ಟೊಮಾಟೊ ಬೆಲೆ ಏರಿಕೆಯಿಂದ ಆಹಾರದ ರುಚಿ ಮಾತ್ರ ಹಾಳಾಗಿಲ್ಲ. ಸಂಬಂಧದ ಮಧ್ಯೆ ಬಿರುಕು ಮೂಡಿದೆ. ಟೊಮಾಟೊ ಹಾಕಿದ್ದಕ್ಕೆ ಕೋಪಗೊಂಡ ಪತ್ನಿಯೊಬ್ಬಳು ಮನೆ ಬಿಟ್ಟಿದ್ದಾಳೆ. ಆಕೆ ಕರೆತರೋಕೆ ಪತಿ ಅಚ್ಚರಿ ಪ್ರಮಾಣ ಮಾಡಿದ್ದಾನೆ.
ಟೊಮಾಟೊ ಬೆಲೆ ಗಗನಕ್ಕೇರಿದೆ. ತರಕಾರಿ ಖರೀದಿಗೆ ಬರುವ ಜನರು ಟೊಮಾಟೊ ಕಡೆ ತಿರುಗಿಯೂ ನೋಡ್ತಿಲ್ಲ. ಟೊಮಾಟೊ ಸೂಪ್, ಸಾಂಬಾರ್ ಇರಲಿ ಪಲ್ಯಕ್ಕೆ ಸ್ವಲ್ಪ ಟೊಮಾಟೊ ಬೆರೆಸೋಕೂ ಹಿಂದೆ ಮುಂದೆ ನೋಡ್ತಿದ್ದಾರೆ. ಟೊಮಾಟೊ ಬೆಲೆ ಏರಿಕೆ ವಿಷ್ಯಕ್ಕೆ ರಾಜಕಾರಣಿಗಳ ವಾದ- ವಿವಾದ, ಜನರ ಹಿಡಿಶಾಪವನ್ನು ನಾವು ಕೇಳಿದ್ದೇವೆ. ಟೊಮಾಟೊ ಆಹಾರದ ರುಚಿಯನ್ನು ಹಾಳು ಮಾಡಿದೆ. ಹಾಗೆಯೇ ಪತಿ – ಪತ್ನಿ ಮಧ್ಯೆ ಜಗಳಕ್ಕೂ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ.
ಮಧ್ಯಪ್ರದೇಶ (Madhya Pradesh) ದ ಶಾಹದೋಲ್ನಲ್ಲಿ ಟೊಮಾಟೊ (Tomato ) ವಿಷ್ಯಕ್ಕೆ ಪತಿ – ಪತ್ನಿ ಮಧ್ಯೆ ಗಲಾಟೆ ಶುರುವಾಗಿದೆ. ಬರೀ ಜಗಳವಾಗಿಲ್ಲ, ಕೋಪಗೊಂಡ ಪತ್ನಿ ಮನೆಬಿಟ್ಟು ಹೋಗಿದ್ದಾಳೆ. ತನ್ನ ಸಹೋದರಿ ಮನೆಗೆ ಹೋದ ಪತ್ನಿಯನ್ನು ವಾಪಸ್ ಮನೆಗೆ ಕರೆತರುವ ಪ್ರಯತ್ನ ನಡೆದಿದೆ. ಪೀಡಿತ ಪತಿ ದೂರಿನ ಮೇರೆಗೆ ಪೊಲೀಸರು (Police), ಪತಿ – ಪತ್ನಿ ಮಧ್ಯೆ ಸಂಧಾನ ನಡೆಸುವ ಪ್ರಯತ್ನದಲ್ಲಿದ್ದಾರೆ.
ಟೊಮ್ಯಾಟೊ ಬೆಲೆ 100 ರೂ. ಗಡಿ ದಾಟಲು ಕಾರಣ ಬಹಿರಂಗ: ಇನ್ನೂ 2 ತಿಂಗಳು ಕಡಿಮೆಯಾಗೋಲ್ಲ
ಪತಿ – ಪತ್ನಿ ಮಧ್ಯೆ ನಡೆದಿದ್ದೇನು? : ಮಧ್ಯಪ್ರದೇಶದ ಶಾಹದೋಲ್ ನ ಬಮ್ಹೋರಿ ನಿವಾಸಿ, ಟಿಫನ್ ಸೆಂಟರ್ ನಡೆಸುವ ಸಂಜೀವ್ ವರ್ಮಾ ಪೀಡಿತ. ಟಿಫನ್ ಸೆಂಟರ್ ನಡೆಸುವ ಸಂಜೀವ್, ಅಡುಗೆ ಮಾಡುವ ವೇಳೆ ಪಲ್ಯಕ್ಕೆ ಎರಡು ಟೊಮಾಟೊ ಹಾಕಿದ್ದಾನೆ. ಪತ್ನಿಯನ್ನು ಕೇಳದೆ ಆತ ಟೊಮಾಟೊ ಬಳಕೆ ಮಾಡಿದ್ದಾನೆ. ಇದ್ರಿಂದ ಪತ್ನಿಯ ಕೋಪ ನೆತ್ತಿಗೇರಿದೆ. ಟೊಮಾಟೊ ಬೆಲೆ ಎಷ್ಟು ಏರಿಕೆಯಾಗಿದೆ ಎಂಬುದು ನಿನಗೆ ಗೊತ್ತಾ? ಯಾಕೆ 2 ಟೊಮಾಟೊ ಹಾಕಿದ್ದೀಯಾ ಎಂದು ಜಗಳ ಮಾಡಿದ್ದಾಳೆ. ನಂತ್ರ ಮಾಹಿತಿ ನೀಡದೆ ತನ್ನ ಮಗನನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ ಪತ್ನಿ. ಸಂಜೀವ್, ಪತ್ನಿಯ ಮನವೊಲಿಸಲು ಹರಸಾಹಸ ಮಾಡಿದ್ದಾನೆ. ಟೊಮಾಟೊ ಸೇವನೆ ಮಾಡೋದಿಲ್ಲ ಅಂತಾ ಆಣೆ ಪ್ರಮಾಣ ಕೂಡ ಮಾಡಿದ್ದಾನೆ. ಇಷ್ಟಾದ್ರೂ ಪತ್ನಿ ಕೋಪ ಕಡಿಮೆಯಾಗಿಲ್ಲ. ಆಕೆ ಮನೆಬಿಟ್ಟು ಹೋಗುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪತ್ನಿ ಎಲ್ಲಿಗೆ ಹೋಗಿದ್ದಾಳೆಂಬುದನ್ನು ತಿಳಿಯದ ಸಂಜೀವ್, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪತ್ನಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದಾನೆ. ಪೊಲೀಸರು, ಸಂಜೀವ್ ಪತ್ನಿ ಆರತಿ ವರ್ಮಾ ಪತ್ತೆಗಾಗಿ ಫೋನ್ ನಂಬರ್ ಕೇಳಿದ್ದಾರೆ. ಸಂಜೀವ್ ನಂಬರ್ ನೀಡಿದ್ದಾನೆ. ಆ ನಂಬರ್ ಗೆ ಕರೆ ಮಾಡ್ತಿದ್ದಂತೆ ಕರೆ ಸ್ವೀಕರಿಸಿದ ಆರತಿ ವರ್ಮಾ, ತಾನು ತನ್ನ ಸಹೋದರಿ ಮನೆ ಉಮರಿಯಾದಲ್ಲಿ ಇದ್ದೇನೆ ಎಂದಿದ್ದಾಳೆ.
ಪೊಲೀಸರಿಗೆ ಆರತಿ ವರ್ಮಾ ಹೇಳಿದ್ದೇನು? : ಸಂಜೀವ್ ವರ್ಮಾನದ್ದು ಒಂದು ಢಾಬಾ ಇದೆ. ಅಲ್ಲದೆ ಆತ ಟಿಫನ್ ಸೇವೆಯನ್ನು ನೀಡ್ತಾನೆ. ಪತ್ನಿ ಆರತಿ ಜೊತೆ ಮಾತನಾಡಿದ ಪೊಲೀಸರಿಗೆ, ಆರತಿ ಬೇರೆ ಸಂಗತಿಯನ್ನೇ ಹೇಳಿದ್ದಾಳೆ. ಪತಿ ಸಂಜೀವ್ ವರ್ಮಾ, ಕುಡಿದು ತನ್ನ ಮೇಲೆ ಹಲ್ಲೆ ನಡೆಸುತ್ತಾನೆ. ಇದೇ ವಿಷ್ಯಕ್ಕೆ ನಾನು ಬೇಸರಗೊಂಡಿದ್ದೇನೆ. ಹಾಗಾಗಿಯೇ ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ನನ್ನ ಸಹೋದರಿ ಮನೆಗೆ ಬಂದಿದ್ದೇನೆ ಎಂದಿದ್ದಾಳೆ. ಆದ್ರೆ ಸಂಜೀವ್ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ನಮ್ಮಿಬ್ಬರ ಮಧ್ಯೆ ಗಲಾಟೆ ನಡೆಯಲು ಕಾರಣ ಟೊಮಾಟೊ ಎಂದು ಸಂಜೀವ್ ಹೇಳಿದ್ದಾನೆ. ಸಂಜೀವ್ ಹಾಗೂ ಆರತಿ ಮದುವೆಯಾಗಿ 8 ವರ್ಷ ಕಳೆದಿದೆ.
Family Planning: ನಾವಿಬ್ಬರು ನಮಗಿಬ್ಬರು ಅನ್ನೋ ಕಾನ್ಸೆಪ್ಟ್ ಎಷ್ಟು ಚೆಂದ ಅಲ್ವಾ?
ಟೊಮಾಟೊ ಬೆಲೆ ಏರಿಕೆ : ಎರಡು ವಾರಗಳ ಹಿಂದೆ ಕೆಜಿಗೆ 20ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮಾಟೊ ಈಗ ಇನ್ನೂರರ ಗಡಿ ದಾಟಿದೆ. ಟೊಮಾಟೊ ಬೆಲೆ ಏರಿಕೆ ನಂತ್ರ ಟೊಮಾಟೊ ಬೆಳೆ ಕಾಯ್ದುಕೊಳ್ಳೋದು ರೈತರಿಗೆ ಸವಾಲಿನ ಕೆಲಸವಾಗಿದೆ.