ಸಂಭೋಗ ಅಂದ್ರೆ ಬಹುತೇಕರು ದೈಹಿಕ ಕ್ರಿಯೆ ಎಂದುಕೊಂಡಿದ್ದಾರೆ. ಸಂಭೋಗವನ್ನು ಭಾವನಾತ್ಮಕವಾಗಿ ನೋಡುವುದಿಲ್ಲ. ಇಬ್ಬರ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಒಂದು ಮಾಡುವ ಶಕ್ತಿ ಅದಕ್ಕಿದೆ. ಹಾಗಾಗಿ ಸಂಬಂಧ ಬೆಳೆಸುವ ಮೊದಲು ಸಂಗಾತಿ ಜೊತೆ ಮಾತುಕತೆ ಮುಖ್ಯವಾಗುತ್ತದೆ.
ಆರಂಭದಲ್ಲಿ ಹಿತವೆನಿಸುವ ಸೆಕ್ಸ್ (Sex) ದಿನ ಕಳೆದಂತೆ ಕೆಲವರಿಗೆ ಕೇವಲ ಲೈಂಗಿಕ ತೃಪ್ತಿಯಾಗಿರುತ್ತದೆ. ಸಂಭೋಗ ಯಾಂತ್ರಿಕವಾಗುತ್ತದೆ. ಶಾರೀರಿಕ ಸಂಬಂಧದಲ್ಲಿ ವಿಶೇಷ ಆಸಕ್ತಿ,ಉತ್ಸಾಹ,ರಸವಿರುವುದಿಲ್ಲ. ದೇಹಕ್ಕೆ ಹಿತ ಎಂಬ ಒಂದೇ ಕಾರಣಕ್ಕೆ ಇಲ್ಲವೆ ದಾಂಪತ್ಯ ಮುಂದುವರೆಯಬೇಕೆಂಬ ಅನಿವಾರ್ಯತೆಗೆ ಶಾರೀರಿಕ ಸಂಬಂಧ ಬೆಳೆಸುತ್ತಾರೆ. ಇದು ಸಂಬಂಧ (Relation)ವನ್ನು ಮತ್ತಷ್ಟು ಹದಗೆಡಿಸುತ್ತದೆ. ಇಂಟರ್ಕೋರ್ಸನ್ನು ಇನ್ನಷ್ಟು ಆಸಕ್ತಿದಾಯಕಗೊಳಿಸಲು ಹಾಗೂ ಸಂಬಂಧವನ್ನು ಗಟ್ಟಿಗೊಳಿಸಲು ಬಯಸಿದರೆ ಪರಸ್ಪರ ಮಾತುಕತೆ ಮುಖ್ಯವಾಗುತ್ತದೆ. ಸೆಕ್ಸ್ ಕೇವಲ ಲೈಂಗಿಕ ತೃಪ್ತಿಗಲ್ಲ.ಭಾವನೆಗಳು ಇದ್ರಲ್ಲಿ ಮಹತ್ವ ಪಡೆಯುತ್ತವೆ ಎಂಬುದನ್ನು ಅರಿತ ಸಂಗಾತಿಗಳು ಒಟ್ಟಿಗೆ ಕುಳಿತು ಇದ್ರ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ.
ಕಾಲ ಎಷ್ಟೇ ಬದಲಾದರೂ ಭಾರತ (India)ದಲ್ಲಿ ಸೆಕ್ಸ್ ಒಂದು ಮುಚ್ಚಿಡುವ ವಿಷ್ಯ. ದಂಪತಿ (Couple) ಕೂಡ ಇದ್ರ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಭಾವನೆಗಳನ್ನು ಹಂಚಿಕೊಳ್ಳುವ ಪ್ರಯತ್ನ ನಡೆಸುವುದಿಲ್ಲ. ಇದ್ರಿಂದ ಲೈಂಗಿಕ ಜೀವನಕ್ಕೆ ಮಂಕು ಕವಿಯುತ್ತದೆ. ಹಾಗಾಗಿ ದಂಪತಿ ಸಂಭೋಗಕ್ಕೂ ಮುನ್ನ ಮುಖ್ಯವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು.
undefined
ಸಂಗಾತಿಗೆ ಏನು ಬೇಕು ? : ಮೊದಲೇ ಹೇಳಿದಂತೆ ಇದೊಂದು ಯಾಂತ್ರಿಕ ಕ್ರಿಯೆಯಲ್ಲ. ಸೆಕ್ಸ್ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಕಸನು,ಕಲ್ಪನೆಗಳನ್ನು ಹೊಂದಿರುತ್ತಾರೆ. ಅವರ ಕನಸುಗಳನ್ನು ಇನ್ನೊಬ್ಬ ಸಂಗಾತಿ ತಿಳಿಯುವ ಅಗತ್ಯವಿದೆ. ಇಬ್ಬರ ಮಧ್ಯೆ ಮಾತುಕತೆ ನಡೆದಾಗ ಇದು ಹೊರಬರುತ್ತದೆ.ಸಂಗಾತಿ ಇಚ್ಛೆಯನ್ನು ಈಡೇರಿಸಲು ಇನ್ನೊಬ್ಬ ಸಂಗಾತಿ ಮುಂದಾಗಬೇಕು. ಮಹಿಳೆಯರು ಇಚ್ಛೆಗಳನ್ನು ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ಅವರು ಬಾಯ್ಬಿಟ್ಟು ಭಾವನೆ ಹಂಚಿಕೊಂಡಾಗ ಅದನ್ನು ಅರ್ಥ ಮಾಡಿಕೊಂಡು,ಅವರ ಇಚ್ಛೆ ಪೂರೈಸುವ ಕೆಲಸವನ್ನು ಪುರುಷ ಸಂಗಾತಿ ಮಾಡಬೇಕು. ಹೊಸ ಹೊಸ ಪ್ರಯೋಗಗಳ ಬಗ್ಗೆಯೂ ಸಂಗಾತಿಗೆ ಆಸಕ್ತಿಯಿದೆಯೇ ಎಂಬುದನ್ನು ತಿಳಿಯಬೇಕು. ಒಂದೇ ವಿಧಾನ ಅನೇಕ ಬಾರಿ ನೀರಸವನ್ನುಂಟು ಮಾಡುತ್ತದೆ. ಆಗ ಹೊಸ ಪ್ರಯೋಗಗಳಿಗೆ ಇಳಿಯುವುದು ಅನಿವಾರ್ಯವಾಗುತ್ತದೆ. ಇದು ಲೈಂಗಿಕ ಜೀವನವನ್ನು ಉತ್ತಮಗೊಳಿಸಲು ನೆರವಾಗುತ್ತದೆ.
ಹಿಂದಿನ ಲೈಂಗಿಕ ಬದುಕು : ಮಾಜಿ ಸಂಗಾತಿಗಳಿರುವುದು ಈಗ ಹೊಸತಲ್ಲ. ಕೆಲವೊಮ್ಮೆ ಈ ಮಾಜಿಗಳ ವಿಷ್ಯ ದಾಂಪತ್ಯದ ಬಿರುಕಿಗೆ ಕಾರಣವಾಗುತ್ತದೆ. ಪ್ರತಿ ಕ್ಷಣವೂ ಈಗಿನ ಸಂಗಾತಿ ಹಾಗೂ ಮಾಜಿ ಮಧ್ಯೆ ಹೋಲಿಕೆ ಮಾಡುವುದು ಸೇರಿದಂತೆ ಅವರನ್ನು ಪದೇ ಪದೇ ನೆನಪು ಮಾಡುವುದು ಸಂಬಂಧ ಹದಗೆಡಲು ಕಾರಣವಾಗುತ್ತದೆ. ಆದ್ರೆ ಅತಿ ಸೂಕ್ಷ್ಮ ವಿಷ್ಯವನ್ನು ನೀವು ಸಂಗಾತಿಯಿಂದ ತಿಳಿಯಬೇಕಾದ ಅನಿವಾರ್ಯತೆಯಿರುತ್ತದೆ. ಮಾಜಿ ಜೊತೆ ಸಂಗಾತಿಗಿದ್ದ ಲೈಂಗಿಕ ಸಂಬಂಧ. ಹೌದು,ಇದು ಸ್ವಲ್ಪ ಮುಜುಗರವೆನಿಸಬಹುದು. ಇಲ್ಲವೆ ಅತೀ ಎನ್ನಿಸಬಹುದು. ಹಾಗಂತ ಅಲ್ಲಗಳೆಯಲು ಸಾಧ್ಯವಿಲ್ಲ. ಮಾಜಿ ಸಂಗಾತಿ ಜೊತೆ ದೈಹಿಕ ಸಂಬಂಧ ಹೇಗಿತ್ತು ಎನ್ನುವ ಬಗ್ಗೆ ನೀವು ಮಾತಿಗಿಳಿದರೆ ಅವರೂ ಈ ಬಗ್ಗೆ ಮಾತನಾಡುತ್ತಾರೆ. ಒಂದು ವೇಳೆ ಆಗ ಅಸುರಕ್ಷಿತ ಸಂಬಂಧ ಬೆಳೆಸಿದ್ದರೆ ಈಗ ನಿಮ್ಮ ಜೊತೆಯೂ ಅದು ನಡೆದಿದೆಯಾ ಎಂಬುದನ್ನು ನೆನಪಿಸಿಕೊಳ್ಳಿ. ಒಂದು ವೇಳೆ ಅಸುರಕ್ಷಿತ ಸಂಬಂಧ ಬೆಳೆದಿದ್ದರೆ ಎಸ್ ಟಿಐ ಸಾಧ್ಯತೆಯನ್ನು ನಿರ್ಲಕ್ಷ್ಯಿಸಬೇಡಿ. ಇಬ್ಬರ ಒಪ್ಪಿಗೆಯಿದ್ದರೆ ಅಗತ್ಯವಾಗಿ ಪರೀಕ್ಷಿಸಿಕೊಳ್ಳಿ.
ಮುಂದಿನ ಜೀವನ ? : ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗೆ ಮಾತ್ರ ಈ ಚರ್ಚೆ ಸೀಮಿತವಾಗಿರುವುದಿಲ್ಲ. ಲಿವ್ ಇನ್ (Live In) ಸೇರಿದಂತೆ ಪ್ರೀತಿಯಲ್ಲಿ ಬಿದ್ದವರು, ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸುವ ನಿರ್ಧಾರಕ್ಕೆ ಬಂದವರು ಭವಿಷ್ಯದ ಬಗ್ಗೆ ಮಾತುಕತೆ ನಡೆಸಬೇಕಾಗುತ್ತದೆ. ಲೈಂಗಿಕ ಸಂಬಂಧದ (Sexual Relatinship) ನಂತ್ರ ಸಂಗಾತಿ ಮುಂದಿನ ನಿರ್ಧಾರವೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮುಂದೆ ಬರುವ ಬದಲಾವಣೆ,ಸವಾಲು,ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ ಆಮೇಲೆ ಮುಂದುವರೆಯುವುದು ಉತ್ತಮ.