ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

By Vinutha Perla  |  First Published Jul 18, 2023, 1:15 PM IST

ಮದ್ವೆ ಮನೆಯಲ್ಲಿ ಗಲಾಟೆ ನಡೆಯೋದು ಇತ್ತೀಚಿಗೆ ಕಾಮನ್ ಆಗಿದೆ. ಹಾಗೆಯೇ ಇಲ್ಲೊಬ್ಬ ವಧು ಮಂಟಪದಲ್ಲಿ ಅದ್ಯಾವ ರೀತಿ ಮಂಗಾಟ ಮಾಡಿದ್ದಾಳೆ ನೋಡಿ. ಮೈ ಮೇಲೆ ದೆವ್ವ ಬಂದವರಂತೆ ವರ್ತಿಸಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಭಾರತೀಯ ಮದುವೆ ಅಂದ್ರೆ ಹೆಚ್ಚಿನವು ಆರೇಂಜ್ಡ್‌ ಮ್ಯಾರೇಜ್ ಆಗಿರುತ್ತವೆ. ಹೆತ್ತವರು ಹುಡುಗ ನೋಡ್ತಾರೆ, ಹುಡುಗಿಯರು ಹೂಂಗುಟ್ಟಿ ಮದ್ವೆಯಾಗೋದು ಅಷ್ಟೆ. ನೋಡಿದ ಹುಡುಗ-ಹುಡುಗಿಯ ಜೊತೆ ಮದುವೆ ನಡೆಯುತ್ತದೆ. ಹುಡುಗನ, ಹುಡುಗಿಯ ಮನೆಯ ವಿವರ, ವಿದ್ಯಾಭ್ಯಾಸದ ಬಗ್ಗೆ ಪೋಷಕರೇ ಕೇಳುತ್ತಾರೆ. ಸ್ವತಃ ಹುಡುಗ-ಹುಡುಗಿ ಮಾತನಾಡಲು ಅವಕಾಶವೇ ಇಲ್ಲ. ಅವರ ಇಷ್ಟಕಷ್ಟದ ಬಗ್ಗೆಯೂ ಕೇಳುವುದಿಲ್ಲ. ಸುಮ್ಮನೆ ಮದುವೆ ಫಿಕ್ಸ್ ಮಾಡಿ ಬಿಡುತ್ತಾರೆ ಅಷ್ಟೆ. ಇವತ್ತಿಗೂ ಹೆಣ್ಣುಮಕ್ಕಳ ಒತ್ತಾಯದ ಮದುವೆ ಅದೆಷ್ಟೋ ಕಡೆ ನಡೆಯುತ್ತದೆ.  ಹುಡುಗ-ಹುಡುಗಿಯಲ್ಲಿ ಅಭಿಪ್ರಾಯ ಕೇಳದ ಕಾರಣ ಬಹುತೇಕ ಮದುವೆಗಳು ಮಂಟಪದಲ್ಲೇ ಮುರಿದು ಬೀಳುತ್ತವೆ. 

ಕಾಲ ಅದೆಷ್ಟೇ ಬದಲಾದರೂ ಮದುವೆ ವಿಚಾರದಲ್ಲಿ ಭಾರತೀಯ ಪೋಷಕರ (Parents) ಮನಸ್ಥಿತಿಯಂತೂ ಬದಲಾಗಿಲ್ಲ. ಹುಡುಗಿಯ ಒಪ್ಪಿಗೆ ಕೇಳದೆ ಮದ್ವೆ ಫಿಕ್ಸ್ ಮಾಡಿಬಿಡುತ್ತಾರೆ. ಹುಡುಗಿ ನಾನಿನ್ನೂ ಕಲೀಬೇಕು, ಜಾಬ್‌ಗೆ ಹೋಗಬೇಕು ಎಂದೆಲ್ಲಾ ಹೇಳಿದರೂ ಆಕೆಯ ಆಸೆಗಳನ್ನೆಲ್ಲಾ ಕಡೆಗಣಿಸಿ ಮದುವೆಗೆ (Marriage) ಸಿದ್ಧತೆ ಮಾಡಿಕೊಳ್ಳುತ್ತಾರೆ. ಒಲ್ಲದ ಮದುವೆಯಿಂದ ಪಾರಾಗಲು ಹುಡುಗಿ ಕೊನೆ ಕ್ಷಣದಲ್ಲಿ ಓಡಿಹೋಗುವುದೋ, ಮದುವೆಯಾಗಲ್ಲ ಅಂತ ಗಲಾಟೆ ಮಾಡುವುದೋ ನಡೆಯುತ್ತದೆ. ಇನ್ನು ಕೆಲವೊಬ್ಬರು ಆತ್ಮಹತ್ಯೆ ಸಹ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಮದ್ವೆ ಆ ಹುಡುಗಿಗೆ ಇಷ್ಟವಿಲ್ಲ ಅನ್ಸುತ್ತೆ. ಮಂಟಪದಲ್ಲೇ ಅದ್ಹೇಗೆ ರಂಪ ಮಾಡ್ಕೊಂಡಿದ್ದಾಳೆ ನೋಡಿ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

Tap to resize

Latest Videos

ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುತ್ತೇನೆಂದ ವಧು ಪರಾರಿ, ಮಂಟಪದಲ್ಲೇ ಕಾದು ಸುಸ್ತಾದ ವರ!

ವರನನ್ನು ಮಂಟಪದಿಂದ ಕೆಳಗೆ ತಳ್ಳಿ ಮುಖಕ್ಕೆ ಉಗಿದ ವಧು
ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಶಾಸ್ತ್ರಗಳು  ನಡೆಯುತ್ತಿರುವಾಗ ವಧು, ವರನಿಗೆ ಸಿಹಿ ತಿನ್ನಿಸುವುದ್ನು ನೋಡಬಹುದು. ನಂತರ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ವಧು(Bride) ಅದನ್ನು ತಿನ್ನುವುದಿಲ್ಲ, ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ.  ಆಗ ವರ ಆಕೆಗೆ ಬಲವಂತವಾಗಿ ಸಿಹಿ ತಿನ್ನಿಸಿ ಬಾಯಿಗೆ ಮೆತ್ತುತ್ತಾನೆ. ಇದರಿಂದ ಸಿಟ್ಟಿಗೆದ್ದ ವಧು ತಕ್ಷಣ ಆತನನ್ನು ತಳ್ಳುತ್ತಾಳೆ. ಮಂಟಪದಿಂದ ಕೆಳಕೆ ತಳ್ಳಿ ಬಿಡುತ್ತಾಳೆ. ಈ ಸಂದರ್ಭದಲ್ಲಿ ಮನೆ ಮಂದಿ ಆಕೆಯ ಸಮಾಧಾನ ಮಾಡಲು ಯತ್ನಿಸುತ್ತಾರೆ.

ಆದರೆ ವಧು ಯಾವುದಕ್ಕೂ ಜಗ್ಗದೆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯಲು ಶುರು ಮಾಡುತ್ತಾಳೆ. ಆತನ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಾಳೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಝಾಡಿಸಿ ಒದೆಯುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ವಧುವನ್ನು ತಡೆಯಲು ಯತ್ನಿಸುತ್ತಾಳೆ. ಆದರೆ ವಧು ಸುಮ್ಮನಾಗುವುದಿಲ್ಲ. ಮಂಟಪ ಸಮೀಪವಿದ್ದ ಹಿರಿಯರಿಗೂ ಹೊಡೆಯುತ್ತಾಳೆ. ನಂತರ ಮನೆ ಮಂದಿ ವರನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಬಳಿಕ ವಧು ಮಂಟಪದಿಂದ ಇಳಿದು ಅಳುತ್ತಾ ಹೋಗುವುದನ್ನು ನೋಡಬಹುದು. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!

ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರಿಂದ ನಾನಾ ರೀತಿಯಲ್ಲಿ ಕಾಮೆಂಟ್‌
ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಆರೇಂಜ್ಡ್‌ ಮ್ಯಾರೇಜ್ ತುಂಬಾ ಭಯಾನಕವಾಗಿದೆ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಇಂಥಾ ವಿಚಿತ್ರ ಜನರು ಎಲ್ಲೆಲ್ಲಿಂದ ಬರುತ್ತಾರೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ವಧುವಿಗೆ ಮೊದಲಿನಿಂದಲೂ ಮದುವೆ ಇಷ್ಟವಿದ್ದಂತಿಲ್ಲ. ಸ್ವೀಟ್ ವಿಚಾರಕ್ಕೆ ಗಲಾಟೆ ಮಾಡಿರುವುದು ಜಸ್ಟ್ ನೆಪವಾಗಿದೆ' ಎಂದಿದ್ದಾರೆ. ಮತ್ತೆ ಕೆಲವರು, 'ಗಾಬರಿಯಾಗಬೇಡಿ, ಇದು ಸ್ಕ್ರಿಪ್ಟೆಡ್ ವಿಡಿಯೋ' ಎಂದು ಹೇಳಿದ್ದಾರೆ. 

click me!