
ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಮದುವೆಯಾದ ಸಂಗಾತಿ ವಿಷಯದಲ್ಲಿಯೂ ಹಾಗೆಯೇ. ಪತಿ, ಪತ್ನಿ (Husband-wife)ಯಲ್ಲಿಯೂ ಒಳ್ಳೆಯ ಗುಣಗಳು ಹಾಗೂ ಕೆಟ್ಟ ಗುಣಗಳು ಇರಬಹುದು. ಇದನ್ನು ತಿದ್ದಿಕೊಂಡು, ಅನುಸರಿಸಿಕೊಂಡು ಹೋಗಬೇಕಾದುದು ಅತೀ ಮುಖ್ಯ. ಗಂಡ-ಹೆಂಡತಿ ಪರಸ್ಪರ ಅರಿತು ಜೀವನ ನಡೆಸಬೇಕು. ಹಾಗಿದ್ದಾಗ ಮಾತ್ರ ದಾಂಪತ್ಯದಲ್ಲಿ ಖುಷಿಯಾಗಿರಬಹುದು. ಇಲ್ಲದಿದ್ದರೆ ಪ್ರತಿನಿತ್ಯ ಮನೆಯಲ್ಲಿ ಗಂಡ-ಹೆಂಡತಿಯ ಜಗಳ ತಪ್ಪದು. ಅದರಲ್ಲೂ ಗಂಡನ ಸಿಡುಕು, ಜವಾಬ್ದಾರಿಯಿಲ್ಲದ ಸ್ವಭಾವ ಹೆಂಡತಿಯಲ್ಲಿ ಸಿಟ್ಟಿಗೆ ಕಾರಣವಾಗುವುದು ಖಂಡಿತ.
ನಿಮ್ ಹೆಂಡ್ತಿ ನಿಮ್ಮ ಮೇಲೆ ಸಿಕ್ಕಾಪಟ್ಟೆ ಕಿರುಚಾಡ್ತಾ ಇದ್ದಾರೆ ಅಂದ್ರೆ ನಿಮ್ಮ ಈ ವರ್ತನೆಗಳು ಅವ್ರಿಗೆ ಇಷ್ಟವಾಗುತ್ತಿಲ್ಲ ಎಂದರ್ಥ. ಹಾಗಿದ್ರೆ ನಿಮ್ಮ ಪತ್ನಿಗೆ ಅತಿಯಾಗಿ ಕಿರಿಕಿರಿಯುಂಟು ಮಾಡುವ ಸ್ವಭಾವ ಯಾವುದೆಲ್ಲಾ..?
ಅಲ್ಲಲ್ಲಿ ಬಟ್ಟೆ ಎಸೆಯುವುದು (Scattered clothes)
ಇದು ಎಲ್ಲಾ ಪತ್ನಿಯರು ಅತಿ ಹೆಚ್ಚು ದ್ವೇಷಿಸುವ ಗಂಡನ ಸ್ವಭಾವ. ಆಫೀಸಿನಿಂದ ಬಂದು ಬಟ್ಟೆಯನ್ನು ಎಲ್ಲೆಲ್ಲಿ ಎಸೆಯುವುದು, ಒಗೆದ, ಒಗೆಯದ ಬಟ್ಟೆಗಳನ್ನು ಮಿಕ್ಸ್ ಮಾಡಿಟ್ಟಿರುವುದು. ವಾರ್ಡ್‌ರೋಬ್‌ನಲ್ಲಿಯೂ ಬಟ್ಟೆಗಳನ್ನು ನೀಟಾಗಿ ಇಡದೆ ಎಲ್ಲೆಂದರಲ್ಲಿ ಎಸೆಯುವುದು. ಒಂದೆರಡು ಬಾರಿ ಆಕೆ ನಿಮ್ಮ ಬಟ್ಟೆಯನ್ನು ಜೋಡಿಸಿಡುವುದು ಸರಿ. ಆದರೆ ನೀವು ತಪ್ಪದೇ ತಪ್ಪು ಮಾಡುತ್ತಾ ಆಕೆಯ ಬಟ್ಟೆಯನ್ನು ಜೋಡಿಸಿಡಬೇಕು ಎಂದು ಎಕ್ಸ್‌ಪೆಕ್ಟ್ ಮಾಡುವುದು ತಪ್ಪು. ನಿಮ್ಮ ಬಟ್ಟೆಯನ್ನು ನೀಟಾಗಿ ಇಡುವುದು ನಿಮ್ಮ ಕೆಲಸವೂ ಹೌದು. ಅದನ್ನು ಆಕೆ ಮಾತ್ರ ಮಾಡಬೇಕಿಲ್ಲ.
Love and Cheating : ನೀವು ಪ್ರೀತಿಸುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ?
ಮಾತನಾಡದೆ ಆಲಸಿಯಾಗಿ ತಲೆಯಾಡಿಸುವುದು (Hmms and nodding)
ಪತ್ನಿ ನಿಮ್ಮೊಂದಿಗೆ ಮಾತನಾಡುತ್ತಿದ್ದಾಗ ನೀವು ಗಮನಕೊಡದೆ ಬೇರೆ ಯಾವುದೋ ಕೆಲಸದಲ್ಲಿ ನಿರತವಾಗಿರುವುದು ಆಕೆಗೆ ಹಿಡಿಸುವುದಿಲ್ಲ. ಆಕೆಯ ಮಾತಿಗೆ ಆಸಕ್ತಿಯಿಲ್ಲದವಂತೆ ಬರೀ ಹ್ಮ್, ಹೌದು, ಅಲ್ಲ ಎಂಬ ಉತ್ತರ ಕೊಡುವುದು ಆಕೆಗೆ ಮತ್ತಷ್ಟು ಸಿಟ್ಟು ತರಿಸುತ್ತದೆ. ಹೀಗಾಗಿ ಆಕೆ ಮಾತನಾಡುತ್ತಿದ್ದಾಗ ಕಿವಿಗೊಟ್ಟು ಆಲಿಸಿ, ಅದಕ್ಕೆ ಪ್ರತಿಕ್ರಿಯಿಸಿ. ಅಥವಾ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಲು ಬಯಸದಿದ್ದರೆ ಅದನ್ನು ನೇರವಾಗಿ ಹೇಳಿ.
ಮನೆಯನ್ನು ಸ್ವಚ್ಛವಾಗಿಡಲು ನೆರವಾಗಿ (Cleaning up after your tasks)
ಮನೆ (Home)ಯನ್ನು ಸ್ವಚ್ಛವಾಗಿಡುವುದು ಯಾವಾಗಲೂ ಮಹಿಳೆಯರ ಪ್ರಥಮ ಆದ್ಯತೆಯಾಗಿರುತ್ತದೆ. ಗೃಹಿಣಿಯಾದರೂ, ಕೆಲಸಕ್ಕೆ ಹೋಗುವ ಪತ್ನಿಯಾಗಿದ್ದರೂ ಮನೆಯನ್ನು ಕ್ಲೀನ್ ಮಾಡುವ ಸಂದರ್ಭದಲ್ಲಿ ನೀವು ಆಕೆಗೆ ನೆರವು ನೀಡಿದರೆ ಆಕೆ ಖುಷಿ ಪಡುತ್ತಾಳೆ. ಬದಲಾಗಿ ಅಲ್ಲಲ್ಲಿ ಕಸ ಎಸೆಯುವುದು, ಶೇವ್ ಮಾಡಿ ಕ್ಲೀನ್ ಮಾಡದಿರುವುದು ಮೊದಲಾದವುಗಳು ಮಾಡಿಸುವುದು ಅವಳಲ್ಲಿ ಸಿಟ್ಟು ತರಿಸುತ್ತದೆ. ಅವಳ ಮೇಲೆ ಅನಗತ್ಯವಾಗಿ ಒತ್ತಡ ಬೀಳದಂತೆ ಬಳಸಿದ ಮೇಲೆ ಸಿಂಕ್, ಬಾತ್‌ರೂಮ್‌ನ್ನು ಸ್ವಚ್ಚಗೊಳಿಸುವುದನ್ನು ಮರೆಯದಿರಿ.
ದಾಂಪತ್ಯದ ನೆಮ್ಮದಿ ಕೆಡಿಸೋ ಮಾತುಗಳು ಯಾವುವು ಗೊತ್ತಾ?
ಮಗುವಿನಂತೆ ವರ್ತಿಸುವುದು (Being a baby)
ಹುಷಾರು ತಪ್ಪಿದಾಗ ಪ್ರತಿಯೊಬ್ಬರಿಗೂ ಆರಾಮ ಬೇಕೆನಿಸುವುದು ನಿಜ. ಹಾಗೆಂದು ಸಣ್ಣ ಪುಟ್ಟ ನೆಗಡಿ ಬಂದಾಗಲೂ ಮಗುವಿನಂತೆ ವರ್ತಿಸಿದರೆ ಆಗುವುದಿಲ್ಲ. ನಿಮ್ಮ ಬಗ್ಗೆ ನೀವೇ ಸ್ಪಲ್ಪ ಕಾಳಜಿ ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪತ್ನಿಯಾಗಿ ನಿಮ್ಮ ಆರೋಗ್ಯ (Health) ತಪ್ಪಿದಾಗ ಆಕೆ ನಿಮ್ಮ ಸೇವೆ ಮಾಡಲು ಸದಾ ಸಿದ್ಧವಾಗಿರುತ್ತಾಳೆ. ಅದರರ್ಥ ನೀವು ಅವಳನ್ನೇ ಅವಲಂಬಿಸಿ ಇರಬೇಕೆಂಬುದು ಅಲ್ಲ.
ಮಾಜಿ ಪ್ರೇಯಸಿಯ ಬಗ್ಗೆ ಮಾತನಾಡುವುದು (The ex)
ಪತ್ನಿಯ ಎದುರು ತಪ್ಪಿಯೂ ಮಾಜಿ ಪ್ರೇಯಸಿಯ ಹೆಸರು ತೆಗೆಯಬೇಡಿ. ನಿಮ್ಮ ಮಾಜಿ ಜೊತೆ ನೀವು ಸಂಪರ್ಕದಲ್ಲಿರುವುದನ್ನು ಕೆಲವೇ ಕೆಲವು ಹೆಂಡತಿಯರು ಒಪ್ಪುತ್ತಾರೆ. ಹೀಗಾಗಿ ಅವಳ ಮುಂದೆ ತಪ್ಪಿಯೂ ಮಾಜಿ ಪ್ರೇಯಸಿಯ ಬಗ್ಗೆ ಮಾತನಾಡುವುದು, ಆಕೆಯನ್ನು ಹೊಗಳುವುದು ಮಾಡಬೇಡಿ. ದಾಂಪತ್ಯ ಜೀವನ ಉತ್ತಮವಾಗಿ ಸಾಗಲು ಪತಿ-ಪತ್ನಿ ಇಬ್ಬರೂ ಈ ರೀತಿ ತಮ್ಮ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ಪರಸ್ಪರ ಅನುಸರಿಸಿಕೊಂಡು ಜೀವನ ನಡೆಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.