ಪ್ರೀತಿಗೆ ಜಾತಿ-ಧರ್ಮ, ವಯಸ್ಸು ಯಾವುದೂ ಅಡ್ಡಿಯಾಗುವುದಿಲ್ಲ ಅಂತಾರೆ. ಹಾಗಾಗಿಯೇ ಇತ್ತೀಚಿಗೆ ವಯಸ್ಸಿನ ಅಂತರ ಹೆಚ್ಚಾಗಿದ್ದರೂ ಮದುವೆಗಳು ನಡೆಯುತ್ತವೆ. ಹಾಗೆಯೇ ಇಲ್ಲೊಬ್ಬ ವೃದ್ಧ18ರ ಯುವತಿಯನ್ನು ಮದುವೆಯಾಗಿರುವ ವೀಡಿಯೋ ವೈರಲ್ ಆಗಿದೆ.
ಪ್ರೀತಿ ಯಾವುದೇ ಅಡೆತಡೆ ಇರುವುದಿಲ್ಲ. ಲವ್ ಬರ್ಡ್ಸ್ ವಯಸ್ಸು, ಜಾತಿ, ಧರ್ಮ ಮತ್ತು ಇತರ ಎಲ್ಲ ಅಡೆತಡೆಗಳನ್ನು ಮೀರಿ ಒಂದಾಗುತ್ತವೆ. ಆದರೆ, ಏಜ್ ಗ್ಯಾಪ್ ಇರುವ ದಂಪತಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಅಂತಹ ದಂಪತಿಗಳಿಗೆ ಕುಟುಂಬ, ಸಮಾಜ ಮತ್ತು ಸ್ನೇಹಿತರಿಂದ ಕನಿಷ್ಠ ಬೆಂಬಲ ಸಿಗುತ್ತದೆ. ಹೀಗಿದ್ದೂ ವಯಸ್ಸಾದವರು ಯುವತಿಯರನ್ನು ಮದುವೆಯಾಗುವುದು ಇತ್ತೀಚಿಗೆ ಸಾಮಾನ್ಯವಾಗಿ. ಹುಡುಗಿಯರು ಸಹ ಯಾವುದೇ ಹಿಂಜರಿಕೆಯಿಲ್ಲದೆ ವೃದ್ಧರನ್ನು ಮದುವೆಯಾಗುತ್ತಾರೆ. ಹಾಗೆಯೇ ಬೊಜ್ಜು ಬಾಯಿಯ ಅಜ್ಜ, 18ರ ಯುವತಿಯನ್ನು ಮದುವೆಯಾಗಿರುವ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
ವೀಡಿಯೊದಲ್ಲಿ, ವಯಸ್ಸಾದ ವ್ಯಕ್ತಿ (Elder person) ತನ್ನ ವರನ (Groom) ಗೆಟಪ್‌ನಲ್ಲಿ ಪೇಟ ಧರಿಸಿ, ಹೂವಿನ ಮಾಲೆ ಹಾಕಿ ಕುಳಿತಿರುವುದನ್ನು ನೋಡಬಹುದು. ಯುವತಿ (Girl)ಯೊಬ್ಬಳು ತನ್ನ ವಧುವಿನ ಗೆಟಪ್‌ನಲ್ಲಿ ಅವನ ಪಕ್ಕದಲ್ಲಿ ಕುಳಿತಿದ್ದಾಳೆ. ಇಬ್ಬರೂ ತಮ್ಮ ಮದುವೆಯ ನಂತರ ಸಂತೋಷವಾಗಿರುವುದನ್ನು ನೋಡಬಹುದು. rx_killer_boy ಅವರು Instagram ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ. ವೀಡಿಯೋ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ವರ ಮತ್ತು ವಧುವಿನ (Bride) ನಡುವಿನ ದೊಡ್ಡ ವಯಸ್ಸಿನ ಅಂತರದ ಬಗ್ಗೆ ಹಲವಾರು ಬಳಕೆದಾರರು (Users) ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!
ಮದುವೆಯಾಗಿರುವ ವೃದ್ಧ ಸುತ್ತಮುತ್ತಲಿದ್ದವರು ಟೀಕಿಸುವಾಗ ಬೊಜ್ಜು ಬಾಯಲ್ಲಿ ಜೋರಾಗಿ ನಗುವುದನ್ನು ನೋಡಬಹುದು. ವಧು ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ವೀಡಿಯೋದ ಬ್ಯಾಕ್‌ಗ್ರೌಂಡ್ ವಾಯ್ಸ್‌ನಲ್ಲಿ ಹುಡುಗಿ ಯಾಕೆ ಇಂಥಾ ವೃದ್ಧನನ್ನು ಮದುವೆಯಾಗುತ್ತಿದ್ದಾಳೆ ಎಂದು ಅಚ್ಚರಿಪಡಬೇಡಿ. ಒಂದು ಆತನ ಇನ್‌ಕಮ್ ಹೆಚ್ಚು, ಇನ್ನೊಂದು ಆತನ ಆಯುಷ್ಯ ಕಡಿಮೆ ಅನ್ನೋ ಕಾರಣವಾಗಿದೆ ಎಂದು ಹೇಳಿರುವುದನ್ನು ಕೇಳಬಹುದು.
ವೈರಲ್ ಆಗಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು 'ಇಷ್ಟು ಚೆಂದದ ಹುಡುಗಿಗೆ ಇಂಥಾ ವೃದ್ಧನನ್ನು ಮದುವೆಯಾಗಲು ಹೇಗೆ ಸಾಧ್ಯವಾಯಿತು' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು 'ಇವತ್ತಿನ ಕಾಲದ ಹುಡುಗಿಯರಿಗೆ ವೃದ್ಧರೇ ಯಾಕೆ ಇಷ್ಟವಾಗುತ್ತಾರೆ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು 'ಇದು ಕಲಿಯುಗ, ಇವತ್ತಿನ ಕಾಲದ ಹುಡುಗಿಯರಿಗೆ ಇಂಥವರೇ ಇಷ್ಟವಾಗುತ್ತಾರೆ' ಎಂದು ಟೀಕಿಸಿದ್ದಾರೆ.
ಸುಂದರವಾದ ಯುವತಿಯರು ಅಂಕಲ್‌ಗಳನ್ನೇ ಮದ್ವೆಯಾಗೋದು ಯಾಕೆ?
19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ
ಪಾಕಿಸ್ತಾನದಲ್ಲಿ ವಯಸ್ಸಿನ ಅಂತರವನ್ನು ಮರೆತು ಯುವತಿಯರು ತಾತನ ವಯಸ್ಸಿನ ಮುದುಕರಲ್ಲಿ ಬಾಳ ಸಂಗಾತಿಯನ್ನು ಕಾಣುತ್ತಿದ್ದಾರೆ. ಆಕೆಯ ಹೆಸರು ಸುಮೈಲ ಅಲಿ (Shumaila Ali), ವಯಸ್ಸಿನ್ನು ಕೇವಲ 19, ಆಕೆಯ ಪ್ರೇಮಿಯ ಹೆಸರು ಲಿಯಾಖತ್ ಅಲಿ (Liaquat Ali) ವಯಸ್ಸು 70 ವರ್ಷ. ಈ ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಪರಸ್ಪರ ಪ್ರೀತಿಯಾಗಿದೆ. ಅಲ್ಲದೇ ವಯಸ್ಸಿನ ಅಂತರವನ್ನು ಮರೆತು 19ರ ಸುಮೈಲಾ ತನಗಿಂತ 50 ವರ್ಷ ಹಿರಿಯರಾದ ಲಿಯಾಖತ್‌ನನ್ನು ಮದುವೆಯಾಗಿದ್ದಾಳೆ. ವಯಸ್ಸಿನ ಅಂತರದ ಕಾರಣಕ್ಕೆ ಇವರ ಪ್ರೇಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ಸುದ್ದಿ ಕೇಂದ್ರಬಿಂದುವಾಗಿದೆ. ಇವರ ಪ್ರೇಮ ಕತೆಯನ್ನು ಪಾಕಿಸ್ತಾನದ (Pakistan) ಯುಟ್ಯೂಬರ್ (YouTuber) ಸೈಯದ್ ಬಸಿತ್ ಅಲಿ (Syed Basit Ali) ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.