ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

Published : Mar 02, 2023, 09:29 PM IST
ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

ಸಾರಾಂಶ

ಇಬ್ಬರೂ ದೈಹಿಕವಾಗಿ ಸ್ವತಂತ್ರರಾಗಿದ್ದರೂ ಮಾನಸಿಕವಾಗಿ ಇಬ್ಬರೂ ದಣಿದಿದ್ದರು. ಅವರು ತಮ್ಮ ಸಂಕಟಗಳನ್ನು ಪರಸ್ಪರ ಅನುಭವಿಸಲು ಹಂಚಿಕೊಂಡರು. ಕ್ರಮೇಣ, ಬಾಬುರಾವ್ ಪಾಟೀಲ್, ಅನುಸೂಯ ಶಿಂಧೆ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. ಇನ್ನು, ಅನುಸೂಯ ಅವರು ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ನಂತರ ಹಿರಿಯ ವಯಸ್ಸಿನ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಕೊಲ್ಲಾಪುರ (ಮಹಾರಾಷ್ಟ್ರ) (ಮಾರ್ಚ್‌ 2, 2023): ಸಾಮಾನ್ಯವಾಗಿ ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ತಮ್ಮ ಹಳೆಯ ಕಾಲವನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಜೀವನದಲ್ಲಿ ಕಂಡ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು, ತಮ್ಮ ಜೀವನದ ಟ್ವಿಸ್ಟ್ ಮತ್ತು ಟರ್ನ್‌ಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಏಕೆಂದರೆ, ಜೀವನದ ಕೊನೆ ಕಾಲದಲ್ಲಿ ನಾವು ಇಲ್ಲಿದ್ದೇವೆ ಎಂದುಕೊಂಡಿರುತ್ತಾರೆ, ಖಿನ್ನತೆಯಲ್ಲಿರುತ್ತಾರೆ. ಆದರೆ, ಮಹಾರಾಷ್ಟ್ರದ ಕೊಲ್ಲಾಪುರದ ವೃದ್ಧಾಶ್ರಮದಲ್ಲಿರುವ ವೃದ್ಧ ದಂಪತಿ ತಮ್ಮ ಉಳಿದ ದಿನಗಳಲ್ಲಿ ಈ ಆಲೋಚನೆಗಳನ್ನು ತುಂಬಿಕೊಳ್ಳದೆ ಹಿರಿಯ ವಯಸ್ಸಲ್ಲಿ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಅದಕ್ಕೀಗ ಮದುವೆ ಎಂಬ ಮುದ್ರೆಯೂ ಬಿದ್ದಿದೆ.

ನಿಮ್ಮ ಸಂಗಾತಿಯನ್ನು ಹುಡುಕಲು ತಡ ಅನ್ನೋದು ಇಲ್ಲ. ನೀವು ನಿಮ್ಮ 20 ಅಥವಾ 80 ರ ದಶಕದಲ್ಲಿದ್ದರೂ ಸರಿ. ಅದೇ ರೀತಿ, ಮಹಾರಾಷ್ಟ್ರದ (Maharashtra) ಕೊಲ್ಲಾಪುರದ (Kolhapur) ಶಿರೋಲ್ ತಾಲೂಕಿನ ಘೋಸರವಾಡದಲ್ಲಿ ಅಪರೂಪದ ಮದುವೆಯೊಂದು (Wedding) ನಡೆದಿದೆ. ಈ ಮದುವೆಯ ವಿಶೇಷತೆ ಏನು ಅಂತೀರಾ.. ಘೋಸರವಾಡದಲ್ಲಿರುವ ಜಾನಕಿ ವೃದ್ಧಾಶ್ರಮದಲ್ಲಿ ಅನುಸೂಯ ಶಿಂಧೆ (70) ಮತ್ತು ಬಾಬುರಾವ್ ಪಾಟೀಲ್ (75) ಎಂಬ ಇಬ್ಬರು ಹಿರಿಯ ವ್ಯಕ್ತಿಗಳು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಅವರು ಈಗ ಜೀವನ ಸಂಗಾತಿಯಾಗಿದ್ದಾರೆ. ಇವರಿಬ್ಬರ ಪ್ರೀತಿ ಮತ್ತು ಮದುವೆ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿಯಾಗುತ್ತಿದೆ. 

ಇದನ್ನು ಓದಿ: 91ನೇ ವಯಸ್ಸಲ್ಲಿ ಡಿಎಲ್‌ಎಫ್‌ ಮುಖ್ಯಸ್ಥನಿಗೆ ಪ್ರೇಮಾಂಕುರ..!

ಅನುಸೂಯ ಶಿಂಧೆ ಪುಣೆಯ ವಘೋಲಿ ಮೂಲದವರಾಗಿದ್ದರೆ, ಬಾಬುರಾವ್ ಪಾಟೀಲ್ ಶಿರೋಲ್ ತಾಲೂಕಿನ ಶಿವನಕವಾಡಿಯವರು. ಇಬ್ಬರೂ ತಮ್ಮ ಸಂಗಾತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿ (Old Age Home) ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಈ ವೃದ್ಧಾಶ್ರಮದ ಇತರ ಅನೇಕ ಹಿರಿಯ ವ್ಯಕ್ತಿಗಳಂತೆ ಅವರೂ ಸಹ ಕುಟುಂಬಗಳಿಂದ ದೂರವಾದವರು.

ಇಬ್ಬರೂ ದೈಹಿಕವಾಗಿ ಸ್ವತಂತ್ರರಾಗಿದ್ದರೂ ಮಾನಸಿಕವಾಗಿ ಇಬ್ಬರೂ ದಣಿದಿದ್ದರು. ಅವರು ತಮ್ಮ ಸಂಕಟಗಳನ್ನು ಪರಸ್ಪರ ಅನುಭವಿಸಲು ಹಂಚಿಕೊಂಡರು. ಕ್ರಮೇಣ, ಬಾಬುರಾವ್ ಪಾಟೀಲ್,  ಅನುಸೂಯ ಶಿಂಧೆ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. ಇನ್ನು, ಅನುಸೂಯ ಅವರು ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ನಂತರ ಹಿರಿಯ ವಯಸ್ಸಿನ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ, ಅವರು ಮದುವೆಯಾಗಲು ನಿರ್ಧರಿಸಿದರು ಮತ್ತು ಗ್ರಾಮಸ್ಥರು ಹಾಗೂ ವೃದ್ಧಾಶ್ರಮದ ಅಧಿಕಾರಿಗಳು ಕಾನೂನುಬದ್ಧವಾಗಿ ಮದುವೆಯಾಗಲು ಸಹಾಯ ಮಾಡಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿವಾಹ ಸಮಾರಂಭ ಟೈಮಲ್ಲೇ ಹೃದಯಾಘಾತದಿಂದ ಮೃತಪಟ್ಟ ವಧು: ತಂಗಿಯ ಜತೆ ಮದ್ವೆ ಮಾಡಿಕೊಟ್ಟ ಕುಟುಂಬ

ಜಾನಕಿ ವೃದ್ಧಾಶ್ರಮಕ್ಕೆ ಬಂದ ನಂತರ ನಾನು ತುಂಬಾ ಒಂಟಿತನ ಅನುಭವಿಸುತ್ತಿದ್ದೆ. ಆದರೆ ಅನುಸೂಯಳನ್ನು ಮದುವೆಯಾದ ನಂತರ ಈಗ ನಾನು ತುಂಬಾ ಸಂತೋಷವಾಗಿದ್ದೇನೆ’’ ಎಂದು ಮದುವೆಯ ನಂತರ ಬಾಬುರಾವ್ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದೆಡೆ, ಮದುವೆಯ ಬಗ್ಗೆ ಕೇಳಿದಾಗ, ಅನುಸೂಯ ಶಿಂಧೆ ಅವರು, “ಬಾಬುರಾವ್ ಪಾಟೀಲ್‌ ಅವರು ಪ್ರೊಪೋಸ್‌ ಮಾಡಿದ ನಂತರ, ಅವರಿಗೆ ಪ್ರತಿಕ್ರಿಯಿಸಲು ನನಗೆ 8 ದಿನಗಳು ಬೇಕಾಯಿತು. ಆದರೆ ಈಗ ಅವರ ಪ್ರಸ್ತಾಪಕ್ಕೆ 'ಹೌದು' ಎಂದು ಹೇಳುವ ಮೂಲಕ ನಾನು ಸರಿಯಾದ ಕೆಲಸವನ್ನು ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಅದನ್ನೇ ನಾನು ಈಗ ಅನುಭವಿಸುತ್ತಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ. 

ಇನ್ನು, ಬಾಬುರಾವ್ ಮತ್ತು ಅನುಸೂಯ ಅವರ ಪ್ರೀತಿಯ ವಿಚಾರ ತಿಳಿದಾಗ ನಾವು ಅವರೊಂದಿಗೆ ಮಾತನಾಡಿದೆವು ಮತ್ತು ಅವರ ಸಂಬಂಧದ ಬಗ್ಗೆ ನಾವು ಯಾವುದೇ ಕೋಪವನ್ನು ವ್ಯಕ್ತಪಡಿಸಲಿಲ್ಲ. ನಾವು ಬಾಬುರಾವ್‌ ಪಾಟೀಲ್‌ ಅವರಿಗೆ ಯಾವುದೇ ಪ್ರಶ್ನೆ ಸಹ ಕೇಳಲಿಲ್ಲ. ನಾವೇ ಮುಂದಿನ ಕ್ರಮ ನಿರ್ಧರಿಸಿ ಮದುವೆ ಮಾಡಿಸಿದ್ದೇವೆ ಎಂದು ಜಾನಕಿ ವೃದ್ಧಾಶ್ರಮದ ಮುಖ್ಯಸ್ಥರಾದ ಬಾಬಾಸಾಹೇಬ್‌ ಪೂಜಾರಿ ಎಂಬುವರು ತಿಳಿಸಿದ್ದಾರೆ. 

ಇದನ್ನೂ ಓದಿ: ಸ್ವರ್ಗದಲ್ಲೇ ನಿಶ್ಚಯವಾದ ವಿವಾಹ..! 3 ಅಡಿ ಎತ್ತರದ ವಧುವನ್ನು ವರಿಸಿದ 3 ಅಡಿ ಎತ್ತರದ ವರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?