ಗಂಡ ನನಗೂ ಮಗಳಿಗೂ ಏಡ್ಸ್ ಕಾಯಿಲೆ ದಾಟಿಸಿದ, ಆದರೆ...
ನಾನು ಎಚ್‌ಐವಿ ಪಾಸಿಟಿವ್ ಆಗಿರಬಹುದು, ಆದರೆ ಬದುಕಿನಲ್ಲಿ ಪಾಸಿಟಿವ್ ಆಗಿರುವಷ್ಟು ಕಾಲ ಯಾರೂ ನನ್ನನ್ನು ಸೋಲಿಸಲಾರರು ಎನ್ನುವ ಈ ಮಹಿಳೆಯ ಕತೆ ಇಲ್ಲಿದೆ ಓದಿ...
ಆತ ತನ್ನ ಹೆಂಡತಿಗೂ ಮಗಳಿಗೂ ಏಡ್ಸ್ ದಾಟಿಸಿದ್ದ. ಅವರ ಭವಿಷ್ಯದ ಬಗ್ಗೆ ಆತ ಏನೂ ಮಾಡಲಿಲ್ಲ. ಆದರೆ ಆಕೆಯ ಬದುಕಿನ ಹೋರಾಟ ಆಕೆಯನ್ನು ಎತ್ತೆತ್ತಲೋ ಒಯ್ದಿತು. ಹ್ಯೂಮನ್ಸ್ ಆಫ್ ಬಾಂಬೇ ಫೇಸ್‌ಬುಕ್ ಪೇಜ್‌ನಲ್ಲಿ ಆಕೆ ಹೇಳಿಕೊಂಡು ತನ್ನ ಕತೆ ಇದು.
''ನನಗೆ 17ನೇ ವಯಸ್ಸಿನಲ್ಲೇ ಅರೇಂಜ್ಡ್ ಮ್ಯಾರೇಜ್ ಮಾಡಿದರು. ಆಗ ನಾನು 10ನೇ ಕ್ಲಾಸು ಪಾಸು ಮಾಡಿದ್ದೆ ಅಷ್ಟೇ. ನನ್ನ ಗಂಡನೆನಿಸಿಕೊಂಡವನು ಆಗಾಗ ಅಸೌಖ್ಯಕ್ಕೆ ತುತ್ತಾಗುತ್ತಿದ್ದ. ಇದರ ಬಗ್ಗೆ ನಾನು ವಿಚಾರಿಸಿದರೆ ಸಿಡಿಮಿಡಿ ಮಾಡುತ್ತಿದ್ದ, ರೇಗುತ್ತಿದ್ದ, ಹೊಡೆಯುವುದೂ ಇತ್ತು. ಅವನು ಆಗಾಗ ಯಾವುದೇ ಮಾತ್ರೆ ಸೇವಿಸುತ್ತಿದ್ದ. ಅದರ ಬಗ್ಗೆ ಕೇಳಿದರೆ, ಅದು ಯಾವುದೋ ವಿಟಮಿನ್ ಮಾತ್ರೆ ಎನ್ನುತ್ತಿದ್ದ. ನಾನು ಒಬ್ಬ ಮಗನನ್ನು ಹೆರಬೇಕು ಎನ್ನುವುದು ಅವನ ಆಸೆಯಾಗಿತ್ತು. ಆದರೆ ನಾನು ಒಬ್ಬಳು ಮಗಳನ್ನು ಹೆತ್ತೆ. ನಾನು ಆಕೆಯನ್ನು ಹೆತ್ತು ಇನ್ನೂ ಒಂದು ದಿನವಾಗಿರಲಿಲ್ಲ; ಆಸ್ಪತ್ರೆಯಲ್ಲೇ ಆತ ನನಗೆ ಹೊಡೆದ. 'ನನಗೆ ಮಗ ಬೇಕಿತ್ತು' ಎಂದ. ಆದರೂ ನಾನು ಸಹಿಸಿಕೊಂಡೆ. ಮಗಳಿಗೆ ಕಸ್ತೂರಿ ಎಂದು ಹೆಸರಿಟ್ಟೆ.
ಮೂರು ತಿಂಗಳ ನಂತರ ಮತ್ತೆ ಆತ ಕಾಯಿಲೆ ಬಿದ್ದ. ಈ ಬಾರಿ ಅವನಿಗೆ ಏಡ್ಸ್ ಎಂದು ಡಾಕ್ಟರ್ ಖಚಿತಪಡಿಸಿದರು. ನನಗೆ ಸಿಟ್ಟ ಬಂತು. ನಿನಗಿದು ತಿಳಿದಿರಲಿಲ್ಲವೇ ಎಂದು ಗಂಡನನ್ನು ಪ್ರಶ್ನಿಸಿದೆ. ಅವನಿಗೆ ಮೊದಲೇ ಗೊತ್ತಿತ್ತು. ಅದನ್ನು ತಿಳಿಸದೇ ನನ್ನನ್ನು ಮದುವೆಯಾಗಿದ್ದ. ಯಾಕೆಂದರೆ ಅವನ ಕುಟುಂಬದವರು ಅವನನ್ನು ಮದುವೆಯಾಗಿ, ಒಬ್ಬ ಮಗನನ್ನು ಹೆತ್ತು ಕೊಡುವಂತೆ ಒತ್ತಾಯಿಸುತ್ತಿದ್ದರು. ಬ್ಯುಸಿನೆಸ್‌ನಲ್ಲಿ ಹೊರಗೆ ಓಡಾಡುತ್ತಿದ್ದಾಗ ತಾನು ಜೊತೆಗೆ ಮಲಗಿದ ಹೆಂಗಸರ ಸಹವಾಸದಿಂದಾಗಿ ತನಗೆ ಈ ಕಾಯಿಲೆ ಬಂತು ಎಂದು ಆತ ಕ್ಯಾಶುವಲ್ಲಾಗಿ ಹೇಳಿದ.
ಯಾವ ಬಗೆಯ ಸ್ತನಗಳಿಗೆ ಯಾವ ಬಗೆಯ ಬ್ರಾ? ...
ಕೆಲ ದಿನಗಳ ಬಳಿಕ ಆತ ಸತ್ತ. ಕಸ್ತೂರಿ ಮತ್ತು ನಾನು ಟೆಸ್ಟ್ ಮಾಡಿಸಿಕೊಂಡೆವು. ನಮಗೆ ಪಾಸಿಟಿವ್ ಬಂದಿತ್ತು. ನಾನು ಅತ್ತೆ. ಆದರೆ ನಮ್ಮನ್ನು ನನ್ನ ಕುಟುಂಬ ಪ್ರೀತಿಯಿಂದಲೇ ಸ್ವಾಗತಿಸಿತು. ಆದರೆ ನಮ್ಮ ಮನೆಗೆ ಬಂಧುಗಳು ಬರುವುದನ್ನು ನಿಲ್ಲಿಸಿದರು. ಆದರೆ ನಾವು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಆಗ ಇರಬೇಕಾಗಿತ್ತು. ಭಾರವಾದ ಹೃದಯದಿಂದ ನಾವು ಹೋದೆವು. ಆದರೆ ಆಸ್ಪತ್ರೆಯಲ್ಲಿಯೂ ಡಾಕ್ಟರ್‌ಗಳಿಗೆ ಹೃದಯ ಇರಲಿಲ್ಲ. ಅವರು ನಮ್ಮನ್ನು ಮುಟ್ಟಲೂ ಅಂಜುತ್ತಿದ್ದರು. ಕಸ್ತೂರಿಗೆ ಎರಡನೇ ವರ್ಷದಲ್ಲಿ ಕ್ಷಯರೋಗ ಬಂದು, ಆಕೆ ತೀರಿಕೊಂಡಳು. ನನ್ನ ಬದುಕೆಲ್ಲ ನನ್ನ ಕನ್ಣೆದುರೇ ಛಿದ್ರವಾಗಿತ್ತು. ಆಸ್ಪತ್ರೆ ಮೇಲೆ ಕೇಸು ಹಾಕಿದೆ.
ಆಗ ನನ್ನ ಕಾಲೇಜಿನ ಪ್ರಿನ್ಸಿಪಾಲ್ ನನ್ನನ್ನು ಭೇಟಿ ಮಾಡಿದರು; ''ನಿನ್ನ ಶಿಕ್ಷಣ ಮುಗಿಸು'' ಅಂತ ಹೇಳಿದರು. ಕಸ್ತೂರಿಯ ನಿರ್ಗಮನದಿಂದ ಅಲ್ಲೋಲಕಲ್ಲೋಲಗೊಂಡಿದ್ದ ನನ್ನ ಮನಸ್ಸನ್ನೆಲ್ಲ ಪುಸ್ತಕಗಳ ಮೇಲೆ ತಿರುಗಿಸಿದೆ. ಆಸ್ಪತ್ರೆಯ ಮೇಲಿನ ಕೇಸಿನಲ್ಲಿ ನಾನು ಗೆದ್ದ. 2 ಲಕ್ಷ ರೂಪಾಯಿ ಪರಿಹಾರ ಅಥವಾ ಕೆಲಸ- ಇವೆರಡಲ್ಲಿ ನಾನು ಕೆಲಸವನ್ನೇ ಆರಿಸಿಕೊಂಡೆ. ಅಸ್ಸಾಂ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿಯಲ್ಲಿ ಎಚ್‌ಐವಿ ಪೇಷೆಂಟ್‌ಗಳಿಗೆ ಕೌನ್ಸೆಲಿಂಗ್ ಮಾಡುವ ಕೆಲಸಕ್ಕೆ ನಿಯೋಜನೆಗೊಂಡೆ. ನಾನು ಎಚ್‌ಐವಿ ಬಗ್ಗೆ ಅಧ್ಯಯನ ಮಾಡಿದೆ; ಪೇಷೆಂಟ್‌ಗಳಿಗೆ ಸರಕಾರದಿಂದ ಸ್ಕಿಲ್ ಟ್ರೇನಿಂಗ್ ಮತ್ತು ಉಚಿತ ಚಿಕಿತ್ಸೆಗಾಗಿ ಹೋರಾಡಿದೆ. 2004ರಲ್ಲಿ ಅಸ್ಸಾಂ ನೆಟ್‌ವರ್ಕ್ ಆಫ್ ಪಾಸಿಟಿವ್ ಪೀಪಲ್ ಸ್ಥಾಪಿಸಿದೆ; ಮಕ್ಕಳಿಗೆ ಎಚ್‌ಐವಿ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡೆ.
ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರು ಈ ಆಹಾರ ಅವಾಯ್ಡ್ ಮಾಡಿ ...
ಆದರೆ ಈಗಲೂ ನನಗೆ ಅನಿಸುವುದೆಂದರೆ, ನನ್ನ ಮಗಳ ಬದುಕು ಅರ್ಧಕ್ಕೇ ಕೊನೆಗೊಳ್ಳಬಾರದಿತ್ತು. ಆಕೆಯ ನೆನಪನ್ನು ಉಳಿಸಿಕೊಳ್ಳಲು ಒಂದು ಮಕ್ಕಳ ಅನಾಥಾಶ್ರಮ ಶುರುಮಾಡಿದೆ. ಎಚ್‌ಐವಿ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆ ಮತ್ತು ಶಿಕ್ಷಣ ಕೊಡಿಸಲು ನನ್ನ ಸಂಘಟನೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ತಾಯಿಯ ಹೆಣದ ಪಕ್ಕದಲ್ಲಿ ಅನಾಥವಾಗಿದ್ದ ಒಬ್ಬ 4 ವರ್ಷದ ಎಚ್‌ಐವಿ ಬಾಲಕ ನಮಗೆ ದೊರೆತ.
ಇಲ್ಲಿನ ಮಹಿಳೆಯರಿಗಿನ್ನು ಒಬ್ಬನಿಗಿಂತ ಹೆಚ್ಚು ಗಂಡನ ಪಡೆಯೋ ಅವಕಾಶ ...
ಹೋರಾಡಿ ಬದುಕಿದ. ಕಸ್ತೂರಿಯ ಬರ್ತ್‌ಡೇ ದಿನ ಮಕ್ಕಳೊಂದಿಗೆ ಕೇಕ್ ಕಟ್ ಮಾಡುತ್ತೇನೆ. ಸುಮಾರು 700 ಎಚ್‌ಐವಿ ಪೇಷೆಂಟ್‌ಗಳಿಗೆ ರೇಷನ್ ಸಪ್ಲೈ ಮಾಡುತ್ತೇನೆ. ಆದರೆ ಆಶ್ರಮದ ಮಕ್ಕಳು ''ಅಮ್ಮಾ'' ಎಂದು ಕರೆಯುವಾಗ ಬೇರೆಲ್ಲೂ ಸಿಗದ ಖುಷಿ ನನಗೆ ಸಿಗುತ್ತದೆ. ನಾನು ಎಚ್‌ಐವಿ ಪಾಸಿಟಿವ್ ಆಗಿರಬಹುದು; ಆದರೆ ಬದುಕಿನಲ್ಲಿ ಪಾಸಿಟಿವ್ ಆಗಿದ್ದಾಗ ಯಾರೂ ನಮ್ಮನ್ನು ಸೋಲಿಸಲಾರರು.