ಮದ್ವೆ ಅನ್ನೋದು ಎಲ್ಲರ ಜೀವನದಲ್ಲೂ ತುಂಬಾ ಸ್ಪೆಷಲ್ ಆಗಿರುತ್ತದೆ. ಹೀಗಾಗಿ ಇದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಲು ಫೋಟೋ, ವೀಡಿಯೋ ತೆಗೆಸಿಕೊಳ್ಳುತ್ತಾರೆ. ಮದುವೆಯ ಶಾಸ್ತ್ರಗಳ ವೀಡಿಯೋ ಮಾಡೋದೇನೋ ಸರಿ. ಆದ್ರೆ ಇಲ್ಲೊಬ್ಬ ಫಸ್ಟ್‌ನೈಟ್ ವೀಡಿಯೋವನ್ನು ಮಾಡ್ಕೊಂಡಿದ್ದಾನೆ.
ಕೋಣಸೀಮೆ: ಭಾರತೀಯ ಸಂಪ್ರದಾಯದಲ್ಲಿ ಮದುವೆಯ ಆಚರಣೆಗಳು ತುಂಬಾ ಮಹತ್ವಪೂರ್ಣವಾಗಿದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ ಮಾಡಲಾಗುತ್ತದೆ. ನಿಶ್ಚಿತಾರ್ಥ, ಮೆಹಂದಿ, ಮದುವೆ ಕಾರ್ಯಕ್ರಮಗಳು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಸಾಮಾನ್ಯವಾಗಿ ಮದುವೆಯಾದ ಬಳಿಕವೇ ಹುಡುಗ-ಹುಡುಗಿ ಒಂದಾಗುತ್ತಾರೆ. ಫಸ್ಟ್ ನೈಟ್ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದರೂ ಮೊದಲ ರಾತ್ರಿ ಮಾತ್ರ ಗಂಡ-ಹೆಂಡತಿಯ ನಡುವಿನ ಖಾಸಗಿ ವಿಷಯ. ಹೀಗಾಗಿ ಇದನ್ನು ಗೌಪ್ಯವಾಗಿಡಲಾಗುತ್ತದೆ. ಆದರೆ ಇಲ್ಲೊಬ್ಬ ವರ ತನ್ನ ಫಸ್ಟ್‌ನೈಟ್ ವೀಡಿಯೋವನ್ನೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.
ಪ್ರತಿಯೊಬ್ಬರೂ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡಿದರೂ ತಮ್ಮ ಖಾಸಗಿ ಜೀವನವನ್ನು (Personal life) ಗೌಪ್ಯವಾಗಿಡುತ್ತಾರೆ. ತಮ್ಮ ಜೀವನದ ಖಾಸಗಿ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಇತ್ತೀಚಿಗೆ ಎಲ್ಲರ ಜೀವನವೂ (Life) ಮುಕ್ತ ಮುಕ್ತ ಎಂಬಂತಾಗಿಬಿಟ್ಟಿದೆ. ಜೀವನದಲ್ಲಿ ನಡೆಯುವ ಎಲ್ಲಾ ಘಟನಾವಳಿಗಳು ಯಾವುದೇ ಮುಚ್ಚುಮರೆಯಿಲ್ಲದೆ ಸುಲಭವಾಗಿ ಇನ್ನೊಬ್ಬರಿಗೆ ತಿಳಿದುಬಿಡುತ್ತದೆ. ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೊಬ್ಬರಿಂದ ಖಾಸಗೀತನಕ್ಕೆ ಧಕ್ಕೆಯಾಗುವುದು ಬೇರೆ ವಿಚಾರ. ಆದ್ರೆ ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಳ್ಳುವುದೆಂದರೆ ? ಇಲ್ಲೊಬ್ಬ ವರ ಹಾಗೆಯೇ ಮಾಡಿದ್ದಾನೆ.
First Night Secrets: ವಧು ಕೇಸರಿ ಹಾಕಿದ ಹಾಲು ಹಿಡಿದು ಬರೋದೇಕೆ?
ಮೊದಲ ರಾತ್ರಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವರ
ಮದುವೆಯೆಂಬ ಅದ್ಬುತ ಕ್ಷಣವನ್ನು ನೆನಪಿಡಲು ವಿವಾಹ ಸಮಾರಂಭದ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ರೆಕಾರ್ಡ್ ಮಾಡಿಸಿ, ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ವಿಚಿತ್ರ ಅಂದರೆ ಇಲ್ಲೊಬ್ಬ ವರನು ಮೊದಲ ರಾತ್ರಿಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಆಂಧ್ರಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯ ನಂತರ ಮೊದಲ ರಾತ್ರಿಗೆ ಸಜ್ಜಾಗಿದ್ದ ವರನೊಬ್ಬ ತನ್ನ ಪತ್ನಿಯ ಜೊತೆ ಇರುವಾಗ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ. ಮಾತ್ರವಲ್ಲ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.
ವ್ಯಕ್ತಿಯನ್ನು ಬಂಧಿಸಿ ರಿಮಾಂಡ್ ಗೆ ಕಳುಹಿಸಿದ ಪೊಲೀಸರು
ಕೋಣಸೀಮಾ ಜಿಲ್ಲೆಯ ಕಟ್ರೇನಿಕೋನ ಗ್ರಾಮದ ಹುಡುಗ (20) ಮತ್ತು ಹುಡುಗಿ (17) ಫೆಬ್ರವರಿ 8 ರಂದು ವಿವಾಹವಾದರು. ವಿವಾಹದ ವಿಧಿವಿಧಾನದ ಭಾಗವಾಗಿ ಹಿರಿಯರು ನವದಂಪತಿಗಳಿಗೆ ಮೊದಲ ರಾತ್ರಿಯನ್ನು ಏರ್ಪಡಿಸಿದ್ದರು. ಇಲ್ಲಿ ವರನು ಇಬ್ಬರ ನಡುವಿನ ಫಸ್ಟ್ ನೈಟ್ ವೀಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದನು. ಈ ನಡುವೆ ವಿಷಯ ತಿಳಿದ ವಧು ಪೋಷಕರಿಗೆ ತಿಳಿಸಿದ್ದು, ಬಳಿಕ ಪತಿ ವಿರುದ್ಧ ಫೆ.20ರಂದು ದೂರು ನೀಡಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫೆ.28ರಂದು ವ್ಯಕ್ತಿಯನ್ನು ಬಂಧಿಸಿ ರಿಮಾಂಡ್ ಗೆ ಕಳುಹಿಸಿದ್ದಾರೆ.
ಗೊತ್ತಿರಲಿ ಮೊದಲ ರಾತ್ರಿಯ ರಹಸ್ಯ, ಸುಖಾ ಸುಮ್ಮನೆ ಅಪ್‌ಸೆಟ್ ಆಗೋದು ಬೇಡ!
ಮೊದಲ ರಾತ್ರಿಯ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ದಂಪತಿ
ಇದೇ ರೀತಿ ಕೆಲ ದಿನಗಳ ಹಿಂದೆ ಆರುಶಿ ರಾಹುಲ್ ಅಫಿಶಿಯಲ್ (arushirahulofficial) ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಸ್ಟ್ ನೈಟ್ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ವಿಡಿಯೋದಲ್ಲಿ ನವವಿವಾಹಿತ ದಂಪತಿ, ತಮ್ಮ ಮೊದಲ ರಾತ್ರಿಯ ಖಾಸಗಿ ಕೋಣೆಯಲ್ಲಿರುವುದನ್ನು ತೋರಿಸಲಾಗಿತ್ತು. ಮದುವೆ (Marriage) ಮುಗಿದ ನಂತರ ವಧು-ವರರು ತುಂಬಾ ಸಂತೋಷವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಇಬ್ಬರು ಸಹ ಮದುವೆ ಉಡುಗೆಯನ್ನು ಧರಿಸಿದ್ದರು. ವಧು ಆಭರಣಗಳನ್ನು ಬಿಚ್ಚುತ್ತಿರುವುದು ಮತ್ತು ಆಕೆಯ ಪತಿ ಆಭರಣಗಳನ್ನು ಹಾಗೂ ಬಟ್ಟೆ ಬಿಚ್ಚಲು ಸಹಾಯ ಮಾಡುತ್ತಿರುವುದು ಮತ್ತು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿತ್ತು. ನಾವು ಹೇಗೆ ನಮ್ಮ ಮೊದಲ ರಾತ್ರಿಯನ್ನು ಕಳೆದೆವು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿತ್ತು.