ವಧುವಿಗೆ ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್‌, ಮದುವೆ ಕ್ಯಾನ್ಸಲ್ ಮಾಡಿದ ವರ!

By Vinutha Perla  |  First Published Mar 15, 2023, 5:13 PM IST

ಇವತ್ತಿನ ದಿನಗಳಲ್ಲಿ ಮದ್ವೆ ಸಂಬಂಧ ಮುರಿಯೋಕೆ ಕಾರಣಗಳೇ ಬೇಕಿಲ್ಲ. ಸಣ್ಣ ಪುಟ್ಟ ಕಾರಣಕ್ಕೂ ಮದುವೆ ಅರ್ಧದಲ್ಲಿ ನಿಂತು ಹೋಗಿಬಿಡುತ್ತದೆ ಅಥವಾ ಡಿವೋರ್ಸ್ ಆಗುತ್ತದೆ. ಆದ್ರೆ ಇಲ್ಲೊಬ್ಬ ಹುಡುಗ ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿರೋ ಕಾರಣ ತಿಳಿದ್ರೆ ನೀವು ಬೆರಗಾಗೋದು ಖಂಡಿತ.


ಉತ್ತರ ಪ್ರದೇಶ: ಮದ್ವೆ (Marriage) ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ (Relationship) ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವ ವರೆಗೆ ಮದುವೆಯಾಯ್ತು ಎಂದು ಹೇಳುವಂತೆಯೇ ಇಲ್ಲ. ಹಾಗೆಯೇ ಇಲ್ಲೊಂದು ಮದುವೆ ಮಂಟಪದಲ್ಲಿ ಅರ್ಧದಲ್ಲೇ ನಿಂತು ಹೋಗಿದೆ. 

ವಧುವಿಗೆ ಪಿಯುಸಿಯಲ್ಲಿ ಮಾರ್ಕ್ಸ್‌ ಚೆನ್ನಾಗಿಲ್ಲವೆಂದು ಮದ್ವೆ ಕ್ಯಾನ್ಸಲ್
ಮದುವೆಯಾಗುವ ಜೋಡಿವ ಮಧ್ಯೆ ಸೈದ್ಧಾಂತಿಕ ಅಥವಾ ನೈತಿಕ ಭಿನ್ನಾಭಿಪ್ರಾಯಗಳಿಂದಾಗಿ ಕೆಲವು ವಿವಾಹಗಳು ರದ್ದುಗೊಳ್ಳುತ್ತವೆ. ಆದರೆ ಇಲ್ಲೊಂದೆಡೆ ವರ (Groom), ವಧುವಿನ ಅಂಕಪಟ್ಟಿಯ ಬಗ್ಗೆ ತಿಳಿದು ಮದುವೆಯನ್ನು ನಿಲ್ಲಿಸಿದ್ದಾನೆ. ಉತ್ತರಪ್ರದೇಶದಲ್ಲೊಬ್ಬ ವಧುವಿನ ಅಂಕಪಟ್ಟಿಯ (Marks card) ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನೆ. ವಧುವಿನ (Bride) 12ನೇ ತರಗತಿಯ ಅಂಕಗಳು ಸಾಕಷ್ಟು ಚೆನ್ನಾಗಿಲ್ಲ ಎಂದು ಮದುವೆಯನ್ನು ರದ್ದುಗೊಳಿಸಿದ್ದಾನೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಿರ್ವಾ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

Latest Videos

undefined

ಕುಡಿದು ತೂರಾಡುತ್ತಾ ಮಂಟಪಕ್ಕೆ ಬಂದು ನಿದ್ರೆ ಜಾರಿದ ವರ, ಮದುವೆ ಕ್ಯಾನ್ಸಲ್ ಮಾಡಿ ಹೊರನಡೆದ ವಧು!

ವಧುವಿನ ತಂದೆಯಿಂದ ಪೊಲೀಸರಿಗೆ ದೂರು
ವರ ಮದುವೆಯಿಂದ ಹಿಂದೆ ಸರಿಯಲು ವಧುವಿನ 12ನೇ ತರಗತಿಯಲ್ಲಿ ಕಳಪೆ ಅಂಕಗಳು ಬಂದಿರುವುದೇ ಕಾರಣ ಎಂದು ನನಗೆ ತಿಳಿಸಲಾಗಿದೆ ಎಂದು ವಧುವಿನ ತಂದೆ ಹೇಳಿದ್ದಾರೆ. ಆದರೆ, ಸಾಕಷ್ಟು ವರದಕ್ಷಿಣೆ (Dowry) ಸಿಗದ ಕಾರಣ ವರನ ನಿರ್ಧಾರ ಹೊರಬಿದ್ದಿದೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ. ವರನ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ವಧುವಿನ ಮನೆಯವರು ಆರೋಪಿಸಿದ್ದಾರೆ. ವರನ ಕಡೆಯ ಮಹಿಳೆಯರು ವಧುವನ್ನು ಸ್ವೀಕರಿಸುವ ಕಾರ್ಯಕ್ರಮವಾದ ಗೋಧ್ ಭಾರೈ ಸಮಾರಂಭವನ್ನು ನಡೆಸಿದ ನಂತರ ಮದ್ವೆ ರದ್ದು ಮಾಡಲಾಯಿತು. ಹೀಗಾಗಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 

ದೂರಿನಲ್ಲಿ, 'ನನ್ನ ಮಗಳು ಸೋನಿಯ ಮದುವೆಯನ್ನು ಬಾಗನ್ವಾ ಗ್ರಾಮದ ರಾಮಶಂಕರ್ ಎಂಬುವರ ಮಗ ಸೋನು ಜೊತೆ ನಿಶ್ಚಯಿಸಲಾಗಿತ್ತು. ಡಿಸೆಂಬರ್ 4, 2022 ರಂದು ‘ಗೋಧ್ ಭಾರೈ’ ಸಮಾರಂಭವನ್ನು ನಡೆಸಲಾಯಿತು. ಸಮಾರಂಭದಲ್ಲಿ, ವಧುವಿನ ತಂದೆಯಾದ ನಾನು 60,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ವರನಿಗೆ 15,000 ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದೇನೆ. ಒಂದೆರಡು ದಿನಗಳ ನಂತರ ವರನ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ನಾನು ವರನಿಗೆ ತಿಳಿಸಿದ್ದರಿಂದ ವರ, ಹುಡುಗಿಗೆ ಮಾರ್ಕ್ಸ್‌ ಕಡಿಮೆಯಿದೆ ಎಂದು ಹೇಳಿ ಸಂಬಂಧ ಕಡಿದುಕೊಂಡಿದ್ದಾನೆ' ಎಂದು ತಿಳಿಸಿದರು.

ಬ್ಯಾಂಡ್‌ ದುಡ್ಡು ನಾವ್ ಕೊಡಲ್ಲಪ್ಪಾ, ಮದುವೆಯೇ ಕ್ಯಾನ್ಸಲ್‌ ಮಾಡಿ ಹೊರಟ ಮದುಮಗ !

ಪೊಲೀಸರು ಎರಡು ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಪ್ರಕರಣ ಬಗ್ಗೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಎರಡೂ ಕುಟುಂಬಗಳ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದರು. ಇದೀಗ ಎರಡು ಕುಟುಂಬ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಾರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿರ್ವ ಕೊತ್ವಾಲಿ ವಲಯದ ಪೊಲೀಸ್ ಠಾಣೆ ಪ್ರಭಾರಿ ಪಿ.ಎನ್.ಬಾಜಪೈ ತಿಳಿಸಿದ್ದಾರೆ.

click me!