ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!

By BK Ashwin  |  First Published May 21, 2023, 5:11 PM IST

ಸಿಲಿಕಾನ್‌ ಸಿಟಿ ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಹಣೆಯ ಮೇಲೆ ತನ್ನ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಹಾಗೂ, ಈ ವಿಡಿಯೋ ಕ್ಲಿಪ್ ಸಿಕ್ಕಾಪಟ್ಟೆ ವೈರಲ್‌ ಆಗಿದೆ.


ಬೆಂಗಳೂರು (ಮೇ 21, 2023): ಜನರು ಪ್ರೀತಿಯಲ್ಲಿರುವಾಗ ತಮ್ಮ ಸಂಗಾತಿಗಾಗಿ ಏನು ಬೇಕಾದ್ರೂ ಮಾಡೋಕೆ ರೆಡಿಯಿರುತ್ತಾರೆ. ಕೆಲವರಿಗೆ ಸರ್‌ಪ್ರೈಸ್‌ ನೀಡುವುದು ಯಾವ ಸಂತೋಷಕ್ಕೂ ಸಾಟಿ ಇಲ್ಲ. ಅಂತಹ ಒಂದು ರೊಮ್ಯಾಂಟಿಕ್ ಉದಾಹರಣೆ ನಮ್ಮ ರಾಜ್ಯದಲ್ಲೇ ನಡೆದಿದೆ ನೋಡಿ.. 

ಸಿಲಿಕಾನ್‌ ಸಿಟಿ ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಹಣೆಯ ಮೇಲೆ ತನ್ನ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಹಾಗೂ, ಈ ವಿಡಿಯೋ ಕ್ಲಿಪ್ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಹಲವಾರು ಇಂಟರ್ನೆಟ್ ಬಳಕೆದಾರರು ಇದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಬೆಂಗಳೂರಿನ ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದೆ.

Tap to resize

Latest Videos

ಇದನ್ನು ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!

ಕ್ಲಿಪ್‌ನಲ್ಲಿರುವ ಮಹಿಳೆ ತನ್ನ ಪತಿಯ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣಬಹುದು. ಈಕೆಯ ಪತಿಯ ಹೆಸರು ಸತೀಶ್‌ ಎಂದೂ ತಿಳಿದುಬಂದಿದೆ. ಇನ್ನು, ಅಂತಿಮ ಫಾಂಟ್ ಸೈಜ್‌ ನಿರ್ಧರಿಸುವ ಮೊದಲು ಆ ಹೆಸರಿನಲ್ಲಿ ಬರೆದು ಮೊದಲು ಪೇಪರ್‌ ಪೀಸ್‌ ಅನ್ನು ಮಹಿಳೆಯ ಹಣೆಯ ಮೇಲೆ ಅಂಟಿಸಿ ಪರಿಶೀಲನೆ ಮಾಡಲಾಗಿದೆ. ಮಹಿಳೆ ಈ ಬಗ್ಗೆ ಅತ್ಯಂತ ಸಂತೋಷದಿಂದ ಮತ್ತು ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದರ ಬಗ್ಗೆ ಉತ್ಸುಕಳಾಗಿದ್ದಾಳೆ. 

ಶೀಘ್ರದಲ್ಲೇ, ಹಚ್ಚೆ ಕಲಾವಿದ ತನ್ನ ಹಚ್ಚೆ ಯಂತ್ರವನ್ನು ಮಹಿಳೆಯ ಹಣೆಗೆ ಹೆಸರು ಸೇರಿಸಲು ಪ್ರಾರಂಭಿಸುತ್ತಾನೆ. ವೃತ್ತಿಪರರು ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ ತಕ್ಷಣ, ಆಕೆ ನೋವಿನಿಂದ ಟ್ಯಾಟೂ ಕಲಾವಿದನನ್ನು ತಡೆಯಲು ಪ್ರಯತ್ನಿಸುತ್ತಾಳೆ. ಆದರೂ, ಕೊನೆಗೆ ಟ್ಯಾಟೂ ಹಾಕಿಸಿಕೊಂಡಿದ್ದು, ‘’ನಿಜವಾದ ಪ್ರೀತಿ’’ ಎಂದು ವಿಡಿಯೋದಲ್ಲಿನ ಟೆಕ್ಸ್ಟ್‌ ಹೇಳುತ್ತದೆ.

ಇದನ್ನೂ ಓದಿ: 3ನೇ ಮಗುವಿಗೆ ಜನ್ಮ ನೀಡಿದ ಮಾರ್ಕ್‌ ಜುಕರ್‌ಬರ್ಗ್‌ ಪತ್ನಿ: ತುಂಬಾ ಕಷ್ಟಪಡ್ತಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು

ಮಾರ್ಚ್ 18 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೋ 2.6 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಮತ್ತು 12.5 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಇನ್ನು, ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಕೆಲವರು ಆ ಮಹಿಳೆಯ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಈ ವಿಡಿಯೋಗೆ ಡಿಸ್‌ಲೈಕ್‌ ಬಟನ್‌ ಕೊಡಬೇಕು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. "ಅದಕ್ಕಾಗಿಯೇ ಶಿಕ್ಷಣವು ಹೆಚ್ಚು ಮುಖ್ಯವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದರೆ, ವ್ಯಕ್ತಿಗಳಲ್ಲಿ ಸಾಮಾನ್ಯ ಜ್ಞಾನವೇ (ಸತ್ತು ಹೋಗಿದೆ) RIP ಎಂದೂ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಭೂಮಿ ನಡುಗುತ್ತಿದ್ದರೂ ನ್ಯೂಸ್ ಓದುವುದು ನಿಲ್ಲಿಸದ ಪಾಕ್ ಟಿವಿ ಆ್ಯಂಕರ್!

ಹಾಗೂ, ಇದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ನಿಜವಾದ ಪ್ರೀತಿಯನ್ನು ಸಾಬೀತುಪಡಿಸುವ ಅಗತ್ಯವಿಲ್ಲ, ಅದನ್ನು ನಿಮ್ಮ ಕಾಳಜಿ, ಪ್ರೀತಿ, ಆದ್ಯತೆಯಿಂದ ಅನುಭವಿಸಬೇಕು, ಯಾವುದಾದರೂ ಪರವಾಗಿಲ್ಲ, ಬೆಂಬಲಿಸುವುದು, ಉನ್ನತೀಕರಿಸುವುದು, ಅರ್ಥಮಾಡಿಕೊಳ್ಳುವುದು," ಎಂದೂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

"ಎಷ್ಟು ಸಿಲ್ಲಿ ಇದು, ನೀವು ಪರಸ್ಪರ ಹೇಗೆ ವರ್ತಿಸುತ್ತೀರಿ, ಗೌರವಿಸುತ್ತೀರಿ ಮತ್ತು ಹೇಗೆ ವರ್ತಿಸುತ್ತೀರಿ ಎಂಬುದರಲ್ಲಿ ಪ್ರೀತಿ ಇದೆ.." ಎಂದೂ ಮತ್ತೊಬ್ಬ ಬಳಕೆದಾರರು ತಮ್ಮ ಅಭಿಪ್ರಾಯ ನೀಡಿದ್ದು, ಈ ವಿಡಿಯೋಗೆ ಟೀಕೆ ಮಾಡಿದ್ದಾರೆ. 

ಇದನ್ನೂ ಓದಿ: ತನ್ನ ಕತ್ತು ತಾನೇ ಕೊಯ್ಕೊಂಡ: ಚಾಕು, ಪಿಸ್ತೂಲ್ ಹಿಡಿದು ಗಾಳೀಲಿ ಗುಂಡು ಹಾರಿಸುತ್ತಾ ಓಡಿದ ಭೂಪ..!

click me!