ಹೋಳಿ ಬಣ್ಣಗಳ ಹಬ್ಬ. ಸಂಭ್ರಮದ, ಸಡಗರದ ಹಬ್ಬ. ಮಕ್ಕಳು ಅತಿ ಹೆಚ್ಚು ಖುಷಿಪಡುವ ಹಬ್ಬ. ಈ ದಿನ ಆಟದ ಜೊತೆ ಪಾಠವಾಗ್ಬೇಕು. ಮಕ್ಕಳನ್ನು ಹೋಳಿ ಬಣ್ಣದಲ್ಲಿ ಮಿಂದೇಳಿಸುತ್ತಲೇ ಪಾಲಕರು ಕೆಲ ಸಂಗತಿಯನ್ನು ಮಕ್ಕಳಿಗೆ ತಿಳಿಸಬೇಕು.
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಹಬ್ಬಗಳಿಗೂ ಮಹತ್ವವಿದೆ. ಒಂದೊಂದು ಹಬ್ಬವನ್ನು ಒಂದೊಂದು ರೀತಿ ಆಚರಿಸಲಾಗುತ್ತದೆ. ಪ್ರತಿಯೊಂದು ಹಬ್ಬವೂ ಅದರದೇ ಆದ ಮಹತ್ವವನ್ನು ಹೊಂದಿದೆ. ಮನೆಯೆ ಮೊದಲ ಪಾಠಶಾಲೆ ಎನ್ನುವ ಹಾಗೆ ಮನೆಯಲ್ಲಿನ ಆಚರಣೆ ಸಂಸ್ಕೃತಿಯನ್ನೇ ಮಕ್ಕಳು ಕಲಿಯುತ್ತಾರೆ.
ಹಬ್ಬ (Festival) ವೆಂದರೆ ಮಕ್ಕಳಿಗೆ ಶಾಲೆಗೆ ರಜೆ, ಓದು ಬರಹದಿಂದ ದೂರವಿರಬಹುದು ಎಂಬ ವಿಚಾರವೇ ಇರುತ್ತದೆ. ಆದರೆ ಹಬ್ಬ ಕೇವಲ ಸಂಭ್ರಮಾಚರಣೆ (Celebration) ಮಾಡಲು ಮಾತ್ರ ಸೀಮಿತವಲ್ಲ. ಆ ಹಬ್ಬದ ಹಿನ್ನಲೆ ಮಕ್ಕಳಿಗೆ ಉತ್ತಮ ಶಿಕ್ಷಣ (Education), ಸಂಸ್ಕೃತಿ ಕಲಿಸುವ ಮಾಧ್ಯಮವಾಗಬೇಕು. ಪಾಲಕರು ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡಲು ಏನೆಲ್ಲ ಪ್ರಯತ್ನ ಮಾಡುತ್ತಾರೆ. ಅಂತಹ ಪ್ರಯತ್ನಗಳ ಸಾಲಿನಲ್ಲಿ ಹಬ್ಬ ಕೂಡ ಸೇರಬೇಕು. ಸಧ್ಯಕ್ಕೆ ನಾವು ಆಚರಿಸುವ ಹಬ್ಬಗಳ ಪೈಕಿ ಹೋಳಿ ಹಬ್ಬ ಮುಂಚೂಣಿಯಲ್ಲಿದೆ. ಹಾಗಾಗಿ ಹೋಳಿ ಹಬ್ಬದ ಮೂಲಕ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪಾಠ ಕಲಿಸಿಕೊಡಿ. ಹೋಳಿಯೊಂದಿಗೆ ಅವರ ಬದುಕು ಕೂಡ ಬಣ್ಣ (Color) ಬಣ್ಣವಾಗಿರಲಿ.
undefined
ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!
ಭೇದಭಾವ ಹೋಗಲಾಡಿಸುತ್ತೆ ಹೋಳಿ : ಹೋಳಿ ಹಬ್ಬವನ್ನು ಜಾತಿ ಭೇದದ ಹಂಗಿಲ್ಲದೇ ಎಲ್ಲರೂ ತಮ್ಮದೇ ಆದ ವಿಧಾನದಲ್ಲಿ ಆಚರಿಸುತ್ತಾರೆ. ಹೀಗೆ ಎಲ್ಲರ ಜೊತೆ ಒಡನಾಡುವುದನ್ನು ನಿಮ್ಮ ಮಕ್ಕಳಿಗೂ ಕಲಿಸಿ. ಜಾತಿ ಮತವನ್ನು ಮರೆತು ಎಲ್ಲರೊಡನೆ ಬೆರೆಯುವುದು ಮುಂದೆ ಮಕ್ಕಳ ಭವಿಷ್ಯದಲ್ಲಿ ಉಪಯೋಗವಾಗುತ್ತದೆ. ಏಕೆಂದರೆ ಮುಂದೆ ಅವರು ಟೀಂ ವರ್ಕ್ ನಲ್ಲಿ ಕೆಲಸ ಮಾಡುವಾಗ ಸಹಾಯವಾಗುತ್ತದೆ. ಜಾತಿ, ಬಣ್ಣ ಅಥವಾ ಇನ್ಯಾವುದೋ ಆಧಾರದ ಮೇಲೆ ಜನರನ್ನು ಬೇರೆ ಮಾಡಬಾರದು ಎನ್ನುವುದು ಹೋಳಿ ನಮಗೆ ಹೇಳಿಕೊಡುವ ಪಾಠವಾಗಿದೆ.
ಕುಟುಂಬದ ಮಹತ್ವವನ್ನು ತಿಳಿಸುತ್ತದೆ : ಹೋಳಿ ಹಬ್ಬದಲ್ಲಿ ಕುಟುಂಬದವರು ಮತ್ತು ಸಂಬಂಧಿಗಳು ಒಂದೆಡೆ ಸೇರುತ್ತಾರೆ. ಎಲ್ಲರೂ ಒಂದಾಗಿ ಹಬ್ಬದ ತಯಾರಿ, ಅಡುಗೆಗಳನ್ನು ಮಾಡುತ್ತಾರೆ. ಹಬ್ಬದ ತಯಾರಿಯನ್ನು ಮಾಡುವಾಗ ಮಕ್ಕಳನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ. ಆಗ ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಯುತ್ತದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಇರುತ್ತಿದ್ದರಿಂದ ಮನೆಯವರ ಬಳಿಯೇ ಸುಖ ದುಃಖಗಳನ್ನು ಹಂಚಿಕೊಳ್ಳಬಹುದಾಗಿತ್ತು. ಆದರೆ ಈಗ ಮಕ್ಕಳು ಹೊರಗಿನವರನ್ನು ಅವಲಂಬಿಸುತ್ತಾರೆ. ಕೆಲವು ಮಕ್ಕಳು ಯಾರ ಬಳಿ ಏನನ್ನೂ ಹೇಳಿಕೊಳ್ಳದೇ ಡಿಪ್ರೆಶನ್ ಗೆ ಒಳಗಾಗುತ್ತಾರೆ.
ಕೆಟ್ಟದರ ಎದುರು ಒಳ್ಳೆತನದ ಗೆಲುವು : ಹೋಳಿ ಹಬ್ಬದಲ್ಲಿ ಮಕ್ಕಳಿಗೆ ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಿ. ಮಕ್ಕಳಿಗೆ ಒಳ್ಳೆಯ ಕೆಲಸವನ್ನು ಮಾಡಲು ಪ್ರೆರೇಪಿಸಿ. ತಪ್ಪು ಮಾಡಿದಾಗ ಅದನ್ನು ತಿದ್ದಿಕೊಂಡು ಮುಂದೆ ಹೋಗುವ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಸಿ. ಹೀಗಾದಾಗ ಮುಂದೆ ಅವರು ಒಳಿತು ಕೆಡುಕುಗಳ ನಡುವಿನ ಅಂತರವನ್ನು ಗುರುತಿಸುತ್ತಾರೆ.
ಹೋಳಿ ಹಬ್ಬದಲ್ಲಿ ಎಲ್ಲರೂ ಒಂದಾಗಲಿ : ಮಕ್ಕಳು ತಮ್ಮ ಅಕ್ಕ ಪಕ್ಕದವರ ಮನೆಯ ಮಕ್ಕಳೊಂದಿಗೆ ಹೆಚ್ಚು ಆಟವಾಡುತ್ತಾರೆ. ಹೋಳಿ ಹಬ್ಬದ ದಿನ ಸುತ್ತ ಮುತ್ತಲ ಎಲ್ಲ ಮಕ್ಕಳೊಂದಿಗೆ ನಿಮ್ಮ ಮಕ್ಕಳು ಸೇರುವಂತಾಗಲಿ. ಇದರಿಂದ ಮಕ್ಕಳಿಗೆ ಒಗ್ಗಟ್ಟಿನ ಮಹತ್ವ ತಿಳಿಯುತ್ತದೆ. ಹಿಂದೆ ಇತಿಹಾಸದಲ್ಲಿ ಕೂಡ ಹೀಗೇ ಜನರು ಒಗ್ಗಟ್ಟಾಗಿ ಎಲ್ಲ ಯುದ್ಧಗಳನ್ನು, ಕಷ್ಟಗಳನ್ನು ಎದುರಿಸುತ್ತಿದ್ದರು ಎಂಬ ಕತೆಗಳನ್ನು ಮಕ್ಕಳಿಗೆ ಹೇಳಿ. ಇಂತಹ ಐಕ್ಯತೆಯ ಪಾಠ ಮಕ್ಕಳ ವ್ಯಕ್ತಿತ್ವವನ್ನು ಇನ್ನೂ ಉತ್ತಮಗೊಳಿಸುತ್ತದೆ.
ಇವನಿಗೇನ್ ತಲೆಕೆಟ್ಟಿದ್ಯಾ..? ತನ್ನದೇ ಫಸ್ಟ್‌ನೈಟ್ ವಿಡಿಯೋ ವೈರಲ್ ಮಾಡಿದ ವರ!
ಅಹಂಕಾರ ಯಾವಾಗಲೂ ಸೋಲುತ್ತದೆ : ಭಕ್ತ ಪ್ರಹಲ್ಲಾದನ ಗೆಲುವಿನ ಸಂಕೇತವಾಗಿರುವ ಹೋಳಿ ಹಬ್ಬದ ಹಿಂದಿನ ಕತೆಯನ್ನು ಮಕ್ಕಳಿಗೆ ಹೇಳಿ. ತನ್ನ ತೊಡೆಯ ಮೇಲೆ ಕುಳಿತವರನ್ನು ಭಸ್ಮ ಮಾಡುವ ವರವನ್ನು ಪಡೆದಿದ್ದ ಹೋಲಿಕಾ ಅಹಂಕಾರದಿಂದ ಪ್ರಹ್ಲಾದನನ್ನೇ ಸಾಯಿಸಲು ಮುಂದಾಗುತ್ತಾಳೆ. ಆದರೆ ಪ್ರಹ್ಲಾದನ ಭಕ್ತಿ ಅವಳನ್ನೇ ಸುಟ್ಟು ಭಸ್ಮಮಾಡುತ್ತದೆ. ಇದು ಪೌರಾಣಿಕ ಕತೆಯೇ ಆದರೂ ಈ ಕತೆಯ ಜೊತೆ ಮಕ್ಕಳಿಗೆ ಸೊಕ್ಕು, ಅಹಂಕಾರದಿಂದ ನಮಗೆ ಏನೂ ಸಿಗುವುದಿಲ್ಲ ಎಂಬ ಸತ್ಯದ ಅರಿವಾಗುತ್ತದೆ.