ಮದುವೆಯಾಗುವ ಭರವಸೆ ನೀಡಿ ಕೈ ಕೊಡುವ ಅದೆಷ್ಟೋ ಪುರುಷರನ್ನು ನಾವು ನೋಡಿದ್ದೇವೆ. ಅಂಥವರ ಬಗ್ಗೆ ಕೇಳಿದ್ದೇವೆ. ಇತ್ತೀಚಿಗೆ ಹೀಗೆ ಮೋಸ ಮಾಡುವ ಯುವತಿಯರು, ಮಹಿಳೆಯರ ಸಂಖ್ಯೆ ಹೆಚ್ತಿದೆ. ಸದ್ಯ ಬೆಂಗಳೂರು ಹಾಗೂ ವಿಜಯವಾಡದಲ್ಲೂ ಇಂಥಹದ್ದೇ ಘಟನೆಯೊಂದು ನಡ್ದಿದೆ.
ಮೋಸ ಹೋಗೋರು ಇರೋ ವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋ ಮಾತೇ ಇದೆ. ಅದೂ ಇವತ್ತಿನ ದಿನಗಳಲ್ಲಿ ಹೀಗೆ ಮೋಸ ಮಾಡಿ ಯಾಮಾರಿಸಿ ಬದುಕ್ತಿರೋ ಸಂಖ್ಯೆ ಹೆಚ್ಚಾಗ್ತಿದೆ. ಶಿಕ್ಷಣ, ಉದ್ಯೋಗ, ಟ್ರಾವೆಲ್, ರಿಲೇಶನ್‌ಶಿಪ್ ಹೀಗೆ ನಾನಾ ರೀತಿಯ ವಂಚನೆಯ ಚಾಲದಲ್ಲಿ ಬೀಳಿಸಿ ಮೋಸ ಮಾಡುತ್ತಾರೆ. ಮದುವೆಯಾಗುವ ಭರವಸೆ ನೀಡಿ ಕೈ ಕೊಡುವ ಅದೆಷ್ಟೋ ಪುರುಷರನ್ನು ನಾವು ನೋಡಿದ್ದೇವೆ. ಅಂಥವರ ಬಗ್ಗೆ ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಹೀಗೆ ಯುವಕರಿಗೆ ಮೋಸ ಮಾಡ್ತಿದ್ಲು. ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯಿಂದ ಹಣವನ್ನು ಪಡ್ಕೊಂಡು ನಂತ್ರ ಕೈ ಕೊಡ್ತಿದ್ಲು.
ಕಾಲ್ ಸೆಂಟರ್ ಉದ್ಯೋಗಿಯಿಂದ 9 ಲಕ್ಷ ರೂ. ಪಡೆದುಕೊಂಡಿದ್ದ ಮಹಿಳೆ
ಬೆಂಗಳೂರಿನಲ್ಲಿ ಮದುವೆ ಭರವಸೆ ನೀಡಿ ವಂಚಿಸಿದ್ದ ಮಹಿಳೆಯನ್ನು ಆವಡಿ ಪೊಲೀಸರು ಬಂಧಿಸಿದ್ದಾರೆ. ಈಕೆ ಚೆನ್ನೈನ ಆಯಪಕ್ಕಂನಲ್ಲಿ ವಾಸಿಸುವ ಕಾಲ್ ಸೆಂಟರ್ ಉದ್ಯೋಗಿಯಿಂದ ಮದುವೆಯಾಗುವುದಾಗಿ ಹೇಳಿ 9 ಲಕ್ಷ ರೂ. ಪಡೆದುಕೊಂಡಿದ್ದಳು. ನಂತರ ಮದುವೆಯ (Marriage) ಬಗ್ಗೆ ಮಾತನಾಡುವುದನ್ನು ತಪ್ಪಿಸಿದ್ದಳು. ವ್ಯಕ್ತಿ ಪದೇ ಪದೇ ಹಣವನ್ನು (Money) ಹಿಂತಿರುಗಿಸುವಂತೆ ಕೇಳಿದಾಗ ಆತನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರ ಸೈಬರ್ ಕ್ರೈಂ ವಿಭಾಗವು ಈ ಬಗ್ಗೆ ತನಿಖೆ (Enquiry) ನಡೆಸಿ 33 ವರ್ಷದ ಮಹಿಳೆಯನ್ನು ಬಂಧಿಸಿದೆ.
15 ಮಹಿಳೆಯರ ಮದುವೆಯಾಗಿ ವಂಚಿಸಿದ್ದವನ ಬಂಧನ: ವಿಧವೆ, ಮದುವೆ ಆಗದ ಮಧ್ಯ ವಯಸ್ಕರೇ ಈತನ ಟಾರ್ಗೆಟ್
ಶಂಕಿತ ಆರೋಪಿಯನ್ನು ಆಂಧ್ರಪ್ರದೇಶದ ಮದನಪಲ್ಲಿ ಮೂಲದ ವಿ.ಶ್ರವಣ ಸಂಧ್ಯಾ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಮಡಿವಾಳದಲ್ಲಿ ವಾಸಿಸುತ್ತಿದ್ದಾಳೆ. ಆಂಧ್ರಪ್ರದೇಶ ಮೂಲದ 33 ವರ್ಷದ ಎಸ್.ಅಶೋಕ್ ಚೈತನ್ಯ ಇಲ್ಲೇ ಸಮೀಪದಲ್ಲಿ ನೆಲೆಸಿದ್ದು, ತೆಲುಗು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಸಂಧ್ಯಾ ತನ್ನ ಚಿತ್ರಗಳನ್ನು ಕಳುಹಿಸಿ ಅವನೊಂದಿಗೆ ಸ್ನೇಹ ಬೆಳೆಸಿದಳು.
ಚೈತನ್ಯ ಅವರು ತಮ್ಮ ವೈಯಕ್ತಿಕ ಛಾಯಾಚಿತ್ರಗಳನ್ನು ಅವರೊಂದಿಗೆ ಹಂಚಿಕೊಂಡರು. ಮಾತ್ರವಲ್ಲ ಸಂಧ್ಯಾ ಹಣವನ್ನು ಕೇಳಿದಾಗ 9 ಲಕ್ಷವನ್ನು ಕಳುಹಿಸಿದರು. ಬೆಲೆ ಬಾಳುವ ಮೊಬೈಲ್ ಫೋನ್‌ನ್ನು ಸಹ ಉಡುಗೊರೆಯಾಗಿ ನೀಡಿದರು. ಆದರೆ ಸಂಧ್ಯಾ ಮದುವೆಯ (Marriage) ವಿಷಯವನ್ನು ತಪ್ಪಿಸಲು ಪ್ರಾರಂಭಿಸಿದಾಗ, ಅವನು ಅನುಮಾನಗೊಂಡು ತನ್ನ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದನು. ಆ ನಂತರ ಸಂಧ್ಯಾ, ಚೈತನ್ಯ ನಂಬರ್ ಬ್ಲಾಕ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?
ಸೈಬರ್ ಕ್ರೈಂ ಪೊಲೀಸರಿಂದ ಮಹಿಳೆಯ ಬಂಧನ
ಚೈತನ್ಯ ಅವರು ಸೈಬರ್ ಕ್ರೈಮ್ ಸಹಾಯವಾಣಿ 1930 ಮತ್ತು ಆವಡಿ ಪೊಲೀಸರ ಸೈಬರ್ ಕ್ರೈಮ್ ವಿಂಗ್‌ಗೆ ದೂರು ನೀಡಿದ್ದಾರೆ. ಆವಡಿ ಪೊಲೀಸ್ ಕಮಿಷನರ್ ಕೆ.ಶಂಕರ್ ಶಂಕಿತ ಆರೋಪಿಯನ್ನು ಪತ್ತೆ ಹಚ್ಚಲು ಸೈಬರ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ ಮಹಾಲಕ್ಷ್ಮಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿತ್ತು.
ಬೆಂಗಳೂರಿನ ಮಡಿವಾಳದ ಮಹಿಳಾ ಹಾಸ್ಟೆಲ್‌ನಲ್ಲಿ ಸಂಧ್ಯಾ ಅವರನ್ನು ಪೊಲೀಸರು ಬಂಧಿಸಿದ್ದು, ಮೂರು ಮೊಬೈಲ್ ಫೋನ್‌ಗಳು ಮತ್ತು ಆರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈಕೆ 33 ವರ್ಷಕ್ಕಿಂತ ಮೇಲ್ಪಟ್ಟ ತೆಲುಗು ಮಾತನಾಡುವ ಪುರುಷರನ್ನು ಗುರಿಯಾಗಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಮಾದರಿಯಲ್ಲಿ ಈಕೆ ಕೆಲವು ಪುರುಷರನ್ನು ವಂಚಿಸಿದ್ದಳು ಮತ್ತು ಎಂಟು ಇಮೇಲ್ ವಿಳಾಸಗಳನ್ನು ಬಳಸುತ್ತಿದ್ದಳು ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಸಕ್ರಿಯವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ವಿಜಯವಾಡದಲ್ಲಿ ಇತ್ತೀಚೆಗಷ್ಟೇ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ರಶೀದಾ ಎಂಬಾಕೆ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ಪೊಲೀಸರ ತನಿಖೆಯಲ್ಲಿ ಈಕೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು, ಆರ್ಥಕವಾಗಿ ಸದೃಢರಾದ ಅವಿವಾಹಿತ ಹುಡುಗರನ್ನು ಟಾರ್ಗೆಟ್ ಮಾಡಿ, ಪರಿಚಯಿಸಿಕೊಂಡು, ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.