Latest Videos

ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡು ಸಂಸಾರ ನಡೆಸಿದ್ರು ಈ ಬಾಲಿವುಡ್ ನಟಿ!

By Vinutha PerlaFirst Published Sep 9, 2023, 9:51 AM IST
Highlights

ಬಾಲಿವುಡ್ ಸೆಲೆಬ್ರಿಟಿಗಳ ಜೀವನ ತೆರೆಯ ಮೇಲೆ ಎಷ್ಟು ಥಳುಕುಬಳುಕಿನಿಂದ ಕೂಡಿರುತ್ತೋ ತೆರೆಯ ಹಿಂದೆ ಸಹ ಅಷ್ಟೇ ಡ್ರಮಾಟಿಕ್ ಆಗಿರುತ್ತೆ. ನಾಲ್ಕೈದು ಅಫೇರ್‌, ಮ್ಯಾರೇಜ್‌, ವಯಸ್ಸಿನ ವ್ಯತ್ಯಾಸವಿಲ್ಲದೆ, ಹಣದ ಬಿದ್ದು ಮದ್ವೆಯಾಗೋದು ಇಲ್ಲಿ ಕಾಮನ್‌. ಇವ್ರು ಕೂಡಾ ಅಂಥಹದ್ದೇ ಒಬ್ಬ ನಟಿ. ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡು ಸಂಸಾರ ನಡೆಸಿದ್ರು ಈ ಫೇಮಸ್‌ ಬಾಲಿವುಡ್ ನಟಿ

ಸಿನಿಮಾ ಮಂದಿಯ ಜೀವನವೇ ಹಾಗೆ. ಬಣ್ಣದ ಬದುಕಿನಲ್ಲಿ ಎಲ್ಲವೂ ಇದೆ, ಆದರೆ ಏನೂ ಇಲ್ಲ ಅನ್ನೋ ಪರಿಸ್ಥಿತಿ. ಊರೆಲ್ಲಾ ಫೇಮಸ್‌, ಕೈ ತುಂಬಾ ದುಡ್ಡಿದ್ದರೂ ಒಂದು ಹಿಡಿ ಪ್ರೀತಿಗಾಗಿ ಹಂಬಲಿಸುವ ಅವಸ್ಥೆ. ಹೀಗಾಗಿಯೇ ಇಲ್ಲಿ ಎಲ್ಲಾ ತಪ್ಪುಗಳಿಗೂ ಸಮರ್ಥನೆಯಿದೆ. ಬಾಲಿವುಡ್ ಸೆಲೆಬ್ರಿಟಿಗಳ ಜೀವನ ತೆರೆಯ ಮೇಲೆ ಎಷ್ಟು ಥಳುಕುಬಳುಕಿನಿಂದ ಕೂಡಿರುತ್ತೋ ತೆರೆಯ ಹಿಂದೆ ಸಹ ಅಷ್ಟೇ ಡ್ರಮಾಟಿಕ್ ಆಗಿರುತ್ತೆ. ನಾಲ್ಕೈದು ಅಫೇರ್‌, ಮ್ಯಾರೇಜ್‌, ವಯಸ್ಸಿನ ವ್ಯತ್ಯಾಸವಿಲ್ಲದೆ, ಹಣದ ಬಿದ್ದು ಮದ್ವೆಯಾಗೋದು ಇಲ್ಲಿ ಕಾಮನ್‌. ಇವ್ರು ಕೂಡಾ ಅಂಥಹದ್ದೇ ಒಬ್ಬ ನಟಿ. ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡು ಸಂಸಾರ ನಡೆಸಿದ್ರು ಈ ಫೇಮಸ್‌ ಬಾಲಿವುಡ್ ನಟಿ.

ಹೀಗೆ ರಾಖಿ ಕಟ್ಟಿದವರನ್ನೇ ಮದುವೆಯಾದವರು ಮತ್ಯಾರು ಅಲ್ಲ ಬಾಲಿವುಡ್‌ನ ದಂತಕತೆ ಶ್ರೀದೇವಿ. ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ತಮ್ಮ ಸೌಂದರ್ಯ (Beauty), ಅಭಿನಯ (Acting)ದಿಂದ ಬಾಲಿವುಡ್‌ನ್ನೇ ಆಳಿದವರು. ಆದರೆ ಅವರ ವೈಯುಕ್ತಿಕ ಜೀವನ ಹಲವಾರು ಏರುಪೇರುಗಳಿಂದ ಕೂಡಿತ್ತು. ಹಲವು ನಟರ ಜೊತೆ ಶ್ರೀದೇವಿ ಹೆಸರು ಕೇಳಿ ಬಂದಿತ್ತು. ಮದುವೆ (Marriage)ಯಾಗಿದ್ದರೂ ನಟ ಮಿಥುನ್ ಚಕ್ರವರ್ತಿ ಶ್ರೀದೇವಿಯನ್ನು ಪ್ರೀತಿಸುತ್ತಿದ್ದರು. ಅವರ ಸಂಬಂಧದ (Relationship) ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದರೆ ಮಿಥುನ್ ಅವರ ಪತ್ನಿ ಯೋಗಿತಾ ಅವರ ಸಂಬಂಧದ ಬಗ್ಗೆ ತಿಳಿದ ತಕ್ಷಣ ಅವರು ತುಂಬಾ ಕೋಪಗೊಂಡಿದ್ದರು. ಈ ವಿಚಾರ ಕೇಳಿ ಮನನೊಂದ ಯೋಗಿತಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿಯಿತ್ತು.

Janhavi Kapoor ಜಾನ್ವಿ ಹೀಗೆ ಮಾಡ್ತಾಳೆಂದು ಶ್ರೀದೇವಿ ಮನೆಯಲ್ಲಿ ಬಾತ್‌ರೂಮ್‌ಗೆ ಲಾಕ್‌ ಹಾಕುತ್ತಿರಲಿಲ್ಲವಂತೆ!

ಬೋನಿ ಕಪೂರ್‌ನ್ನು ಮದುವೆಯಾದ ನಟಿ
ಆ ನಂತರದ ವರ್ಷಗಳಲ್ಲಿ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾದರು. 1970ರ ದಶಕ. ಬೋನಿ ಕಪೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಶ್ರೀದೇವಿಯನ್ನ ತಮಿಳು ಚಿತ್ರದಲ್ಲಿ ಮೊದಲ ಸಲ ನೋಡಿದಾಗಲೇ ಆಕೆಯ ಸೌಂದರ್ಯಕ್ಕೆ ಮನಸೋತು ಸ್ನೇಹ ಬೆಳೆಸಲು ಯತ್ನಿಸಿದರು. 1979ರಲ್ಲಿ ಬಾಲಿವುಡ್ ಮೊದಲ ಸಿನಿಮಾ 'Solva Sawan' ಚಿತ್ರದ ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿ ಮಾಡಿದರು.

ಶ್ರೀದೇವಿಯ ಜೊತೆ ಆತ್ಮೀಯತೆ ಬೆಳಸಿಕೊಳ್ಳಬೇಕು ಎಂಬ ಕಾರಣಕ್ಕೆ 'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ನಿರೀಕ್ಷೆಯಂತೆ ಶ್ರೀದೇವಿ ಮತ್ತು ಬೋನಿ ಅವರ ನಡುವೆ ಸ್ನೇಹವೂ ಉತ್ತಮವಾಯಿತು. 'ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಕೇಳಿದ್ದಕ್ಕಿಂತ ಹೆಚ್ಚು ಸಂಭಾವನೆ ನೀಡಿದ್ದರು ಬೋನಿ ಕಪೂರ್. ಆದರೆ ಶ್ರೀದೇವಿಗೆ ಬೋನಿ ಕಪೂರ್ ಮೇಲೆ ಪ್ರೀತಿ ಮೂಡಲ್ಲಿಲ್ಲ

 ಶ್ರೀದೇವಿ ಎಣ್ಣೆ ಕುಡಿದು ಜೀವನ ಹಾಳಾಗಲು ಅಕೆ ತಾಯಿನೇ ಕಾರಣ; ಕರಾಳ ಸತ್ಯ ಬಿಚ್ಚಿಟ್ಟ ಸ್ನೇಹಿತೆ ಪದ್ಮಿನಿ

ಮೋನಾ ಜೊತೆ ಬೋನಿ ಕಪೂರ್ ಮದುವೆ
ಇದೇ ಸಮಯದಲ್ಲಿ ಶ್ರೀದೇವಿ, ನಟ ಮಿಥುನ್ ಚಕ್ರವರ್ತಿ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದನ್ನು ತಿಳಿದು ನೊಂದುಕೊಂಡ ಬೋನಿ ಕಪೂರ್ ಮೋನಾ ಜೊತೆ ಸಪ್ತಪದಿ ತುಳಿದರು. ಇವರ ದಾಂಪತ್ಯಕ್ಕೆ ಅರ್ಜುನ್ ಮತ್ತು ಅನ್ಷುಲ್ ಕಪೂರ್ ಇಬ್ಬರೂ ಮಕ್ಕಳಿದ್ದಾರೆ.

ಆದರೆ ಇತ್ತ ಮಿಥುನ್ ಚಕ್ರವರ್ತಿಯಿಂದ ದೂರ ಆಗಿ ಶ್ರೀದೇವಿ ಒಂಟಿಯಾಗಿದ್ದರು. ಈ ಸಂದರ್ಭದಲ್ಲಿ ಬೋನಿ ಕಪೂರ್. ಶ್ರೀದೇವಿಗೆ ಆಶ್ರಯ ನೀಡಿದರು. ಇಬ್ಬರ ನಡುವಿನ ಸ್ನೇಹ ಬೆಳೆಯಿತು. ಶ್ರೀದೇವಿ ಮದುವಿಗೂ ಮುಂಚಿಯೇ ಗರ್ಭಿಣಿ ಆದರು. ಆದರೆ ಇವೆಲ್ಲದರ ಮಧ್ಯೆ ಶ್ರೀದೇವಿ ಬೋನಿಕಪೂರ್‌ ಜೊತೆ ತಾವು ಹೊಂದಿದ್ದ ಸಂಬಂಧ ಸುಳ್ಳು ಎಂದು ತೋರಿಸಲು ಬೋನಿ ಕಪೂರ್‌ಗೆ ರಾಖಿ ಕಟ್ಟಿದ್ದರಂತೆ. ನಂತರದ ದಿನಗಳಲ್ಲಿ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996ರಲ್ಲಿ ಶ್ರೀದೇವಿಯನ್ನ ಮದುವೆ ಆದರು. ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಇಬ್ಬರು ಮಕ್ಕಳು, ಖುಷಿ ಮತ್ತು ಜಾನ್ವಿ ಕಪೂರ್. ಇಬ್ಬರೂ ಈಗ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 

click me!