ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ!

By Suvarna News  |  First Published Jul 3, 2021, 3:26 PM IST

60 ವರ್ಷ ದಾಟಿದ ಈ ಜೋಡಿಯಲ್ಲಿ ಹೆಂಡತಿಯ ಎರಡೂ ಕಾಲು ಮುರಿದಿದೆ, ಗಂಡನಿಗೆ ಹೃದಯಾಘಾತವಾಗಿದೆ. ಆದರೆ ಇಬ್ಬರೂ ಬುಲೆಟ್‌ ಮೇಲೆ ಜಗತ್ತು ಸುತ್ತೋದು ಬಿಟ್ಟಿಲ್ಲ!


2011ರಲ್ಲಿ ನನ್ನ ಹೆಂಡತಿ ಲೀಲಾ ಬಿದ್ದು ಒಂದು ಕಾಲು ಮುರಿದುಕೊಂಡಳು. ಜೊತೆಗೆ ನನಗೆ ಹಾರ್ಟ್ ಅಟ್ಯಾಕ್ ಆಯ್ತು. ನಾವಿಬ್ಬರೂ ಹಾಸಿಗೆ ಹಿಡಿದೆವು. ನನ್ನ ಡಾಕ್ಟರ್ ನನಗೆ ಹೇಳಿದರು- ''ಇನ್ನು ಮುಂದೆ ನಿಮ್ಮ ಬುಲೆಟ್‌ ಹತ್ತುವ ಯೋಚನೆಯನ್ನೇ ಮಾಡಬೇಡಿ!'' ನನಗೆ ಸುತ್ತಾಡುವ ಆಸೆ ಬಹಳ ಎಂದು ಅವರಿಗೆ ಗೊತ್ತು. 


Tap to resize

Latest Videos

undefined

ಆದರೆ ನನಗೆ ಸ್ವಲ್ಪ ಆರಾಮ ಎನಿಸಿದ ಕೂಡಲೇ, ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವುದು ಅಸಹನೀಯ ಎನಿಸತೊಡಗಿತು.  ನನಗೀಗ ಕೇವಲ 67 ವರ್ಷ! ನನ್ನ ಮುಂದಿನ ಬದುಕೆಲ್ಲಾ ವೃದ್ಧರಂತೆ ಕಳೆಯುವುದು ನನಗೆ ಇಷ್ಟವಿರಲಿಲ್ಲ. 1974ನೇ ಇಸವಿಯ ನನ್ನ ಬುಲೆಟ್ ಅನ್ನು ಹೊರತೆಗೆದೆ. ನಿಧಾನವಾಗಿ ಅದನ್ನು ರೈಡ್ ಮಾಡಲು ಶುರು ಮಾಡಿದೆ. ಹತ್ತಿರದ ಸಿಟಿಗಳಿಗೆ ಭೇಟಿ ಕೊಟ್ಟೆ. 
ಹೊರಗೆ ಸುತ್ತಾಡುವುದು ಖುಷಿ ಅನಿಸಿತು. ಆದರೆ ಪಕ್ಕದಲ್ಲಿ ಲೀಲಾ ಇಲ್ಲದೆ ಮಜಾ ಬರಲಿಲ್ಲ. ಅವಳು ವ್ಹೀಲ್‌ಚೇರ್‌ನಲ್ಲಿ ಇದ್ದಳು. ಈ ಮೊದಲು ಬುಲೆಟ್‌ನಲ್ಲಿ ನನ್ನ ಹಿಂದೆ ಕೂರುತ್ತಿದ್ದಳು. ಈಗ ಹಾಗೆ ಕೂರುವಂತಿರಲಿಲ್ಲ. ಆಗ ಒಂದು ಯೋಚನೆ ಹೊಳೆಯಿತು- ನನ್ನ ಬುಲೆಟ್‌ಗೆ ಒಂದು ಸೈಡ್‌ಕಾರ್ ಫಿಟ್ ಮಾಡಿದರೆ, ಆಕೆ ಆರಾಮಾಗಿ ಕೂರಬಹುದು ಅನಿಸಿತು. ಹಾಗೆಯೇ ಮಾಡಿದೆ.

ಗಂಡ ನನಗೂ ಮಗಳಿಗೂ ಏಡ್ಸ್ ಕಾಯಿಲೆ ದಾಟಿಸಿದ, ಆದರೆ... ...

ನಂತರ ನಾವು ಸಣ್ಣ ಟ್ರಿಪ್‌ಗಳನ್ನು ಶುರು ಮಾಡಿದೆವು. 2016ರಲ್ಲಿ ನಾವು ಮೊದಲ ದೀರ್ಘ ಟ್ರಿಪ್ ಹಾಕಿದೆವು. ಅದಕ್ಕಾಗಿ ನಮ್ಮ ಫಿಕ್ಸೆಡ್ ಡಿಪಾಸಿಟ್ ಮುರಿದೆವು. ವಡೋದರಾದಿಂದ ಆರಂಭಿಸಿ, ಮಹಾರಾಷ್ಟ್ರದಲ್ಲಿ ಓಡಾಡಿ, ಕೇರಳ, ಗೋವಾ, ಕರ್ನಾಟಕ, ತಮಿಳುನಾಡುಗಳನ್ನು ಸುತ್ತಾಡಿದೆವು. ಒಮ್ಮೆಗೆ 3 ಗಂಟೆ ಬೈಕ್ ಓಡಿಸುತ್ತಿದ್ದೆ. ನಂತರ ವಿರಾಮ ಪಡೆಯುತ್ತಿದ್ದೆ. ಎಲ್ಲಿ ನಿಲ್ಲಬೇಕು ಅನಿಸುತ್ತದೋ ಅಲ್ಲಿ ನಿಲ್ಲುತ್ತಿದ್ದೆವು. ರಾತ್ರಿ ಹೊತ್ತು ಯಾವುದಾದರೂ ಹೋಟೆಲ್‌ನಲ್ಲಿ ತಂಗುತ್ತಿದ್ದೆವು.

ಲೀಲಾ ಈ ಪ್ರವಾಸದಲ್ಲಿ ನನ್ನ ಫೈನಾನ್ಸ್ ಮ್ಯಾನೇಜರ್ ಆಗಿದ್ದಳು. ನಮ್ಮ ಪ್ರತಿದಿನದ ಬಜೆಟ್ 4000 ರೂಪಾಯಿ ಆಗಿತ್ತು. ಅದರಲ್ಲಿ ಆಹಾರ, ರಾತ್ರಿ ಉಳಿಯುವಿಕೆ, ಪೆಟ್ರೋಲ್ ಎಲ್ಲ ಬರುತ್ತಿತ್ತು. ಲೀಲಾ ನನ್ನ ಬುಲೆಟ್‌ನಲ್ಲೇ ಎಲ್ಲೋ ಒಂದು ಕಡೆ ಒಂದು ಸೀಕ್ರೆಟ್ ತಿಜೋರಿ ಮಾಡಿ ಇಟ್ಟಿದ್ದಳು. ಅಲ್ಲಿ ಹಣವಿಟ್ಟಿದ್ದಳು. ದಿನದ ಬಜೆಟ್‌ಗಿಂತ ಒಂದು ರೂಪಾಯಿ ಜಾಸ್ತಿ ಖರ್ಚು ಮಾಡಲೂ ಬಿಡುತ್ತಿರಲಿಲ್ಲ!
ಸುಮ್ಮನೇ ಲೀಲಾಳ ಕೈ ಹಿಡಿದುಕೊಂಡು ಒಂದು ಸಂಜೆಯ ಸೂರ್ಯಾಸ್ತವನ್ನು ನೋಡುವುದೂ ಒಂದು ಮಧುರಾನುಭೂತಿಯಾಗಿತ್ತು. ಹೀಗೇ ನೋಡನೋಡತ್ತಾ 75 ದಿನಗಳು ಕಳೆದುಹೋದವು. ವಡೋದರಾಗೆ ಹಿಂದಿರುಗಿ ಬಂದ ಕೂಡಲೇ ನಾವು ಇನ್ನೊಂದು ಟ್ರಿಪ್ ಪ್ಲಾನ್ ಮಾಡುತ್ತಿದ್ದೆವು! 2018ರ ಫೆಬ್ರವರಿಯಲ್ಲಿ ನಾವು ಈಶಾನ್ಯ ಭಾರತಕ್ಕೆ ಹೋಗಲು ಪ್ಲಾನ್ ಮಾಡಿದೆವು. ದಾರಿಯಲ್ಲಿ ಮಕ್ಕಳು "ಅಂಕಲ್‌, ಚೆನ್ನಾಗಿದ್ದೀರಾ?'' ಎಂದು ಪ್ರಶ್ನಿಸಿದರೆ ನಾನು ''ಅಂಕಲ್ ಅಂತ ಯಾರಿಗೆ ಹೇಳ್ತೀಯಾ?'' ಎಂದು ಗದರಿಸುತ್ತಿದ್ದೆ. ನಾನು ಸೀನಿಯರ್ ಸಿಟಿಜನ್ ಆಗಿರಬಹುದು, ಆದರೆ ಹೃದಯದಲ್ಲಿ ನಾನಿನ್ನೂ ಹುಡುಗನೇ!

ಅಪ್ಪ ಅಗ್ತಾ ಇದ್ದೀರಾ? ಹಾಗಿದ್ದರೆ ತಂದೆತನ ಅನುಭವಿಸಲು ಕೆಲವು ಟ್ರಿಕ್ಸ್! ...

ಇದಾದ ಬಳಿಕ ನಾವು ಹೀಗೆ ಪ್ರತಿವರ್ಷವೂ ಹೋಗಲು ಶುರು ಮಾಡಿದೆವು. ಕೆಲವು ತಿಂಗಳ ಬಳಿಕ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದಾಗ ಲೀಲಾ ಆಕೆಯ ಇನ್ನೊಂದು ಮೊಣಕಾಲನ್ನು ಮುರಿದುಕೊಂಡಳು. ಹೀಗಾಗಿ ಆಸ್ಪತ್ರೆಯಲ್ಲಿ ಹದಿನೈದು ದಿನ ಉಳಿಯಬೇಕಾಯಿತು. ಅಲ್ಲಿ ಆಕೆಗೆ ಸರ್ಜರಿಯೂ ಆಯಿತು. ಆದರೆ ಅದೇನೂ ಆಕೆಯನ್ನು ವಿಚಲಿತಗೊಳಿಸಲಿಲ್ಲ. ಕ್ಯಾಸ್ಟ್ ಧರಿಸಿಕೊಂಡೇ ಆಕೆ ಬಂದು ಸೈಡ್‌ಕಾರ್‌ನಲ್ಲಿ ಕೂತು "ಚಲೋ'' ಅಂದಳು. ನಾನು ಯಾವಾಗಲೂ ಹೇಳುವುದಿದೆ- ನನ್ನ ಬುಲೆಟ್‌ನಲ್ಲಿ ಎರಡು ಬ್ಯಾಟರಿಗಳಿವೆ, ಅದರಲ್ಲಿ ಒಂದು ಲೀಲಾ!

2020ರ ಹೊತ್ತಿಗೆ ನಾವು ಸುಮಾರು 30,000 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದೆವು. ಒಮ್ಮೆ ನಾವು ಹೀಗೇ ರೋಡಲ್ಲಿ ಹೋಗುತ್ತಿದ್ದಾಗ ಯಾರೋ ''ಜಯ್ ಮತ್ತು ವೀರೂ ಬರುತ್ತಿದ್ದಾರೆ ನೋಡಿ'' ಎಂದು ಕೂಗಿದರು. ಲೀಲಾ ಯಾವಾಗಲೂ ನನ್ನ ವೀರೂ ಆಗಿದ್ದವಳು. ನನ್ನ ಬದುಕಿನ ಉಳಿದ ಭಾಗವೂ ಕೂಡ ಆಕೆಯೊಂದಿಗೆ, ಆಕೆ ನನ್ನ ಸೈಡ್‌ಕಾರಿನಲ್ಲಿ ಕುಳಿತಿದ್ದಿರುತ್ತಾ, ಹೋಗುವ ಆಸೆ. ನಮ್ಮ ಕೂದಲಿನ ಜೊತೆ ಆಡುವ ಗಾಳಿ ಹಾಗೂ ನಮ್ಮ ಮುಂದೆ ಅಪಾರ ರಸ್ತೆ ಇರಬೇಕು.

ಕೃಪೆ: ಹ್ಯೂಮನ್ಸ್ ಆಫ್ ಬಾಂಬೇ 


 

click me!