ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದ ಅಪ್ಪ ಮಗಳ ವೀಡಿಯೋ

By Anusha Kb  |  First Published Jun 27, 2023, 4:01 PM IST

ಇಲ್ಲೊಂದು ಕಡೆ ಅಪ್ಪ ಮಗಳ ವೀಡಿಯೋವೋಂದು ವೈರಲ್ ಆಗಿದ್ದು, ಎಲ್ಲರೂ ಈ ವೀಡಿಯೊ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.


ನವದೆಹಲಿ: ಮೊನ್ನೆ ಮೊನ್ನೆಯಷ್ಟೇ ಅಪ್ಪಂದಿರ ದಿನ ಕಳೆದು ಹೋಯ್ತು, ಅನೇಕರು ತಮಗೆ ತೋಚಿದಂತೆ ಈ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿದರು, ಕೆಲವರು ತಮ್ಮ ಜೊತೆಗಿಲ್ಲದ ಅಪ್ಪನಿಗಾಗಿ ಹಲುಬಿದರೆ ಮತ್ತೆ ಕೆಲವರು ಅವರ ಜೊತೆ ಕಳೆದ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು, ಮತ್ತೆ ಕೆಲವರು ಅಪ್ಪ ಹಾಗೂ ತಮ್ಮ ನಡುವಿನ ಬಾಂಧವ್ಯ ಎಂತಹದ್ದು ಎಂಬುದನ್ನು ಜಗತ್ತಿಗೆ ತಿಳಿಸಿದರು. ಕಾಣಿಗೆ ಕಾಣದಂತೆ ಕಾಳಜಿ ಮಾಡುವ ಅಪ್ಪನ ಪ್ರೀತಿ ಬಹಳಷ್ಟು ಸಲ ಕಡೆಗಣಿಸಲ್ಪಡುತ್ತದೆ. ಆದರೂ ಅಪ್ಪ ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಅಮ್ಮನಂತೆ ಮಕ್ಕಳನ್ನು ಪ್ರೀತಿ ಮಾಡುತ್ತಾನೆ. ಇನ್ನು ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ತುಸು ಹೆಚ್ಚೇ ಪ್ರೀತಿ, ಅಪ್ಪನಿಗೂ ಅಷ್ಟೇ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಹೆಚ್ಚು ಒಲವು ಕಾಳಜಿ. ಅದೇ ರೀತಿ ಇಲ್ಲೊಂದು ಕಡೆ ಅಪ್ಪ ಮಗಳ ವೀಡಿಯೋವೋಂದು ವೈರಲ್ ಆಗಿದ್ದು, ಎಲ್ಲರೂ ಈ ವೀಡಿಯೊ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ವೀಡಿಯೋದಲ್ಲಿ ಉಲ್ಲೇಖಿಸಿರುವಂತೆ ಕೆನಡಾದಲ್ಲಿ (Canada) ಕೆಲಸ ಮಾಡುತ್ತಾ ಶಿಕ್ಷಣ ಮುಂದುವರಿಸಿರುವ ಮಗಳನ್ನು ಭೇಟಿ ಮಾಡಲು ತಂದೆ ಹೋಗಿದ್ದಾರೆ. ಮಗಳಿಗೆ ಸರ್‌ಫ್ರೈಸ್ ನೀಡುವ ಸಲುವಾಗಿ ಆಕೆಗೆ ಮೊದಲೇ ತಿಳಿಸದೇ ಭಾರತದಿಂದ ಕೆನಡಾಗೆ ಬಂದ ತಂದೆಯನ್ನು ನೋಡಿ ಮಗಳು ಫುಲ್ ಅಚ್ಚರಿಗೀಡಾಗಿದ್ದು, ಭಾವುಕಳಾಗಿ ಅಪ್ಪನನ್ನು ತಬ್ಬಿ ಹಿಡಿದು ಅತ್ತಿದ್ದಾಳೆ. ಅಪ್ಪನೂ ಒಂದೂವರೆ ವರ್ಷಗಳ ನಂತರ ಮಗಳನ್ನು ಭೇಟಿಯಾಗಿದ್ದು, ಮಗಳ ಅಳು ಅಪ್ಪನಿಗೂ ಅಳು ತರಿಸಿದೆ.  ಬಹಳ ದಿನಗಳ ನಂತರ ಈ ಅಪ್ಪ ಮಗಳ ಭೇಟಿ ಕ್ಷಣದ ವೀಡಿಯೋ ನೋಡುಗರನ್ನು ಕೂಡ ಭಾವುಕವಾಗಿಸಿದೆ. 

Tap to resize

Latest Videos

ಅಪ್ಪನ ಪ್ರೀತಿ ಆಕಾಶವೇ ಮಿತಿ: ಪುಟ್ಟ ಮಗಳೊಂದಿಗೆ ವ್ಹೀಲ್‌ ಚೇರ್‌ನಲ್ಲೇ ನರ್ತಿಸಿದ ವಿಶೇಷಚೇತನ ಅಪ್ಪ

ಈ ವೀಡಿಯೋವನ್ನು ಪುತ್ರಿ ಶುತ್ವ ದೇಸಾಯಿ (Shrutva Desai) ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram) ಪೋಸ್ಟ್ ಮಾಡಿದ್ದು, ಭಾರತದಿಂದ ಕೆನಡಾಕ್ಕೆ ಭೇಟಿ ನೀಡುವ ಮೂಲಕ ನನ್ನ ತಂದೆ ನನಗೆ ಸರ್‌ಪ್ರೈಸ್ ನೀಡಿದಾಗ ನನ್ನ ಹೃದಯ ಕೆಲಕಾಲ ಬಡಿತವನ್ನೇ ನಿಲ್ಲಿಸಿತು. ನಾನು ಯಾವಾಗಲೂ ಪ್ರೀತಿಸುವ ಅತ್ಯಂತ ನಂಬಲಸಾಧ್ಯವಾದ ಕ್ಷಣ ಇದು. ನನ್ನ ತಂದೆ ಬಾಗಿಲಿನ ಮೂಲಕ ನಡೆದು ಒಳಗೆ ಬಂದಾಗ ನಾನು ಸಂಪೂರ್ಣ ಆಘಾತಕ್ಕೊಳಗಾದೆ ಜೊತೆಗೆ ಸಂಪೂರ್ಣವಾಗಿ ಭಾವುಕಳಾದೆ. ನನ್ನನ್ನು ನೋಡುವುದಕ್ಕಾಗಿ ಅವರು ಈ ರೀತಿ ಬರುವರೆಂಬುದನ್ನು ನಾನೂ ಊಹಿಸಿಯೂ ಇರಲಿಲ್ಲ, ನನಗಿದನ್ನು ನಂಬಲೂ ಸಾಧ್ಯವಾಗಲಿಲ್ಲ, ಇಂತಹ ತಂದೆಯನ್ನು ಹೊಂದಿದ ನಾನೇ ಅದೃಷ್ಟಶಾಲಿ ಎಂದು ನಾನು ಭಾವಿಸುವೆ. ಅಪ್ಪ ನಾನು ನಿನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ಈ ವೀಡಿಯೋ ಶೇರ್ ಮಾಡಿದ್ದಾರೆ. 

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ: ಹಳೆ ಫೋಟೋ ಪೋಸ್ಟ್ ಮಾಡಿ ಅಮ್ಮನ ನೆನೆದ ಅಪ್ಪ ಮಗಳು

ವೀಡಿಯೋದಲ್ಲಿ ಕಾಣಿಸುವಂತೆ ಮಗಳು ಕೆಲಸ ಮಾಡುವ ಸ್ಟೋರ್‌ಗೆ ಅಪ್ಪ ಮೆಲ್ಲ ಮೆಲ್ಲನೆ ಹೋಗಿ ಆಕೆಯ ಮುಂದೆ ನಿಲ್ಲುತ್ತಾರೆ. ಇದನ್ನು ಊಹಿಸದೇ ಇದ್ದ ಆಕೆ ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪಕ್ಕಕ್ಕೆ ಸರಿದು ನೆಲದ ಮೇಲೆ ಬಾಗಿ ಬಿಕ್ಕಳಿಸಲು ಶುರು ಮಾಡುತ್ತಾಳೆ. ಈ ವೇಳೆ ಅಪ್ಪ ಆಕೆಯನ್ನು ಮೇಲೆತ್ತಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಅಲ್ಲದೇ ಇಬ್ಬರೂ ಈ ವೇಳೆ ಬಿಕ್ಕಿಬಿಕ್ಕಿ ಅಳಲು ಶುರು ಮಾಡುತ್ತಾರೆ.  ಈ ಭಾವುಕ ವೀಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದು, ಈ ವೀಡಿಯೋ ನನ್ನ ಕಣ್ಣಲ್ಲೂ ನೀರು ತರಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಪ್ಪ ಮಗಳು ಸದಾ ಕಾಲ ಹೀಗೆ ಖುಷಿಯಾಗಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ನಾನು ನೋಡಿದ ಅತ್ಯಂತ ಸುಂದರ ದೃಶ್ಯ ಎಂದು ಮತ್ತೊಬ್ಬರು ಕಾಮಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಪ್ಪ ಮಗಳ ಈ ಬಾಂಧವ್ಯ ಎಲ್ಲರನ್ನು ಭಾವುಕರಾಗಿಸಿದೆ.

 
 
 
 
 
 
 
 
 
 
 
 
 
 
 

A post shared by Shrutva🤍 (@shrutva_desai)

 

click me!