Relationship Tips: ಮದುವೆಯಾಗೋಕೆ ಯಾವ ವಯಸ್ಸು ಬೆಸ್ಟ್? ಇಪ್ಪತ್ತು ವರ್ಷನಾ ಮೂವತ್ತಾ?

By Suvarna News  |  First Published Mar 15, 2023, 3:18 PM IST

ಮದುವೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ವರ್ಷ ಚಿಕ್ಕದಿಂದ್ರೆ ಒಂದು ಸಮಸ್ಯೆ, ವಯಸ್ಸು ಹೆಚ್ಚಾದ್ರೆ ಇನ್ನೊಂದು ಸಮಸ್ಯೆ. ಮದುವೆಗೆ ಯಾವ ವಯಸ್ಸು ಬೆಸ್ಟ್ ಎಂಬ ಗೊಂದಲ ಯಾವಾಗ್ಲೂ ಇದ್ದಿದ್ದೆ.
 


ಮದುವೆಗೆ ಸೂಕ್ತ ಸಮಯ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳೋದು ಕಷ್ಟ. ಹಿಂದಿನ ಕಾಲದಲ್ಲಿ 12ನೇ ವಯಸ್ಸಿಗೆ ಮದುವೆಯಾಗ್ತಿತ್ತು. ಹೆಚ್ಚೆಂದ್ರೆ 15 ವರ್ಷದಿಂದ 20 ವರ್ಷದೊಳಗೆ ಮದುವೆ ನಡೆಯಲೇಬೇಕಿತ್ತು. ಆ ವಯಸ್ಸಿನಲ್ಲಿ ಮದುವೆಯಾದ ಜೋಡಿ ಕೂಡ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದರು. ದಿನ ಕಳೆದಂತೆ ಓದಿಗೆ ಪ್ರಾಮುಖ್ಯತೆ ಬರ್ತಾ ಹೋಯ್ತು. ಜನರು 20ನೇ ವಯಸ್ಸಿನ ನಂತ್ರ ಮದುವೆಯಾಗಲು ಮುಂದಾದ್ರು. ಈಗ್ಲೂ 22ರಿಂದ 26 ವರ್ಷ ವಯಸ್ಸನ್ನು ಮದುವೆಗೆ ಸೂಕ್ತ ವಯಸ್ಸು ಎಂದು ನಂಬುವವರು ಕೆಲವರಿದ್ದಾರೆ. ಆದ್ರೆ ಈ ವಯಸ್ಸಿನಲ್ಲಿ ಮದುವೆಯಾಗುವವರ ಸಂಖ್ಯೆ ಕೂಡ ಈಗಿನ ದಿನಗಳಲ್ಲಿ ಕಡಿಮೆಯಾಗಿದೆ. ಜನರು ವೃತ್ತಿ, ಜವಾಬ್ದಾರಿ, ಆರ್ಥಿಕ ಸ್ಥಿತಿಯ ಕಾರಣ ಹೇಳಿ 30ರ ಗಡಿ ದಾಟಿದ ಮೇಲೆ ಮದುವೆಯಾಗಲು ಮುಂದಾಗ್ತಿದ್ದಾರೆ.

30 ನೇ ವಯಸ್ಸಿನಲ್ಲಿ ಮದುವೆ (Marriage) ಯಾಗುವುದು ಒಂದು ಅನನ್ಯ ಮತ್ತು ರೋಮಾಂಚಕಾರಿ ಅನುಭವವಾಗಿದೆ. 20 ನೇ ವಯಸ್ಸಿ (Age) ನಲ್ಲಿ ಮದುವೆಯಾಗುವುದು ಸಂಪೂರ್ಣವಾಗಿ ವಿಭಿನ್ನ ಅನುಭವವಾಗಿದೆ. ಈ ಎರಡೂ ವಯಸ್ಸಿನಲ್ಲಿ ಮದುವೆಯಾಗುವುದ್ರಿಂದ ಕೆಲ ಲಾಭವಿದ್ರೆ ಕೆಲ ನಷ್ಟವಿದೆ. ನಾವಿಂದು 30ನೇ ವಯಸ್ಸಿನಲ್ಲಿ ಮದುವೆಯಾದ್ರೆ ಏನು ನಷ್ಟ ಹಾಗೂ 20ನೇ ವಯಸ್ಸಿನಲ್ಲಿ ಮದುವೆಯಾದ್ರೆ ಏನು ಲಾಭ ಎಂಬ ಬಗ್ಗೆ ನಿಮಗೆ ವಿವರ ನೀಡ್ತೇವೆ.

Tap to resize

Latest Videos

ದಾಂಪತ್ಯಕ್ಕೆ ಕುತ್ತು ಬಂದಿದೆ ಅಂದ್ರೆ, ಈ ತಪ್ಪಾಗಿರುತ್ತೆ ಅಂತಾನೇ ಅರ್ಥ

20ನೇ ವಯಸ್ಸಿನಲ್ಲಿ ಮದುವೆ : ಈಗಿನ ಸಮಯದಲ್ಲಿ 20ನೇ ವಯಸ್ಸಿಗೆ ಮದುವೆಯಾಗುವವರ ಸಂಖ್ಯೆ ಬಹಳ ಕಡಿಮೆ. ಸಂಗಾತಿ ಮಧ್ಯೆ ಪ್ರೀತಿ (Love) , ವಿರಸ, ಸರಸ ಎಲ್ಲವೂ ಇದ್ರಲ್ಲಿರುತ್ತದೆ. ಇಬ್ಬರು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಲು ಇಲ್ಲಿ ಅವಕಾಶವಿದೆ. ಸಂಗಾತಿ ಜೊತೆ ಜೀವನ ನಡೆಸಲು ಸಾಕಷ್ಟು ಸಮಯ ಸಿಗುತ್ತದೆ. ಇಬ್ಬರು ತುಂಬಾ ಚಿಕ್ಕವರಾಗಿರುತ್ತಾರೆ ಹಾಗೆಯೇ ಶಕ್ತಿಯಿರುತ್ತದೆ. ಅವರ ಕನಸನ್ನು ಒಟ್ಟಿಗೆ ಸೇರಿ ಈಡೇರಿಸುವ ಪ್ರಯತ್ನ ನಡೆಸಬಹುದಾಗಿದೆ.  ಚಿಕ್ಕವಯಸ್ಸಿನಲ್ಲಿ ಮದುವೆಯಾದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಕೂಡ ಚಿಕ್ಕ ವಯಸ್ಸಿನಲ್ಲೇ ಹುಟ್ಟುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳು ಪ್ರಬುದ್ಧರಾಗಿ, ಮದುವೆ ವಯಸ್ಸಿಗೆ ಬಂದಾಗ ನಿಮ್ಮ ವಯಸ್ಸು 40 ದಾಟಿರುತ್ತದೆಯಷ್ಟೆ. ಮಕ್ಕಳೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಲು, ಅವರೊಂದಿಗೆ ಮೋಜಿನ ಜೀವನ ಕಳೆಯಲು ಇದು ಸಹಕಾರಿ. ಹಾಗಂತ 20ನೇ ವಯಸ್ಸಿನಲ್ಲಿ ಮದುವೆಯಾದ್ರೆ ಸಮಸ್ಯೆ ಇಲ್ಲವೆಂದಲ್ಲ. ಮದುವೆಗೆ ಇದು  ತುಂಬಾ ಚಿಕ್ಕ ವಯಸ್ಸಾಗಿರುತ್ತದೆ. ಇಬ್ಬರಲ್ಲಿ ತಿಳುವಳಿಕೆ ತುಂಬಾ ಕಡಿಮೆ ಇರುತ್ತದೆ. ಚಿಕ್ಕ ವಿಷ್ಯಕ್ಕೆ ಗಲಾಟೆ ನಡೆಯೋದು ಹೆಚ್ಚು. ಇದು ಸಂಬಂಧವನ್ನು ಹಾಳು ಮಾಡಬಹುದು. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ನಡೆಯುವ ಮದುವೆ ಉಸಿರುಗಟ್ಟಿಸಿದ ಅನುಭವ ನೀಡುತ್ತದೆ. ವ್ಯಕ್ತಿಯ ಶಿಕ್ಷಣ, ವೃತ್ತಿ, ಗುರಿ ಮುಟ್ಟಲು ಇದು ಸೂಕ್ತ ಸಮಯವಾಗಿದ್ದು, ಈ ವೇಳೆ ಮದುವೆ ಬಂಧನ ತಲೆಮೇಲೆ ಬಿದ್ರೆ ಗುರಿಮುಟ್ಟಲು ಸಾಧ್ಯವಾಗದೆ ಇರಬಹುದು. ವೈಯಕ್ತಿಕ ಬೆಳವಣಿಗೆಗೆ ಸಮಯ ಕಡಿಮೆ ಸಿಗುತ್ತದೆ. 

30ನೇ ವಯಸ್ಸಿನಲ್ಲಿ ಮದುವೆ: ಸಂಶೋಧನೆಯೊಂದರ ಪ್ರಕಾರ, 30 ವರ್ಷಕ್ಕೆ ಮದುವೆಯಾಗುವವರು ವಿಚ್ಛೇದನ ಪಡೆಯುವ ಸಾಧ್ಯತೆ ಕೇವಲ ಶೇಕಡಾ 8 ರಷ್ಟು ಮಾತ್ರ ಇರುತ್ತದೆಯಂತೆ. ಎಲ್ಲಾ ರೀತಿಯಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳುವ ವಯಸ್ಸು ಇದು. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನ ಸ್ಥಾನಮಾನವನ್ನು ಹೊಂದಿರುತ್ತಾರೆ. ಈ ವಯಸ್ಸಿಗೆ ಬರುವ ಮೊದಲು ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಹೊಂದಿರೋದು ವಿಶೇಷವೇನಲ್ಲ. ಕೆಲವರು ಸಂಬಂಧದಲ್ಲಿದ್ದು ಬ್ರೇಕ್ ಅಪ್ ಪಡೆದಿರ್ತಾರೆ. ಅಂಥವರಿಗೆ ತಮ್ಮ ಸಂಗಾತಿ ಯಾರಾಗಬೇಕೆಂಬ ಬಗ್ಗೆ ಸ್ಪಷ್ಟತೆ ಇರುತ್ತದೆ. ಆರ್ಥಿಕವಾಗಿಯೂ ಸದೃಢರಾಗಿರ್ತಾರೆ.  ಮೆಚ್ಯುರಿಟಿ ಬಂದಿರುವ ಕಾರಣ ಸಣ್ಣಪುಟ್ಟ ವಿಷ್ಯಕ್ಕೆ ಗಲಾಟೆ ಮಾಡೋದಿಲ್ಲ. ಸಂಬಂಧದಲ್ಲಿ ಮಾಧುರ್ಯವು ದೀರ್ಘಕಾಲ ಉಳಿಯುತ್ತದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮಲ್ಲಿ ಪ್ರಣಯದ ಭಾವನೆ ಇರುತ್ತದೆ. 

Relationship Tips : ಮದ್ವೆ ಆಗ್ತಿಲ್ವಾ? ಕಾರಣಗಳು ನೂರಾರು ಇರಬಹುದು

30 ವರ್ಷದಲ್ಲಿ ಮದುವೆಯಾಗುವುದ್ರಲ್ಲೂ ಕೆಲ ಸಮಸ್ಯೆಗಳಿವೆ. ಒಂದು ವಯಸ್ಸು ದಾಟುತ್ತಿದ್ದಂತೆ ಜನರಿಂದ ಮದುವೆಯಾಗುವ ಒತ್ತಡ ಶುರುವಾಗುತ್ತದೆ. ಈಗಾಗಲೇ ಸಾಲ ಮಾಡಿದ್ದರೆ ಅದ್ರ ಹೊಣೆ ನಿಮ್ಮ ಮೇಲಿರುತ್ತದೆ. ಅದನ್ನು ಸಂಗಾತಿ ಅರ್ಥಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಹಿಳೆಯರು 28 ವರ್ಷ ವಯಸ್ಸಿನೊಳಗೆ ಗರ್ಭಧರಿಸುವುದು ಸೂಕ್ತ. 30 ರ ನಂತರದ ಗರ್ಭಧಾರಣೆಯು ಮಹಿಳೆಯರ ಸ್ವಂತ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. 30 ವರ್ಷದವರೆಗೆ ಒಂಟಿಯಾಗಿ ಜೀವನ ನಡೆಸಿದ ಜನರಿಗೆ ನಂತ್ರ ತಮ್ಮ ಜೀವನವನ್ನು ಹಂಚಿಕೊಳ್ಳೋದು ಕಷ್ಟವಾಗುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿರುವ ಮಹಿಳೆಯರು ಮದುವೆ, ಮಕ್ಕಳ ಕಾರಣಕ್ಕೆ ವೃತ್ತಿ ಜೀವನ ಹಾಳಾಗಲು ಬಿಡೋದಿಲ್ಲ. ಇದ್ರಿಂದ ಕುಟುಂಬದಲ್ಲಿ ಸಮಸ್ಯೆ ಕಾಡಲು ಶುರುವಾಗುತ್ತದೆ. 

ಯಾವುದೇ ವಯಸ್ಸಿನಲ್ಲಿ ಮದುವೆಯಾದ್ರೂ ಸವಾಲುಗಳಿರುತ್ತವೆ. ನಿಮ್ಮ ಪ್ರಯತ್ನ, ಬದ್ಧತೆ ಮತ್ತು ಸಂವಹನದ ಮೂಲಕ ದಾಂಪತ್ಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಇಲ್ಲಿ ವಯಸ್ಸಿಗಿಂತ ಎಲ್ಲದಕ್ಕೂ ನೀವು ಸಿದ್ಧರಿದ್ದೀರಿ ಎಂಬುದು ಖಚಿತವಾದ್ಮೇಲೆ ಮದುವೆಯಾಗೋದು ಒಳ್ಳೆಯದು. 

click me!