#Feelfree: ದಣಿದ ಬಂದ ದಂಪತಿಗೆ ಸೆಕ್ಸ್‌ನಲ್ಲಿ ಎಲ್ಲಿರುತ್ತೆ ಆಸಕ್ತಿ?

Suvarna News   | Asianet News
Published : Nov 07, 2020, 04:56 PM IST
#Feelfree: ದಣಿದ ಬಂದ ದಂಪತಿಗೆ ಸೆಕ್ಸ್‌ನಲ್ಲಿ ಎಲ್ಲಿರುತ್ತೆ ಆಸಕ್ತಿ?

ಸಾರಾಂಶ

ರಾತ್ರಿ ಸಂಭೋಗ ನಡೆಸಲು ಸಾಧ್ಯವಾಗದಿದ್ದರೆ ಏನಂತೆ, ಮುಂಜಾನೆಯ ಸೆಕ್ಸ್‌ನಿಂದ ದೇಹಕ್ಕೂ ಮನಸ್ಸಿಗೂ ಎಷ್ಟೊಂದು ಲಾಭಗಳಿವೆ ನಿಮಗೆ ಗೊತ್ತಾ?

ಪ್ರಶ್ನೆ: ನಾನು ವಿವಾಹಿತೆ. ಮೂವತ್ತು ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ನಾವಿಬ್ಬರೂ ಉದ್ಯೋಗಿಗಳು. ಬೆಳಗ್ಗೆ ಮನೆ ಬಿಟ್ಟರೆ ಮನೆ ಮರಳಿ ಸೇರುವುದು ರಾತ್ರಿಯಾಗುತ್ತದೆ. ಸುಸ್ತಾಗಿರುತ್ತದೆ. ಸೆಕ್ಸ್‌ನಲ್ಲಿ ಆಸಕ್ತಿ ಬರುವುದೇ ಇಲ್ಲ. ನಾವಿಬ್ಬರೂ ಮಿಲನ ಕ್ರಿಯೆ ನಡೆಸಿ ಎಷ್ಟೋ ತಿಂಗಳಾಗಿವೆ. ಏನು ಮಾಡಬಹುದು?

ಉತ್ತರ: ರಾತ್ರಿಯೇ ಕಾಮಕ್ರಿಯೆ ನಡೆಸಬೇಕೆಂದೇನೂ ಇಲ್ಲ. ಮುಂಜಾನೆ ಏಳುವ ಹೊತ್ತಿಗೂ ಸೆಕ್ಸ್ ನಡೆಸಬಹುದು. ನಿಜಕ್ಕೂ ಸೆಕ್ಸ್‌ಗೆ ಮುಂಜಾನೆಯೇ ಬೆಸ್ಟ್. ಯಾಕೆ ಅಂತ ಹೇಳುತ್ತೀನಿ ಕೇಳಿ.
- ನಿಮ್ಮಿಬ್ಬರ ದೇಹಗಳೂ ಹಿಂದಿನ ದಿನದ ಆಯಾಸವನ್ನೆಲ್ಲ ನೀಗಿಕೊಂಡು ಹಾಯಾಗಿರುತ್ತವೆ. ದೇಹಗಳು ಸೆಕ್ಸ್‌ಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರುತ್ತವೆ. ಇಬ್ಬರ ದೇಹದಲ್ಲೂ ಈಸ್ಟ್ರೋಜೆನ್ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳ ಲೆವೆಲ್ ಬೆಳಗ್ಗೆ ಹೊತ್ತಿನಲ್ಲಿ ಹೆಚ್ಚು ಇರುವುದರಿಂದ ತೀವ್ರ ಆಸಕ್ತಿ ಮತ್ತು ಸಾಮಥ್ರ್ಯವೂ ಇರುತ್ತದೆ.
- ಗಂಡಸು ಈ ಹೊತ್ತಿನಲ್ಲಿ ಹೆಚ್ಚು ವಿಜೃಂಭಿಸಲು, ಹೆಚ್ಚು ಹೊತ್ತು ತನ್ನ ನಿಮಿರುವಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಯಾಕೆಂದರೆ ಹೊತ್ತಿನಲ್ಲಿ ಇರುವ ಟೆಸ್ಟೋಸ್ಟಿರಾನ್ ಪ್ರಮಾಣ ಹೆಚ್ಚು. ಮಾರ್ನಿಂಗ್ ಎರೆಕ್ಷನ್ ಎಂದು ಕರೆಯಲ್ಪಡುವ ಬೆಳಗಿನ ಜಾವದ ನಿಮಿರುವಿಕೆಯನ್ನು ಎಲ್ಲ ಗಂಡಸರೂ ಗಮನಿಸಿರುತ್ತಾರೆ.

Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ! ...

- ಬೆಳಗಿನ ಜಾವದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆ ಆಗುವ ಪ್ರಮಾಣ ಹೆಚ್ಚು. ಇದು ಕಡ್ಲಿಂಗ್ ಹಾರ್ಮೋನ್ ಅಂತಲೇ ಫೇಮಸ್ಸು. ಅಂದರೆ ಸಂಗಾತಿಯ ಕಡೆಗಿನ ಪ್ರೀತಿ ಆತ್ಮೀಯತೆ ಮುಂತಾದ ಬೆಚ್ಚಗಿನ ಭಾವನೆಗಳನ್ನು ಇದು ಪ್ರಚೋದಿಸುತ್ತದೆ.
- ಒತ್ತಡವನ್ನು ಮಾರ್ನಿಂಗ್ ಸೆಕ್ಸ್ ತುಂಬಾ ಕಡಿಮೆ ಮಾಡುತ್ತದೆ. ಒತ್ತಡಯುಕ್ತವಾಗಿರುವ ದೇಹ ಒಂದು ಬಾರಿ ಸೆಕ್ಸ್‌ನ ತುರೀಯಾವಸ್ಥೆ ಅಥವಾ ಆರ್ಗ್ಯಾಸಂಗೆ ಒಳಗಾದಾಗ, ಅದರಿಂದ ಮನಸ್ಸಿನ ಒತ್ತಡವೂ ನಿವಾರಣೆ ಆಗುತ್ತದೆ. ಮುಂಜಾನೆ ಒತ್ತಡಮುಕ್ತಿ ಮಾಡಿಕೊಂಡು ಡ್ಯೂಟಿಗೆ ತೆರಳಿದರೆ ಆ ದಿನವಿಡೀ ಪ್ರಫುಲ್ಲವಾಗಿರುತ್ತದೆ. 
- ಸೆಕ್ಸ್‌ನ ಬಳಿಕ ದೇಹವಿಡೀ ಹಗುರಾದ ಭಾವನೆ ಉಂಟಾಗುತ್ತದೆ ತಾನೆ? ಅದಕ್ಕೆ ಕಾರಣ ಎಂಡಾರ್ಫಿನ್ ಎಂಬ ಹಾರ್ಮೋನು. ಇದು ಸೆಕ್ಸ್ ವೇಳೆ ಬಿಡುಗಡೆಯಾಗಿ, ದೇಹದ ನೋವುಗಳನ್ನೆಲ್ಲ ನಿವಾರಿಸುತ್ತದೆ. ಇದು ನೋವು ನಿವಾರಕ ಚೋದಕ. ಮುಂಜಾನೆ ಈ ಹಾರ್ಮೋನ್‌ನಿಂದ ಉತ್ತೇಜಿಸಲ್ಪಟ್ಟರೆ ದಿನವಿಡೀ ಹಗುರ.

#Feelfree: ಮದುವೆಯಾಗಿ ತಿಂಗಳು ಆರಾದರೂ ಕಾಂಡೋಮ್ ಇಲ್ದೆ ಸೆಕ್ಸ್ ಇಲ್ಲ! ...

- ದೇಹವನ್ನು ಫಿಟ್ ಆಗಿಡಲು, ಕ್ಯಾಲೊರಿಗಳನ್ನು ಸುಡಲು ಮಾರ್ನಿಂಗ್ ವಾಕ್ ಹೋಗುತ್ತೀರಷ್ಟೆ. ಅಥವಾ ವ್ಯಾಯಾಮ ಮಾಡುತ್ತೀರಿ. ಸೆಕ್ಸ್ ಕೂಡ ವ್ಯಾಯಾಮಕ್ಕೆ ಸಮಾನ. ಒಂದು ಅಧ್ಯಯನದ ಪ್ರಕಾರ ಸೆಕ್ಸ್‌ ವೇಳೆ ದೇಹದಲ್ಲಿ ನಿಮಿಷಕ್ಕೆ ಐದು ಕ್ಯಾಲೊರಿ ಬರ್ನ್ ಆಗುತ್ತದೆ. ಇಪ್ಪತ್ತು ನಿಮಿಷ ಸೆಕ್ಸ್ ಮಾಡಿದರೆ ನೂರು ಕ್ಯಾಲೊರಿಗಳಾದರೂ ಸುಟ್ಟು ದೇಹ ಹಗುರಾಗುತ್ತದೆ.
- ಮೆದುಳಿಗೆ ಮಾರ್ನಿಂಗ್ ಸೆಕ್ಸ್ ಆರೋಗ್ಯದಾಯಕ. ಇದರಿಂದ ಡೋಪಮೈನ್ ಎಂಬ ಹಾರ್ಮೋನ್ ಸ್ರಾವ ಹೆಚ್ಚಾಗುತ್ತದೆ. ಜೊತೆಗೆ ನ್ಯೂರೋಟ್ರಾನ್ಸ್‌ಮಿಟರ್ ಎಂಬ ಚೋದಕ. ಇದು ಮೆದುಳನ್ನು ಉಲ್ಲಾಸಮಯವಾಗಿಡುತ್ತದೆ.


- ಮುಂಜಾನೆಯ ಸಂಭೋಗದಿಂದ ವಿಟಮಿನ್ ಸಿ ಲೆವೆಲ್ ಕೂಡ ಬಾಡಿಯಲ್ಲಿ ಬೇಕಾದ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ದೇಹದ ಪ್ರತಿರೋಧ ಶಕ್ತಿ ಹೆಚ್ಚಳಕ್ಕೆ ಪೂರಕ.
- ಮುಂಜಾನೆಯ ಸೆಕ್ಸ್‌ನಿಂದ ನಿಮ್ಮ ದೇಹಕ್ಕೂ ಮನಸ್ಸಿಗೂ ಯವ್ವನವನ್ನು ಕಾಪಾಡಿಕೊಳ್ಳಬಹುದು. ದೇಹದಲ್ಲಿ ಇದರಿಂದಾಗಿ ಎಂಡಾರ್ಫಿನ್, ಆಕ್ಸಿಟೋಸಿನ್‌ ಮತ್ತು ಇತರ ಆಂಟಿ ಇನ್‌ಫ್ಲೇಮೇಟರಿ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇವು ದೇಹವನ್ನು ಸುಟಿಸುಟಿಯಾಗಿಡಲು ಪೂರಕ. ಬಿಬಿಸಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ವಾರದಲ್ಲಿ ಮೂರು ದಿನವಾದರೂ ಮಾರ್ನಿಂಗ್ ಸೆಕ್ಸ್ ನಡೆಸಿದವರು ಇತರರಿಗಿಂತ ಅತ್ಯಂತ ಕಡಿಮೆ ಪ್ರಾಯದವರಂತೆ ಕಾಣಿಸಿಕೊಳ್ಳುತ್ತಾರಂತೆ. ಆರ್ಗ್ಯಾಸಂಗಳು ನಿಮ್ಮ ಚರ್ಮವನ್ನೂ ಅತ್ಯಂತ ಉತ್ತಮವಾದ ಸ್ಥಿತಿಯಲ್ಲಿ ಇಟ್ಟಿರುತ್ತವೆ. 

#Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..? ...

- ಉಲ್ಲಾಸಮಯ ಕಚೇರಿ ಸಮಯ ಇದರ ಇನ್ನೊಂದು ಲಾಭ. ನೀವು ಕಚೇರಿಯಲ್ಲೇ ಇದ್ದರೂ ಕಚೇರಿಯ ರಗಳೆಗಳೆಲ್ಲ ನಿಮ್ಮ ಕಣ್ಣ ಮುಂದಿನಿಂದ ಮಾಯವಾಗಿ ಬೆಳಗಿನ ಸುಖದ ಕ್ಷಣಗಳೇ ನಿಮ್ಮ ತುಟಿಯಲ್ಲಿ ಸಣ್ಣ ನಗು ಹೊಮ್ಮಿಸುತ್ತ ನಿಮ್ಮನ್ನು ಉಲ್ಲಾಸವಾಗಿ ಇಟ್ಟಿರುತ್ತದೆ.
- ಮಾರ್ನಿಂಗ್ ಸೆಕ್ಸ್‌ನಿಂದ ಕೆಲಸಕ್ಕೋ ದಿನಚರಗೋ ತಡವಾಗುತ್ತದೆ ಎಂಬ ಆತಂಕ ಬೇಡ. ನಿತ್ಯ ಏಳುವುದಕ್ಕೆ ಅರ್ಧ ಗಂಟೆ ಮುನ್ನವೇ ಅಲಾರಂ ಇಟ್ಟುಕೊಂಡರೆ ನಿಮ್ಮ ದೇಹದ ಆಸೆಯೂ ಈಡೇರುತ್ತದೆ. ದಿನಚರಿಯೂ ಸಾಂಗವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Commitment Phobia: ನಿಮ್ಮ ಸಂಗಾತಿಗೂ ಇದ್ಯಾ ಚೆಕ್ ಮಾಡ್ಕೊಳ್ಳಿ! ಗುರುತಿಸುವುದು ಹೇಗೆ?
Women Mistakes in Love: ಲವ್ವಲ್ಲಿ ಬಿದ್ದ ಹೆಣ್ಣು ಮಕ್ಕಳ ಹಣೆ ಬರಹವೇ ಇಷ್ಟು, ಮತ್ತದೇ ತಪ್ಪೆಸೆಗುತ್ತಾರೆ!