ಪ್ರೀತಿಯಲ್ಲಿ ನಂಬಿಕೆ ಬಹಳ ಮುಖ್ಯ.ನಂಬಿಕೆ ಮುರಿದು ಬಿದ್ದಾಗ ಸಂಬಂಧ ಹಾಳಾಗುತ್ತದೆ. ಅತ್ತೆ,ಮಾವನ ಜೊತೆ ಅಳಿಯನ ಸಂಬಂಧ ಚೆನ್ನಾಗಿರಲೆಂದು ಎಲ್ಲ ಮಹಿಳೆಯರು ಬಯಸ್ತಾರೆ. ಆದ್ರೆ ಅತ್ತೆ-ಅಳಿಯನ ಸಂಬಂಧ ಅತಿರೇಕಕ್ಕೆ ಹೋದ್ರೆ ?
ಮಾನವ (Human)ನ ಮನಸ್ಸು ಚಂಚಲ.ಪ್ರೀತಿ (Love),ಆಕರ್ಷಣೆಗಳು ಎಲ್ಲಿ,ಯಾವಾಗ ಹುಟ್ಟಿಕೊಳ್ಳುತ್ತವೆ ಎಂಬುದನ್ನು ಹೇಳುವುದು ಕಷ್ಟ. ಪ್ರೀತಿಗೆ ವಯಸ್ಸಿನ ಮಿತಿಯೂ ಇಲ್ಲ. ಸುಂದರ ಸಂಸಾರಕ್ಕೆ ಬಂದ ಹೊಸ ವ್ಯಕ್ತಿ ಬಿರುಗಾಳಿಗೆ ಕಾರಣವಾಗಬಹುದು. ಮಧುರ ಸಂಬಂಧ ಮುರಿದು ಬೀಳಬಹುದು. ಪ್ರೀತಿಯಲ್ಲಿ ಬಿದ್ದವರಿಗೆ ಬೇರೆ ಪ್ರಪಂಚ ತಿಳಿದಿರುವುದಿಲ್ಲ. ಜಗತ್ತು ಮರೆತು ಆಕಾಶದಲ್ಲಿ ತೇಲಾಡುವ ಜನರು, ಪ್ರೀತಿ ಪಡೆಯಲು ತಮ್ಮ ರಕ್ತ ಸಂಬಂಧಿಗಳನ್ನೂ ಕಡೆಗಣಿಸಬಲ್ಲರು. ಪ್ರೀತಿಗಾಗಿ ಎಂಥ ಕೆಲಸಕ್ಕೂ ಅವರು ಇಳಿಯಬಲ್ಲರು. ಇತ್ತೀಚಿನ ದಿನಗಳಲ್ಲಿ ವಿವಾಹೇತರ (Extra-Marital) ಸಂಬಂಧಗಳು ಹೆಚ್ಚು ಸುದ್ದಿಗೆ ಬರುತ್ತಿವೆ. ಮದುವೆಯಾಗಿ ಎರಡು,ಮೂರು ಮಕ್ಕಳಿರುವವರು ಕೂಡ ಮಕ್ಕಳನ್ನು ತ್ಯಜಿಸಿ,ಪ್ರೀತಿ ಹಿಂದೆ ಹೋಗುತ್ತಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನವರ ಜೊತೆ ಸಂಸಾರ (family) ಶುರು ಮಾಡಿದ ಅನೇಕ ಉದಾಹರಣೆಗಳಿವೆ. ಈಗ ಮತ್ತೊಂದು ಇಂಥಹ ಘಟನೆ ಬೆಳಕಿಗೆ ಬಂದಿದೆ.ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಷ್ಯಗಳು ಕೂಡ ಬಹಿರಂಗವಾಗುತ್ತಿರುತ್ತವೆ. ಟಿಕ್ ಟಾಕ್ (TikTok )ನಲ್ಲಿ ಯುವತಿಯೊಬ್ಬಳು ತನಗಾದ ಮೋಸವನ್ನು ಹೇಳಿಕೊಂಡಿದ್ದಾಳೆ. ಟಿಕ್ ಟಾಕ್ ನಲ್ಲಿ ಮೂರ್ನಾಲ್ಕು ವಿಡಿಯೋ ಹಂಚಿಕೊಂಡಿರುವ ಹುಡುಗಿ,ಪ್ರೇಮಿ ಹಾಗೂ ತಾಯಿ ತನಗೆ ಮಾಡಿದ ಮೋಸವನ್ನು ಹೇಳಿದ್ದಾಳೆ.
ಹುಡುಗಿಗೆ ಈಗ 21 ವರ್ಷ. ಆಕೆ 17 ವರ್ಷದಲ್ಲಿದ್ದಾಗ ಅಂದ್ರೆ 4 ವರ್ಷದ ಹಿಂದೆ 21 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಇಬ್ಬರ ಮಧ್ಯೆ ಒಳ್ಳೆಯ ಹೊಂದಾಣಿಕೆ ಇತ್ತಂತೆ. ಇವರ ಪ್ರೀತಿಯನ್ನು ಯುವತಿಯ ತಂದೆ-ತಾಯಿ ಕೂಡ ಒಪ್ಪಿದ್ದರಂತೆ. ಇದೇ ಕಾರಣಕ್ಕೆ ಯುವಕ ಆಗಾಗ ಯುವತಿ ಮನೆಗೆ ಬಂದು ಹೋಗುತ್ತಿದ್ದನಂತೆ. ಸ್ವಲ್ಪ ದಿನಗಳ ನಂತರ ಯುವತಿ ಮನೆಯಲ್ಲಿಯೇ ವಾಸ ಶುರು ಮಾಡಿದ್ದನಂತೆ. ಪ್ರೀತಿಸಿದವರು ಸದಾ ಹತ್ತಿರವಿರಬೇಕೆಂದು ಎಲ್ಲರೂ ಬಯಸುತ್ತಾರೆ. ಯುವತಿ ಕೂಡ ಇದರಿಂದ ಖುಷಿಯಾಗಿದ್ದಳಂತೆ.
ಪ್ರೇಮಿ,ಬಿಡುವಿನ ಸಮಯದಲ್ಲಿ ಪಾಲಕರ ಕೆಲಸಕ್ಕೆ ನೆರವಾಗುತ್ತಿದ್ದನಂತೆ. ಪಾಲಕರ ಜೊತೆ ಪ್ರೇಮಿಯ ಹೊಂದಾಣಿಕೆ ಯುವತಿಯ ಖುಷಿಯನ್ನು ಇಮ್ಮಡಿಗೊಳಿಸಿತ್ತಂತೆ. ಎಲ್ಲವೂ ಸರಿಯಿದೆ ಎನ್ನುವಾಗಲೇ ಯುವತಿಗೆ ಸಣ್ಣ ಅನುಮಾನವೊಂದು ಶುರುವಾಗಿತ್ತಂತೆ.
ಯುವಕ ಹಾಗೂ ತಾಯಿ ಮಧ್ಯೆ ಇರುವ ಬಾಂಡಿಂಗ್ (Bonding) ಆಕೆಯ ಅನುಮಾನಕ್ಕೆ ಕಾರಣವಾಗಿತ್ತಂತೆ. ಪ್ರೇಮಿ ಹಾಗೂ ತಾಯಿ ಸದಾ ಖುಷಿಯಾಗಿ,ನಗ್ತಾ ಮಾತನಾಡುತ್ತಿದ್ದರು. ಇದು ನನಗೆ ಕೆಲವೊಮ್ಮೆ ಹೊಟ್ಟೆಕಿಚ್ಚು ತರಿಸುತ್ತಿತ್ತು ಎಂದು ಯುವತಿ ಹೇಳಿದ್ದಾಳೆ. ಇದನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.ಒಂದು ದಿನ ನೋಡಿದ ದೃಶ್ಯ ದೊಡ್ಡ ಆಘಾತ ನೀಡಿತ್ತು ಎಂದಿದ್ದಾಳೆ.
ಅಡುಗೆ ಮನೆ (Kitchen)ಯಲ್ಲಿ ಆಗಿದ್ದೇನು ? : ಒಂದು ದಿನ ಯುವತಿ ತಂದೆ ಕೋಣೆಯಲ್ಲಿ ಮಲಗಿದ್ದಳಂತೆ. ಅಡುಗೆ ಮನೆಯಲ್ಲಿ ತಾಯಿ ಹಾಗೂ ಪ್ರೇಮಿ ಪಾತ್ರೆ ತೊಳೆಯುತ್ತಿದ್ದರಂತೆ. ಸ್ವಲ್ಪ ವಿಚಿತ್ರ ಶಬ್ಧ ಬಂದ ಕಾರಣ ಯುವತಿ ಸದ್ದಿಲ್ಲದೆ ಅಡುಗೆ ಮನೆಗೆ ಹೋಗಿದ್ದಾಳೆ. ಅಲ್ಲಿ ಕಂಡ ದೃಶ್ಯ ಆಕೆಗೆ ಬರಸಿಡಿಲು ಬಡಿದಂತಾಗಿದೆ. ತಾಯಿ-ಪ್ರೇಮಿ ಆಪ್ತವಾಗಿ ಮುತ್ತಿಡುವುದನ್ನು ನೋಡಿ ಯುವತಿ ಕಿರುಚಾಡಿದ್ದಾಳೆ. ಆದ್ರೆ ವರಸೆ ಬದಲಿಸಿದ ತಾಯಿ, ಮಗಳಿಕೆ ಹುಚ್ಚು ಹಿಡಿದಿದೆ ಎಂದಿದ್ದಾಳೆ.
ಇಷ್ಟೇ ಅಲ್ಲ ಮಗಳನ್ನು ಮನೋವೈದ್ಯರ ಬಳಿ ಕರೆದೊಯ್ದಿದ್ದಾಳೆ. ಕೆಲ ದಿನಗಳ ಕಾಲ ಸುಮ್ಮನಿದ್ದ ಯುವತಿಗೆ,ರಾತ್ರಿ ತಾಯಿ ಹಾಗೂ ಗೆಳೆಯ ಕಾರಿನೊಳಗೆ ಹೋಗುವುದನ್ನು ನೋಡಿದ್ದಾಳೆ. ಇದನ್ನು ನೋಡಿಯೂ ಸುಮ್ಮನಿದ್ದ ಯುವತಿ ಒಂದು ದಿನ ಬಾಯ್ ಫ್ರೆಂಡ್ ಜೊತೆ ಊಟಕ್ಕೆ ಹೋಗಿದ್ದಾಳಂತೆ. ಅಲ್ಲಿ ತಾಯಿಯ ಫೋನ್ ನಿಂದ ಪ್ರೇಮಿಗೆ ಬಂದ ಅಶ್ಲೀಲ ಸಂದೇಶ ಕಂಡಿದೆ. ಕೋಪ ನೆತ್ತಿಗೇರಿದೆ. ಯುವತಿ ತಂದೆಗೆ ವಿಷಯ ತಿಳಿಸಿದ್ದಾಳೆ. ಆದ್ರೆ ತಂದೆಗೆ ವಿಷ್ಯ ತಲುಪುವ ಮೊದಲೇ ತಾಯಿ,ಬಟ್ಟೆ,ಕಾರ್ ಜೊತೆ ಪರಾರಿಯಾಗಿದ್ದಾಳೆ. ಇಬ್ಬರೂ ಪ್ರತ್ಯೇಕ ವಾಸ ಶುರು ಮಾಡಿದ್ದು, ತಾಯಿ ತನ್ನ ಬಾಯ್ ಫ್ರೆಂಡ್ (Boy Friend) ಮಗುವಿಗೆ ಅಮ್ಮ ಎಂದು ಯುವತಿ ಹೇಳಿದ್ದಾಳೆ.