ಮನೆ ತುಂಬಾ ಮಕ್ಕಳಿರಲವ್ವ ಎನ್ನುವ ಮಾತೊಂದು ಹಿಂದಿತ್ತು. ಆದ್ರೀಗ ಮನೆಗೊಂದು ಮಗು ಸಾಕು ಎನ್ನುವ ಸ್ಥಿತಿ ಇದೆ. ಒಂದು ಮಗುವಿಗಿಂತ ಎರಡು ಮಕ್ಕಳಿದ್ರೆ ಮನೆಗೊಂದು ಕಳೆ. ಇದ್ರಿಂದ ಲಾಭವೂ ಅಪಾರ.
ದುಬಾರಿ ದುನಿಯಾದಲ್ಲಿ ಬದುಕು ನಡೆಸೋದು ಕಷ್ಟ ಎನ್ನುವಂತಾಗಿದೆ. ಒಂದ್ಕಡೆ ಭಾರತದ ಜನಸಂಖ್ಯೆ ಹೆಚ್ಚಾಗ್ತಿದ್ದರೂ ಮತ್ತೊಂದು ಕಡೆ ಸಂಸಾರ ಸಣ್ಣದಾಗ್ತಿದೆ. ಅನೇಕರು ಒಂದೇ ಮಗು ಸಾಕು ಎನ್ನುತ್ತಿದ್ದಾರೆ. ಗರ್ಭ ಧರಿಸಿದಾಗಿನಿಂದ ಮಕ್ಕಳು ಉದ್ಯೋಗ ಹಿಡಿಯುವವರೆಗೆ ಮಕ್ಕಳನ್ನು ಸಾಕುವುದು ಪಾಲಕರ ಹೊಣೆ. ಇದನ್ನು ನಿಭಾಯಿಸೋದು ಸುಲಭವಲ್ಲ. ಇಬ್ಬರು ಮಕ್ಕಳಿದ್ರೆ ಅವರಿಗೆ ಶಿಕ್ಷಣ, ಅಗತ್ಯ ವಸ್ತು ಕೊಡಿಸೋದು ಈಗಿನ ದಿನಗಳಲ್ಲಿ ಕಷ್ಟ. ಹಾಗಾಗಿಯೇ ಅನೇಕರು ಒಂದು ಮಗುವಿಗೆ ಮುಕ್ತಾಯ ಹೇಳ್ತಿದ್ದಾರೆ. ಆದ್ರೆ ಕುಟುಂಬದಲ್ಲಿ ಎರಡು ಮಕ್ಕಳಿದ್ರೆ ಸಾಕಷ್ಟು ಲಾಭವಿದೆ. ನಾವಿಬ್ಬರು ನಮಗಿಬ್ಬರಿಂದ ಆಗುವ ಲಾಭವೇನು ಎಂಬುದನ್ನು ನಾವು ಹೇಳ್ತೇವೆ.
ಹೆಚ್ಚು ಸಂತೋಷ (Happiness) ಸಿಗುತ್ತದೆ : ಜನಪ್ರಿಯ ಗಾರ್ಡಿಯನ್ ಸೈನ್ಸ್ ಬ್ಲಾಗ್ ನ ಲೇಖಕ ಬ್ರೇನ್ ಫ್ಲಾಪಿಂಗ್ ಹಾಗೂ ನ್ಯೂರೋಸೈಂಟಿಸ್ಟ್ ಡೀನ್ ಪ್ರಕಾರ, ಎರಡು ಮಕ್ಕಳನ್ನು ಹೊಂದುವುದರಿಂದ ಪಾಲಕರು (Parents) ಹೆಚ್ಚು ಖುಷಿಯಾಗಿರಬಹುದು ಎನ್ನುತ್ತಾರೆ. ಕೆಲವೊಮ್ಮೆ ದುಃಖ ಹಾಗೂ ಒತ್ತಡ (Stress) ನಿಮ್ಮನ್ನು ಕಾಡಬಹುದು. ಆಗ ಮಕ್ಕಳ ಮೂಲಕ ನೀವು ನಿಮ್ಮ ಭಾವನೆಗಳನ್ನು ಹೊರಹಾಕುತ್ತೀರಿ. ಒಮ್ಮೆ ನೀವು ಮಕ್ಕಳ ಕುರಿತು ಚಿಂತೆ ಮಾಡಿದರೆ ಮತ್ತೊಮ್ಮೆ ಅವರ ಕಷ್ಟಗಳನ್ನು ನೋಡಿ ದುಃಖಿತರಾಗುತ್ತೀರಿ. ಹಾಗಾದಾಗ ನಿಮ್ಮ ಮೆದುಳು ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಒಬ್ಬರ ನಂತ್ರ ಒಬ್ಬರನ್ನು ಸಂಭಾಳಿಸುವಿದ್ರಲ್ಲೇ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ ಎನ್ನುತ್ತಾರೆ.
7ನೇ ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ, ಪ್ರತಿ ಬಾರಿ ಜಾಮೀನು ಕೊಡಿಸಿ ಮತ್ತೆ ಒಂದಾಗುವ ದಂಪತಿ!
ಆಟಕ್ಕೊಂದು ಜೊತೆ ; ಯಾವುದೇ ಮಗು ಮನೆಯಲ್ಲಿ ಒಂಟಿಯಾಗಿದ್ದರೆ ಅದು ಮೊಬೈಲ್ ಅನ್ನೋ ಅಥವಾ ಟಿವಿಯನ್ನೋ ಹೆಚ್ಚು ನೋಡುತ್ತದೆ. ಅಂತಹ ಮಕ್ಕಳು ಬೇರೆಯವರ ಜೊತೆ ಹೆಚ್ಚು ಬೆರೆಯುವ ಮನೋಭಾವ ಹೊಂದಿರುವುದಿಲ್ಲ. ಕೆಲವು ಮಕ್ಕಳು ಒಂಟಿಯಾಗುವುದರಿಂದ ಹಠಮಾರಿಗಳಾಗುವುದೂ ಉಂಟು. ಇಬ್ಬರು ಮಕ್ಕಳು ಜೊತೆಯಲ್ಲಿ ಮನೆಯಲ್ಲಿದ್ದರೆ ಗೆಳೆತನಕ್ಕೆ ಮತ್ತು ಆಟವಾಡಲು ಅವರಿಗೆ ಬೇರೆಯವರು ಬೇಕಾಗಿಲ್ಲ. ಏಕೆಂದರೆ ಅವರಿಗೆ ಪರಸ್ಪರ ಒಳ್ಳೆಯ ನಂಬಿಗಸ್ಥ ಸ್ನೇಹಿತ ಮನೆಯಲ್ಲೇ ಸಿಕ್ಕಿರುತ್ತಾನೆ. ಅಣ್ಣ-ತಮ್ಮ, ಅಕ್ಕ-ತಂಗಿಗಿಂತ ಒಳ್ಳೆಯ ಸ್ನೇಹಿತ ಹಾಗೂ ಹಿತೈಷಿಗಳು ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ.
ಕ್ರೀಯಾಶೀಲತೆ : ಒಂಟಿಯಾಗಿರುವ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುವುದಿಲ್ಲ. ಒಂಟಿತನದಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕೂಡ ಕುಂಠಿತವಾಗಬಹುದು. ಸಿಂಗಲ್ ಚೈಲ್ಡ್ ಆಗಿರುವವರಿಗೆ ಇನ್ನೊಬ್ಬ ಅಣ್ಣ ತಂಗಿಯನ್ನೋ ಅಥವಾ ಅಕ್ಕ ತಮ್ಮನನ್ನೋ ನೋಡಿದಾಗ ತಾನು ಒಂಟಿ ಎಂಬ ಭಾವನೆ ಮೂಡುತ್ತದೆ. ನನ್ನ ಭಾವನೆಯನ್ನು ಹಂಚಿಕೊಳ್ಳಲು ಹಾಗೂ ಆಟವಾಡಲು ನನ್ನ ಜೊತೆ ಯಾರೂ ಇಲ್ಲ ಎಂದು ಅವರಿಗೆ ಅನ್ನಿಸುತ್ತದೆ.
ಮದ್ವೆಯಾಗಿ ವರ್ಷದಲ್ಲೇ ಡಿವೋರ್ಸ್ ಆಗೋ ದೇಶಗಳಿವು, ಭಾರತ ಎಷ್ಟನೇ ಸ್ಥಾನದಲ್ಲಿದೆ?
ಪ್ರೀತಿ ಹೆಚ್ಚುತ್ತೆ : ಪ್ರೀತಿ ಹಂಚೋದ್ರಿಂದ ಅದು ಹೆಚ್ಚಾಗುತ್ತೆ ಅಂತ ಹೇಳ್ತಾರೆ. ಹಾಗೆಯೇ ಎರಡು ಮಕ್ಕಳು ಇರುವುದರಿಂದಲೂ ಪ್ರೀತಿ ಹೆಚ್ಚುತ್ತದೆ. ಎರಡನೇ ಮಗುವನ್ನು ಬೆಳೆಸುವುದು ಕೂಡ ತಂದೆ ತಾಯಿಯರಿಗೆ ಸುಲಭವೆನಿಸುತ್ತದೆ. ಹಾಗೂ ಎರಡನೇ ಮಗುವಿಗೆ ಅಣ್ಣನ ಅಥವಾ ಅಕ್ಕನ ಆಟಿಕೆಗಳು, ಪುಸ್ತಕಗಳು, ಬಟ್ಟೆ ಮುಂತಾದವು ಕೂಡ ಸಿಗುತ್ತದೆ ಜೊತೆಗೆ ಅಣ್ಣ ಅಥವಾ ಅಕ್ಕನ ಪ್ರೀತಿಯೂ ಸಿಗುತ್ತದೆ. ಅನೇಕ ಕಡೆಗಳಲ್ಲಿ ಮೊದಲು ಹುಟ್ಟಿದ ಮಗುವೇ ತಂಗಿ ಅಥವಾ ತಮ್ಮನ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ಪಾಲಕರ ಜವಾಬ್ದಾರಿಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಕಲಿಯುವ ಅವಕಾಶ : ಮನೆಯಲ್ಲಿ ಇಬ್ಬರು ಮಕ್ಕಳಿದ್ದಾಗ ಅವರು ಪರಸ್ಪರ ಒಬ್ಬರನ್ನೊಬ್ಬರು ನೋಡಿ ಅನೇಕ ವಿಷಯಗಳನ್ನು ತಿಳಿದುಕೊಳ್ತಾರೆ. ಹಿರಿಯ ಮಗುವನ್ನೇ ಎರಡನೇ ಮಗು ಅನುಸರಿಸುವುದರಿಂದ ನಾವು ಹೇಳಿಕೊಡುವ ಮೊದಲೇ ಅನೇಕ ವಿಷಯಗಳನ್ನು ಅದು ತಿಳಿದುಕೊಳ್ಳುತ್ತದೆ. ಇಬ್ಬರು ಮಕ್ಕಳಿದ್ದಾಗ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇಬ್ಬರು ಇರುವಾಗ ಅವರು ಧೈರ್ಯದಿಂದ ಇರುವುದು, ಹಂಚಿಕೊಳ್ಳುವ ಮನೋಭಾವ, ಸಹಾನುಭೂತಿ, ಹೆಲ್ಪಿಂಗ್ ನೇಚರ್ ಮುಂತಾದವನ್ನು ಕಲಿಯುತ್ತಾರೆ.