* ಲೈಂಗಿಕ ಕ್ರಿಯೆ ವೇಳೆ ಲಂಬವಾಗಿ ಮುರಿದ ಶಿಶ್ನ
* ಪ್ರಪಂಚದಲ್ಲಿಯೇ ಇದು ಮೊದಲ ಪ್ರಕರಣ
* ಯಾವ ಶೈಲಿಯಲ್ಲಿ ಇದ್ದರೂ ಗೊತ್ತಿಲ್ಲ
* ಆರು ತಿಂಗಳಿನಲ್ಲಿ ಮೊದಲಿನ ಸ್ಥಿತಿಗೆ ಬರಲಿದೆ
ಲಂಡನ್( ಜು. 02) ಸೆಕ್ಸ್ ಮಾಡುವ ವೇಳೆ 40 ವರ್ಷದ ವ್ಯಕ್ತಿಗೆ ಆಘಾತವಾಗಿದೆ. ಶಿಶ್ನ ಲಂಬವಾಗಿ ಮುರಿದಿದೆ. ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎಂದು ಯುಕೆ ವೈದ್ಯರು ತಿಳಿಸಿದ್ದಾರೆ. ಮೂರು ಸೇಂಮಿ ಜಾಗದಲ್ಲಿ ಮುರಿತ ಕಂಡುಬಂದಿದೆ.
40 ವರ್ಷದ ವ್ಯಕ್ತಿ ತನ್ನ ಲಿವ್ ಇನ್ ಸಂಗಾತಿ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಈ ವೇಳೆ ಅವಘಡ ಸಂಭವಿಸಿದೆ. ಗುದದ್ವಾರ ಮತ್ತು ಜನನಾಂಗದ ನಡುವಿನ ಪೆರಿನಿಯಮ್ ಏರಿಯಾದಲ್ಲಿ ಮುರಿತವಾಗಿದೆ. ಸಂಗಾತಿಗಳು ಯಾವ ಶೈಲಿಯಲ್ಲಿ ಇದ್ದರು ಎನ್ನುವುದನ್ನು ವೈದ್ಯರು ತಿಳಿಸಿದಲ್ಲ. ಶ್ವಾನ ಶೈಲಿ ಮತ್ತು ಮ್ಯಾನ್ ಆನ್ ಟಾಪ್ ಮಾರಕವಾಗಬಹುದು ಎಂಬ ಎಚ್ಚರಿಕೆ ಇದೊರೊಂದಿಗೆ ನೀಡಿದ್ದಾರೆ.
ಶಿಶ್ನವೂ ಮುರಿದು ಹೋಗಬಹುದು ಹುಷಾರ್
ಈ ಹಿಂದೆ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಶಿಶ್ನ ಅಡ್ಡಲಾಗಿ ಮುರಿದಿತ್ತು. ಆದರೆ ಇದೇ ಮೊದಲ ಸಾರಿ ಲಂಬವವಾಗಿ ಮುರಿದಿದೆ. ಆರು ತಿಂಗಳು ಚಿಕಿತ್ಸೆ ಪಡೆದುಕೊಂಡರೆ ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
88.5 ರಷ್ಟು ಶಿಶ್ನ ಮುರಿತ ಸಂದರ್ಭದಲ್ಲಿ ಸಾವೇ ಸಂಭವಿಸುತ್ತದೆ. ಅತಿಯಾದ ಹಸ್ತಮೈಥುನ, ಮಲಗುವ ಸ್ಥಾನ ಮತ್ತು ಶಿಶ್ನವನ್ನು ಬಲವಂತವಾಗಿ ಬಾಗಿಸುವ ಅಭ್ಯಾಸ ಸಹ ಇಂಥ ಅವಘಡಕ್ಕೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.