ಟ್ರಾಫಿಕ್‌ನಲ್ಲಿ ಸೆರೆ ಆಯ್ತು ಅಮ್ಮನ ಅಮೋಘ ಪ್ರೀತಿ: ವೈರಲ್ ವೀಡಿಯೋ

By Anusha Kb  |  First Published Jun 27, 2023, 1:45 PM IST

ಅಮ್ಮನ ಪ್ರೀತಿಗೆ ಮಿತಿ ಎಂಬುದಿಲ್ಲ, ಆಕೆಗೆ ಆಕೆಯೇ ಸರಿಸಾಟಿ, ಆಕೆಯ ಜಾಗವನ್ನು ಈ ಜಗದಲ್ಲಿ ಯಾರೂ ಭರ್ತಿ ಮಾಡಲಾಗುವುದಿಲ್ಲ, ಅದಕ್ಕೆ ಅಮ್ಮನನ್ನು ದೇವರಿಗೆ ಹೋಲಿಸಲಾಗಿದೆ. ಅದೇ ರೀತಿ ಈಗ ಅಮ್ಮ ಮಗನ ಮೇಲೆ ಪ್ರೀತಿ ತೋರುವ ವೀಡಿಯೋವೊಂದು ವೈರಲ್ ಆಗಿದೆ.


ಅಮ್ಮನ ಪ್ರೀತಿಗೆ ಮಿತಿ ಎಂಬುದಿಲ್ಲ, ಆಕೆಗೆ ಆಕೆಯೇ ಸರಿಸಾಟಿ, ಆಕೆಯ ಜಾಗವನ್ನು ಈ ಜಗದಲ್ಲಿ ಯಾರೂ ಭರ್ತಿ ಮಾಡಲಾಗುವುದಿಲ್ಲ, ತನಗೇನಾದರೂ ಸಹಿಸುವ ಅಮ್ಮ, ತನ್ನ ಕರುಳ ಕುಡಿಗೆ ತುಸುವೇ ನೋವಾದರು ಸಹಿಸಲಾರಳು. ಕಂದನಿಗೇನಾದರು ಆದರೆ ಕಡಲು ಬೋರ್ಗರೆವಂತೆ ಅಳುವ ಅಮ್ಮ, ಮಕ್ಕಳ ಖುಷಿಯಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ಅಮ್ಮನ ಪ್ರೀತಿಗೆ ಸಂಬಂಧಿಸಿದಂತೆ ಸಾಕಷ್ಟು ವೀಡಿಯೋಗಳು ವೈರಲ್ ಆಗಿವೆ. ಸಾಕಷ್ಟು ನಿದರ್ಶನಗಳು ನಡೆದು ಹೋಗಿವೆ. ಮುಂದೆಯೂ ನಡೆಯುತ್ತಲೇ ಇರುತ್ತವೆ. ಅಮ್ಮನ ಪ್ರೀತಿ ಅಂತದ್ದು, ಅದಕ್ಕೆ ಅಮ್ಮನನ್ನು ದೇವರಿಗೆ ಹೋಲಿಸಲಾಗಿದೆ. ಅದೇ ರೀತಿ ಈಗ ಅಮ್ಮ ಮಗನ ಮೇಲೆ ಪ್ರೀತಿ ತೋರುವ ವೀಡಿಯೋವೊಂದು ವೈರಲ್ ಆಗಿದೆ.

ಈ ವೀಡಿಯೋದಲ್ಲಿ ಕಾಣುವಂತೆ ಅಮ್ಮ ಮಗ ಬೈಕ್‌ನಲ್ಲಿ ಹೋಗುತ್ತಿದ್ದು, ಟ್ರಾಫಿಕ್‌ನಲ್ಲಿ ಬೈಕ್ ನಿಂತಿದೆ. ಸಣ್ಣಗೆ ಮಳೆ ಸುರಿಯುತ್ತಿದೆ. ಅಮ್ಮ ಮಗ ಇಬ್ಬರ ಬಳಿಯೂ ಕೊಡೆಯಾಗಲಿ ರೈನ್‌ಕೋಟ್ ಆಗಲಿ ಇಲ್ಲ. ಈ ವೇಳೆ ಅಮ್ಮ ತಾನು ಒದ್ದೆಯಾಗುತ್ತಿದ್ದರೂ ಮಗ ಒದ್ದೆಯಾಗಬಾರದು ಎಂದು ಆತನ ತಲೆಗೆ ಅಡ್ಡಲಾಗಿ ಪ್ಲಾಸ್ಟಿಕ್ ಕವರ್‌ ಒಂದನ್ನು ಹಿಡಿದಿದ್ದಾಳೆ. ಈ ದೃಶ್ಯವನ್ನು ಅದೇ ಟ್ರಾಫಿಕ್‌ನಲ್ಲಿ ಸಿಲುಕಿದ ಸಹ ಸವಾರರು ಯಾರೋ ರೆಕಾರ್ಡ್ ಮಾಡಿಕೊಂಡಿದ್ದಾರೆ. wils_pat (William Patrick) ಎಂಬುವವರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  .ಯಾಕೆ ಅವಳ ಜಾಗವನ್ನು ಇನ್ನೊಬ್ಬರು ತುಂಬಲಾಗುವುದಿಲ್ಲ ಎಂದು ವೀಡಿಯೋದ ಮೇಲೆ ಬರೆಯಲಾಗಿದೆ. ತಮಿಳಿನಲ್ಲಿ ಅಮ್ಮ ಎಂದು ಬರೆದು ಲವ್ ಇಮೋಜಿ ಹಾಕಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. 

Tap to resize

Latest Videos

ಗೋವಾದಲ್ಲಿ ಶುರುವಾದ ಲವ್ ಇಲ್ಲಿಯವರೆಗೆ: ಅಪ್ಪ-ಅಮ್ಮನ ಪ್ರೀತಿ ವಿಚಾರ ಬಿಚ್ಚಿಟ್ಟು ರಾಧಿಕಾ ಪಂಡಿತ್ ವಿಶ್

23 ಮಿಲಿಯನ್ ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಒಬ್ಬರು ನಿಮ್ಮನ್ನು ಯಾವುದೇ ಶರತ್ತುಗಳಿಲ್ಲದೇ ಪ್ರೀತಿಸುವ ಒಬ್ಬಳೇ ಒಬ್ಬಳು ಮಹಿಳೆ ಅಮ್ಮ ಎಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಕಷ್ಟದ ಕ್ಷಣದಲ್ಲಿ ಜೊತೆಯಾಗಿ ಇರುವಾಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ನನ್ನ ಅಮ್ಮನೂ ಒಮ್ಮೆ ಮಾಡಿದ್ದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತನಗೆ ಕಷ್ಟವಾದರೂ ತೊಂದರೆ ಇಲ್ಲ, ಮಗನಿಗೆ ಏನು ಆಗಬಾರದು ಎನ್ನುವ ಮಗು ಮನಸ್ಸು ಅಮ್ಮಂದಿರದ್ದು, ಈ ದೃಶ್ಯ ನೋಡಿದರೆ ಶಾಲೆಬಿಟ್ಟು ಮಳೆಗೆ ಸಂಪೂರ್ಣವಾಗಿ ಒದ್ದೆಯಾಗಿ ಬರುತ್ತಿದ್ದ ನಮ್ಮನ್ನು ಬಾಗಿಲಲ್ಲೇ ನಿಂತು ಕಾಯುವ ಅಮ್ಮ, ಟವೆಲ್ ತಂದು ತಲೆ ಒರೆಸುವ ಅಮ್ಮ ನೆನಪಾದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಾವಿನ ಕದ ತಟ್ಟುತ್ತಿದ್ದ ಮಗುವನ್ನು ಕಾಪಾಡಿದ ಅಮ್ಮ!

ವೀಡಿಯೋ ಇಲ್ಲಿ ವೀಕ್ಷಿಸಿ

 
 
 
 
 
 
 
 
 
 
 
 
 
 
 

A post shared by William Patrick (@wils_pat)

 

click me!