನು ಅರ್ಥ ಮಾಡಿಕೊಳ್ಳುವವರೂ ಇಲ್ಲ.
ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಈ ಜಗತ್ತಿನಲ್ಲಿ ಮಾನವೀಯತೆ (Humanity) ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ತಾನು, ತನ್ನದು ಎಂಬ ಧಾವಂತದಲ್ಲಿ ಮತ್ತೊಬ್ಬರ ಬಗ್ಗೆ ಯೋಚನೆ ಮಾಡಲು ಸಹ ಯಾರಿಗೂ ಪುರುಸೊತ್ತಿಲ್ಲ. ತನಗಾಗಿ ಆಸ್ತಿ ಮಾಡಿಕೊಳ್ಳೋ ಭರದಲ್ಲಿ ಮತ್ತೊಬ್ಬರಿಗೆ ಹೊತ್ತಿನ ತುತ್ತು ಕೂಡಾ ಇಲ್ಲ ಎಂಬುದನ್ನು ಎಲ್ಲರೂ ಮರೆತಿದ್ದಾರೆ. ಉಳ್ಳವರಿಗೆ ಬಗೆಬಗೆಯ ಆಹಾರ ತಿಂದು ಎಸೆಯುವುದು, ಕಾಸ್ಟ್ಲೀ ಬಟ್ಟೆ ಖರೀದಿಸಿ ಮೂಲೆಗೆಸೆಯುವುದು ಅಭ್ಯಾಸವಾದರೆ ಬಡವರು ಇದ್ಯಾವುದೂ ದೊರಕದೆಯೇ ಸಂಕಷ್ಟ ಅನುಭವಿಸುತ್ತಿರುತ್ತಾರೆ. ಮಾನವೀಯತೆಯೇ ಇಲ್ಲದ ಜಗತ್ತಿನಲ್ಲಿ ನಾನಿದ್ದೇವೆ.
ಪುಟ್ಟ ಮಕ್ಕಳ ದೊಡ್ಡತನ: ತಳ್ಳು ಗಾಡಿ ಮೇಲೆತ್ತಲು ಮಹಿಳೆಗೆ ಸಹಾಯ
ಹ್ಯುಮಾನಿಟಿ ಮರೆತ ಜನರಿಗೆ ಭಿಕ್ಷುಕರನ್ನು ಕಂಡಾಗ ತುಚ್ಛ ನೋಟ ಬೀರುವುದು, ಬೀದಿ ಮಕ್ಕಳನ್ನು (Orphans) ಅಸಹ್ಯ ಪಡುವುದಷ್ಟೇ ಗೊತ್ತು. ಇಂಥಾ ಜಗತ್ತಿನಲ್ಲಿ ಇಲ್ಲೊಬ್ಬ ವ್ಯಕ್ತಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾನೆ. ಅಷ್ಟಕ್ಕೂ ಆತ ಮಾಡಿರೋದು ಬಡವರನ್ನು ದತ್ತು ತೆಗೆದುಕೊಳ್ಳುವುದು, ಬಡವರಿಗೆ ಆಹಾರ (Food) ವಿತರಿಸುವುದು ಮೊದಲಾದ ಕಾರ್ಯವೇನಲ್ಲ. ಹೀಗಿದ್ದೂ ಆತ ಮಾಡಿರೋ ಕೆಲಸ ಕಣ್ಣು (Eyes) ಒದ್ದೆಯಾಗಿಸುತ್ತದೆ.
ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮಕ್ಕಳು ಟಿವಿ ನೋಡಲು ಅವಕಾಶ
ದಯೆಯ ಒಂದು ಸಣ್ಣ ಕಾರ್ಯವಾಗಿದೆ. ಜೊತೆಗೆ ಇದು ಅನೇಕರ ಹೃದಯವನ್ನು ಗೆಲ್ಲುತ್ತದೆ. ಹಾಗೆಯೃ ಇಲ್ಲೊಬ್ಬ ವ್ಯಕ್ತಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಯಲ್ಲಿ ಮಕ್ಕಳಿಗೆ ಟಿವಿ ನೋಡಲು ಅವಕಾಶ ಮಾಡಿ ಕೊಡುತ್ತಿರುವ ವಿಚಾರ ಎಲ್ಲರ ಮನಸ್ಸಿಗೆ ಖುಷಿ ನೀಡಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ವೀಡಿಯೋದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿಯೊಂದರ ವ್ಯಕ್ತಿ ರಿಮೋಟ್‌ನಲ್ಲಿ ಚಾನೆಲ್ ಬದಲಾಯಿಸುತ್ತಾ ಮನೆಯಿಲ್ಲದ ಮಕ್ಕಳಿಗೆ ದೂರದರ್ಶನದಲ್ಲಿ ಕಾರ್ಟೂನ್ ವೀಕ್ಷಿಸಲು ಅವಕಾಶ ನೀಡುವುದನ್ನು ನೋಡಬಹುದು. ಮಕ್ಕಳು ಸಹ ತುಂಬಾ ಖುಷಿಯಿಂದ (Happy) ದೊಡ್ಡ ಟಿವಿಯಲ್ಲಿ ಕಾರ್ಟೂನ್ ನೋಡುತ್ತಾರೆ.
ಸೈಕಲ್‌ನಲ್ಲಿ ಫುಡ್ ಡೆಲಿವರಿ ಮಾಡ್ತಿದ್ದವನಿಗೆ ಬೈಕ್ ತೆಗ್ದು ಕೊಟ್ಟ ಪೊಲೀಸರು
ಸಂಜೆಯ ಐದು ಗಂಟೆಯ ನಂತರ ಯಾವಾಗಲೂ ಸ್ಟೋರ್ ಇನ್‌ಚಾರ್ಜ್ ಮಕ್ಕಳಿಗೆ ಟಿವಿ ನೋಡಲು ಅವಕಾಶ ಮಾಡಿಕೊಡುತ್ತಾರೆ. ಮಕ್ಕಳು ಸಹ ಸಂಜೆಯಾಗುವುದನ್ನೇ ಕಾಯುತ್ತಾ ಇರುತ್ತಾರೆ. ನಿಗದಿತ ಸಮಯಕ್ಕೆ ಅಂಗಡಿಯ ಬಳಿ ಬಂದು ಖುಷಿಯಿಂದ ಟಿವಿ ನೋಡುತ್ತಾರೆ. ಇಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿಯ ಇನ್‌ಚಾರ್ಜ್‌ನ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ವ್ಯಕ್ತಿಯ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಮಾನವೀಯತೆಯೇ ಇಲ್ಲದ ಜಗತ್ತಿನಲ್ಲಿ ನಾವಿದ್ದೇವೆ ಅಂದುಕೊಂಡರೆ, ಇಂಥಾ ಕೆಲವೊಂದು ವಿಚಾರಗಳು ಎಲ್ಲರ ಮನಸ್ಸು ಗೆಲ್ಲುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.