ವಿವಾಹೇತರ ಸಂಬಂಧ ಅನ್ನೋದು ಇತ್ತೀಚಿಗೆ ತುಂಬಾ ಸಾಮಾನ್ಯವಾಗ್ತಿದೆ. ಮನೆಯಲ್ಲಿ ಮುತ್ತಿನಂಥಾ ಹೆಂಡ್ತಿ, ಪ್ರೀತಿಯಿಂದ ನೋಡಿಕೊಳ್ಳುವ ಗಂಡನಿದ್ದರೂ ಗಂಡು-ಹೆಣ್ಣು ಇಬ್ಬರು ಅನೈತಿಕ ಸಂಬಂಧದ ಮೊರೆ ಹೋಗುತ್ತಾರೆ. ಹಾಗೇ ಬಾಡಿಗೆದಾರನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನು ಇಲ್ಲೊಬ್ಬ ಹೆಂಡ್ತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ಗಂಡ-ಹೆಂಡತಿ ಪ್ರೀತಿ, ನಂಬಿಕೆಯಿಂದ ಅನುಸರಿಸಿಕೊಂಡು ಹೋದರಷ್ಟೇ ಅದು ಸುಂದರ ದಾಂಪತ್ಯ ಜೀವನವಾಗುತ್ತದೆ. ಇಲ್ಲದಿದ್ದರೆ ಇಬ್ಬರ ನಡುವೆ ವಿರಸ ಬಂದು ಮ್ಯಾರೀಡ್ ಲೈಫ್ ಡಿವೋರ್ಸ್‌ನಲ್ಲಿ ಕೊನೆಗೊಳ್ಳುತ್ತದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಗಂಡ-ಹೆಂಡತಿ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಹೆಂಡತಿಗೆ ಪರಪುರುಷನ ಮೇಲೆ ಒಲವಾದರೆ, ಗಂಡನಿಗೆ ಮತ್ತೊಬ್ಬಳ ಮೇಲೆಯೇ ಕಣ್ಣು. ಗಂಡ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗುವ ಕಾರಣ ಹೆಂಡತಿ ಪರಿಚಯದ ಪುರುಷರೊಂದಿಗೆ ಸಂಬಂಧವಿಟ್ಟುಕೊಳ್ಳುತ್ತಾಳೆ. ಹಾಗೇ ಬಾಡಿಗೆದಾರನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನು ಇಲ್ಲೊಬ್ಬ ಹೆಂಡ್ತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ಅಕ್ರಮ ಸಂಬಂಧವು (Extra marital affair) ಕುಟುಂಬವನ್ನು ನಾಶಪಡಿಸಬಹುದು. ಏಕೆಂದರೆ ಅದು ಪಾಲುದಾರರು ಅವರಿಗೆ ಮೋಸ ಮಾಡುವ ವ್ಯಕ್ತಿಗಳ ಹೃದಯವನ್ನು ಘಾಸಿಗೊಳಿಸುತ್ತದೆ. ಅವರ ಜೀವನ ಸಂಗಾತಿಯ (Partner) ವಿವಾಹೇತರ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಯಾರಿಗಾದರೂ ಆಘಾತವನ್ನುಂಟು ಮಾಡುವ ವಿಚಯವಾಗಿದೆ. ಆದರೆ, ಇಲ್ಲೊಬ್ಬ ಹೆಂಡ್ತಿ (Wife), ತನ್ನ ಜೀವನ ಸಂಗಾತಿಯನ್ನು ಇನ್ನೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ಗಂಡನ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್ ಲೈವ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ!
ಬಾಡಿಗೆಗಿದ್ದ ಯುವತಿ ಜೊತೆ ಬೆಡ್‌ರೂಮ್‌ನಲ್ಲಿದ್ದ ಗಂಡ
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಗಂಡ, ಇನ್ನೊಬ್ಬ ಮಹಿಳೆಯೊಂದಿಗೆ ಸಮಯ ಕಳೆಯುತ್ತಿದ್ದು, ಈ ಸಂದರ್ಭಲ್ಲಿ ರೂಮಿಗೆ ಬಂದ ಹೆಂಡತಿ ಅವನನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುತ್ತಾಳೆ. ವೀಡಿಯೋದಲ್ಲಿ ಕಂಡುಬರುವಂತೆ, ಮಹಿಳೆಯು ಇತರ ಹಲವರ ಜೊತೆಗೆ ಯಾವುದೇ ಸದ್ದು ಮಾಡದೆ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಕೋಣೆಯೊಂದರ ಕಡೆಗೆ ನಡೆಯುತ್ತಾಳೆ. ಇದ್ದಕ್ಕಿದ್ದಂತೆ, ಮಹಿಳೆಯೊಂದಿಗೆ ಬಂದ ಯುವಕರು ಬಾಗಿಲು ತೆರೆದು ಕೋಣೆಯೊಳಗೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಲಗುವ ಭಂಗಿಯಿಂದ ಹಾಸಿಗೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಇನ್ನೊಬ್ಬ ಹುಡುಗಿಯೂ ಅವನ ಹತ್ತಿರ ಮಲಗಿರುವುದನ್ನು ಕಾಣಬಹುದು.
ಘಟನೆಯನ್ನು ರೆಕಾರ್ಡ್ ಮಾಡಲು ಮಹಿಳೆ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿರುತ್ತಾಳೆ. ಹಾಸಿಗೆಯ ಮೇಲೆ ತನ್ನ ಪತಿಯನ್ನು ಕಂಡುಕೊಂಡ ನಂತರ, ಮಹಿಳೆ ತನ್ನ ತಾಳ್ಮೆ ಕಳೆದುಕೊಂಡು ಮೊಬೈಲ್‌ನ್ನು ಬೇರೆಯವರಿಗೆ ಹಸ್ತಾಂತರಿಸುತ್ತಾಳೆ. ನಂತರ ಅಲ್ಲಿನ ಯುವತಿಯನ್ನು ಥಳಿಸಲು ಆರಂಭಿಸುತ್ತಾಳೆ. ಅಲ್ಲಿದ್ದ ವ್ಯಕ್ತಿ, ಅಂದರೆ ಆಕೆಯ ಗಂಡ ಒಳಉಡುಪು ಧರಿಸಿಕೊಂಡೇ ಇನ್ನೊಂದು ಬದಿಗೆ ಹೋಗುವುದನ್ನು ನೋಡಬಹುದು.
ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಲವರ್ ಹುಡುಕಿಕೊಂಡು ಬಂದ ಮೇಕಪ್ ಆರ್ಟಿಸ್ಟ್ ದುರಂತ ಅಂತ್ಯ!
ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಗ್ರಹಚಾರ ಬಿಡಿಸಿದ ಹೆಂಡ್ತಿ
ಪುರುಷನು ತನ್ನ ಹೆಂಡತಿಯನ್ನು ಹುಡುಗಿಗೆ ಹೊಡೆಯದಂತೆ ವಿನಂತಿಸುವುದನ್ನು ಕಾಣಬಹುದು. ಆದರೆ, ಮಹಿಳೆ ಯಾರ ಮಾತನ್ನೂ ಕೇಳುದೆ ಯುವತಿಯ ಕೂದಲನ್ನು ಹಿಡಿದುಕೊಂಡು ಎಳೆದಾಡುತ್ತಾಳೆ. ಫೋನ್ ಮೂಲಕ ಯಾರಿಗೋ ಕರೆ ಮಾಡಲು ಕೇಳುತ್ತಿರುವಾಗ ಅವಳು ಹೊಡೆಯುವುದನ್ನು ಮುಂದುವರಿಸುತ್ತಾಳೆ.ಪುರುಷನು ಮತ್ತೆ ತನ್ನ ಹೆಂಡತಿಯನ್ನು ಅಡ್ಡಿಪಡಿಸಲು ಪ್ರಯತ್ನಿಸಿದಾಗ, ಸಿಟ್ಟಿಗೆದ್ದ ಮಹಿಳೆ ತನ್ನ ಬಾಯಿಯನ್ನು ಮುಚ್ಚಿಕೊಳ್ಳುವಂತೆ ಎಚ್ಚರಿಸುತ್ತಾಳೆ.
ವ್ಯಕ್ತಿ ತನ್ನ ಬಾಡಿಗೆದಾರನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ತಿಳಿದು ಪತ್ನಿ ಆತನನ್ನು ಹಿಡಿಯಲು ಪ್ಲಾನ್ ರೂಪಿಸಿದ್ದಳು. ಅದರಂತೆ ಗಂಡ ಹಾಗೂ ಯುವತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅರ್ಹಂತ್ ಶೆಲ್ಬಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟಿಜನ್‌ಗಳು ಕೂಡ ಕಾಮೆಂಟ್ ಬಾಕ್ಸ್‌ನಲ್ಲಿ ಆ ವ್ಯಕ್ತಿಯನ್ನು ಟೀಕಿಸಿದ್ದಾರೆ. ಕೆಲವರು ಕಾಮೆಂಟ್‌ನಲ್ಲಿ, ಮಹಿಳೆ ಕೇವಲ ಯುವತಿಗಷ್ಟೇ ಹೊಡೆಯುವುದಲ್ಲ. ಗಂಡನನ್ನು ಸಹ ಥಳಿಸಬೇಕು. ಆದರೆ ಆಕೆ ಒಮ್ಮೆಯೂ ಹಾಗೆ ಮಾಡಲ್ಲಿಲ್ಲ ಎಂದು ಹೇಳಿದರು.