ನನ್ನ ಮಲ ಸಹೋದರನೇ ನನ್ನ ಪತಿ; ಕುಟುಂಬದ ರಹಸ್ಯ ಬಿಚ್ಚಿಟ್ಟ ಮಹಿಳೆ!

By Suvarna News  |  First Published Dec 10, 2023, 1:00 PM IST

ಒಂದು ಕುಟುಂಬ ಅಂದ್ಮೇಲೆ ಒಂದಿಷ್ಟು ರಹಸ್ಯಗಳಿರುತ್ತವೆ. ಅದನ್ನು ಅವರು ಹೊರಗಿನ ಜನರಿಗೆ ಹೇಳೋದಿಲ್ಲ. ಕೆಲವೊಬ್ಬರು ತಮ್ಮ ನೋವನ್ನು ಎಲ್ಲರ ಮುಂದೆ ಹಂಚಿಕೊಂಡು ಹಗುರವಾಗ್ತಾರೆ. ಈ ಮಹಿಳೆ ಕೂಡ ತನ್ನ ಪ್ರೀತಿ ಕಥೆಯನ್ನು ಹಂಚಿಕೊಂಡಿದ್ದಾಳೆ.


ಕುಟುಂಬದಲ್ಲಿರುವ ಕೆಲ ರಹಸ್ಯ ಕುಟುಂಬದ ಹೊರಗಿನ ಜನರಿಗೆ ಗೊತ್ತಾದ್ರೆ ದೊಡ್ಡ ಸಮಸ್ಯೆಯಾಗುತ್ತದೆ. ಆದ್ರೂ ಅನೇಕರು ಸತ್ಯವನ್ನು ಹೇಳಲು ಹೆದರೋದಿಲ್ಲ. ಎಲ್ಲರ ಮುಂದೆ ತಮ್ಮ ಕುಟುಂಬದ ಬಗ್ಗೆ ಮಾತನಾಡ್ತಾರೆ. ಈಗ ಮಹಿಳೆಯೊಬ್ಬಳು ತನ್ನ ರಹಸ್ಯವನ್ನು ಹೇಳಿದ್ದಾಳೆ. ಆಕೆಗೆ ಮದುವೆಯಾಗಿದೆ. ಇಬ್ಬರು ಮಕ್ಕಳಿದ್ದಾರೆ. ಆದ್ರೆ ಈ ಮಹಿಳೆ ಕುಟುಂಬ ಸಾಮಾನ್ಯವಾಗಿಲ್ಲ. ಅವಳು ತನ್ನ ಮಲ ಸಹೋದರನನ್ನೇ ಮದುವೆಯಾಗಿದ್ದಾಳೆ.  

ಮಲ ಸಹೋದರನನ್ನೇ ಮದುವೆ (Marriage) ಆದ್ಲು: ಸಾಮಾಜಿಕ ಜಾಲತಾಣ ಟಿಕ್ ಟಾಕ್ ನಲ್ಲಿ ಮಹಿಳೆ ತನ್ನ ಕಥೆಯನ್ನು ಹೇಳಿದ್ದಾಳೆ. ಆಕೆ ಹೆಸರು ಲಿಂಡ್ಸೆ. ಆಕೆ ಅಲಬಾಮಾದ ನಿವಾಸಿ. ಆಕೆ ಪತಿ ಹೆಸರು ಕೇಡ್ ಬ್ರೌನ್. 2013ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. 

Tap to resize

Latest Videos

ಸಾಯುವ ಮುನ್ನ ಸತ್ಯ ಹೇಳಿದ ತಂದೆ… ಕಂಗಾಲಾದ ಮಗಳು!

ಪ್ರೀತಿ (Love) ಬಗ್ಗೆ ಮಾತನಾಡಿದ ಲಿಂಡ್ಸೆ, ನಾವಿಬ್ಬರು ಪ್ರೀತಿ ಮಾಡಿ ಯಾವುದೇ ತಪ್ಪು ಮಾಡಿಲ್ಲ. ಮೊದಲಿನಿಂದಲೂ ನಾವಿಬ್ಬರು ಸಹೋದರ ಸಹೋದರಿಯಂತೆ ಇರಲಿಲ್ಲ. ಹದಿಹರೆಯದಲ್ಲಿ ಇದ್ದಾಗ ಅವಳು ಮತ್ತು ಕೇಡ್ ವಾಸ್ತವವಾಗಿ ಮೊದಲ ಬಾರಿಗೆ ಭೇಟಿಯಾದ್ದರಂತೆ. ನಾನು 14 ವರ್ಷದಲ್ಲಿದ್ದಾಗ ಕಿಟಕಿಯಿಂದ ಒಬ್ಬ ಅಪರಿಚಿತ ಹುಡುಗನನ್ನು ನೋಡಿದೆ. 15 ವರ್ಷದ ನಂತ್ರ ಅವನನ್ನು ಮದುವೆಯಾಗಿದ್ದೇನೆ. ಅವನೇ ನನ್ನ ಪತಿ ಹಾಗೂ ನನ್ನ ಮಲ ಸಹೋದರ. ನಮ್ಮ ಜೀವನದ ಹೇಳಿದಷ್ಟು ಸರಳವಾಗಿರಲಿಲ್ಲ. ನಾವಿಬ್ಬರು ಸಾಕಷ್ಟು ತಿರುವುಗಳನ್ನು ನೋಡಿದ್ದೇವೆ ಎಂದು ಲಿಂಡ್ಸೆ ಹೇಳಿದ್ದಾಳೆ. ನಮ್ಮ ಮದುವೆಯನ್ನು ಅನೇಕರು ದುರ್ಘಟನೆ ಎಂದು ಕರೆದಿದ್ದಾರೆ ಎನ್ನುತ್ತಾಳೆ ಲಿಂಡ್ಸೆ. 

ನೀವೂ ಬ್ಯಾಕ್ ಬರ್ನರ್ ಸಂಬಂಧದಲ್ಲಿದ್ದೀರಾ? ಹೀಗೆ ಪತ್ತೆ ಮಾಡಿ

ನಮ್ಮ ಮದುವೆ ಆಗಿಲ್ಲವೆಂದ್ರೆ ನನ್ನಮ್ಮ ಮದುವೆ ಆಗ್ತಿರಲಿಲ್ಲ : ತನ್ನ ವಿಡಿಯೋದ ಎರಡನೇ ಭಾಗದಲ್ಲಿ ಲಿಂಡ್ಸೆ ಮದುವೆ ಬಗ್ಗೆ ಮಾತನಾಡಿದ್ದಾಳೆ. ಹೈಸ್ಕೂಲ್ ಇರುವಾಗ ಲಿಂಡ್ಸ್, ಕೇಡ್ ಭೇಟಿಯಾಗಿದ್ದಳಂತೆ. ಕೇಡ್ ಆಗಾಗ ಆಕೆ ಮನೆಗೆ ಬರ್ತಿದ್ದ. ಲಿಂಡ್ಸ್ ರೂಮಿನಲ್ಲಿ ಅಡಗಿಕೊಳ್ತಿಲ್ಲ. ಒಂದು ದಿನ ಇಬ್ಬರೂ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಮ್ಮನಿಗೆ ಈ ಪ್ರೀತಿ ಒಪ್ಪಿಗೆ ಇರಲಿಲ್ಲ. ಕೇಡ್ ಮನೆಗೆ ಬರದಂತೆ ಅಮ್ಮ ತಾಕೀತು ಮಾಡಿದ್ದಳು. ಇದಾದ್ಮೇಲೆ ಕೇಡ್ ಮನೆಗೆ ಬರ್ತಿರಲಿಲ್ಲ. ಇಬ್ಬರ ಮಧ್ಯೆ ಯಾವುದೇ ಸಂಪರ್ಕವಿರಲಿಲ್ಲ. ಇಬ್ಬರೂ ದೂರವಿದ್ದರು. 2013ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಇಬ್ಬರು ಭೇಟಿಯಾಗಿದ್ದರಂತೆ. ಆ ಸಮಯದಲ್ಲಿ ನಾನು ಅಮ್ಮನಿಗೆ ಹೆದರಲಿಲ್ಲ. ಕೇಡ್ ಭೇಟಿಯಾಗಲು ಆತನ ಮನೆಗೆ ಹೋಗಿದ್ದೆ. ಅಮ್ಮ ನನ್ನನ್ನು ಹಿಂಬಾಲಿಸಿದ್ದಳು. ಈ ವೇಳೆ ಮೊದಲ ಬಾರಿ ನನ್ನ ಅಮ್ಮ, ಕೇಡ್ ತಂದೆಯನ್ನು ಭೇಟಿಯಾಗಿದ್ದಳು ಎಂದಿದ್ದಾಳೆ ಲಿಂಡ್ಸ್. 

ಅಷ್ಟೇ ಅಲ್ಲ, ಕೇಡ್ ಒಂದು ವರ್ಷ ಸೈನ್ಯ ತರಬೇತಿಗೆ ಹೋಗಿದ್ದ.  ಆ ಸಮಯದಲ್ಲಿ ಇಬ್ಬರು ದೂರವಿದ್ದರೂ ಪ್ರೀತಿ ಕಡಿಮೆ ಆಗಿರಲಿಲ್ಲ. ಕೇಡ್ ವಾಪಸ್ ಬಂದ್ಮೇಲೆ ಇಬ್ಬರು ಒಟ್ಟಿಗೆ ವಾಸವಾಗಲು ಶುರು ಮಾಡಿದ್ದರು. ಯಾರಿಗೂ ಹೆದರದೆ ಇಬ್ಬರು ಎರಡು ವಾರದ ನಂತ್ರ ಮದುವೆ ಮಾಡಿಕೊಂಡರು. 

ಇಬ್ಬರಿಗೆ ತಮ್ಮ ಅಪ್ಪ – ಅಮ್ಮನ ಮಧ್ಯೆ ಏನಾಗ್ತಿದೆ ಎನ್ನುವುದು ಗೊತ್ತಾಗಿರಲಿಲ್ಲ. ವಾಸ್ತವವಾಗಿ ಆಕೆ ಅಮ್ಮ ಕೇಡ್ ಅಪ್ಪನನ್ನು ಪ್ರೀತಿ ಮಾಡ್ತಿದ್ದಳಂತೆ. ಇಬ್ಬರ ಮಧ್ಯೆ ಡೇಟಿಂಗ್ ಶುರುವಾಗಿತ್ತು. ಲಿಂಡ್ಸ್ ಮತ್ತು ಕೇಡ್ ಇಬ್ಬರು ಮದುವೆ ಆದ್ಮೇಲೆ ಅಪ್ಪ – ಅಮ್ಮ ಮದುವೆ ಆದ್ರು. ಲಿಂಡ್ಸ್ ಅಮ್ಮ, ಕೇಡ್ ಅಪ್ಪನನ್ನು ಮದುವೆ ಆದ್ಮೇಲೆ ಇಬ್ಬರೂ ಮಲ ಸಹೋದರ ಸಹೋದರಿ ಆದ್ರು. ಜನರು ಈಗ್ಲೂ ನನ್ನ ಬಗ್ಗೆ ಮಾತನಾಡ್ತಾರೆ. ಮಲ ಸಹೋದರನ ಜೊತೆ ಮದುವೆಯಾಗಿದ್ದಾನೆಂದು ಆಡಿಕೊಳ್ತಾರೆ. ಆದ್ರೆ ನಾನು ಏನೂ ತಪ್ಪು ಮಾಡಿಲ್ಲ ಎನ್ನುವುದು ನನಗೆ ಗೊತ್ತು ಎನ್ನುತ್ತಾಳೆ ಲಿಂಡ್ಸ್. 

click me!