ಹೆಂಡ್ತಿಯನ್ನ ಗೌರವಿಸಿ, ಸ್ಪೇಸ್ ಕೊಡಿ: ವಿವಾಹಿತರಿಗೆ ವಿಚ್ಛೇದಿತರ ಕಿವಿಮಾತು

By Suvarna News  |  First Published Sep 23, 2022, 4:26 PM IST

ವಿಚ್ಛೇದನ ಜೀವನದಲ್ಲಿ ಆಗುವ ದೊಡ್ಡ ಬದಲಾವಣೆ. ವಿಚ್ಛೇದನದ ನಂತ್ರ ಜೀವನ ಮೊದಲಿನಂತೆ ಇರಲು ಸಾಧ್ಯವಿಲ್ಲ. ಸಣ್ಣಪುಟ್ಟ ತಪ್ಪುಗಳಿಂದ ಸಂಬಂಧ ಕಡಿದು ಹೋಗಿರುತ್ತದೆ. ದಾಂಪತ್ಯ ದೀರ್ಘಕಾಲ ಸುಖಮಯವಾಗಿರಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕಾಗುತ್ತದೆ.
 


ಪತಿ – ಪತ್ನಿ ಮಧ್ಯೆ ಉತ್ತಮ ಬಾಂಧವ್ಯವಿದ್ದರೆ ಮದುವೆಯಂತಹ ಸೂಕ್ಷ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಸುಲಭ. ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲವೆಂದ್ರೆ ಇಬ್ಬರ ಸಂಬಂಧ ಬೇಗ ಹಾಳಾಗಲು ಶುರುವಾಗುತ್ತದೆ. ವಿಚ್ಛೇದನದಲ್ಲಿ ಸಂಬಂಧ ಕೊನೆಗೊಳ್ಳುತ್ತದೆ. ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಮಸ್ತಾಪವಾಗುತ್ತದೆ. ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಜನರು ವಿಚ್ಛೇದನದ ಮೊರೆ ಹೋಗ್ತಾರೆ. ವಿಚ್ಛೇದನ ಪಡೆದ ಮಹಿಳೆಯರು ಸಂಪೂರ್ಣವಾಗಿ ತಂದೆ- ತಾಯಿಯನ್ನು ಅವಲಂಭಿಸುತ್ತಾರೆ. ಇತ್ತ ವಿಚ್ಛೇದನ ಪಡೆದ ಪುರುಷ, ಹಳೆ ಸಂಬಂಧದಿಂದ ಸಾಕಷ್ಟನ್ನು ಕಲಿಯುತ್ತಾನೆ. ಇದೇ ತಪ್ಪನ್ನು ಮತ್ತೆ ಮಾಡಲು ಹೋಗೋದಿಲ್ಲ. 

ವಿವಾಹಿತ (Married ) ಸಂಬಂಧ ಹಾಳಾಗಬಾರದು ಎಂದ್ರೆ ಕೆಲ ತಪ್ಪುಗಳನ್ನು ಮಾಡಬಾರದು. ತಪ್ಪು ಮಾಡಿ, ವಿಚ್ಛೇದನ (Divorce) ಪಡೆದ ಮೇಲೆ ಪಶ್ಚಾತ್ತಾಪ ಪಡುತ್ತಿರುವ ಕೆಲ ಪುರುಷರು, ಏನು ಮಾಡಬಾರದು ಎಂಬುದನ್ನು ಹೇಳಿದ್ದಾರೆ.

Tap to resize

Latest Videos

ಪತ್ನಿ (Wife) ಗೆ ಸಮಯ ನೀಡಿ : ವಿಚ್ಛೇದಿತ ವ್ಯಕ್ತಿಯೊಬ್ಬ ಪುರುಷರಿಗೆ ಅತ್ಯಮೂಲ್ಯ ಸಲಹೆ ನೀಡಿದ್ದಾನೆ. ಕೆಲಸ ಹಾಗೂ ಸ್ನೇಹಿತರಿಗೆ ಎಷ್ಟೇ ಸಮಯ ನೀಡಿದ್ರೂ ನಿಮ್ಮ ಪತ್ನಿಯನ್ನು ಮರೆಯಬೇಡಿ. ಪತ್ನಿಗೆ ನೀವು ಮಹತ್ವ ನೀಡಿ. ಪತ್ನಿಗೆ ಸಮಯ ನೀಡಲು ಮರೆಯಬೇಡಿ. ಸ್ನೇಹಿತ (Friend) ರಂತೆ ಪತ್ನಿಗೂ ಆದ್ಯತೆ ನೀಡಿ. ನೀವೆಷ್ಟು ಅವರನ್ನು ಪ್ರೀತಿ (Love) ಮಾಡ್ತೀರಿ ಎಂಬುದನ್ನು ಅವರಿಗೆ ತಿಳಿಸಿ. ಪತ್ನಿಯ ಜೊತೆಯೂ ಎಲ್ಲ ವಿಷ್ಯಗಳನ್ನು ಮಾತನಾಡಿ. ಅನೇಕರು ಪತ್ನಿಗೆ ಏನೂ ತಿಳಿಯೋದಿಲ್ಲ ಎಂಬ ನಿರ್ಧಾರಕ್ಕೆ ಬಂದಿರ್ತಾರೆ. ಹಾಗಾಗಿ ಅವರ ಸಮಸ್ಯೆಯನ್ನು ಪತ್ನಿ ಮುಂದೆ ಹೇಳೋದಿಲ್ಲ. 

ಅಂದ್ರೆ…. ನಿಮ್ಮ ಕ್ರಶ್‌ಗೂ ನಿಮ್ ಮೇಲೆ ಲವ್ ಆಗಿದೆ !

ಪತ್ನಿಗೆ ನನ್ನ ಪ್ರೀತಿ (Love) ಗೊತ್ತು ಎಂಬ ಭಾವನೆಯಲ್ಲಿರಬೇಡಿ : ಅನೇಕ ಪುರುಷರು (Men) ತಪ್ಪು ಕಲ್ಪನೆಯಲ್ಲಿರ್ತಾರೆ. ಪತ್ನಿಗೆ ಎಲ್ಲವೂ ಗೊತ್ತು, ನಾನೆಷ್ಟು ಪ್ರೀತಿ ಮಾಡ್ತೇನೆ ಎಂಬುದು ಗೊತ್ತು. ಮತ್ತೆ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ ಎಂದುಕೊಳ್ತಾರೆ. ಆದ್ರೆ ನೀವೆಷ್ಟು ಪ್ರೀತಿ ಮಾಡ್ತೀರಿ ಎಂಬುದನ್ನು ನೀವು ಹೇಳುವುದು ಮುಖ್ಯ. ಪದೇ ಪದೇ ನೀವು ಅವರಿಗೆ ನಿಮ್ಮ ಪ್ರೀತಿ ಬಗ್ಗೆ ಹೇಳ್ತಿದ್ದರೆ ಅವರು ಖುಷಿಯಾಗ್ತಾರೆ. ಪತ್ನಿಯನ್ನು ಸಂತೋಷವಾಗಿಡಲು ನಿಮ್ಮ ಭಾವನೆಯನ್ನು ಹೇಳುವುದು ಅತ್ಯಗತ್ಯ. ದಿನಕ್ಕೊಂದು ಬಾರಿಯಾದ್ರೂ ಐ ಲವ್ ಯು (I Love You ) ಹೇಳಿ. ಇಲ್ಲವೆ ಒಂದು ಮುತ್ತು ನೀಡಲು ಮರೆಯದಿರಿ ಎನ್ನುತ್ತಾರೆ ವಿಚ್ಛೇದಿತ ಪತಿ.

ಡೇಟ್ (Dating)ಗೆ ಹೊರಗೆ ಹೋಗಿ : ವಾರಕ್ಕೊಮ್ಮೆಯಾದ್ರೂ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿ. ಇದು ಸಾಧ್ಯವಿಲ್ಲ ಎನ್ನುವವರು ತಿಂಗಳಿಗೊಮ್ಮೆಯಾದ್ರೂ ಡೇಟಿಂಗ್ ಹೋಗಲು ಪ್ರಯತ್ನಿಸಿ. ಸಂಗಾತಿಗಾಗಿ ಸಣ್ಣಪುಟ್ಟ ಪ್ಲಾನ್ ಮಾಡ್ತಿರಿ. ಪ್ರತಿ ದಿನ ಮನೆ ಅಡುಗೆ ತಿಂದು ಆಕೆ ಬೋರ್ ಆಗಿರಬಹುದು. ಹಾಗಾಗಿ ಆಗಾಗ ಆಕೆಯನ್ನು ಡೇಟಿಂಗ್ ಗೆ ಕರೆದುಕೊಂಡು ಹೋಗಿ. 

ಪತ್ನಿ ಮಾತನ್ನು ಸಂಪೂರ್ಣ ಆಲಿಸಿ : ಪತ್ನಿ ಮಾತನಾಡ್ತಿದ್ದರೆ ಪತಿ ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಅವರ ಮಾತಿಗೆ ಹೆಚ್ಚು ಗಮನ ನೀಡೋದಿಲ್ಲ. ಈ ತಪ್ಪನ್ನು ಪತಿಯಂದಿರು ಎಂದೂ ಮಾಡಬಾರದು. ಪತ್ನಿಯ ಎಲ್ಲ ಮಾತನ್ನು ಆಲಿಸಬೇಕು. ಹಾಗೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಅವರಿಗೆ ನೆರವಾಗಬೇಕು.   

ಗರ್ಲ್‌ಫ್ರೆಂಡ್, ಸಹೋದ್ಯೋಗಿ ಜೊತೇನೆ ಹೆಚ್ಚು ಓಡಾಡ್ತಾಳೆ, ಇಬ್ಬರ ಮಧ್ಯೆ ಏನಾದ್ರೂ ನಡೀತಿದ್ಯಾ ?

ಸಂಗಾತಿಗೆ ಸ್ಪೇಸ್ ನೀಡಿ : ಮದುವೆ ಒಂದು ಬಂಧವಲ್ಲ. ಆದ್ದರಿಂದ ನಿಮ್ಮ ಸಂಗಾತಿಯನ್ನು ಅದರಲ್ಲಿ ಕಟ್ಟಿಹಾಕಲು ಪ್ರಯತ್ನಿಸಬೇಡಿ. ನಿಮ್ಮ ಸಂಗಾತಿಗೆ (Companion) ಸ್ವಲ್ಪ ಸ್ಪೇಸ್ ನೀಡಿ. ಸ್ನೇಹಿತರೊಂದಿಗೆ ಹೊರಗೆ ಹೋಗಲು ಸಂಗಾತಿಗೆ ಸಲಹೆ ನೀಡಿ. ಸಂಗಾತಿ ಇಚ್ಛಿಸುವ ಕೆಲಸ ಮಾಡಲು ಅವಕಾಶ ನೀಡಿ. ಇದ್ರಿಂದ ಸಂಗಾತಿ ಆತ್ಮವಿಶ್ವಾಸವನ್ನು (Confidence) ಹೆಚ್ಚುತ್ತದೆ. 
 

click me!