ನೆಗೆಟಿವ್ ಕಾಮೆಂಟ್ ಕೇಳಿಸಿಕೊಳ್ಳಿ, ಆದ್ರೆ ತಲೆಯೊಳಗೆ ಬಿಟ್ಕೋಬೇಡಿ!

By Suvarna NewsFirst Published Aug 26, 2020, 4:36 PM IST
Highlights

ಕೆಲವರಿಗೆ ಇನ್ನೊಬ್ಬರ ಹುಳುಕನ್ನು ಎತ್ತಿ ಆಡೋದೆ ಕೆಲ್ಸ.ಇಂಥವರು ಆಗಾಗ ನೆಗೆಟಿವ್ ಕಾಮೆಂಟ್‍ಗಳ ಮೂಲಕ ಇನ್ನೊಬ್ಬರ ಮನಸ್ಸಿನ ಜೊತೆ ಆಟವಾಡುತ್ತಾರೆ. ಇಂಥವರ ಕಾಮೆಂಟ್‍ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

‘ಅಯ್ಯೋ ನಿನ್ನ ಕೂದಲೇಕೆ ಇಷ್ಟು ತೆಳ್ಳಗಾಗಿದೆ?’,‘ಬರತ್ತಾಬರತ್ತಾ ಏಕೆ ತೆಳ್ಳಗಾಗುತ್ತಿದ್ದೀಯಾ? ಏನಾದ್ರೂ ಪ್ರಾಬ್ಲಂ?’ 'ನಿನ್ನ ಮಗಳಿಗೆ ಒಂದು ವರ್ಷ ಆಯ್ತಲ್ಲ, ಕಾಲನ್ನು ಸೊಟ್ಟಗೆ ಮಾಡಿ ನಡೀತಾಳೆ, ಒಮ್ಮೆ ಡಾಕ್ಟರ್ ಹತ್ರ ತೋರಿಸ್ಬೇಕಿತ್ತು?’ ಇಂಥ ಕಾಮೆಂಟ್‍ಗಳನ್ನು ನಿಮ್ಮ ಬಂಧುಗಳು,ಹಿತೈಷಿಗಳೆಂಬ ಸೋಗು ಹಾಕಿಕೊಂಡವರೆ ಮಾಡುತ್ತಾರೆ. ನಿಮ್ಮ ಮೇಲೆ ತುಂಬಾ ಕಾಳಜಿಯಿದೆ ಎಂಬ ರೀತಿಯಲ್ಲಿ ವರ್ತಿಸುತ್ತ ಇಂಥ ಕಾಮೆಂಟ್‍ಗಳನ್ನು ಮಾಡಿ ನಿಮ್ಮ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಾರೆ. ಒಂದು ವೇಳೆ ಇಂಥ ಕಾಮೆಂಟ್‍ಗಳು ನಿಮ್ಮ ಮನಸ್ಸನ್ನು ಕದಡಿ, ಪದೇಪದೆ ಆ ಬಗ್ಗೆಯೇ ಯೋಚಿಸುವಂತೆ ಮಾಡಿದರೆ ಅವರ ಯೋಜನೆ ಸಫಲವಾಯಿತೆಂದೇ ಅರ್ಥ. ಅಂದ್ರೆ ಇಂಥ ಕಾಮೆಂಟ್ ಮಾಡೋರ ಉದ್ದೇಶವೂ ಇದೇ ಆಗಿರುತ್ತೆ. ಇಂಥ ನೆಗೆಟಿವ್ ಕಾಮೆಂಟ್ ಮೂಲಕ ನಿಮ್ಮ ಮನಸ್ಸಿನಲ್ಲಿ ಸಣ್ಣ ಅನುಮಾನದ ಕಿಡಿ ಹೊತ್ತಿಕೊಳ್ಳುತ್ತದೆ. ಈ ಅನುಮಾನ ಕ್ರಮೇಣ ಕೀಳರಿಮೆ ರೂಪ ಪಡೆದುಕೊಂಡರೂ ಅಚ್ಚರಿಯಿಲ್ಲ. ನೀವು ಇಂಥ ಕಾಮೆಂಟ್‍ಗಳ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳೋ ಮನಸ್ಥಿತಿಯವರಾಗಿದ್ರೆ, ಅದೇನೋ ಹೇಳ್ತಾರಲ್ಲ ಮೈ ಮೇಲೆ ಇರುವೆ ಬಿಟ್ಟುಕೊಳ್ಳೋದು ಅಂತಹ ಹಾಗೇನೆ ಇದು. ಹಾಗಾದ್ರೆ ಇಂಥ ಕಾಮೆಂಟ್‍ಗಳು, ಅದನ್ನು ಪಾಸ್ ಮಾಡೋ ವ್ಯಕ್ತಿಗಳಿಂದ ನಮ್ಮ ಮನಸ್ಸು, ಯೋಚನೆಗಳನ್ನು ಕಾಪಾಡಿಕೊಳ್ಳೋದು ಹೇಗೆ?

ಮನಸು ಆಷಾಢದ ಮಳೆ;ಕಂಡದ್ದು, ಕಲಿತಿದ್ದು

ನಿರ್ಲಕ್ಷ್ಯವೇ ದಿವ್ಯ ಮದ್ದು
ಈ ರೀತಿ ನೆಗೆಟಿವ್ ಕಾಮೆಂಟ್ ಮಾಡೋರೋ, ಇನ್ನೊಬ್ಬರಲ್ಲಿ ಹುಳುಕು ಹುಡುಕಿ ಅವರ ಮುಂದೇನೆ ಹೇಳಿ ಕಿರಿಕಿರಿಯುಂಟು ಮಾಡೋ ವ್ಯಕ್ತಿಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಇಂಥವರ ಬುದ್ಧಿನೇ ಇಷ್ಟು. ಇವರು ನಿಮ್ಮ ಸಮೀಪದ ಬಂಧುವೇ ಆಗಿದ್ದರೂ ಅವರನ್ನು, ಅವರ ಕಾಮೆಂಟ್‍ಗಳನ್ನು ನಿರ್ಲಕ್ಷಿಸೋದು ನಿಮಗೇ ಕ್ಷೇಮ. ನಿಮ್ಮ ಕೂದಲಿನ ಬಗ್ಗೆ ನಿಮಗೇನೂ ಪ್ರಾಬ್ಲಂ ಇಲ್ಲ ತಾನೇ, ಬಿಟ್ಹಾಕಿ. ಒಂದು ವೇಳೆ ಕೂದಲು ದಪ್ಪಗಾಗಿದ್ರೆ ಚೆನ್ನಾಗಿರುತ್ತಿತ್ತು ಎಂದು ನಿಮಗೆ ಅನ್ನಿಸಿದ್ರೆ ಅದಕ್ಕೆ ಅನೇಕ ಮನೆಮದ್ದುಗಳಿವೆ ಟ್ರೈ ಮಾಡಿ. ಕೂದಲಿನ ಕಾಳಜಿ ಹಾಗೂ ಆರೈಕೆ ಮಾಡಿ ಅಷ್ಟೆ. ಇನ್ನು ನೆಗೆಟಿವ್ ಕಾಮೆಂಟ್ ಹೇಳಿದವರ ಮುಂದೆ ಅವರು ಹೇಳಿದ್ರಲ್ಲಿ ನಿಜವಿದೆ ಎಂಬಂತೆ ವರ್ತಿಸಬೇಡಿ. ಬದಲಿಗೆ ಈ ವಿಷಯ ನಂಗೂ ಗೊತ್ತಿದೆ, ಆ ಬಗ್ಗೆ ನಾನೇನು ತಲೆಕೆಡಿಸಿಕೊಂಡಿಲ್ಲ ಎಂಬಂತೆಯೇ ಇದ್ದುಬಿಡಿ.

ಸಸ್ಯಾಹಾರಿಗಳ ಸೆಕ್ಸ್ ಲೈಫೇ ಸೂಪರ್!

ಕಾಮೆಂಟ್ ಬಗ್ಗೆ ಯೋಚಿಸಬೇಡಿ
ಯಾರೋ ಏನೋ ಹೇಳಿದ್ರೂ ಅಂದ ಮಾತ್ರಕ್ಕೆ ಅದರ ಬಗ್ಗೆಯೇ ಯೋಚಿಸುತ್ತ ಕೂತ್ರೆ ನೀವು ಯಾವುದೇ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗೋದಿಲ್ಲ. ನಿಮ್ಮ ಸಮಯ, ಕೆಲಸದ ಜೊತೆ ಮನಸ್ಸೂ ಹಾಳಾಗುತ್ತೆ. ಅವರೇಕೆ ಹೀಗೆ ಹೇಳಿದ್ರು, ನಿಜವಾಗ್ಲೂ ನಾನು ಚೆನ್ನಾಗಿ ಕಾಣಿಸಲ್ವ, ನಂಗೇನೂ ಸಮಸ್ಯೆಯಿದೆಯಾ ಎಂದು ಪದೇಪದೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುತ್ತಿದ್ರೆ ನಿಮ್ಮ ಮನಸ್ಸು ನಕಾರಾತ್ಮಕ ಆಯಾಮದಲ್ಲೇ ಯೋಚಿಸಲು ಪ್ರಾರಂಭಿಸುತ್ತೆ. ಇದು ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಕೊಲ್ಲುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅವರು ಕಾಮೆಂಟ್ ಮಾಡಿರೋ ವಿಚಾರ ಅಷ್ಟೊಂದು ಮಹತ್ವದ್ದಾಗಿರೋದಿಲ್ಲ. ಅಷ್ಟೇ ಅಲ್ಲ, ಅವರೇನು ಹೇಳಿದ್ರು ಅದು ನಿಜವಾಗಿಯೂ ಇರೋದಿಲ್ಲ. ಸುಮ್ಮನೆ ನಿಮ್ಮ ತಲೆಗೊಂದು ಹುಳ ಬಿಟ್ಟು ಮನಸ್ಸಿನ ನೆಮ್ಮದಿ ಕೆಡಿಸಲು ಪ್ರಯತ್ನಿಸಿರುತ್ತಾರೆ ಅಷ್ಟೆ. ಉದಾಹರಣೆಗೆ ಮಗುವಿಗೆ ಒಂದೂವರೆ ಎರಡು ವರ್ಷವಾಗೋವಾಗ ತಾಯಿ ಮೊದಲಿಗಿಂತ ತೆಳ್ಳಗಾಗೋದು ಸಹಜ. ಅದೂ ಎದೆಹಾಲು ನೀಡುತ್ತಿದ್ದರೆ ಕೆಲವರಂತೂ ತುಂಬಾನೇ ತೆಳ್ಳಗಾಗುತ್ತಾರೆ. ಹಾಗಂತ ಅದೇನೂ ಶಾಶ್ವತ ಸಮಸ್ಯೆಯಲ್ಲ. ಮಗು ಸ್ವಲ್ಪ ದೊಡ್ಡದಾದ ಮೇಲೆ ಅಥವಾ ಎದೆಹಾಲು ಬಿಡಿಸಿದ ಬಳಿಕ ಅವರು ಮತ್ತೆ ದಪ್ಪಗಾಗುತ್ತಾರೆ. ಈ ವಿಷಯ ಗೊತ್ತಿದ್ದರೂ ಕೆಲವರು ಪದೇಪದೆ ಕೇಳಿ ಕಿರಿಕಿರಿಯುಂಟು ಮಾಡುತ್ತಾರೆ. ಹೀಗಾಗಿ ಇಂಥ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.  

ಸಮಸ್ಯೆಗೊಂದು ಪರಿಹಾರ ಇದ್ದೇಇದೆ
ಎಲ್ಲ ಸಮಸ್ಯೆಗೂ ಒಂದು ಪರಿಹಾರ ಇದ್ದೇಇರುತ್ತೆ. ಯಾರಾದ್ರೂ ನಿಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದಾಗ ಅದ್ರಲ್ಲಿ ನಿಜಾಂಶವಿದ್ರೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲು ಪ್ರಯತ್ನಿಸಿ. ಜಗತ್ತಿನಲ್ಲಿ ಯಾರಿಗೂ ಬಾರದ ಸಮಸ್ಯೆ ನಿಮಗೊಬ್ಬರಿಗೆ ಬಂದಿಲ್ಲ ತಾನೇ? ಆ ಸಮಸ್ಯೆಗೆ ಪರಿಹಾರ ಹುಡುಕಿ ಸರಿಪಡಿಸಿಕೊಳ್ಳಿ ಅಷ್ಟೆ. ಅದು ಬಿಟ್ಟು ಆ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಲು ಹೋಗಬೇಡಿ.

ಕೀಳರಿಮೆ ಬೇಡವೇ ಬೇಡ
ಯಾರದ್ದೋ ಮಾತಿಗೆ ನಿಮ್ಮ ಬಗ್ಗೆ ನೀವೇ ಕೀಳರಿಮೆ ಬೆಳೆಸಿಕೊಳ್ಳಬೇಡಿ. ನಿಮ್ಮನ್ನು ನೀವು ಇರುವಂತೆಯೇ ಪ್ರೀತಿಸಲು ಕಲಿಯಿರಿ. ನಿಮ್ಮ ಜ್ಞಾನ, ಪ್ರೌಢಿಮೆ, ಸಂಸ್ಕಾರವೇ ಟೀಕಾಕಾರಿಗೆ ಉತ್ತರವಾಗಬೇಕು. ನೆಗೆಟಿವ್ ಕಾಮೆಂಟ್ ನಿಮ್ಮ ಆತ್ಮವಿಶ್ವಾಸವನ್ನು ಎಂದೂ ಕೊಲ್ಲದಂತೆ ಎಚ್ಚರ ವಹಿಸಿ.

ಕೌನ್ಸಿಲ್ ಮೀಟಿಂಗ್ ಮಧ್ಯೆ ದಂಪತಿಯ ಸೆಕ್ಸ್

ತಕ್ಕ ಉತ್ತರ ನೀಡಲು ಹಿಂಜರಿಕೆ ಬೇಡ
ನಿಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ ವ್ಯಕ್ತಿಗೆ ಒಮ್ಮೆ ಸರಿಯಾಗಿ ಜಾಡಿಸಿ. ಅವರಂತೆಯೇ ಮಾತಿನಲ್ಲೇ ತಿರುಗೇಟು ನೀಡಿ. ಮತ್ತೆ ಅವರು ನಿಮ್ಮ ತಂಟೆಗೆ ಬರೋಲ್ಲ. ಅವರು ನಿಮಗಿಂತ ಹಿರಿಯರಾಗಿದ್ದರೂ ಪರ್ವಾಗಿಲ್ಲ. ಏಕೆಂದ್ರೆ ಸುಮ್ಮನಿದ್ದಷ್ಟೂ ಕೆಲವರು ಜಾಸ್ತಿಯೇ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಅಲ್ಲದೆ, ದೊಡ್ಡವರು ಚಿಕ್ಕತನ ತೋರಿದಾಗ ಅದನ್ನು ವಿರೋಧಿಸೋದ್ರಲ್ಲಿ ಖಂಡಿತಾ ತಪ್ಪಿಲ್ಲ ಅಲ್ವಾ? 

click me!