
ಇವತ್ತಿನ ಮದುವೆಗಳು ತುಂಬಾ ಗ್ರ್ಯಾಂಡ್ ಆಗಿ ಮತ್ತು ಫನ್‌ಫುಲ್ ಆಗಿ ನಡೆಯುತ್ತವೆ. ಕುಟುಂಬ ಸದಸ್ಯರು, ಸ್ನೇಹಿತರು ಮದುವೆಯ ಪ್ರತಿಯೊಂದು ಹಂತದಲ್ಲೂ ವಧು-ವರರನ್ನು ರೇಗಿಸುತ್ತಲೇ ಇರುತ್ತಾರೆ. ಪ್ರತಿ ಶಾಸ್ತ್ರದಲ್ಲೂ ಏನಾದರೂ ಕೀಟಲೆ ಮಾಡಲು ಪ್ರಯತ್ನಿಸುತ್ತಾರೆ. ಕಾಮಿಡಿ, ಸ್ಕಿಟ್, ಡ್ಯಾನ್ಸ್ ಎಂದು ಮನರಂಜಿಸುತ್ತಾರೆ. ಜೊತೆಗೆ ಶಾಸ್ತ್ರಗಳಿಗೆ ತೊಂದರೆಯಾಗುವುದರಿಂದ ಕಿರಿಕಿರಿಯನ್ನೂ ಉಂಟು ಮಾಡುತ್ತಾರೆ. ಮದುವೆ ಮಂಟಪದಲ್ಲೇ ಸ್ನೇಹಿತರು ಬಂದು ಪ್ರಾಂಕ್ ಮಾಡುವುದೂ ಉಂಟು. ಮದುಮಗನಿಗೆ ಪೊರಕೆ, ಟಾಯ್ಲೆಟ್ ಕ್ಲೀನರ್, ಮಾಪ್ ಮೊದಲಾದವನ್ನು ಗಿಫ್ಟ್ ಕೊಟ್ಟು ರೇಗಿಸುತ್ತಾರೆ. ಕೆಲವೊಮ್ಮೆ ವೇದಿಕೆಯಲ್ಲೇ ಪ್ರಪೋಸ್ ಮಾಡುವಂತೆ ವಧು-ವರರಿಗೆ ಒತ್ತಾಯಿಸುತ್ತಾರೆ. ಆದರೆ ಇದೆಲ್ಲವನ್ನೂ ಮೀರಿ ಈ ಮದುವೆ ಮಂಟಪದಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಗಿದೆ.
ಮೋಜಿನ ವಿಷಯಗಳು ಭಾರತೀಯ ಮದುವೆ (Marriage) ಮನೆಯಲ್ಲಿ ಸಾಮಾನ್ಯವಾಗಿದ್ದರೂ, ಇಲ್ಲಿ ಮಾತ್ರ ಅದು ಅತಿರೇಕಕ್ಕೆ ಹೋಗಿದೆ. ವೀಡಿಯೊದಲ್ಲಿ, ವರನ ಸ್ನೇಹಿತರು ಮದುವೆಯ ವೇದಿಕೆಯಲ್ಲಿ ವಧು (Bride)ವನ್ನು ಕೀಟಲೆ ಮಾಡುವುದನ್ನು ಕಾಣಬಹುದು. ಆದರೆ ಅದಕ್ಕೆ ವರನ (Groom) ಪ್ರತಿಕ್ರಿಯೆಯು ಇಂಟರ್ನೆಟ್ ಅನ್ನು ಬೆಚ್ಚಿಬೀಳಿಸಿದೆ.
ಮಗನ ಹೆಂಡ್ತಿ ಮೇಲೇನೆ ಲವ್ವಾಗೋಯ್ತು..28ರ ಸೊಸೆಯನ್ನು ಮದುವೆಯಾದ 70ರ ಮಾವ!
ಮದುವೆ ಮಂಟಪದಲ್ಲೇ ವಧುವಿನ ಕೆನ್ನೆ ಹಿಂಡಿದ ಸ್ನೇಹಿತರು
ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್ ನಡೆಯುತ್ತಿದೆ. ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ (Social media) ಪ್ರತಿದಿನ ಶೇರ್ ಮಾಡಲಾಗುತ್ತದೆ. ಅದರಲ್ಲಿ ಹೆಚ್ಚಿನವು ಮದುವೆ ಮನೆಯಲ್ಲಿ ನಡೆದ ತಮಾಷೆಯ ಘಟನೆಯ ಫೋಟೋಗಳು. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆಯ ವೇದಿಕೆಯಲ್ಲಿ ವರನನ್ನು ಕೆಣಕಲು ವಧುವಿನ ಕೆನ್ನೆ ಹಿಡಿದು ರೇಗಿಸಲು ಹೋದ ಸ್ನೇಹಿತನಿಗೆ (Friends) ವರ ಕಪಾಳಮೋಕ್ಷ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಧುವನ್ನು ಚುಡಾಯಿಸಿದ್ದಕ್ಕಾಗಿ ಯುವಕನಿಗೆ ಕಪಾಳಮೋಕ್ಷ ಮಾಡಿದ ವರ
ವಧುಗಳು ಮತ್ತು ವರನ ಸ್ನೇಹಿತರು ಮತ್ತು ಒಡಹುಟ್ಟಿದವರ ಕುಚೇಷ್ಟೆಗಳಿಲ್ಲದೆ ಮದುವೆಗಳು ಅಪೂರ್ಣವಾಗಿರುತ್ತವೆ. ಅಂಥಾ ಫನ್ ಇದ್ದಾಗಲೇ ಮದುವೆ ಮನೆ ಸಂಪೂರ್ಣ ಕಳೆಯಿಂದ ಕೂಡುತ್ತದೆ. ವಧು ಅಥವಾ ವರನ ಸ್ನೇಹಿತರು ತಮ್ಮ ಸ್ನೇಹಿತನ ಸಂಗಾತಿಗೆ ತೊಂದರೆ ಉಂಟುಮಾಡುವ ಅಂತಹ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಹೀಗಿದ್ದೂ, ಕೆಲವೊಮ್ಮೆ ಈ ಮೋಜಿನ ಕುಚೇಷ್ಟೆಗಳು ಮದುವೆಯ ಸಂಪೂರ್ಣ ಪರಿಸರವನ್ನು ಹಾಳುಮಾಡುವ ಘಟನೆಗಳಾಗಿ ಬದಲಾಗುತ್ತವೆ. ಸದ್ಯ ಇಂತಹದೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ, ವಧು ಮತ್ತು ವರರು ವೇದಿಕೆಯ ಮೇಲೆ ಕುಳಿತಿರುವುದನ್ನು ಕಾಣಬಹುದು, ಒಬ್ಬ ಹುಡುಗ ಹಿಂಬದಿಯಿಂದ ಬಂದು ವಧುವಿನ ಕೆನ್ನೆಯನ್ನು ಎಳೆಯಲು ಪ್ರಾರಂಭಿಸುತ್ತಾನೆ. ಯುವಕರ ಕೃತ್ಯದಿಂದ ವಧು ಸಂಪೂರ್ಣವಾಗಿ ಅಸಮಾಧಾನಗೊಂಡಿರುವುದನ್ನು ಕಾಣಬಹುದು. ನಂತರ ಇದನ್ನು ಕಂಡ ವರನು ತನ್ನ ವಧುವನ್ನು ಚುಡಾಯಿಸಿದ್ದಕ್ಕಾಗಿ ಯುವಕನನ್ನು ಎಳೆದೊಯ್ದು ಕಪಾಳಮೋಕ್ಷ ಮಾಡಿದ್ದಾನೆ.
ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ
ashiq.billota ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋ ಇಲ್ಲಿಯವರೆಗೆ 45K ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು, ವೀಡಿಯೊವನ್ನು ನೋಡಿದ ನಂತರ, ವರನ ಕ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ವರ ಏಕಾಏಕಿ ಹೀಗೆ ಮಾಡುವುದು ಬೇಡವಾಗಿತ್ತು ಎಂದಿದ್ದಾರೆ. ಒಬ್ಬ ಬಳಕೆದಾರನು, "Lol he deserved it" ಎಂದು ಹೇಳಿದರು. ಮತ್ತೊಬ್ಬರು 'ಅವರು ಹೊಡೆಯಬಾರದಿತ್ತು, ಮೊದಲು ಎಚ್ಚರಿಸಬೇಕಿತ್ತು' ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, 'ಇದು ನನಗೆ ಸ್ಕ್ರಿಪ್ಟ್‌ನಂತೆ ತೋರುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.