ಅವಮಾನ ಯಾರನ್ನೂ ಬಿಟ್ಟಿಲ್ಲ ಕಣ್ರೀ, ನೋವನ್ನು ಲೆಮನೈಡ್ ಮಾಡೋಣ

By Suvarna NewsFirst Published Nov 10, 2020, 4:17 PM IST
Highlights

ನೋವು, ಅವಮಾನಗಳು ಸದಾ ಪಿನ್ ನಂತೆ ಚುಚ್ಚುತ್ತಿರುತ್ತವೆ. ಯಾವ ಔಷಧಿಯೂ ಇಲ್ಲದ ಈ ನೋವನ್ನು ಲೆಮನೈಡ್ ಮಾಡಿ ಕುಡಿದುಬಿಡಬೇಕು.

ಅವರೇನು ನಿಮಗೆ ಪಬ್ಲಿಕ್ ನಲ್ಲಿ ಹೊಡೆದಿರಲ್ಲ, ಬೈದಿರಲ್ಲ. ನಗು ನಗುತ್ತಲೇ ಮಾತಿನ ನಡುವೆ ಒಂದು ಸಣ್ಣ ಪಿನ್ ಚುಚ್ಚಿರುತ್ತಾರೆ, ಅಷ್ಟೇ!

ಹೀಗೆ ಪಿನ್ ಗಳ ಚುಚ್ಚುವಿಕೆಯಿಂದ ಪಾರಾಗೋದು ಹೇಗೆ? ಈ ಪ್ರಶ್ನೆ ತಲೆಗೆ ಬರೋದಿಕ್ಕೂ ಮೊದಲೇ ಸಾಕಷ್ಟು ನೋವನ್ನು ಅನುಭವಿಸಿರುತ್ತೀವಿ. ಇದನ್ನು ಯಾರ ಬಳಿಯೂ ಹಂಚಿಕೊಳ್ಳೋದಕ್ಕೆ ಆಗೋದಿಲ್ಲ. ಏಕೆಂದರೆ ಬರೀ ಸಣ್ಣ ವಿಷಯ. ಅವರ ಬಳಿ ಹೇಳಿದ್ರೆ, ಇಷ್ಟು ಚಿಕ್ಕ ವಿಷಯಕ್ಕೆ ಇಷ್ಟೊಂದು ಚಿಂತೆ ಮಾಡ್ತಿದ್ದೀಯಾ, ನಿಂದ್ಯಾಕೋ ಅತಿಯಾಯ್ತು ಅಂತ ಹೇಳಿದ್ರೆ ಇಸ್ಸೀ ಅನಿಸಿಬಿಡುತ್ತೆ. ಹೀಗಾಗಿ ಯಾರಿಗೂ ಏನನ್ನೂ ಹೇಳದೇ ಎಲ್ಲವನ್ನೂ ಮನಸ್ಸಲ್ಲೇ ಇಟ್ಟುಕೊಂಡು ಬಿಡ್ತೀವಿ. ಆ ಪಿನ್ ಮನಸ್ಸಲ್ಲಿ ಇನ್ನಷ್ಟು ಭದ್ರವಾಗಿ ಕೂತು ಬಿಡುತ್ತೆ. ಅಲ್ಲಾಡಿಸೋದಕ್ಕೂ ಆಗಲ್ಲ. ಉಣ್ಣುವಾಗಲೂ, ಡ್ರೈವ್ ಮಾಡುವಾಗಲೂ ಅದೇ ಯೋಚನೆ. ಇಷ್ಟು ಚಿಕ್ಕ ವಿಷ್ಯಕ್ಕೆ ಇಷ್ಟೆಲ್ಲ ಯೋಚ್ನೆ ಮಾಡೋದಾ, ಥತ್ ಬಿಟ್ಹಾಕು ಅಂತ ನಮಗೆ ನಾವೇ ಹೇಳ್ಕೊಳ್ತೀವಿ. ಊಹೂ, ಆದರೆ ಅದು ಹೊರಹೋಗಲ್ಲ. 

ಎದ್ದು ಹೊಸ ಜಾಗಕ್ಕೆ ಹೊರಟುಬಿಡೋದು ಬೆಸ್ಟ್ ಅನಿಸುತ್ತೆ. ಹೊರಡುತ್ತೀರಿ. ಬ್ಯೂಟಿಫುಲ್ ವ್ಯೂವ್ ಗಳು, ಜುಳು ಜುಳು ನೀರಿನ ಶಬ್ದ, ಅಲ್ಲಲ್ಲಿ ಹಾರುವ ಚಿಟ್ಟೆಗಳು, ಅರಳಿದ ಹೂವುಗಳು, ಟೇಬಲ್ ಮೇಲೆ ಬಿಸಿ ಬಿಸಿ ಕಾಫಿ ಎಲ್ಲಾ ಸರಿ ಇದ್ರೆ ಅದ್ಭುತ ಅನಿಸೋದು, ಆದರೆ ಈಗ ಅದೆಲ್ಲ ಇದ್ದರೂ ಮನಸ್ಸು ಬೇರೆಲ್ಲೋ ಇರುತ್ತೆ. 

ಹಾಗಿದ್ರೆ ಈ ಸಮಸ್ಯೆಗೆ ಪರಿಹಾರನೇ ಇಲ್ವಾ..

ಗೋರ್ ಗೋಪಾಲ್ ದಾಸ್ ಎಂಬ ಅದ್ಭುತ ಸಂತರಿದ್ದಾರೆ. ನಮ್ಮ ನಿತ್ಯದ ಇಂಥಾ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡೋದ್ರಲ್ಲಿ ಅವರದು ಎತ್ತಿದ ಕೈ. ವೈಯುಕ್ತಿಕವಾಗಿ ಅವರದೇ ಒಂದು ದೊಡ್ಡ ಕಥೆ. ಪ್ರತಿಷ್ಠಿತ ಕಂಪೆನಿಯ ದೊಡ್ಡ ಹುದ್ದೆಯಲ್ಲಿದ್ದವರು ಎಲ್ಲವನ್ನೂ ತೊರೆದು ಸಂನ್ಯಾಸಿಯಾದವರು ಗೋರ್ ಗೋಪಾಲ್ ದಾಸ್. ಅವರು ಈ ಸಮಸ್ಯೆಯನ್ನು ಬಹಳ ಸುಂದರವಾಗಿ ವಿಶ್ಲೇಷಣೆ ಮಾಡುತ್ತಾರೆ. 

ಮದುವೆಯಾದ್ರೆ ಗಂಡ ಎಂಬ ಗೂಬೆ ಜೊತೆಗೇ ಇರುತ್ತೆ! ...

'ನಾನು ಅಡುಗೆಮನೆಯಲ್ಲಿ ಲೆಮನೇಡ್ ಮಾಡುವ ತಯಾರಿಯಲ್ಲಿದ್ದೆ. ಯಾರೋ ಸ್ನೇಹಿತರ ಕರೆ ಬಂತು. ಫೋನ್ ಕಿವಿಗಿಟ್ಟು ಮಾತಾಡ್ತಾ ಕೆಲಸ ಮಾಡುತ್ತಿದ್ದೆ. ಮಾತಾಡಿ ಮುಗಿದು ಫೋನ್ ಇಟ್ಟಾಗ ನೋಡುತ್ತೀನಿ, ಒಂದು ನಿಂಬೆ ಹುಳಿ ಹಿಂಡಬೇಕಾದಲ್ಲಿ ನಾಲ್ಕು ಹುಳಿ ಹಿಂಡಿ ಬಿಟ್ಟಿದ್ದೀನಿ. ಬಾಯಿಗಿಡಲೂ ಸಾಧ್ಯವಾಗದಷ್ಟು ಕಟು ಹುಳಿ. ನಾನೀಗ ಏನು ಮಾಡಬೇಕು. ಒಂದೋ ಅಷ್ಟನ್ನೂ ಹೊರಗೆ ಚೆಲ್ಲಬೇಕು. ಆದರೆ ನನಗೆ ವೇಸ್ಟ್ ಮಾಡೋದಕ್ಕೆ ಇಷ್ಟ ಇಲ್ಲ. ಹೀಗಾಗಿ ಅದಕ್ಕೆ ಸಾಕಷ್ಟು ನೀರು ಸೇರಿಸಿ ಲೆಮನೇಡ್ ಮಾಡಿದೆ. ಒಬ್ಬ ಕುಡಿಯಬೇಕಾದದ್ದನ್ನು ನಾಲ್ಕು ಜನಕ್ಕೆ ಹಂಚಿದೆ. 

ವ್ಯಕ್ತಿತ್ವಕ್ಕೆ ಮಸಿ ಬಳಿಯೋ ಭಾವನೆಗಳಿಗೆ ಬ್ರೇಕ್‌ ಹಾಕೋದು ಹೇಗೆ? ...

ನಾವು ಬದುಕಿನಲ್ಲಿ ಅರಿತೋ ಅರಿಯದೆಯೋ ಏನೋ ತಪ್ಪು ಮಾತಾಡಿ ಬಿಟ್ಟಿರುತ್ತೀವಿ. ಅಥವಾ ಇನ್ನೊಬ್ಬರ ವ್ಯಂಗ್ಯದ ಬಾಣಕ್ಕೆ ಬಲಿಪಶುವಾಗಿರುತ್ತೀವಿ. ಕೆಲವೊಮ್ಮೆ ಅವರ ತಪ್ಪೂ ಅಲ್ಲದೇ ನಮ್ಮ ತಪ್ಪೂ ಅಲ್ಲದೇ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ನೋವು ಅನುಭವಿಸಿರುತ್ತೀವಿ. ಆಮೇಲೆ ಇದರ ಬಗ್ಗೆಯೇ ಯೋಚಿಸುತ್ತಾ ಕುಡಿಯಲಾರದ ಕಹಿಯನ್ನು ಕುಡಿದು ಅರಗಿಸಲಾಗದೇ ಒದ್ದಾಡುತ್ತೀವಿ. 

ಇದೆಲ್ಲ ನಮ್ಮ ನೆಮ್ಮದಿ ಕೆಡಿಸುವಂಥಾದ್ದು. ಹಾಗಿದ್ರೆ ಏನು ಮಾಡಬೇಕು. ನೋವನ್ನು ಲೆಮನೇಡ್ ಮಾಡಿ ಕುಡಿದು ಬಿಡಬೇಕು. ನಾನು ಫೋನ್‌ನಲ್ಲಿ ಮಾತನಾಡುತ್ತಾ ಮಾಡಿದ ಲೆಮನೈಡ್ ಸ್ಥಿತಿಯಲ್ಲಿ ಮೊದಲಿರುತ್ತೀವಿ. ನಾನದನ್ನು ಡೈಲ್ಯೂಟ್ ಮಾಡಿದಂತೆ ನೋವನ್ನೂ ಡೈಲ್ಯೂಟ್ ಮಾಡುತ್ತಾ ಹೋಗಬೇಕು. ಆಮೇಲೆ ಏನಾದರೂ ಆತ್ಮತೃಪ್ತಿ ಕೊಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ನೋವು ತಿಳಿಯಾಗುತ್ತದೆ. ಸಿಹಿಯಾದ ಲೆಮನೇಡ್ ಆಗಿ ಕುಡಿಯಲು ಯೋಗ್ಯವಾಗುತ್ತದೆ. 

ಇಷ್ಟ ಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ರಿಜೆಕ್ಟ್ ಮಾಡಲೇನು ಕಾರಣ? ...

ಈಗ ಗೊತ್ತಾಯ್ತಲ್ಲಾ, ಸದಾ ನೋಯಿಸುತ್ತಲೇ ಇರುವ ಪಿನ್‌ಅನ್ನು ಹೇಗೆ ಜಾಣತನದಿಂದ ತೆಗೆಯಬೇಕು ಅಂತ. ಆತ್ಮ ತೃಪ್ತಿ ಕೊಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾ ನಮ್ಮನ್ನೇ ನಾವು ಮರೆಯುತ್ತಾ ಹೋದಾಗ ಈ ನೋವು ಡೈಲ್ಯೂಟ್ ಆಗುತ್ತೆ. ಆ ಆತ್ಮತೃಪ್ತಿಯ ಕೆಲಸದಿಂದ ಇತರರಿಗೂ ಒಳಿತಾದರೆ ಆ ನೋವೇ ಸಿಹಿಯಾದ ಪಾನಕವಾಗಿ ಬದುಕನ್ನು ಸಹನೀಯವಾಗಿಸುತ್ತದೆ. 

click me!