ಮಧ್ಯ ಪ್ರದೇಶದ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ತನ್ನ ಇಬ್ಬರು ಹೆಂಡತಿಯರೊಂದಿಗೆ ವಾರದಲ್ಲಿ ಮೂರು ದಿನಗಳನ್ನು ಕಳೆಯಲು ಆದೇಶಿಸಿದೆ.
ಗ್ವಾಲಿಯರ್ (ಮಾರ್ಚ್ 15, 2023): ಒಂದು ಗಂಡಿಗೆ - ಒಂದೇ ಹೆಣ್ಣು ಅಂತಾರೆ. ಅಲ್ಲದೆ, ಮತ್ತೊಬ್ಬಾಕೆಯನ್ನು ಗಂಡು ಮದುವೆಯಾಗ್ಬೇಕು ಅಂದ್ರೆ ಆತ ಮೊದಲನೇ ಹೆಂಡ್ತಿಗೆ ವಿಚ್ಛೇದನ ನೀಡಬೇಕಾಗುತ್ತದೆ. ಆದರೂ, ಒಬ್ಬಳು ಇರುವಾಗ್ಲೇ ಮತ್ತೊಂದು ಮದುವೆಯಾಗಿರುವ ಸಾಕಷ್ಟು ಉದಾಹರಣೆಗಳನ್ನು ನಾವು ಆಗಾಗ ನೋಡ್ತಿರ್ತೀವಿ ಅಥವಾ ಓದ್ತಿರ್ತೀವಿ. ಆದರೆ, ಇದು ನ್ಯಾಯ ಸಮ್ಮತವಾ ಎಂಬ ಪ್ರಶ್ನೆಯೂ ಆಗಾಗ ಹಲವರಲ್ಲಿ ಏಳುತ್ತದೆ. ಇಲ್ಲೊಂದು ವಿಲಕ್ಷಣ ಘಟನೆಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಕೋರ್ಟ್ ನೀಡಿರುವ ತೀರ್ಪು ಏನು ಗೊತ್ತಾ..? ಇಬ್ಬರು ಹೆಂಡತಿಯರೊಂದಿಗೂ ವಾರದಲ್ಲಿ 3 ದಿನ ಕಾಲ ಕಳೆಯಲು ಆದೇಶಿಸಿದೆ.
ಹೌದು, ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್‌ನ (Gwalior) ಕೌಟುಂಬಿಕ ನ್ಯಾಯಾಲಯವು (Family Court) ವ್ಯಕ್ತಿಯೊಬ್ಬನಿಗೆ ತನ್ನ ಇಬ್ಬರು ಹೆಂಡತಿಯರೊಂದಿಗೆ (Wives) ವಾರದಲ್ಲಿ ಮೂರು ದಿನಗಳನ್ನು (Three Days) ಕಳೆಯಲು ಆದೇಶಿಸಿದೆ. ಹಾಗಾದ್ರೆ, ಸಂಡೇ (Sunday) ಏನು ಕತೆ ಅಂತೀರಾ..? ಭಾನುವಾರ ಅವನು ತನ್ನಿಷ್ಟದಂತೆ ಇಬ್ಬರ ಪೈಕಿ ಯಾವ ಹೆಂಡತಿ ಜತೆಗಾದ್ರೂ ಕಾಲ ಕಳೀಬಹುದು. ಆಹಾ ಎಂಥಾ ಅದೃಷ್ಟ ಅಂತೀರಾ..?
ಇದನ್ನು ಓದಿ: ಫತ್ವಾಗೆ ಡೋಂಟ್ ಕೇರ್: ಹೆಣ್ಮಕ್ಳಿಗೆ ಆಸ್ತಿ ವರ್ಗಾಯಿಸಲು ಮತ್ತೆ ವಿವಾಹವಾದ ಮುಸ್ಲಿಂ ದಂಪತಿ..!
ಪತ್ನಿ ಮತ್ತು ಪತಿ ಇಬ್ಬರಿಗೂ ಸಮಾಲೋಚನೆ ನಡೆಸಿದ ಬಳಿಕವೇ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ ಎಂದೂ ತಿಳಿದುಬಂದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದಕ್ಕೆ ಬಂದಿದ್ದು, ಇಬ್ಬರು ಮಹಿಳೆಯರ ನಡುವೆ ವಾರದ ಮೂರು ದಿನಗಳನ್ನು ಒಬ್ಬ ಹೆಂಡತಿಯೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಲು ಆತ ಒಪ್ಪಿಕೊಂಡಿದ್ದಾನೆ.. ಅಲ್ಲದೆ, ಭಾನುವಾರ ಇಬ್ಬರ ಪೈಕಿ ಯಾವುದೇ ಮಹಿಳೆಯರೊಂದಿಗೆ ಕಳೆಯಲು ಅವನು ಮುಕ್ತನಾಗಿದ್ದಾನೆ.
ಇಬ್ಬರು ಹೆಂಡ್ತಿಯರಿಗೂ ಪ್ರತ್ಯೇಕ ಫ್ಲ್ಯಾಟ್..!
ಇಷ್ಟೇ ಅಲ್ಲ, ಆ ವ್ಯಕ್ತಿ ಇಬ್ಬರು ಹೆಂಡ್ತಿಯರಿಗೂ ಬೇರೆ ಬೇರೆ ಫ್ಲ್ಯಾಟ್ ಅನ್ನು ಸಹ ನೀಡಬೇಕಾಗಿದೆ. ಈಗಾಗಲೇ ಇಬ್ಬರು ಹೆಂಡ್ತಿಯರಿಗೂ ಮಕ್ಕಳಿದೆ ಎಂದೂ ತಿಳಿದುಬಂದಿದೆ.
ಈ ಒಪ್ಪಂದ ಆಗಿದ್ದು ಹೇಗೆ..?
ಪತಿ ಹರಿಯಾಣದ ಬಹುರಾಷ್ಟ್ರೀಯ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದು ಮತ್ತು ಅವನು 2018 ರಲ್ಲಿ ಮೊದಲನೇ ವಿವಾಹವಾಗಿದ್ದ. ಮದುವೆಯ ನಂತರ ಅವರು ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ವಾಸಿಸುತ್ತಿದ್ದರು. ಆದರೆ 2020 ರಲ್ಲಿ, ಕೊರೋನಾ ಲಾಕ್‌ಡೌನ್ ಸಮಯದಲ್ಲಿ, ಪತಿ ತನ್ನ ಹೆಂಡತಿಯನ್ನು ಗ್ವಾಲಿಯರ್‌ನಲ್ಲಿರುವ ಆಕೆಯ ತಾಯಿಯ ಮನೆಯಲ್ಲಿ ಬಿಟ್ಟಿದ್ದು, ಆತ ಮತ್ತೆ ಹರಿಯಾಣಕ್ಕೆ ಹೋಗಿದ್ದಾನೆ.
ಇದನ್ನೂ ಓದಿ: ಯುವಕರು ಮದುವೆಯಾಗದೇ ಜಪಾನ್‌ನಲ್ಲಿ ಜನಸಂಖ್ಯೆ ಹೆಚ್ಚಾಗಲ್ಲ: ಅಸ್ತಿತ್ವವನ್ನೇ ಕಳಕೊಳ್ಳುವ ಭೀತಿ..!
ಈ ಸಮಯದಲ್ಲಿ, ಪತಿ ತನ್ನ ಸಹೋದ್ಯೋಗಿಯೊಬ್ಬರೊಂದಿಗೆ ಕ್ಲೋಸ್ ಆಗಿ ಆಕೆ ಜತೆ ಸಂಬಂಧ ಬೆಳೆಸಿಕೊಂಡಿದ್ದು, ಮತ್ತು ನಂತರ ಅವಳನ್ನು ಮದುವೆಯಾದನು ಎಂದು ತಿಳಿದುಬಂದಿದೆ.
ಜೀವನಾಂಶ ನೀಡುವಂತೆ ದೂರು ನೀಡಿದ್ದ ಮೊದಲ ಪತ್ನಿ
ತನ್ನ ಪತಿ ಹರ್ಯಾಣದಲ್ಲಿರುವ ತನ್ನ ಕಚೇರಿಗೆ ಹೋದ ಬಳಿಕ ತನ್ನ ಸಹೋದ್ಯೋಗಿಯನ್ನು ಮದುವೆಯಾಗಿದ್ದಾನೆ ಎಂಬುದು ಮೊದಲ ಹೆಂಡತಿಗೆ ತಿಳಿಯಿತು. ಬಳಿಕ, ಆಕೆ ತನ್ನ ಪತಿಯ ವಿರುದ್ಧ ದೂರು ನೀಡಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಪತಿ ಮರುಮದುವೆ ಮಾಡಿಕೊಂಡಿದ್ದು, ಜೀವನಾಂಶ ಕೊಡಿಸಲು ನ್ಯಾಯ ಕೊಡಿಸಬೇಕು’ ಎಂದು ಪತ್ನಿ ದೂರಿದ್ದಾರೆ.
ನಂತರ ವಿಷಯವು ಕೌಟುಂಬಿಕ ನ್ಯಾಯಾಲಯದ ಕೌನ್ಸಿಲರ್ ಹರೀಶ್ ದಿವಾನ್ ಅವರನ್ನು ತಲುಪಿದ್ದು ಮತ್ತು ಆರು ತಿಂಗಳ ಕಾಲ ಈ ವಿಚಾರ ಮುಂದುವರೆದಿದೆ. ಈ ವೇಳೆ, ದಿವಾನ್ ಇಬ್ಬರೂ ಪತ್ನಿಯರು ಮತ್ತು ಪತಿಯಂದಿಗೆ ಚರ್ಚೆ ಹಾಗೂ ಕೌನ್ಸೆಲಿಂಗ್ ಮಾಡಿದ್ದು, ಅಂತಿಮವಾಗಿ ಈ ಪರಿಹಾರವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.