ಪ್ರೀತಿ ಎಂದರೆ ಹಾಗೇ.ಅದು ಯಾವಾಗ ಯಾರ ಮೇಲೆ ಮೂಡುತ್ತೆ ಎಂದು ಹೇಳೋಕೆ ಆಗಲ್ಲ. ಹಾಗೇ ಇಲ್ಲೊಬ್ಬ ವ್ಯಕ್ತಿ ತಮ್ಮ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ವಿವಾಹವಾಗಲು ಲಿಂಗ ಬದಲಾಯಿಸಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಭೋಪಾಲ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ವಿವಾಹವಾದರು. ಅಸ್ತಿತ್ವ ಸೋನಿ ಎಂಬವರು ಗೆಳತಿಯನ್ನು ಮದುವೆಯಾಗಲು ಪುರುಷನಾಗಿ ಬದಲಾದರು. ಪುರುಷನಾಗಿ ಬದಲಾಗುವ ಮುನ್ನ ಅವರ ಹೆಸರು ಅಲ್ಕಾ ಸೋನಿ ಎಂದಾಗಿತ್ತು. ಹೆಸರು ಬದಲಾಯಿಸಿಕೊಂಡ ನಂತರ ಅಸ್ತಿತ್ವ ಸೋನಿ, ಅಸ್ಥಾ ಎಂಬಾಕೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬದ ಸದಸ್ಯರು ಸಮ್ಮತಿ ಸೂಚಿಸಿದ್ದು, ಆರ್ಶೀವಾದ ನೀಡಿದ್ದಾರೆ.
ಅಲ್ಕಾ ಸೋನಿಯಾಗಿ ಜನಿಸಿದ ಕೆಲವು ವರ್ಷಗಳ ನಂತರ, ತಾನು ಮಹಿಳೆಯಲ್ಲ ಎಂದು ತಿಳಿದುಕೊಂಡು ಪುರುಷನಾಗಿ ಬದುಕಲು ಪ್ರಾರಂಭಿಸಿದರು. ಅವರ 47ನೇ ಹುಟ್ಟುಹಬ್ಬದಂದು, ಅಸ್ತಿತ್ವ ಲಿಂಗ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಸ್ವತಃ ಮರುನಾಮಕರಣ ಮಾಡಿಕೊಂಡರು.
'ತಾಳಿ ಕಟ್ಟುವ ಶುಭ ವೇಳೆ' ಮದುವೆ ಒಲ್ಲೆ ಎಂದ ವಧು: ಕಂಗಾಲಾದ ವರನಿಗೆ ಅಯ್ಯೋ ಪಾಪ ಅನ್ನೋದಾ!
ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್, ಭಿನ್ನಲಿಂಗೀಯ ಸಂಬಂಧದಲ್ಲಿರುವ ವ್ಯಕ್ತಿಗಳು ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪು ನೀಡಿದ ನಂತರ ಈ ವಿಶೇಷ ವಿವಾಹವು ಸಂಭವಿಸಿದೆ.
ಡಿಸೆಂಬರ್ 11ರಂದು ಅದ್ಧೂರಿಯಾಗಿ ವಿವಾಹವಾಗಲಿರುವ ಜೋಡಿ
ಮದುವೆಗೆ ಮುನ್ನ, ದಂಪತಿಗಳು ತಮ್ಮ ಪರಿಸ್ಥಿತಿಯನ್ನು ವಿವರಿಸಿ ಇಂದೋರ್ ಡೆಪ್ಯೂಟಿ ಕಲೆಕ್ಟರ್ ರೋಶನ್ ರೈ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಪರಿಶೀಲನೆಯ ನಂತರ ಅವರ ಅರ್ಜಿಯನ್ನು ಸ್ವೀಕರಿಸಲಾಯಿತು, ಎರಡೂ ಕಡೆಯವರಿಗೆ ಮದುವೆಗೆ ಸಿದ್ಧತೆ ನಡೆಸಲು ಸೂಚನೆ ನೀಡಲಾಯಿತು. ಗುರುವಾರ, ಆಸ್ತಿತ್ವ ಮತ್ತು ಆಸ್ತಾ ಕುಟುಂಬ ನ್ಯಾಯಾಲಯದಲ್ಲಿ ಪ್ರತಿ ಕಡೆಯಿಂದ ಇಬ್ಬರು ಸಾಕ್ಷಿಗಳು ಮತ್ತು ಜಂಟಿ ಸಾಕ್ಷಿಗಳ ಸಮ್ಮುಖದಲ್ಲಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದರು.
ಮುಸ್ಲಿಂ ಯುವತಿ ಜತೆ 'ಭಜರಂಗಿ ವಿವಾಹ': ಇದೆಂಥಾ ಜಿಹಾದ್?, ಮಂಗ್ಳೂರಲ್ಲಿ ಬಿಸಿ ಬಿಸಿ ಚರ್ಚೆ..!
ತಮ್ಮ ಸಂಬಂಧವನ್ನು ನಿರ್ಧರಿಸುವ ಮೊದಲು ಹಲವಾರು ತಿಂಗಳುಗಳನ್ನು ಆಲೋಚಿಸಿದ್ದಾರೆ ಎಂದು ಅವರು ಹೇಳಿದರು. ಆಸ್ತಾ ಅವರು ಅಸ್ತಿತ್ವರನ್ನು ಅವರ ಮನೆಯಲ್ಲಿ ಮೊದಲು ಭೇಟಿಯಾದರು, ಏಕೆಂದರೆ ಅಸ್ತಿತ್ವ, ಅಸ್ತಾರ ಸಹೋದರಿಯ ಸ್ನೇಹಿತರಾಗಿದ್ದರು. ಅವರ ಸಂಬಂಧವು ಕೇವಲ ಸಂತೋಷವನ್ನು ಹಂಚಿಕೊಳ್ಳುವುದರಿಂದ ಪ್ರೀತಿಯಾಗಿ ಬದಲಾಯಿತು. ಅಂತಿಮವಾಗಿ ಪ್ರೀತಿಯಾಗಿ ಅರಳಿತು. ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯಿಸಲಾಯಿತು. ಇದೀಗ ಡಿಸೆಂಬರ್ 11ರಂದು ಇವರಿಬ್ಬರೂ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ.