Relationship Story: ಅತಿಯಾಗಿ ನಂಬಿದ್ದ ಸಂಗಾತಿಗಳೇ ಸಿಡಿಸಿದ್ರು ಬ್ರೇಕಪ್ ಬಾಂಬ್

Published : Jan 28, 2023, 12:42 PM ISTUpdated : Jan 28, 2023, 12:43 PM IST
Relationship Story: ಅತಿಯಾಗಿ ನಂಬಿದ್ದ ಸಂಗಾತಿಗಳೇ ಸಿಡಿಸಿದ್ರು ಬ್ರೇಕಪ್ ಬಾಂಬ್

ಸಾರಾಂಶ

ಪ್ರಾಣಕ್ಕೆ ಪ್ರಾಣ ನೀಡುವಷ್ಟು ಪ್ರೀತಿಸುತ್ತಿದ್ದ ವ್ಯಕ್ತಿಯೇ ಮೋಸ ಮಾಡಿದ್ರೆ ಭೂಮಿ ಕುಸಿದು ಬಿದ್ದ ಅನುಭವವಾಗುತ್ತದೆ. ಅದ್ರಿಂದ ಚೇತರಿಸಿಕೊಳ್ಳೋದು ಸುಲಭವಲ್ಲ. ಹಾಗಂತ ಅದೊಂದೇ ಜೀವನವಲ್ಲ. ಹೊಸ ಬದಲಾವಣೆಗೆ ಶಾಂತವಾಗಿ ಹೊಂದಿಕೊಳ್ಳುವ ಅಗತ್ಯವಿರುತ್ತದೆ.  

ಪ್ರೀತಿ ಮನುಷ್ಯನ ಜೀವನವನ್ನು ಬದಲಿಸುತ್ತದೆ. ನಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾದಾಗ ನಾವು ಅನೇಕ ಬದಲಾವಣೆಗಳನ್ನು ಮಾಡಿಕೊಳ್ತೇವೆ. ಜೀವಕ್ಕೆ ಜೀವ ನೀಡುವಷ್ಟು ಅವರನ್ನು ಪ್ರೀತಿ ಮಾಡ್ತೇವೆ, ನಂಬುತ್ತೇವೆ. ಆದ್ರೆ ನನ್ನ ಸರ್ವಸ್ವ ಎಂದುಕೊಂಡಿದ್ದ ವ್ಯಕ್ತಿಯಿಂದ ಮೋಸವಾದ್ರೆ ಅದನ್ನು ಸಹಿಸೋದು ಬಹಳ ಕಷ್ಟ. ಪ್ರೀತಿಯಲ್ಲಿ ಮೋಸ ಹೋದ ವ್ಯಕ್ತಿ ಸಾಕಷ್ಟು ಕುಗ್ಗಿ ಹೋಗ್ತಾನೆ. ಜೀವನವೇ ಬೇಡ ಎನ್ನುವಷ್ಟು ನಿರಾಶೆಗೆ ಒಳಗಾಗ್ತಾನೆ. ಇದೇ ಕಾರಣಕ್ಕೆ ಕೆಲವರು ಆತ್ಮಹತ್ಯೆಗೆ ಶರಣಾದ್ರೆ ಮತ್ತೆ ಕೆಲವರು ಸೇಡು ತೀರಿಸಿಕೊಳ್ಳಲು ಹತ್ಯೆ ಮಾರ್ಗ ಹಿಡಿಯುತ್ತಾರೆ. ಮತ್ತೆ ಕೆಲವರು ಎಲ್ಲವನ್ನೂ ಶಾಂತವಾಗಿ ನಿಭಾಯಿಸುತ್ತಾರೆ. ಈ ನಾಲ್ಕು ಮಂದಿ ಕೂಡ ಪ್ರೀತಿಸಿದ ವ್ಯಕ್ತಿ ಮೋಸ ಮಾಡ್ದಾಗಾ ತಮ್ಮ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಹೇಳಿದ್ದಾರೆ.

ಮೋಸ (Cheating) ಮಾಡಿದ್ದು ತಿಳಿದ್ರೂ ಕೋಪ ಬರಲಿಲ್ಲ: ಸಾಮಾಜಿಕ ಜಾಲತಾಣದಲ್ಲಿ ತನ್ನ ಅನುಭವ ಹಂಚಿಕೊಂಡ ವ್ಯಕ್ತಿಯೊಬ್ಬ, ಪ್ರೀತಿ (Love) ಸಿದ ಹುಡುಗಿ ಮೋಸ ಮಾಡಿದ್ದು ತಿಳಿದ್ರೂ ಕೋಪ ಬರಲಿಲ್ಲ ಎಂದಿದ್ದಾನೆ. ಕಳೆದ 6 ವರ್ಷಗಳಿಂದ ಹುಡುಗಿಯೊಬ್ಬಳ ಜೊತೆ ಸಂಬಂಧದಲ್ಲಿದ್ದನಂತೆ. ಆದ್ರೆ ಎರಡು ವರ್ಷದಿಂದ ಸಂಬಂಧ ನಿಭಾಯಿಸುವುದು ಕಷ್ಟವಾಗಿತ್ತಂತೆ. ಸಂಬಂಧ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದನಂತೆ. ಒಂದು ದಿನ ಬೇರೆ ವ್ಯಕ್ತಿ ಜೊತೆ ತನ್ನ ಹುಡುಗಿ ಇರೋದನ್ನು ನೋಡಿದ್ನಂತೆ. ಆಕೆಯನ್ನು ನೋಡಿ ನನಗೆ ಕೋಪ ಬರಲಿಲ್ಲ. ನಾನು ಶಾಂತವಾಗಿಯೇ ಇದ್ದೆ. ಯಾಕೆಂದ್ರೆ ನನಗೂ ಆಕೆಯಿಂದ ಬಿಡುಗಡೆ ಅನಿವಾರ್ಯವಾಗಿತ್ತು ಎನ್ನುತ್ತಾನೆ ಆತ.

ಸಾರಿ (Sorry) ಹೇಳಿ ಹೊರಟು ಹೋದ್ಲು: ಇನ್ನೊಬ್ಬ ವ್ಯಕ್ತಿಯ ಪತ್ನಿ ಮದುವೆಯಾಗಿ 8 ವರ್ಷದ ನಂತ್ರ ಮೋಸ ಮಾಡಿದ್ದಾಳಂತೆ. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ವ್ಯಕ್ತಿ, ಆಕೆ ಕೂಡ ನನ್ನನ್ನು ಬಯಸ್ತಾಳೆ ಎಂದುಕೊಂಡಿದ್ದನಂತೆ. ಆದ್ರೆ ಆತನ ನಂಬಿಕೆ ಸುಳ್ಳಾಗಿತ್ತಂತೆ. ಆತನ ಪ್ರೀತಿಗೆ ದೊಡ್ಡ ಹೊಡೆತ ಬಿದ್ದಿತ್ತಂತೆ. ಪತ್ನಿ ಸುಂದರ ಸಹೋದ್ಯೋಗಿ ಜೊತೆ ರೋಮ್ಯಾನ್ಸ್ ಮಾಡುವಾಗ ಸಿಕ್ಕಿ ಬಿದ್ದಿದ್ದಳಂತೆ. ಇದನ್ನು ನೋಡಿದ ನನ್ನ ಹೃದಯ ಒಡೆದ ಹೋಗಿತ್ತು. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ನನ್ನ ಪತ್ನಿ ಸಾರಿ ಎಂಬ ಪದವನ್ನು ಹೇಳಿ ಹೋಗಿದ್ದಳು. ಅಲ್ಲಿಂದ ಇಲ್ಲಿಯವರೆಗೆ ಒಮ್ಮೆಯೂ ಭೇಟಿಯಾಗಿಲ್ಲ. 8 ವರ್ಷ ನಾವಿಬ್ಬರು ಕಳೆದ ಸುಂದರ ಕ್ಷಣಗಳು ನನ್ನ ಪತ್ನಿಗೆ ನೆನಪೇ ಆಗಿಲ್ಲ ಎನ್ನಿಸುತ್ತೆ ಎನ್ನುತ್ತಾನೆ ಈತ.

Parenting Tips: ಪೋಷಕರು ಮಾಡೋ ಇಂಥಾ ತಪ್ಪು ಮಕ್ಕಳ ಕಾನ್ಫಿಡೆನ್ಸ್ ಕಡಿಮೆ ಮಾಡುತ್ತೆ

ಒಂದೇ ವರ್ಷದಲ್ಲಿ ಗುಡ್ ಬೈ ಹೇಳಿದ ಗರ್ಲ್ ಫ್ರೆಂಡ್: ಒಂದು ವರ್ಷದ ಡೇಟಿಂಗ್ ನಂತ್ರ ಈತನ ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಮಾಡಿಕೊಳ್ಳೋದಾಗಿ ಹೇಳಿದ್ದಳಂತೆ. ಅದಕ್ಕೆ ಕಾರಣ, ಆಕೆ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಇದ್ರಿಂದ ವ್ಯಕ್ತಿಗೆ ಸಹಿಸಲಾಗದ ನೋವಾಗಿತ್ತಂತೆ. ಕೋಪವನ್ನು ನುಂಗಿಕೊಂಡ ವ್ಯಕ್ತಿ, ಗರ್ಲ್ ಫ್ರೆಂಡ್ ಪ್ರೀತಿ ಮಾಡ್ತಿರುವ ವ್ಯಕ್ತಿ ಯಾರೆಂದು ಪ್ರಶ್ನೆ ಮಾಡಿದ್ದನಂತೆ. ಆಕೆ ಹೇಳಿದ ವ್ಯಕ್ತಿ ಹೆಸರು ಕೇಳಿ ನಾನು ದಂಗಾಗಿದ್ದೆ. ನನಗಿಂತ ಒಳ್ಳೆ ವ್ಯಕ್ತಿಯನ್ನು ನೀನು ಪ್ರೀತಿಸು ಎಂದು ಸಲಹೆ ನೀಡಿದ್ದೆ. ಆದ್ರೆ ಆಕೆ ಪ್ರೀತಿಯಲ್ಲಿ ಕುರುಡಿಯಾಗಿದ್ದಳು ಎನ್ನುತ್ತಾನೆ ಈತ.

ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ

ಬೇರೆ ಹುಡುಗಿ ಜೊತೆ ಸಂಬಂಧ ಬೆಳೆಸಿದ ಬಾಯ್ ಫ್ರೆಂಡ್: ಸಂಬಂಧ ಶುರುವಾಗಿ ತುಂಬಾ ದಿನವಾಗಿರಲಿಲ್ಲ. ಆದ್ರೆ ಆಗ್ಲೇ ಆತ ಮೋಸ ಮಾಡಿದ್ದ. ಪಾರ್ಟಿಗೆ ಹೋಗಿದ್ದ ವೇಳೆ ಬೇರೆ ಹುಡುಗಿ ಜೊತೆ ಇರೋದನ್ನು ಈಕೆ ನೋಡಿದ್ದಳಂತೆ. ಒಂದು ಮಾತೂ ಆಡದೆ ಸುಮ್ಮನೆ ಬಂದೆ. ಅಲ್ಲಿಂದ ಇಲ್ಲಿಯವರೆಗೆ ಆತನ ಜೊತೆ ಮಾತನಾಡಿಲ್ಲ ಎನ್ನುತ್ತಾಳೆ ಈ ಹುಡುಗಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌