ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಏನೆಲ್ಲಾ ನೋಡ್ತೇವೆ..ಕೆಲವೊಮ್ಮೆ ನಾವು ನಿರ್ಲಕ್ಷ್ಯ ಮಾಡಲು ಆಗಲ್ಲ ಅಂತಹ ಘಟನೆಗಳೂ ನಡೆಯುತ್ತವೆ. ಇದನ್ನೆಲ್ಲಾ ನೋಡಿದ ನಮ್ಮ ಜನ ಸುಮ್ನೆ ಇರ್ತಾರಾ?, ಅದನ್ನೇ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅಂತಹ ವಿಡಿಯೋಗಳು ತಕ್ಷಣ ಸಾರ್ವಜನಿಕರ ಗಮನ ಸೆಳೆಯುತ್ತವೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತವೆ. ನೀವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ ವೈರಲ್ ಆಗುವ ಇಂತಹ ವಿಡಿಯೋಗಳನ್ನ ಖಂಡಿತ ನೋಡಿರುತ್ತೀರಿ. ಸದ್ಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ...
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ದಂಪತಿ ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬರುತ್ತದೆ. ಹಿಂದೆ ಕುಳಿತಿದ್ದ ಮಹಿಳೆ ಇದ್ದಕ್ಕಿದ್ದಂತೆ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ. ಮೊದಲು ಅವಳು ಎರಡೂ ಕೈಗಳಿಂದ ಅವನ ಎರಡೂ ಕೆನ್ನೆಗಳ ಮೇಲೆ ಹೊಡೆದು ನಂತರ ತನ್ನ ಕೈಗಳನ್ನು ಮುಂದಕ್ಕೆ ಸರಿಸಿ ಅವನ ಹೊಟ್ಟೆ ಅಥವಾ ಎದೆಯ ಮೇಲೆ ಹೊಡೆಯುತ್ತಾಳೆ. ಇದಾದ ಕೆಲವು ಸೆಕೆಂಡುಗಳ ಕಾಲ ಶಾಂತವಾಗುತ್ತಾಳೆ. ನಂತರ ಮತ್ತೆ ಅವನಿಗೆ ಕಪಾಳಮೋಕ್ಷ ಮಾಡುತ್ತಾಳೆ. ನಂತರ ಅವಳು ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಅವನಿಗೆ ಹೊಡೆಯುತ್ತಾಳೆ. ಅಂದರೆ ಪ್ರತಿ ಕೆಲವು ಸೆಕೆಂಡುಗಳ ನಂತರ ಅವನಿಗೆ ಹೊಡೆಯುವುದನ್ನು ಕಾಣಬಹುದು. ಹಿಂದೆ ಕಾರಿನಲ್ಲಿ ರೈಡ್ ಮಾಡುತ್ತಿದ್ದ ವ್ಯಕ್ತಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ
ಬಳಕೆದಾರರು ಹೇಳಿದ್ದೇನು?
ನೀವು ಈಗಷ್ಟೇ ನೋಡಿದ ವಿಡಿಯೋವನ್ನು X ಪ್ಲಾಟ್‌ಫಾರ್ಮ್‌ನಲ್ಲಿ @askshivanisahu ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಇದನ್ನೆಲ್ಲಾ ನೋಡಿದ ನಂತರ ಪುರುಷ ಸಮುದಾಯವು ಆಘಾತದಲ್ಲಿದೆ' ಎಂದು ಶೀರ್ಷಿಕೆ ಬರೆಯಲಾಗಿದೆ. ಸುದ್ದಿ ಬರೆಯುವವರೆಗೆ ವಿಡಿಯೋವನ್ನು 40 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದು, "ಇತ್ತೀಚಿನ ದಿನಗಳಲ್ಲಿ ಜನರ ಬಗ್ಗೆ ಏನು ಹೇಳಬಹುದು, ಅದನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ", "ಒಂದು ವೇಳೆ ಪುರುಷ ಹೀಗೆ ಮಾಡಿದ್ರೆ ಏನಾಗುತ್ತೆ ಎಂದು ಯೋಚಿಸಿ", "ಸಹೋದರನನ್ನು ಕೆಟ್ಟದಾಗಿ ಅವಮಾನಿಸಲಾಗಿದೆ", "ಇತ್ತೀಚಿನ ದಿನಗಳಲ್ಲಿ ಪುರುಷ ಸಮುದಾಯವು ಆಘಾತದಲ್ಲಿದೆ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ಕಾಣಬಹುದು.
ವೈರಲ್ ಆಗಿದ್ದ ಮದುವೆಯ ವಿಡಿಯೋ
ಆಗಾಗ್ಗೆ ಇಂತಹ ಯುವಕರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ವಿವಾಹ ಸಮಾರಂಭದಲ್ಲಿನ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ವೈರಲ್ ವೀಡಿಯೊದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದು ಕಂಡುಬರುತ್ತದೆ. ನಂತರ ಬುರ್ಖಾ ಧರಿಸಿದವರೊಬ್ಬರು ವೇದಿಕೆಯ ಮೇಲೆ ಬಂದು ನೇರವಾಗಿ ವರನನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ. ಇದನ್ನು ನೋಡಿ ವಧು ಶಾಕ್ ಆಗುತ್ತಾಳೆ. ಇನ್ನೇನು ಆಕೆ ಅಳುವುದೊಂದು ಬಾಕಿ. ಇತರರು ಬಂದು ಬುರ್ಖಾ ತೆಗೆಯುತ್ತಾರೆ. ಆಗ ಬುರ್ಖಾ ಧರಿಸಿರುವುದು ಹುಡುಗಿ ಇಲ್ಲ. ಮದುವೆಗೆ ಬಂದು ತಮಾಷೆ ಮಾಡುತ್ತಿದ್ದ ವರನ ಸ್ನೇಹಿತ ಎಂದು ಗೊತ್ತಾಗುತ್ತದೆ. ಸತ್ಯ ಬಹಿರಂಗವಾದ ನಂತರ ವರನ ಸ್ನೇಹಿತ ವಧುವಿಗೆ ಹೂಗುಚ್ಛವನ್ನು ನೀಡುತ್ತಾನೆ. ಇದನ್ನು ನೋಡಿ ವಧು ನಗುತ್ತಾಳೆ.
ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗುತ್ತಿದ್ದು, ಪೋಸ್ಟ್ ಮಾಡಿದಾಗಿನಿಂದ, ಲಕ್ಷಾಂತರ ಬಳಕೆದಾರರು ವೀಕ್ಷಿಸಿದ್ದಾರೆ. 88 ಸಾವಿರಕ್ಕೂ ಹೆಚ್ಚು ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಕಾಮೆಂಟ್ ಸಹ ಮಾಡಿದ್ದಾರೆ. ಕೆಲವರು "ವಧು ಎಲ್ಲವೂ ಮುಗಿದುಹೋಗಿದೆ ಎಂದು ಭಾವಿಸಿದ್ದಳು" ಎಂದರೆ, ಮತ್ತೆ ಕೆಲವರು "ಸತ್ಯ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ, ವಧು ಕೋಮಾಗೆ ಹೋಗುತ್ತಿದ್ದಳು", "ದೇವರೇ...ನನ್ನ ಮದುವೆಯಲ್ಲಿ ನನ್ನ ಯಾವುದೇ ಸ್ನೇಹಿತರು ಇಂತಹ ಕೆಲಸ ಮಾಡಲು ಬಿಡಬೇಡಿ", "ಅದೃಷ್ಟವಶಾತ್ ವಧುವಿಗೆ ಹೃದಯಾಘಾತವಾಗಲಿಲ್ಲ ನಾನಾಗಿದ್ದರೆ ಈ ಸ್ನೇಹಿತನ ಕಿವಿಗೆ ಬಾರಿಸುತ್ತಿದೆ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವು ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.