ಇದೆಂಥಾ ವಿಚಿತ್ರ, ತನ್ನನ್ನೇ ತಾನು ಮದ್ವೆಯಾದ ಯುವತಿ ಈಗ ಡಿವೋರ್ಸ್ ಬೇಕು ಅಂತಿದ್ದಾಳೆ !

By Vinutha PerlaFirst Published Jan 8, 2023, 2:46 PM IST
Highlights

ಮದುವೆ ಅಂದ್ಮೇಲೆ ಹುಡುಗ–ಹುಡುಗಿ ಇರ್ಲೇಬೇಕು. ಇತ್ತೀಚಿನ ದಿನಗಳಲ್ಲಿ ಹುಡುಗಿ- ಹುಡುಗಿ, ಹುಡುಗ–ಹುಡುಗನ ಮದುವೆ ಕೂಡಾ ನಡೆಯುತ್ತೆ. ಅಷ್ಟೇ ಅಲ್ಲ, ತನ್ನನ್ನೇ ತಾನು ಮದ್ವೆಯಾಗುವ ಸೋಲೋಗಮಿ ಸಹ ಈಗ ಟ್ರೆಂಡ್ ಆಗಿದೆ. ಈ ಮಧ್ಯೆ ಬ್ರೆಜಿಲ್‌ನಲ್ಲೊಬ್ಬ ಯುವತಿ ತನ್ನನ್ನೇ ತಾನು ಮದ್ವೆಯಾಗಿದ್ದು, ಈಗ ಡಿವೋರ್ಸ್ ಬೇಕು ಅಂತಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ಸೊಲೋಗಮಿ ಎಂಬ ಪದ ಭಾರಿ ಸದ್ದು ಮಾಡುತ್ತಿದೆ. ತಿಂಗಳುಗಳ ಹಿಂದೆ ಗುಜರಾತಿನ ಕ್ಷಮಾ ಬಿಂದು ಸೊಲೋಗಮಿ ಮದುವೆಯಾಗಿ ಸುದ್ದಿಗಳ ಕೇಂದ್ರ ಬಿಂದುವಾಗಿದ್ದರು. ವರನನ್ನು (Groom) ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿದ ಕ್ಷಮಾ ಬಿಂದು ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದರು. ಭಾರತದಲ್ಲಿ ತನ್ನನ್ನು ತಾನು ಮದುವೆಯಾದ ಮೊದಲ ಮಹಿಳೆ ಇವರು. ಈ ಸ್ವಯಂ-ವಿವಾಹದ (Sologamy) ಪರಿಕಲ್ಪನೆಯನ್ನು ಸೋಲೋಗಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಸೋಲೋಗಮಿ ವಿವಾಹ (Marriage) ನಡೆದಿದ್ದು ಕೂಡ ಇದೇ ಮೊದಲು. ಅದೇ ರೀತಿ ಬ್ರೆಜಿಲ್‌ನಲ್ಲಿ ತನ್ನನ್ನೇ ತಾನು ಯುವತಿಯಾಗಿದ್ದ ಮಹಿಳೆ ಈಗ ವಿಚ್ಛೇದನ ಪಡೆದುಕೊಂಡಿದ್ದಾರೆ.

ತನ್ನನ್ನೇ ತಾನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡ ಮಹಿಳೆ
ಬ್ರೆಜಿಲ್‌ನ 31 ವರ್ಷದ ಮಾಡೆಲ್ ತನ್ನನ್ನು ತಾನೇ ಮದುವೆಯಾಗಿ ಮೂರು ತಿಂಗಳ ನಂತರ ಬೇರೊಬ್ಬರನ್ನು ಭೇಟಿಯಾದ ಕಾರಣ ತನ್ನಿಂದಲೇ ವಿಚ್ಛೇದನ ಪಡೆದುಕೊಂಡಿದ್ದಾಳೆ. ಮಾಡೆಲ್ ಆಗಿರುವ ಕ್ರಿಸ್ ಗಲೇರಾ, ಸೆಪ್ಟೆಂಬರ್‌ನಲ್ಲಿ ತನ್ನನ್ನು ತಾನೇ ವಿವಾಹವಾದರು. ಮದುವೆಯಾಗಲು ಹುಡುಗನನ್ನು ಹುಡುಕುವ ಪ್ರಕ್ರಿಯೆಯಿಂ ಅವರು ಬೇಸರಗೊಂಡಿದ್ದರು. ಹೀಗಾಗಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದರು. ಆದರೆ ವಿವಾಹವಾಗಿ ಜೀವನ ನಡೆಸುತ್ತಿದ್ದರು. ಆದರೆ  ಮದುವೆಯಾಗಿ ಮೂರು ತಿಂಗಳ ನಂತರ ಬೇರೊಬ್ಬರನ್ನು ಭೇಟಿಯಾದ ಕಾರಣ ತನ್ನಿಂದಲೇ ವಿಚ್ಛೇದನ (Divorce) ಪಡೆದುಕೊಂಡಿದ್ದಾಳೆ. ಸ್ವಯಂ ವಿವಾಹ ಕೊನೆಗೊಂಡಿದ್ದಕ್ಕೆ ನಾನು ಖುಷಿಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

Self Marriage Trend: ನನ್ನನ್ನೇ ನಾನು ಮದುವೆಯಾದೆ ! ಸೆಲ್ಫ್ ಮ್ಯಾರೇಜ್ ಟ್ರೆಂಡ್ ಬಗ್ಗೆ ಗೊತ್ತಾ ?

ಒಬ್ಬಂಟಿಯಾಗಿರಲು ಕಲಿಯಬೇಕೆಂದು ನನ್ನನ್ನೇ ಮದ್ವೆಯಾದೆ ಎಂದ ಮಾಡೆಲ್‌
'ನನ್ನನ್ನೇ ನಾನು ಮದುವೆಯಾಗಿರುವ ಬಗ್ಗೆ ಬೇಸರವಿಲ್ಲ. ಆದರೆ ಹೊಸ ಸಂಗಾತಿ (Partner) ದೊರಕಿದ ಬಳಿಕ ಹೆಚ್ಚು ಖುಷಿಯಾಗಿದ್ದೇನೆ. ಜೀವನದಲ್ಲಿ ಹೆಚ್ಚು ಉತ್ಸಾಹವನ್ನು ಅನುಭವಿಸುತ್ತಿದ್ದೇನೆ' ಎಂದು ಕ್ರಿಸ್ ಹೇಳಿದ್ದಾರೆ. 'ನಾನು ಪ್ರಬುದ್ಧಳಾಗುವ ಹಂತವನ್ನು ತಲುಪಿದ್ದೇನೆ, ನಾನು ಬಲವಾದ ಮತ್ತು ದೃಢವಾದ ಮಹಿಳೆ ಎಂದು ನಾನು ಅರಿತುಕೊಂಡೆ. ನಾನು ಯಾವಾಗಲೂ ಒಬ್ಬಂಟಿಯಾಗಿರಲು ಹೆದರುತ್ತಿದ್ದೆ, ಆದರೆ ನಾನು  ಕಲಿಯಬೇಕು ಎಂದು ನಾನು ಅರಿತುಕೊಂಡೆ. ಹೀಗಾಗಿ ನನ್ನನ್ನು ನಾನು ವಿವಾಹವಾದೆ. ಆದರೆ ಹೊಸ ವ್ಯಕ್ತಿಯ ಆಗಮನ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ' ಎಂದರು.

ತನ್ನ ಮದುವೆಯ ದಿನದಂದು, ಬ್ರೆಜಿಲ್‌ನ ಸಾವೊ ಪಾಲೊದಲ್ಲಿನ ಕ್ಯಾಥೋಲಿಕ್ ಚರ್ಚ್‌ನ ಮುಂದೆ ಕ್ರಿಸ್ ಚಿತ್ರಗಳಿಗೆ ಪೋಸ್ ನೀಡಿದರಯ. ಬೆರಗುಗೊಳಿಸುವ ಬಿಳಿ ಉಡುಗೆ ಮತ್ತು ಮಣಿಗಳಿಂದ ಕೂಡಿದ ನೆಕ್ಲೇಸ್‌ನಲ್ಲಿ ಕಾಣಿಸಿಕೊಂಡರು. ಮಾಡೆಲ್ ತನ್ನ ಮದುವೆಯ ದಿನದಂದು ಸಂತೋಷವಾಗಿರುವಾಗ, ಅವಳು ಟ್ರೋಲ್‌ಗಳಿಂದ ದ್ವೇಷದ ಕಾಮೆಂಟ್‌ಗಳನ್ನು ಸಹ ಪಡೆದರು. ಆ ಸಮಯದಲ್ಲಿ ಅವಳು ಅವರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದರು. 'ನಾನು ಇನ್ನು ಮುಂದೆ ದ್ವೇಷದ ಕಾಮೆಂಟ್‌ಗಳನ್ನು ಓದುವುದಿಲ್ಲ ಎಂದು ನಾನು ನಿರ್ಧರಿಸಿದ್ದೇನೆ. ಜನರ ಅಭಿಪ್ರಾಯವು ನನ್ನ ಅನಿಸಿಕೆಗಳನ್ನು ಬದಲಾಯಿಸುವುದಿಲ್ಲ' ಎಂದು ಅವರು ಹೇಳಿದರು.

ಮದ್ವೆಯಾದ ಒಂದೇ ಗಂಟೆಯಲ್ಲಿ ಡಿವೋರ್ಸ್‌, ವಧುವಿಗೆ ತನ್ನ ತಮ್ಮನ ಜೊತೆಯೇ ಮದ್ವೆ ಮಾಡಿಸಿದ ವರ!

ಸೊಲೊಗಾಮಿ ಟ್ರೆಂಡ್ ಯಾಕೆ ಹೆಚ್ಚುತ್ತಿದೆ ?
ಇತ್ತೀಚಿನ ದಿನಗಳಲ್ಲಿ, ಸೊಲೊಗಾಮಿಯ ಬಗ್ಗೆ ಎಲ್ಲೆಡೆ ತುಂಬಾನೆ ಚರ್ಚೆಯಾಗುತ್ತಿದೆ. ಸೊಲೊಗಾಮಿ ಎಂದರೆ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಮದುವೆಯಾಗುವುದು ಎಂದರ್ಥ. ಸೊಲೊಗಾಮಿಯನ್ನು ಒಟೊಗಾಮಿ (otogamy) ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಸ್ವಯಂ-ವಿವಾಹ ಎಂದೂ ಕರೆಯಬಹುದು. 1996ರಲ್ಲಿ ಡೆನ್ನಿಸ್ ರಾಡ್‌ಮನ್ ಎಂಬ ತಾರೆ ತನ್ನನ್ನೇ ತಾನು ಮದುವೆಯಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಮಹಿಳೆಯರು ತಮ್ಮ ಕಂಪನಿಯನ್ನು ತಾವು ಎಂಜಾಯ್ ಮಾಡೋದನ್ನು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಸೊಲೊಗಾಮಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. 

ಅನೇಕ ಮಹಿಳೆಯರು ಸೊಲೊಗಾಮಿಯತ್ತ ಒಲವು ತೋರುತ್ತಿದ್ದಾರೆ ಏಕೆಂದರೆ ಅವರು ಸಂಗಾತಿಯ ಜೊತೆ ಇರುವಾಗ ಅನುಭವಿಸೋಕ್ಕಿಂತ ಹೆಚ್ಚಿನ ಸಂತೋಷವನ್ನು ಅವರು ಏಕಾಂಗಿಯಾಗಿ ಇದ್ದಾಗ ಅನುಭವಿಸುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಸರಿಯಾದ ಹುಡುಗನ ಹುಡುಕಾಟ ನಡೆಸಿ ಸೋತಾಗ, ಅನೇಕ ಮಹಿಳೆಯರು ತಮ್ಮನ್ನು ತಾವು ಮದುವೆಯಾಗುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂದು ಅಂದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಫ್ರೀಡಮ್ ನ್ನು ಇಷ್ಟ ಪಡುತ್ತಿದ್ದು, ಅದಕ್ಕಾಗಿ ತಮ್ಮ ಕಂಪನಿಯನ್ನು ತಾವು ಎಂಜಾಯ್ ಮಾಡ್ತಾರೆ. 

click me!