ರಣಬೀರ್ ಜೊತೆ ಸಂಪೂರ್ಣ ಬೆತ್ತಲಾಗಿ ನಟಿಸಿದ ತೃಪ್ತಿ ದಿಮ್ರಿ ಬಗ್ಗೆ ತಂದೆ-ತಾಯಿ ಹೀಗೆಲ್ಲಾ ಹೇಳೋದಾ?

Published : Dec 10, 2023, 03:39 PM ISTUpdated : Dec 10, 2023, 04:03 PM IST
ರಣಬೀರ್ ಜೊತೆ ಸಂಪೂರ್ಣ ಬೆತ್ತಲಾಗಿ ನಟಿಸಿದ ತೃಪ್ತಿ ದಿಮ್ರಿ ಬಗ್ಗೆ ತಂದೆ-ತಾಯಿ ಹೀಗೆಲ್ಲಾ ಹೇಳೋದಾ?

ಸಾರಾಂಶ

ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ ತೃಪ್ರಿ ದಿಮ್ರಿ ಈಗಾಗ್ಲೇ ನ್ಯಾಶನಲ್ ಕ್ರಶ್ ಎಂದು ಅನಿಸಿಕೊಂಡಿದ್ದಾರೆ. ನಟಿಯ ಹಾಟ್‌ ಅವತಾರದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇದೆಲ್ಲದರ ಮಧ್ಯೆ ಚಿತ್ರದಲ್ಲಿ ಇಂಟಿಮೇಟ್ ದೃಶ್ಯಗಳಿಗೆ ತನ್ನ ಪೋಷಕರ ಪ್ರತಿಕ್ರಿಯೆಯನ್ನು ತೃಪ್ತಿ ಡಿಮ್ರಿ ಬಹಿರಂಗಪಡಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿರುವ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ ತೃಪ್ರಿ ದಿಮ್ರಿ ಅವರು ತುಂಬು ಬಟ್ಟೆ ತೊಟ್ಟಿದ್ದಕ್ಕಿಂತ ತುಂಡುಡುಗೆ ತೊಟ್ಟಿದ್ದೇ ಅಧಿಕವಾಗಿದೆ. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಸಿಗದ ನಟಿಗೆ, ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ನಂತರ ಪಡ್ಡೆಗಳ ಲೇಟೆಸ್ಟ್ ಕ್ರಶ್‌ ಆಗಿದ್ದಾರೆ. ಅನಿಮಲ್ ಚಿತ್ರದ ನಂತರ ತೃಪ್ತಿ ದಿಮ್ರಿ ಅವರ ಮಾದಕ ನೋಟದತ್ತ ಎಲ್ಲರ ಕಣ್ಣುಗಳು ಬಿದ್ದಿವೆ. ಈ ನಟಿಯ ಎಲ್ಲ ಅವತಾರದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ತೃಪ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತನ್ನ Instagram ಪುಟದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.

ಡಿಸೆಂಬರ್​1 ರಂದು ಬಿಡುಗಡೆಯಾಗಿರುವ  ನಟ ರಣಬೀರ್‌ ಕಪೂರ್‌ (Ranbir Kapoor)  ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ.  ಅಡಲ್ಟ್​ ಸರ್ಟಿಫಿಕೇಟ್​ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ನಾಗಾಲೋಟದಿಂದ ಓಡುತ್ತಿದೆ.

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

ತೃಪ್ತಿ ದಿಮ್ರಿಯ ಇಂಟಿಮೇಟ್ ಸೀನ್‌ ನೋಡಿ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
ಚಿತ್ರದಲ್ಲಿ ನಟಿ ರಶ್ಮಿಕಾ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ನಟಿ ತೃಪ್ತಿ ಸಂಪೂರ್ಣ ನಗ್ನಳಾಗಿದ್ದ ವಿಡಿಯೋ ವೈರಲ್​ ಆಗಿತ್ತು. ಸೆನ್ಸಾರ್​ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್​ರೂಮ್​ ಸೀನ್​ ಲೀಕ್​ ಆಗಿರುವ ಬೆನ್ನಲ್ಲೇ, ತೃಪ್ತಿ ಡಿಮ್ರಿಯ ವಿಡಿಯೋ ಕೂಡ ವೈರಲ್​ ಆಗಿದೆ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. 

ತೃಪ್ರಿ ದಿಮ್ರಿ, ತನ್ನ ಇತ್ತೀಚಿನ ಸಂದರ್ಶನದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಅಭಿನಯದ ಅನಿಮಲ್ ಚಿತ್ರದಲ್ಲಿ ತನ್ನ ನಿಕಟ ದೃಶ್ಯಗಳನ್ನು ವೀಕ್ಷಿಸಿದ ನಂತರ ತನ್ನ ಪೋಷಕರ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದರು. ತನ್ನ ಅಭಿನಯಕ್ಕಾಗಿ ರಾಷ್ಟ್ರೀಯ ಕ್ರಶ್ ಎಂದು ಪ್ರಶಂಸೆ ಗಳಿಸಿದ ಹೊರತಾಗಿಯೂ, ರಣಬೀರ್ ಕಪೂರ್‌ನೊಂದಿಗಿನ ತನ್ನ ಬೋಲ್ಡ್‌ ದೃಶ್ಯಗಳು ತನ್ನ ಹೆತ್ತವರನ್ನು ಹಿಮ್ಮೆಟ್ಟಿಸಿದವು ಎಂದು ತೃಪ್ತಿ ಉಲ್ಲೇಖಿಸಿದ್ದಾರೆ. 

'ಅನಿಮಲ್​' ಚಿತ್ರದ ಹಸಿಬಿಸಿ​ ದೃಶ್ಯಗಳಿಗೆ ಆಡಿಷನ್​ ಕೊಟ್ಟಿದ್ದ ಸೈಫ್​ ಪುತ್ರಿ ಸಾರಾ ಅಲಿ ಖಾನ್​ ರಿಜೆಕ್ಟ್​ ಆಗಿದ್ದೇಕೆ?

ಮಗಳನ್ನು ಅಂಥಾ ಸೀನ್‌ನಲ್ಲಿ ನೋಡಿ ಬೆಚ್ಚಿಬಿದ್ದ ಅಪ್ಪ-ಅಮ್ಮ
ನನ್ನ ಪೋಷಕರು ಅಂಥಾ ಸೀನ್‌ನಲ್ಲಿ ನನ್ನನ್ನು ನೋಡಿ ಆಶ್ಚರ್ಯಚಕಿತರಾದರು. ಇಂತಹದನ್ನು ನಾವು ಚಲನಚಿತ್ರಗಳಲ್ಲಿ ನೋಡಿಲ್ಲ. ಆದರೆ ನೀನು ಅದನ್ನು ಮಾಡಿದ್ದಿ' ಎಂದು ಹೇಳಿದರು. ಆ ದೃಶ್ಯವನ್ನು ನಾನು ಮಾಡಿದ್ದೇನೆಂದು ಅರಗಿಸಿಕೊಳ್ಳಲು ಅವರಿಗೆ ಬಹಳ ಸಮಯ ಬೇಕಾಯಿತು' ಎಂದು ತೃಪ್ತಿ ದಿಮ್ರಿ ತಿಳಿಸಿದ್ದಾರೆ.

"ನಾನು ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇದು ನನ್ನ ಕೆಲಸ ಮತ್ತು ಇದರಲ್ಲಿ ನಾನು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತೇನೆ. ಅದರಲ್ಲಿ ಯಾವುದೇ ಸಮಸ್ಯೆಯನ್ನು ಕಾಣುವುದಿಲ್ಲ. ನಾನು ನಟಿ, ಹೀಗಾಗಿ ನಿರ್ವಹಿಸುವ ಪಾತ್ರದೊಂದಿಗೆ ನಾನು 100 ಪ್ರತಿಶತ ಪ್ರಾಮಾಣಿಕವಾಗಿರಬೇಕು ಮತ್ತು ನಾನು ಅದನ್ನು ಮಾಡಿದ್ದೇನೆ ಎಂದು ತಿಳಿಸಿದ್ದೇನೆ' ಎಂದು ತೃಪ್ತಿ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?