
ರೋಮಿಯೊ-ಜುಲಿಯೆಟ್, ಲೈಲಾ-ಮಜ್ನು, ಸಲೀಂ ಅನಾರ್ಕಲಿ ಕಥೆಗಳು ಎಲ್ಲರಿಗೂ ಗೊತ್ತಿವೆ. ಇವರ ಅದ್ಭುತ ಪ್ರೇಮ ಕಥೆಗಳು ತಲೆ ತಲಾಂತರಗಳಿಂದ ಜನರಿಗೆ ಪ್ರೇರಣೆಯಾಗುತ್ತಲೇ ಬಂದಿದೆ. ಆದರೆ ಪ್ರೇಮಿಗಳಲ್ಲೂ ಕೆಲ ಹುಚ್ಚು ಪ್ರೇಮಿಗಳಿದ್ದಾರೆ. ಇಂಥವರು ಹಾಸಿಗೆ, ಗೊಂಬೆ, ಮನೆ, ಕಾರು ಹೀಗೆ ವಸ್ತುಗಳನ್ನೇ ಗಾಢವಾಗಿ ಪ್ರೀತಿಸುತ್ತಾರೆ. ಅವುಗಳನ್ನೇ ಮದುವೆಯಾಗುತ್ತಾರೆ ಸಹ. ಅದಾದರೂ ಸರಿ, ಆದರೆ ಅಮೇರಿಕಾದಲ್ಲೊಬ್ಬ ವ್ಯಕ್ತಿ ಪ್ರೀತಿಸಿದ್ದು ಯಾರನ್ನು ಅಂತ ಗೊತ್ತಾದ್ರೆ ನೀವು ಬೆಚ್ಚಿಬೀಳೋದು ಖಂಡಿತ.
ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿದ್ದ ಡಾಕ್ಟರ್
ಯುಎಸ್ಎಯ ಫ್ಲೋರಿಡಾದ ಕಾರ್ಲ್ ಟಾಂಜ್ಲರ್ ಎಂಬ ವ್ಯಕ್ತಿ ಸಮಾಧಿಯಿಂದ (Cemetry) ಹೊರತೆಗೆದ ಹೆಣವನ್ನೇ ಪ್ರೀತಿಸಿದ್ದ. ಮಾತ್ರವಲ್ಲ ಬರೋಬ್ಬರಿ 7 ವರ್ಷಗಳ ಕಾಲ ಅದರ ಜೊತೆಯಲ್ಲೇ ವಾಸಿಸಿದ್ದ. ಈತನನ್ನು ಡಾ.ಡೆತ್ ಎಂದು ಕೂಡಾ ಕರೆಯಲಾಗುತ್ತಿತ್ತು. ಫ್ಲೋರಿಡಾದ ಕಾರ್ಲ್ ಟಾಂಜ್ಲರ್, ಒಮ್ಮೆ ತನ್ನ ಸಮಾಧಿಯಿಂದ ಯುವ ರೋಗಿಯ (Patient) ದೇಹವನ್ನೇ ಕದ್ದಿದ್ದ. ನಂತ ಅದರ ಮೇಲೆ ಪ್ರಯೋಗ ಮಾಡಿ ಅವಳನ್ನು ಬದುಕಿಸಲು ಪ್ರಯತ್ನಿಸಿದ್ದ. ಆ ನಿರ್ಜೀವ ದೇಹದ (Body) ಮೇಲೆ ಚಿತ್ರ ವಿಚಿತ್ರ ಪ್ರಯೋಗ ಮಾಡಿ ಜೀವ ನೀಡಲು ಯತ್ನಿಸಿದ್ದ. ಆದರೆ ಆತ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು.
ಇದೆಂಥಾ ವಿಚಿತ್ರ ಸಂಪ್ರದಾಯ, ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದ್ವೆಯಾಗ್ತಾರೆ!
ಚಿತ್ರ-ವಿಚಿತ್ರ ಪ್ರಯೋಗ ಮಾಡಿ ಯುವತಿಯನ್ನು ಬದುಕಿಸಲು ಯತ್ನಿಸಿದ್ದ
ಡಾ ಟಾಂಜ್ಲರ್ ಯುವತಿಯ ಮೃತದೇಹವ್ನು ಸಂರಕ್ಷಿಸಿ, ಆಕೆಯ ಕಣ್ಣುಗಳನ್ನು ಗಾಜಿನಿಂದ ಮತ್ತು ಅವಳ ಮುಖವನ್ನು ಮುಖವಾಡದಿಂದ ಬದಲಾಯಿಸಿದ್ದ.ಯುವತಿಯನ್ನು ಆತ ತನ್ನ ವಧುವೆಂದು ಪರಿಗಣಿಸಿದ್ದ. ಕೊನೆಗೆ ಸತ್ತ ಯುವತಿಯ ಕುಟುಂಬವು ಈ ವಿಚಾರವನ್ನು ಕಂಡುಹಿಡಿದು ಪೊಲೀಸರಿಗೆ ವರದಿ ಮಾಡುವ ವರೆಗೆ ಈತ ಮೃತದೇಹದೊಂದಿಗೇ ಬದುಕುತ್ತಿದ್ದ. ಮಾರಿಯಾ ಎಲೆಬಾ ಮಿಲಾಗ್ರೊ ಡಿ ಹೊಯೊಸ್ ಎಂದು ಗುರುತಿಸಲ್ಪಟ್ಟ, ಯುವತಿಯೇ ತನ್ನ ನಿಜವಾದ ಪ್ರೇಯಸಿ ಎಂದು ಡಾ.ಡೆತ್ ಬಲವಾಗಿ ನಂಬಿದ್ದ.
ಬರೋಬ್ಬರಿ ಏಳು ವರ್ಷಗಳ ಕಾಲ ವ್ಯಕ್ತಿಯೊಬ್ಬ ಶವದೊಂದಿಗೇ ಬದುಕಿದ್ದ ಎಂಬ ವಿಚಾರ ತಿಳಿದರೇನೆ ಎಂಥವರೂ ಬೆಚ್ಚಿ ಬೀಳುವಂತಾಗುತ್ತೆ. ಆದರೆ, ಕಾನೂನು ಲೋಪದೋಷದಿಂದಾಗಿ ಡಾ.ಟಾಂಜ್ಲರ್ ಅವರನ್ನು ಎಂದಿಗೂ ವಿಚಾರಣೆಗೆ ಒಳಪಡಿಸಲಿಲ್ಲ. ಟ್ಯಾಂಜ್ಲರ್‌ನ ಕೆಲಸದಿಂದಾಗಿ ಆಕೆಯ ರೂಪಾಂತರಗೊಂಡ ಶವವನ್ನು ನೋಡಿ ಎಲೆನಾಳ ಕುಟುಂಬವು ಗಾಬರಿಗೊಂಡಿತು ಮತ್ತು ಆಕೆಯ ಸಹೋದರಿ ನ್ಯಾಯಾಲಯಕ್ಕೆ ಇದು ತನ್ನ ಜೀವನದಲ್ಲಿ ನೋಡಿದ ಅತ್ಯಂತ ವಿಚಿತ್ರವಾದ ವಿಷಯ ಎಂದು ಹೇಳಿದರು. ಆದರೆ ಡಾ.ಡೆತ್ ತಾನು ಎಲೆನಾಳಿಗೆ ಮತ್ತೆ ಜೀವಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ ಮತ್ತು ಅವರ ಪ್ರಯೋಗಗಳಿಂದ ಆಕೆಯ ಶವವನ್ನು ವಿರೂಪಗೊಳಿಸುವುದಿಲ್ಲ ಎಂದು ಮನವರಿಕೆ ಮಾಡಿದರು.
ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!
ಜೀವವಿಲ್ಲದ ದೇಹದ ಜೊತೆ 7 ವಷ೯ಗಳ ಕಾಲ ದೈಹಿಕ ಸಂಬಂಧ
ಫ್ಲೋರಿಡಾದ ಕೀ ವೆಸ್ಟ್‌ನಲ್ಲಿರುವ ಆಸ್ಪತ್ರೆಯಲ್ಲಿ ತನ್ನ ರೋಗಿಯಾಗಿದ್ದಾಗ 21 ವರ್ಷದ ಎಲೆನಾಗೆ ಟಾಂಜ್ಲರ್ ಪರಿಚಯವಾಯಿತು. ಜರ್ಮನ್ ಮೂಲದ ವೈದ್ಯರು ಕ್ಷಯರೋಗಕ್ಕೆ ಚಿಕಿತ್ಸೆ (Treatment) ನೀಡುತ್ತಿದ್ದರು ಮತ್ತು ಗೀಳು ಬೆಳೆಸಿಕೊಂಡಿದ್ದರು. ಅವನು ಚಿಕ್ಕವನಿದ್ದಾಗ ತನ್ನನ್ನು ಭೇಟಿ ಮಾಡಿದ ಪ್ರೇತದ ಅವತಾರ ಎಂದು ಅವನು ಹೇಳಿಕೊಂಡನು. ಡಾ.ಕಾರ್ಲ್ ಟಾಂಜ್ಲರ್ 1877 ರಲ್ಲಿ ಡ್ರೆಸ್ಡೆನ್‌ನಲ್ಲಿ ಜನಿಸಿದನು. ಆದರೆ ಅಂತಿಮವಾಗಿ ವಿಶ್ವ ಸಮರ 1 ರ ನಂತರ ಯುಎಸ್ಎಗೆ ತೆರಳಿದರು, ಅಲ್ಲಿ ಅವನು ಕೌಂಟ್ ಕಾರ್ಲ್ ವಾನ್ ಕೋಸೆಲ್ ಎಂಬ ಹೆಸರನ್ನು ಪಡೆದನು. ಒಂಬತ್ತು ವಿಶ್ವವಿದ್ಯಾನಿಲಯ ಪದವಿಗಳನ್ನು ಹೊಂದಿದ್ದನು.
ಸತ್ತ ಮಹಿಳೆಯ ಹೆಸರು ಮರಿಯಾ ಎಲ್ಲಾ ಮಿಲಾಗೋ ಡಿ ಹೊಯೊಸ್ ಎಂದಾಗಿತ್ತು. 21 ವರ್ಷದ ಆಕೆ ಚಿಕಿತ್ಸೆಗೆಂದು ಕೀ ವೆಸ್ಟ್ ಫ್ಲೋರಿಡಾದ ಆಸ್ಪತ್ರೆಗೆ ಬಂದಿದ್ದಾಗ, ಡಾ.ಟಾಂಜರ್‌ಗೆ ಆಕೆಯನ್ನ ನೋಡಿದ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಆದರೆ ಕೆಲ ದಿನಗಳ ನಂತರ ಆಕೆ ಸಾವನ್ನಪ್ಪಿದ್ದಳು. ಆದರೆ ಡಾಕ್ಟರ್‌ಗೆ ಮಾತ್ರ ಆಕೆ ಬಗ್ಗೆ ಇದ್ದ ಪ್ರೀತಿ (Love) ಕಡಿಮೆ ಆಗಿರಲಿಲ್ಲ. ಕೆಲ ಮಾಹಿತಿ ಪ್ರಕಾರ ಆ ಜೀವವಿಲ್ಲದ ದೇಹದ ಜೊತೆ ದೈಹಿಕ ಸಂಬಂಧವನ್ನು ಸಹ ಬೆಳೆಸಿ 7 ವಷ೯ಗಳ ಕಾಲ ಕಳೆದಿದ್ದ. ಕೊನೆಗೂ ಆಕೆಯ ಬದುಕಿಸುವ ಪ್ರಯತ್ನದಲ್ಲಿ ಸೋತು ಹೋಗಿದ್ದ ಡಾಕ್ಟರ್‌ನನ್ನ ಪೊಲೀಸರು ಬಂಧಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.