Personality Development: ಆಫೀಸ್‍ನಲ್ಲಿ ಹೀಗಿದ್ರೆ ನೀವು ಎಲ್ಲರಿಗೂ ಇಷ್ಟವಾಗ್ತೀರಿ

Suvarna News   | Asianet News
Published : Dec 22, 2021, 02:31 PM ISTUpdated : Dec 22, 2021, 02:35 PM IST
Personality Development: ಆಫೀಸ್‍ನಲ್ಲಿ ಹೀಗಿದ್ರೆ ನೀವು ಎಲ್ಲರಿಗೂ ಇಷ್ಟವಾಗ್ತೀರಿ

ಸಾರಾಂಶ

ಕೆಲಸ ಮಾಡುವ ಸ್ಥಳದಲ್ಲಿ ಹೇಗಿರಬೇಕು ಅನ್ನೋದು ಹಲವರನ್ನು ಕನ್‌ಫ್ಯೂಸ್‌ (Confuse) ಮಾಡುವ ವಿಷಯ. ತುಂಬಾ ಫ್ರೀಯಾಗಿದ್ರೆ ಎಲ್ಲಾ ಕೆಲಸ (Work)ವನ್ನು ತಂದು ಹೇರಿ ಬಿಡ್ತಾರೆ. ಸ್ಪಲ್ಪ ರಿಸರ್ವಡ್‍ ಆಗಿದ್ರೆ ಎಲ್ಲದರಲ್ಲೂ ತಪ್ಪು ಹುಡುಕಿ ಗೂಬೆ ಕೂರಿಸ್ತಾರೆ ಅನ್ನೋದು ಹಲವರ ಕಂಪ್ಲೇಂಟ್. ಹಾಗಿದ್ರೆ ಕಚೇರಿಯಲ್ಲಿ ನಿಮ್ಮ ವ್ಯಕ್ತಿತ್ವ (Personality) ಹೇಗಿರಬೇಕು..?

ಕೆಲಸ ಮಾಡುವ ಸ್ಥಳದಲ್ಲಿ ಹೇಗಿರಬೇಕು ಅನ್ನೋದು ಹಲವರನ್ನು ಕನ್‌ಫ್ಯೂಸ್‌ ಮಾಡುವ ವಿಷಯ. ಮನೆಯಲ್ಲಿ ಸಿಟ್ಟು, ಸಿಡುಕು, ಆಲಸೀತನ, ಬೇಕಾಬಿಟ್ಟಿ ಹರಟೆ ಏನಿದ್ರೂ ಸರಿ. ಆದ್ರೆ ಆಫೀಸಿನಲ್ಲಿ ಹೀಗೆಲ್ಲಾ ಮಾಡಲು ಆಗುವುದಿಲ್ಲ. ಒಂದು ಕಚೇರಿ ಎಂದಾಗ ಅದಕ್ಕೆ ಅದರದ್ದೇ ಆದ ಶಿಸ್ತು ಎಂಬುದು ಇರುತ್ತದೆ. ಅದನ್ನು ಎಲ್ಲರೂ ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಕೆಲವೊಬ್ಬರು ಆಫೀಸಿನಲ್ಲಿ ಹೇಗಿರಬೇಕು, ಹೇಗಿದ್ದರೆ ಪರ್ಫೆಕ್ಟ್ ಎಂಬ ಗೊಂದಲದಲ್ಲಿರುತ್ತಾರೆ. ಅವರಂತಿದ್ದರೆ ಸರಿ, ಇವರಂತಿದ್ದರೆ ಸರಿ ಎಂದು ಯಾರನ್ನೋ ಅನುಸರಿಸಲು ಹೋಗುತ್ತಾರೆ. ಆಫೀಸಿನಲ್ಲಿ ನೀವು ಪರ್ಫೆಕ್ಟ್ ಆಗಿರಬೇಕು ನಿಜ. ಆದರೆ ಇದಕ್ಕೆ ಯಾರ್ಯಾರನ್ನೋ ಅನುಸರಿಸಬೇಕಾಗಿಲ್ಲ.

ಕಚೇರಿಯಲ್ಲಿ ಬಾಸ್ ಮತ್ತು ಸಹೋದ್ಯೋಗಿಗಳನ್ನು ಮೆಚ್ಚಿಸಲು, ನೀವು ಪರಿಪೂರ್ಣ ವ್ಯಕ್ತಿತ್ವದವರಾಗಿರುವುದು ಮುಖ್ಯ. ಸಿಡುಕು, ಸೋಮಾರಿ ಸಹೋದ್ಯೋಗಿಯನ್ನು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ಕೆಲಸದ ಸ್ಥಳದಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿರಲು ನೀವೇನು ಮಾಡಬಹುದು. ಇಲ್ಲಿದೆ ಕೆಲವೊಂದು ಸಲಹೆಗಳು.

ವೈಯಕ್ತಿಕ ಜೀವನದ ಬಗ್ಗೆ ಕಚೇರಿಯಲ್ಲಿ ಚರ್ಚೆ ಬೇಡ

ಕೆಲಸದ ಸ್ಥಳದಲ್ಲಿ ನಿಮ್ಮ ವೈಯಕ್ತಿಕ ಜೀವನ (Life)ವನ್ನು ಎಂದಿಗೂ ಚರ್ಚಿಸಬೇಡಿ. ನಿಮ್ಮ ವೈಯಕ್ತಿಕ ಜೀವನದ ಸಮಸ್ಯೆ (Problem)ಗಳ ಬಗ್ಗೆ ಮಾತನಾಡುವುದು, ಸಂಬಂಧಿಕರ ಬಗ್ಗೆ ಮಾತನಾಡುವುದು ನಿಮಗೆ ವೃತ್ತಿಪರ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಈ ರೀತಿಯ ಅನಗತ್ಯ ಚರ್ಚೆಯಿಂದ ಕೆಲಸದ ಮೇಲಿನ ಆಸಕ್ತಿ ಸಹ ಕಡಿಮೆಯಾಗುತ್ತದೆ.

ದಿನವನ್ನು ಈ ರೀತಿ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ!

ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ 

ಮಾನವ ಸಂಪನ್ಮೂಲ ವಿಭಾಗದಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ. ಹೆಚ್ ಆರ್ ಕಳುಹಿಸುವ ಕಾರ್ಯ ಚಟುವಟಿಕೆಗಳಲ್ಲಿ, ಕಾಂಪಿಟೇಶನ್‌ಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮಲ್ಲಿರುವ ಪ್ರತಿಭೆ (Talent)ಯನ್ನು ಅನಾವರಣಗೊಳಿಸಲು ನೆರವಾಗುತ್ತದೆ. ಮಾತ್ರವಲ್ಲ ನಿಮಗೆ ಸಂಬಂಧಿಸಿದ ಡಿಪಾರ್ಟ್‌ಮೆಂಟ್ ಮಾತ್ರವಲ್ಲದೆ ಆಫೀಸ್‌ನ ಇತರ ಉದ್ಯೋಗಿಗಳನ್ನೂ ಪರಿಚಯ ಮಾಡಿಕೊಡುತ್ತದೆ. ಎಲ್ಲಾ ಉದ್ಯೋಗಿಗಳ ಜತೆ ಮಾತನಾಡುವ ಈ ಪ್ರಕ್ರಿಯೆ ನಿಮ್ಮ ಆತ್ಮವಿಶ್ವಾಸ (Confidence)ವನ್ನು ಸಹ ಹೆಚ್ಚಿಸುತ್ತದೆ.

ನಕಾರಾತ್ಮಕವಾಗಿರಬೇಡಿ

ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ನಕಾರಾತ್ಮಕವಾಗಿ ಯೋಚಿಸಲು ಹೋಗಬೇಡಿ. ಯಾರ ಜತೆಗೂ ವಾದಿಸಬೇಡಿ. ಕಟುವಾಗಿ ಟೀಕಿಸಬೇಡಿ. ಬದಲಾಗಿ, ನಿಮ್ಮ ಆಲೋಚನೆಗಳು ಮತ್ತು ಕಾರ್ಯಗಳಿಂದ ಕೆಲಸ ಮಾಡುವ ಸ್ಥಳದಲ್ಲಿ ಇತರರಿಗೆ ಸ್ಪೂರ್ತಿಯಾಗಿರಿ. ಮಾಡುವ ಕೆಲಸದ ಮೇಲೆ ವಿಶ್ವಾಸವಿಟ್ಟು ಖುಷಿಯಿಂದ ಕಾರ್ಯನಿರ್ವಹಿಸಿ. ಇದರಿಂದ ಕೆಲಸದ ಫಲಿತಾಂಶ(Result)ವೂ ಉತ್ತಮವಾಗಿರುತ್ತದೆ. ಮನಸ್ಸಿಗೂ ಸಮಾಧಾನವಿರುತ್ತದೆ.

ಆಫೀಸ್‌ನಿಂದ ಬಂದು ಈ ಕೆಲಸ ಮಾಡಿದ್ರೆ, ರಾತ್ರಿ ಆರಾಮ ಸಿಗುತ್ತೆ

ವ್ಯಕ್ತಿತ್ವದ ಅಂಶಗಳು

ಕಚೇರಿಯಲ್ಲಿ ನಿಮ್ಮ ವ್ಯಕ್ತಿತ್ವ (Personality) ಪರಿಪೂರ್ಣವಾಗಿರಲು ಪ್ರಯತ್ನಿಸಿ. ನಿಮ್ಮಲ್ಲಿರುವ ಋಣಾತ್ಮಕ ಗುಣಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಕಚೇರಿಗೆ ಲೇಟ್ ಆಗಿ ಬರುವುದು, ಸಹೋದ್ಯೋಗಿಗಳ ಜತೆ ಹರಟೆ ಹೊಡೆಯುವುದು ಉತ್ತಮ ಅಭ್ಯಾಸಗಳಲ್ಲ. ಆದರೆ ಒಂದೇ ಸಾರಿ ಯಾವುದೇ ಅಭ್ಯಾಸವನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ. ಹೀಗಾಗಿ ಹಂತ ಹಂತವಾಗಿ ಇಂಥಹಾ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಿ.

ವೃತ್ತಿಪರವಾಗಿ ಉಡುಗೆ ಧರಿಸಿ

ಔಟ್ ಆಫ್ ಫ್ಯಾಷನ್ (Fashion) ಅನಿಸಿದ ಬಟ್ಟೆಗಳನ್ನು ಕೆಲಸದ ಸ್ಥಳಕ್ಕೆ ಹಾಕಿಕೊಂಡು ಹೋಗಬೇಡಿ. ನಿಮ್ಮ ವೃತ್ತಿಗೆ ಅನುಗುಣವಾಗಿ ಡ್ರೆಸ್ ಮಾಡಿಕೊಂಡು ಹೋಗುವುದು ಬಹಳ ಮುಖ್ಯ. ನೀವು ವೃತ್ತಿಪರವಾಗಿ ಉಡುಗೆ ಮಾಡಿದಾಗ, ನಿಮ್ಮ ವ್ಯಕ್ತಿತ್ವವು ಪರಿಪೂರ್ಣವಾಗಿರುತ್ತದೆ. ಅಲ್ಲದೆ ಈ ರೀತಿ ಶಿಸ್ತುಬದ್ಧವಾಗಿ ರೆಡಿಯಾಗುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಸಹ ಹೆಚ್ಚುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು