ತುಂಬಾ ಪ್ರಯಾಸದ ನಂತ್ರ ಗರ್ಭ ಧರಿಸಿದ ಮಹಿಳೆಗೆ ತಿಳಿದ ಘೋರ ಸತ್ಯ

By Suvarna News  |  First Published Sep 8, 2023, 1:45 PM IST

ದುಃಖ ಸದಾ ಇರುವಂತಹದ್ದು, ಸುಖ ಬಂದು ಹೋಗುವ ಅತಿಥಿ ಎನ್ನುವ ಮಾತೊಂದಿದೆ. ಯಾವಾಗ ಏನು ಬೇಕಾದ್ರೂ ಸಂಭವಿಸಬಹುದು. ಅದಕ್ಕೆ ಎಲ್ಲರೂ ಸಿದ್ಧವಿರಬೇಕು. ಧೈರ್ಯವಿರಬೇಕು. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನ. 
 


ವಂಶಾಭಿವೃದ್ಧಿ ಮಾಡುವ ಜೊತೆಗೆ ಮಕ್ಕಳು ಎಲ್ಲ ದುಃಖವನ್ನು ಮರೆಸಿ ಖುಷಿ ನೀಡುವ ಒಂದು ಶಕ್ತಿ ಕೇಂದ್ರ. ಮಕ್ಕಳನ್ನು ಪಡೆಯುವುದು ಪ್ರತಿಯೊಂದು ದಂಪತಿಗೂ ಸಂತೋಷ ನೀಡುವ ಸಂಗತಿ. ಆರ್ಥಿಕ ಸಮಸ್ಯೆ ಅಥವಾ ಮತ್ಯಾವುದೋ ಸಮಸ್ಯೆಯಿಂದ ಫ್ಯಾಮಿಲಿ ಪ್ಲಾನಿಂಗ್ ಮುಂದೆ ಹಾಕುವ ಜೋಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧವಾದ್ಮೇಲೆ ಫ್ಯಾಮಿಲಿ ಪ್ಲಾನಿಂಗ್ ಮಾಡೋದಿದೆ. ಎಲ್ಲ ಬಾರಿ ಅಂದುಕೊಂಡಂತೆ ನಡೆಯೋದಿಲ್ಲ. ಜೀವನದಲ್ಲೊಂದು ಟ್ವಿಸ್ಟ್ ಇರುತ್ತೆ. ಈ ದಂಪತಿ ಕೂಡ ಫ್ಯಾಮಿಲಿ ಪ್ಲಾನ್ ಮಾಡುವ ತಯಾರಿಯಲ್ಲಿರುವಾಗ್ಲೇ ದೊಡ್ಡ ಶಾಕ್ ಗೆ ಒಳಗಾಗಿದ್ದಾರೆ. ಅವರ ಜೀವನದಲ್ಲಿ ಎದುರಿಸಿದ ಕಠಿಣ ದಿನಗಳ ಬಗ್ಗೆ ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ (Australia) ದ ಸಿಡ್ನಿಯಲ್ಲಿ ವಾಸಿಸುತ್ತಿರುವ ಟೋನಿ ಮತ್ತು ಕ್ರಿಸ್ ದಂಪತಿ ಮಗುವನ್ನು ಪಡೆಯುವ ತಯಾರಿಯಲ್ಲಿದ್ದರು. ಏನೇ ಪ್ರಯತ್ನ ನಡೆಸಿದ್ರು ಸಂತಾನ ಪ್ರಾಪ್ತಿಯಾಗ್ತಿರಲಿಲ್ಲ. ಈ ವೇಳೆ ಐವಿಎಫ್ (IVF) ಗೆ ದಂಪತಿ ಪ್ಲಾನ್ ಮಾಡಿದ್ದಾರೆ. ಅದ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಆದ್ರೆ ಚಿಕಿತ್ಸೆ ಆರಂಭಕ್ಕೂ ಮುನ್ನವೇ ಬರಸಿಡಿಲು ಎರಗಿದೆ. ಕ್ರಿಸ್ ಹೊಟ್ಟೆ (Stomach) ಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಗ್ಯಾಸ್ಟ್ರಿಕ್ ನಿಂದ ಸಮಸ್ಯೆ ಆಗ್ತಿದೆ ಎಂದುಕೊಂಡ ದಂಪತಿ, ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಂಡಿದ್ದಾರೆ. ಗ್ಯಾಸ್ಟ್ರಿಕ್ ಮಾತ್ರೆ ಪವರ್ ಇರುವವರೆಗೆ ಚೆನ್ನಾಗಿದ್ದ ಕ್ರಿಸ್ ಗೆ ಮತ್ತೆ ಹೊಟ್ಟೆನೋವು ಹೆಚ್ಚಾದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಅಪೆಂಡಿಕ್ಸ್ ಎಂದುಕೊಂಡ ವೈದ್ಯರು ನಂತ್ರ ಸರಿಯಾಗಿ ಪರೀಕ್ಷೆ ಮಾಡಿದಾಗ ಸತ್ಯ ಹೊರಬಿದ್ದಿದೆ. 

Latest Videos

undefined

ಹುಡುಗೀರು ಹೀಗೆಲ್ಲಾ ಟೆಕ್ಸ್ಟ್ ಮಾಡಿದ್ರೆ ಪಕ್ಕಾ ನಿಮ್ ಮೇಲೆ ಲವ್ವಾಗಿದೆ ಅಂತಾನೆ ಅರ್ಥ

ಕ್ರಿಸ್ ಗೆ 45ನೇ ವಯಸ್ಸಿನಲ್ಲೇ ಕರುಳಿನ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ ಎಂಬುದು ಗೊತ್ತಾಗಿತ್ತು. ಕ್ಯಾನ್ಸರ್ ಗಡ್ಡೆ ದೊಡ್ಡದಿದ್ದ ಕಾರಣ ಕರುಳನ್ನು ಅದು ನಿರ್ಬಂಧಿಸಿತ್ತು. ಅಷ್ಟೇ ಅಲ್ಲ ಯಕೃತ್ತಿನಲ್ಲೂ 5 ಸಣ್ಣ ಗಡ್ಡೆಗಳಿದ್ದವು. ಇದನ್ನು ಕೇಳಿ ದಂಗಾಗಿದ್ದ ದಂಪತಿ ಮಕ್ಕಳನ್ನು ಪಡೆಯುವ ಪ್ಲಾನ್ ಮುಂದೂಡಿದ್ದರು. ಆದ್ರೆ ಕಿಮೋಕ್ಕೆ ಮುನ್ನ ಮೊಟ್ಟೆಗಳನ್ನು ಫೀಜರ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು.

ಕ್ರಿಸ್ ಗೆ ಕಿಮೊ ಸೇರಿದಂತೆ ಚಿಕಿತ್ಸೆ ಮುಂದುವರೆದಿತ್ತು. ಒಂದು ಹಂತದಲ್ಲಿ ಕ್ರಿಸ್ ಸಂಪೂರ್ಣ ಗುಣವಾಗಿದ್ದಾನೆಂದು ವೈದ್ಯರು ಹೇಳಿದ್ದರು. ಇದಾದ್ಮೇಲೆ ಮತ್ತೆ ಮಗುವನ್ನು ಪಡೆಯುವ ನಿರ್ಧಾರಕ್ಕೆ ಬಂದ ದಂಪತಿ ಐವಿಎಫ್ ಮಾಡಿಸಿಕೊಂಡ್ರು. ಒಂದ್ಕಡೆ ಐವಿಎಫ್ ಚಿಕಿತ್ಸೆ ನಡೆಯುತ್ತಿರುವಾಗ್ಲೇ ಇನ್ನೊಂದು ಕಡೆ ವೈದ್ಯರು ಮತ್ತೆ ಆಘಾತಕಾರಿ ಸುದ್ದಿ ಹೇಳಿದ್ದರು. ಕ್ರಿಸ್ ಗೆ ಮತ್ತೆ ಕ್ಯಾನ್ಸರ್ ಮರುಕಳಿಸಿದ್ದು, ಬದುಕಿಸೋದು ಕಷ್ಟವೆಂದಿದ್ದರು. ದಂಪತಿ ಕೈನಲ್ಲಿರೋದು ಬರೀ 6 ತಿಂಗಳೆಂದು ವೈದ್ಯರು ಹೇಳಿದ್ದನ್ನು ಕೇಳಿದ ಟೋನಿ ಮುಂದೇನು ಎಂಬ ಪ್ರಶ್ನೆಯಲ್ಲಿದ್ದಳು. 

ಶಿಸ್ತಿನಲ್ಲಿ ಬೆಳೆದ ಮಕ್ಕಳಲ್ಲಿ ಈ ಗುಣಗಳಿರುತ್ತವೆ? ನೀವೂ ಈ ಗುಂಪಿಗೆ ಸೇರ್ತೀರಾ?

ಗಂಡನ ನೆನಪಿಗಾಗಿ ಮಗು ಪಡೆಯುವ ನಿರ್ಧಾರ ಕೈಗೊಂಡ ಆಕೆ ಐವಿಎಫ್ ನಲ್ಲಿ ಯಶಸ್ವಿಯಾದಳು. ಒಂದ್ಕಡೆ ಗರ್ಭಿಣಿ ಟೋನಿ. ಇನ್ನೊಂದು ಕಡೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ತಿದ್ದ ಕ್ರಿಸ್. ಕ್ಯಾನ್ಸರ್ ಕಾರಣಕ್ಕೆ ಕ್ರಿಸ್ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಅನೇಕ ಬಾರಿ ಐಸಿಯುವಿನಲ್ಲಿರುವ ಸ್ಥಿತಿ ನಿರ್ಮಾಣವಾಗಿತ್ತು. 45 ದಿನ ಆಸ್ಪತ್ರೆಯಲ್ಲಿದ್ದು ಬಂದಿದ್ದ ಕ್ರಿಸ್. ಆದ್ರೆ ಟೋನಿಗೆ ತನ್ನ ಕೈಲಾದ ಸಹಾಯ ಮಾಡಲು ಕ್ರಿಸ್ ಮರೆತಿರಲಿಲ್ಲ. ಇಬ್ಬರ ಹೋರಾಟದ ಮಧ್ಯೆ ಟೋನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಆಸ್ಪತ್ರೆ, ವೈದ್ಯರ ಸಹಕಾರದಿಂದ ಕ್ರಿಸ್ ಬೆಡ್ ಬಳಿಯೇ ಟೋನಿ ಬೆಡ್ ಹಾಕಲಾಗಿತ್ತು. ಟೋನಿ, ಮಗುವಿಗೆ ಜನ್ಮ ನೀಡೋದನ್ನು ಕ್ರಿಸ್ ನೋಡಿದ್ದ. ಅಷ್ಟೇ ಅಲ್ಲ ಮಗಳ ಜೊತೆ ಸಂತೋಷದ ಕ್ಷಣ ಕಳೆದಿದ್ದ. ಈಗ ಕ್ರಿಸ್ ನನ್ನ ಜೊತೆಗಿಲ್ಲ. ಆದ್ರೆ ಆತನ ನೆನಪಿಗಾಗಿ ಮಗಳಿದ್ದಾಳೆ. ಅವಳನ್ನು ನೋಡಿ ನನ್ನ ನೋವು ಮರೆಯುತ್ತೇನೆ ಎನ್ನುವ ಟೋನಿ, ಕರುಳು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾಳೆ.
ಕ್ರಿಸ್ ಗೆ ಆರಂಭದಲ್ಲಿ ಯಾವುದೇ ಲಕ್ಷಣ ಕಾಣಿಸಿರಲಿಲ್ಲ. ಹಾಗಾಗಿ ಸಣ್ಣ ನೋವು ಕಾಣಿಸಿಕೊಂಡ್ರೂ ನಿರ್ಲಕ್ಷ್ಯ ಮಾಡ್ಬೇಡಿ ಎನ್ನುತ್ತಾಳೆ ಟೋನಿ.  

click me!