
Hidden Signs of Attraction: ಯಂಗ್ ಏಜ್‌ನಲ್ಲಿ ಯುವಕ-ಯುವತಿಯರು ಪರಸ್ಪರ ಆಕರ್ಷಿತರಾಗುವುದು ಸಾಮಾನ್ಯ. ಆದರೆ ಒಂದು ಹುಡುಗಿಗೆ ಹುಡುಗನ ಮೇಲೆ ಇಂಟ್ರೆಸ್ಟ್ ಇದ್ದರೆ ಅದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ ಅವಳು ಏನನ್ನೂ ಹೇಳದೆ ಈ ರೀತಿ ವರ್ತಿಸುವ ಮೂಲಕ ನಿಮ್ಮ ಗಮನ ಸೆಳೆಯಲು ಬಯಸುತ್ತಾಳೆ. ಆದರೆ ಹೆಚ್ಚಿನ ಹುಡುಗರು ಹುಡುಗಿಯರ ಈ ಗ್ರೀನ್ ಸಿಗ್ನಲ್ ನಿರ್ಲಕ್ಷಿಸುತ್ತಾರೆ ಅಥವಾ ಅವುಗಳನ್ನು ಅವಳ ಸಾಮಾನ್ಯ ನಡವಳಿಕೆ ಇರಬಹುದು ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಇದೇ ಕಾರಣಕ್ಕೆ ಹುಡುಗಿಯರು ಕೊನೆಗೊಂದು ದಿನ ಕ್ರಮೇಣ ಈ ರೀತಿ ನಡೆದುಕೊಳ್ಳುವುದನ್ನೇ ನಿಲ್ಲಿಸುತ್ತಾರೆ. ಆದ್ದರಿಂದ ಇಲ್ಲಿ ಹುಡುಗಿಗೆ ಹುಡುಗನ ಬಗ್ಗೆ ಇಂಟ್ರೆಸ್ಟ್ ಇದೆ ಎಂದು ತೋರಿಸುವ ಆ ಸಿಗ್ನಲ್ ಯಾವುವು ಎಂದು ನೋಡೋಣ...
ನೋಟ ನಿಮ್ಮತ್ತ
ಒಂದು ಹುಡುಗಿಗೆ ಒಬ್ಬ ಹುಡುಗನ ಬಗ್ಗೆ ಆಸಕ್ತಿ ಇದ್ದರೆ ಅವಳ ಕಣ್ಣುಗಳು ಆ ಹುಡುಗನ ಮೇಲೆ ನೆಟ್ಟಾಗ ನಗುತ್ತಾಳೆ ಅಥವಾ ನೀವದಷ್ಟೇ ದೊಡ್ಡ ಗುಂಪಿನಲ್ಲಿದ್ದರೂ ನಿಮ್ಮನ್ನು ಗಮನಿಸಿ ಏನು ಮಾಡುತ್ತಿದ್ದೀಯಾ ಎಂದು ಕೇಳುತ್ತಾಳೆ. ಇದು ಅವಳು ನಿಮ್ಮನ್ನು ಗಮನಿಸುತ್ತಿದ್ದಾಳೆ ಎಂಬುದರ ಸಂಕೇತ.
ನೀವೇನೇ ಹೇಳಿದರೂ ಕೇಳುವುದು
ಒಂದು ಹುಡುಗಿ ಹುಡುಗ ಹೇಳುವುದನ್ನು "ಕೇಳುವುದು" ಮಾತ್ರವಲ್ಲದೆ ಅದನ್ನು "ಅನುಭವಿಸಿದರೆ" ಅವಳು ನಿಮ್ಮನ್ನು ಗಮನಿಸುತ್ತಿದ್ದಾಳೆ ಎಂಬುದರ ಸಂಕೇತವೂ ಆಗಿದೆ. ಹುಡುಗನು ಏನಾದರೂ ಹೇಳಿದಾಗ ಮುಕ್ತವಾಗಿ ನಗುತ್ತಾಳೆ ಅಥವಾ ಯಾವುದೋ ವಿಷಯದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾಳೆ. ಹುಡುಗನಿಗೆ ಸಹಾಯ ಬೇಕು ಎಂದು ಭಾವಿಸಿದಾಗ, ಯಾವುದೇ ಸಮಸ್ಯೆ ಇದ್ದರೆ ಖಂಡಿತವಾಗಿಯೂ ನನಗೆ ಹೇಳಿ ಎಂದು ಆಕೆ ಕೇಳುತ್ತಾಳೆ. ಇದೆಲ್ಲವೂ ಹುಡುಗನಿಗೆ ಫ್ರೆಂಡ್ಸ್ ಆಗಿರುವುದಕ್ಕೆ ಹೀಗೆ ಕೇಳುತ್ತಾಳೆ ಅನಿಸಬಹುದು. ಆದರೆ ಅವಳ ಹಿಂದಿನ ಮತ್ತು ವರ್ತಮಾನದ ನಡವಳಿಕೆಯನ್ನು ಗಮನಿಸಿದರೆ ನಿಮ್ಮಲ್ಲಿ ಆಸಕ್ತಿ ಹೊಂದಿದ್ದಾಳೋ/ಇಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಚೆನ್ನಾಗಿ ಕಾಣಲು ಪ್ರಯತ್ನಿಸುವುದು
ಒಬ್ಬ ಹುಡುಗಿಗೆ ಹುಡುಗನ ಮೇಲೆ ಇಂಟ್ರೆಸ್ಟ್ ಇದ್ದರೆ ಅವಳು ಅವನ ಹತ್ತಿರ ಇರುವಾಗಲೆಲ್ಲಾ ಚೆನ್ನಾಗಿ ಕಾಣಲು ಪ್ರಯತ್ನಿಸುತ್ತಾಳೆ. ಅವಳ ಕೂದಲನ್ನು ಸರಿಪಡಿಸುವುದು, ಒಳ್ಳೊಳ್ಳೆ ಬಟ್ಟೆ ಹಾಕುವುದು, ಮೇಕಪ್ ಟಚ್-ಅಪ್ ಮಾಡುವುದು ಅಥವಾ ನಗುತ್ತಾ ಮಾತನಾಡುವುದು. ಇವೆಲ್ಲವೂ ಅವಳು ಹುಡುಗನನ್ನು ಇಷ್ಟಪಡಲು ಪ್ರಾರಂಭಿಸಿದ್ದಾಳೆ ಎಂಬುದರ ಸಾಫ್ಟ್ ಸಿಗ್ನಲ್.
ನಿಮ್ಮ ಜೊತೆಯಿರಲು ಬಯಸುವುದು
ಅವಳು ಯಾವುದೋ ನೆಪದಲ್ಲಿ ನಿಮ್ಮ ಜೊತೆ ಪದೇ ಪದೇ ಓಡಾಡುತ್ತಿದ್ದರೆ, ಕಚೇರಿಯಲ್ಲಿ ಅಥವಾ ಪಾರ್ಟಿಯಲ್ಲಿ ನಿಮ್ಮ ಜೊತೆ ಇರಲು ಬಯಸಿದರೆ ಅದು ಕಾಕತಾಳೀಯವಲ್ಲ, ಉದ್ದೇಶಪೂರ್ವಕ.
ಸಾಮಾಜಿಕ ಮಾಧ್ಯಮದಲ್ಲಿಯೂ ಇಂಟ್ರೆಸ್ಟ್
ಒಂದು ಹುಡುಗಿಗೆ ಹುಡುಗನ ಬಗ್ಗೆ ಇಂಟ್ರೆಸ್ಟ್ ಬಂದರೆ ಅವಳು ಸಾಮಾಜಿಕ ಮಾಧ್ಯಮದಲ್ಲಿಯೂ ನಿಮ್ಮನ್ನು ಗಮನಿಸುತ್ತಾಳೆ. ನಿಮ್ಮ ಸ್ಟೋರಿಯನ್ನು ಬೇಗನೆ ಲೈಕ್ ಮಾಡುವುದು ಅಥವಾ ರಿಟ್ವೀಟ್ ಮಾಡುವುದು ಅಥವಾ ನಿಮ್ಮ ಸಂದೇಶಗಳನ್ನು ತಕ್ಷಣ ಓದಿ ಪ್ರತ್ಯುತ್ತರಿಸುವುದು. ಇವೆಲ್ಲವೂ ಹುಡುಗನ ಕಡೆ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂಬುದರ ಡಿಜಿಟಲ್ ಚಿಹ್ನೆಗಳು.
ವಾರಗಳ ನಂತರವೂ ನೆನಪಿದ್ದರೆ
ಹುಡುಗ ಹೇಳಿದ ಏನನ್ನಾದರೂ ವಾರಗಳ ನಂತರವೂ ಆಕೆ ನೆನಪಿಸಿಕೊಂಡರೆ, ಅದು ಹುಡುಗನನ್ನು ಇಷ್ಟಪಡಲು ಪ್ರಾರಂಭಿಸಿದ್ದಾಳೆ ಎಂಬುದರ ಸಾಫ್ಟ್ ಸಿಗ್ನಲ್. ಹುಡುಗನ ನೆಚ್ಚಿನ ಬಣ್ಣ, ನೆಚ್ಚಿನ ಚಲನಚಿತ್ರ ಅಥವಾ ಆಹಾರದಂತೆ. ಇದು ಅವಳು ಹುಡುಗನ ಮಾತನ್ನು ಕೇಳುವುದು ಮಾತ್ರವಲ್ಲದೆ ಇಷ್ಟಾನಿಷ್ಟಗಳನ್ನು ಸಹ ನೋಡಿಕೊಳ್ಳುತ್ತಾಳೆ ಎಂಬುದರ ಸಂಕೇತವಾಗಿದೆ.
ಹುಡುಗನು ಇವನ್ನೆಲ್ಲಾ ನಿರ್ಲಕ್ಷಿಸಬಾರದು…
ಅವಳು ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತಾಳೆಂದು ಭಾವಿಸುವುದು.
ಅತಿಯಾಗಿ ಯೋಚಿಸುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಸತ್ಯವನ್ನೇ ಅರ್ಥ ಮಾಡಿಕೊಳ್ಳದಿರುವುದು.
ಸ್ನೇಹ ಮತ್ತು ಆಸಕ್ತಿಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು.
ಕೊನೆಗೆ ಅವರಷ್ಟಕ್ಕೆ ಅವರೆ ಹೇಳಿಕೊಳ್ಳುವುದು "ಬಹುಶಃ ನಾನು ತುಂಬಾ ಯೋಚಿಸುತ್ತಿದ್ದೇನೆ".
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.