
ನವದೆಹಲಿ(ಆ. 25) ಸ್ತ್ರೀಯರ ವಿವಾಹದ ಕನಿಷ್ಠ ವಯಸ್ಸನ್ನು ಶಾಸನಬದ್ಧವಾಗಿ ಏರಿಕೆ ಮಾಡುವ ಮಾತುಗಳು ಕೇಳಿ ಬಂದಿರುವಾಲೇ ನೂರಕ್ಕೂ ಅಧಿಕ ಸಮಾಜ ಸೇವಾ ಸಂಸ್ಥೆಗಳು ಮನವಿಯೊಂದನ್ನು ಸರ್ಕಾರದ ಮುಂದೆ ಇಟ್ಟಿವೆ.
ಯಾವ ಕಾರಣಕ್ಕೂ ಕನಿಷ್ಠ ವಯಸ್ಸಿನ ಏರಿಕೆಗೆ ಮುಂದಾಗಬೇಡಿ ಎಂದು ಕೇಳಿಕೊಂಡಿವೆ. ಲಿಂಗ ಸಮಾನತೆ ಎಂಬ ಅಂಶದ ಮೇಲೆ ಇದು ಯಾವ ಪರಿಣಾಮ ಬೀರುವುದಿಲ್ಲ. ಹಿಳೆಯರ ಸ್ವಾವಲಂಬನೆ ಮೇಲೂ ಪರಿಣಾಮ ಆಗುವುದಿಲ್ಲ. ಬದಲಾಗಿ ತಾಯಿ ಆರೋಗ್ಯ ಕಾಪಾಡುವತ್ತ ಹೆಚ್ಚಿನ ಗಮನ ನೀಡಬೇಕು ಎಂದು ಕೇಳಿಕೊಂಡಿವೆ.
ಒಂದು ವೇಳೆ ಕಾನೂನಾತ್ಮಕವಾಗಿ ಲಿಂಗ ಸಮಾನತೆ ಎನ್ನುವುದಾದರೆ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ವಿವಾಹದ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ನಿಗದಿ ಮಾಡುವುದು ಒಳಿತು ಎಂದಿವೆ.
ಈ ರಾಶಿಯವರು ಮದುವೆಯಾದರೆ ಜಗಳವೆ ಗತಿ
ಒಂದು ವೇಳೆ ಸ್ತ್ರೀಯರ ವಿವಾಹದ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡಿದರೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕವನ್ನು ಹೊರಹಾಕಿವೆ. ಮಕ್ಕಳು ಮತ್ತು ಪೋಷಕರ ನಡುವೆ ವಿವಾದಕ್ಕೂ ಕಾರಣವಾಗಬಹುದು ಎಂದಿದೆ.
2,500 ಯುವಕರು ಮತ್ತು ನೂರಾರು ಸಂಘಟನೆಗಳು ಇಂತಹ ಧ್ವನಿ ಎತ್ತಿವೆ. ಸ್ವಾತಂತ್ರ್ಯ ದಿನದ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸ್ತ್ರೀಯರ ವಿವಾಹ ವಯಸ್ಸು ಏರಿಕೆ ಪ್ರಸ್ತಾಪ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.