Latest Videos

ಸಹಬಾಳ್ವೆ: ಪ್ರವಾಹದ ವೇಳೆ ಇಲಿ, ಕಪ್ಪೆಗಳಿಗೆ ತನ್ನ ದೇಹದ ಮೇಲೆಯೇ ಆಶ್ರಯ ನೀಡಿದ ಹಾವು

By Anusha KbFirst Published Jul 18, 2023, 11:53 AM IST
Highlights

ಪ್ರವಾಹದಲ್ಲಿ ಸಿಲುಕಿದ ಕಪ್ಪೆ ಇಲಿಗೆ ಹಾವೊಂದು ತನ್ನ ದೇಹದ ಮೇಲೆಯೇ ಆಶ್ರಯ ನೀಡಿದ ಅಪರೂಪದ ದೃಶ್ಯವೊಂದು ಈಗ ಮತ್ತೆ ವೈರಲ್ ಆಗುತ್ತಿದೆ.

ದೇಶದ ಹಲವು ಭಾಗಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಜೀವನ ಹದಗೆಟ್ಟಿದ್ದು ಪ್ರವಾಹ ಪರಿಸ್ಥಿತಿಯಿಂದ ಹೊರಬರಲು ಜನ ಕಷ್ಟಪಡುತ್ತಿದ್ದಾರೆ. ಪ್ರಾಣಿ, ಪಕ್ಷಿ, ಹಕ್ಕಿಗಳು ಕೂಡ ಪ್ರವಾಹಕ್ಕೆ ಸಿಲುಕಿದ್ದು, ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಹೀಗಿರುವಾಗ ಪ್ರವಾಹದಲ್ಲಿ ಸಿಲುಕಿದ ಕಪ್ಪೆ ಇಲಿಗೆ ಹಾವೊಂದು ತನ್ನ ದೇಹದ ಮೇಲೆಯೇ ಆಶ್ರಯ ನೀಡಿದ ಅಪರೂಪದ ದೃಶ್ಯವೊಂದು ಈಗ ಮತ್ತೆ ವೈರಲ್ ಆಗುತ್ತಿದೆ. ಹಳೆ ವೀಡಿಯೋ ಇದಾಗಿದ್ದು ಮಳೆ ಪ್ರವಾಹದ ಮಧ್ಯೆ ಈ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ.

ವೀಡಿಯೋದಲ್ಲೇನಿದೆ?

ಮಳೆಯಿಂದಾಗಿ ರಿಂಗೊಂದರಲ್ಲಿ ನೀರು ತುಂಬಿದ್ದು, ಈ ರಿಂಗ್ ಒಳಗೆ ಹಾವು, ಎರಡು ಇಲಿ, ಎರಡು ಕಪ್ಪೆ ಹಾಗೂ ಕೀಟವೊಂದಿದ್ದು, ಇವೆಲ್ಲವೂ ಹಾವಿನ ಮೇಲೆ ಆಶ್ರಯ ಪಡೆದಿದ್ದು ಹಾವು ಕೂಡ ಇವು ತನ್ನ ಪಾಲಿನ ಆಹಾರವಾಗಿದ್ದರೂ ಅವುಗಳನ್ನು ಬೇಟೆಯಾಡಲು ಮುಂದಾಗದೇ ಸುಮ್ಮನಾಗಿದೆ. ಮಳೆಯಿಂದಾಗಿ ಕೆಸರು ನೀರು ತುಂಬಿದ ರಿಂಗ್‌ನೊಳಗೆ ದೊಡ್ಡ ಗಾತ್ರದ ಹಾವಿದೆ. ಹಾವಿನ ಮೇಲೆ ಎರಡು ಇಲ್ಲಿಗಳು ಹಾಗೂ ಕಪ್ಪೆ ಅತ್ತಿತ್ತ ಓಡಾಡುತ್ತಿವೆ. ಹಾವು ಕೂಡ ತನ್ನ ಮೇಲೆ ಇವುಗಳು ಹರಿದಾಡುತ್ತಿದ್ದರೂ ಸುಮ್ಮನೇ ತಾಳ್ಮೆಯಿಂದ ನೋಡುತ್ತ ತನ್ನ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದೆ. 

ಎಂಥಾ ಸೋಜಿಗವಿದು... ಹಾವಿನ ಮೇಲೆ ಕಪ್ಪೆಯ ಜಾರುಬಂಡಿ ಆಟ: ವೈರಲ್ ವಿಡಿಯೋ

S A R A H J A N E ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ (Instagram) ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋ ಪೋಸ್ಟ್ ಮಾಡಿ ಅವರು ಹೀಗೆ ಬರೆದಿದ್ದಾರೆ. 'ನೀವಿದನ್ನು ನಂಬುತ್ತೀರಾ? ಹಾವು ತನ್ನ ಪುಟ್ಟ ಸ್ನೇಹಿತರಿಗೆ ಸಹಾಯ ಮಾಡುತ್ತಿದೆ. ಕತೆಯ ನೀತಿ: ನಾವೆಲ್ಲರೂ ಬದುಕುವುದಕ್ಕಾಗಿ ಹೋರಾಡುತ್ತೇವೆ, ಆದರೆ ನಾವೆಲ್ಲರೂ ನಮ್ಮ ಜೀವನವನ್ನು ಗೌರವಿಸುತ್ತೇವೆ, ಮತ್ತು ಜೀವ ರಕ್ಷಿಸಲು ಕೆಲಸ ಮಾಡುತ್ತೇವೆ. ಎಲ್ಲಾ ಪ್ರಾಣಿಗಳು ಬದುಕಲು ಸ್ವತಂತ್ರವಾಗಿರಲು ಸಂತೋಷವಾಗಿರಲು ಬಯಸುತ್ತವೆ. ಅವುಗಳು ಬಳಲುವುದಕ್ಕೆ ಕಾರಣವಾಗಬೇಡಿ' ಎಂದು ಬರೆಯಲಾಗಿದೆ. 

ಇತ್ತ ಹಾವಿನ ಮೇಲೆ ಇರುವ ಕಪ್ಪೆಯೊಂದರ ಮೇಲೆ ಕೀಟವೊಂದು ಆಶ್ರಯ ಪಡೆದಿದೆ. ಹಾವನ್ನು ಸೂಕ್ಷ್ಮವಾಗಿ ಗಮನಿಸಿದರೆ  ಇಲಿ ಕಪ್ಪೆಗಳು ಮಾತ್ರವಲ್ಲದೇ ಸಣ್ಣ ಕೀಟಗಳು ಕೂಡ ಹಾವಿನ ಮೇಲೆ ಆಶ್ರಯ ಪಡೆದಿವೆ. ತನ್ನ ಮೇಲೆ ಆಶ್ರಯ ಪಡೆದಿರುವ ಎಲ್ಲವೂ ಹಾವಿನ ಪಾಲಿಗೆ ಆಹಾರವಾಗುವಂತಹ ಜೀವಿಗಳೇ. ಆದರೂ ಹಾವು ಆಶ್ರಯ ಅರಸಿ ಬಂದವರ ಮೇಲೆ ದಾಳಿ ಮಾಡದೇ ಆಶ್ರಯ ನೀಡಿ ಔದಾರ್ಯ ಮೆರೆದಿರುವುದು ನೋಡಿದರೆ ಬಾಯಿ ಬರದ ಈ ಪ್ರಾಣಿಗಳ ಮುಂದೆ ಬುದ್ಧಿವಂತನೆನಿಸಿದ ಮಾನವ ಯಾವ ಲೆಕ್ಕ ಎಂದು ಕೇಳುವಂತೆ ಮಾಡುತಿದೆ.

ಹಗ್ಗ ಅಲ್ಲ ಹಾವು ಹಿಡ್ಕೊಂಡು ಮನೆಗೆ ಬಂದ ಪೋರ: ವೈರಲ್ ವೀಡಿಯೋ : ಮನೆಯಲ್ಲಿದ್ದವರು ಜೂಟ್

ವೀಡಿಯೋ ನೋಡಿದ ನೆಟ್ಟಿಗರ ಕಾಮೆಂಟ್

ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಇದಕ್ಕೆ ತರಹೇವಾರಿ ಕಾಮೆಂಟ್ ಮಾಡಿದ್ದು, ಈ ಸ್ನೇಕ್ ಬ್ರದರ್ ಮುಂದಿನ ಮೂರು ಹೊತ್ತಿಗಾಗುವಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವುಗಳು ನ್ಯಾಷನಲ್ ಜಿಯಾಗ್ರಾಫಿಕ್ ಶೂಟ್‌ ಮಧ್ಯೆ ಇವು ಬ್ರೇಕ್ ತೆಗೆದುಕೊಂಡಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರವಾಹ ನೋಡಿದ ಹಾವು ಆಹಾರ ಸಂಗ್ರಹಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

click me!