Real Story : ಸಾಯಬೇಕು ಅಂದುಕೊಂಡಿದ್ದೆ, – ಅರೇಂಜ್ಡ್ ಮ್ಯಾರೇಜ್ ಹುಡುಗರ ಕಥೆ ವ್ಯಥೆ

By Suvarna News  |  First Published May 16, 2023, 2:07 PM IST

ಪ್ರೀತಿಸಿ ಮದುವೆಯಾಗಿರಲಿ ಇಲ್ಲ ಕುಟುಂಬಸ್ಥರು ತೋರಿಸಿದ ವ್ಯಕ್ತಿಯನ್ನು ಕೈ ಹಿಡಿದಿರಲಿ ಎಲ್ಲ ಮದುವೆಯಲ್ಲೂ ಸಮಸ್ಯೆಗಳು ಬರ್ತಿರುತ್ತವೆ. ಅರ್ಥ ಮಾಡಿಕೊಂಡು ನಡೆದ್ರೆ ಬಾಳು ಬೆಳಗುತ್ತೆ. ಕೆಲವೊಂದು ಜೋಡಿಗೆ ಹೊಂದಾಣಿಕೆ ಸಾಧ್ಯವಾಗದ ಮಾತು.  
 


ಅಪರಿಚಿತ ವ್ಯಕ್ತಿಯನ್ನು ಮದುವೆಯಾಗೋದು ಜೀವನದಲ್ಲಿ ಅತ್ಯಂತ ಧೈರ್ಯದ ಕೆಲಸ . ಮದುವೆ ನಂತ್ರ ಇಬ್ಬರು ಅಪರಿಚಿತರು ಒಟ್ಟಿಗೆ ಜೀವನ ನಡೆಸುವ ವೇಳೆ ಅನೇಕ ಸವಾಲುಗಳು ಎದುರಾಗುತ್ತವೆ. ಇಬ್ಬರ ಮಧ್ಯೆ ಹೊಂದಾಣಿಕೆಯಾದ್ರೆ ಬಾಳು ಬಂಗಾರವಾಗುತ್ತದೆ. ಸುಖಕರ ದಾಂಪತ್ಯ ಜೀವನ ಮುಂದುವರೆಯುತ್ತದೆ. ಅದೇ ಇಬ್ಬರ ಮಧ್ಯೆ ಹೊಂದಾಣಿಕೆ ತಪ್ಪಿದಾಗ ದಾಂಪತ್ಯದಲ್ಲಿ ಅಪಸ್ವರ ಕೇಳಿ ಬರುತ್ತದೆ. ಹಿಂದೆ, ಕುಟುಂಬ ಹಾಗೂ ಸಮಾಜಕ್ಕೆ ಹೆದರಿ ದಂಪತಿ ಹೊಂದಿಕೊಂಡು ಜೀವನ ನಡೆಸುವ ಪ್ರಯತ್ನ ನಡೆಸುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ವಿಚ್ಛೇದನ ಸಿಗೋದು ಸುಲಭವಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಚಿಕ್ಕಪುಟ್ಟ ವಿಷ್ಯಕ್ಕೂ ಈಗ ದಂಪತಿ ಬೇರೆಯಾಗೋದು ವಿಶೇಷವಲ್ಲ. ಲವ್ ಮ್ಯಾರೇಜ್ ನಲ್ಲಿ ಸಂಗಾತಿಗೆ ಪರಸ್ಪರ ಪರಿಚಯವಿರುತ್ತದೆ. ಇಷ್ಟಕಷ್ಟಗಳ ಬಗ್ಗೆ ಮಾಹಿತಿ ಇರುತ್ತದೆ. ಆದ್ರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ಹಾಗಲ್ಲ. ಮದುವೆಗೆ ಮುನ್ನ ಮಾತುಕತೆ ಅತ್ಯಲ್ಪವೇ ಆಗಿರುತ್ತೆ. ಕೆಲವರ ಮದುವೆ ಆತುರಾತುರದಲ್ಲಿ ನಡೆಯುವ ಕಾರಣ, ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಅತಿ ಕಡಿಮೆ ಸಮಯ ಸಿಗುತ್ತದೆ.

ಅರೇಂಜ್ಡ್ ಮ್ಯಾರೇಜ್ (Arranged Marriage)ಗೆ ಒಳಗಾದವರು ಸುಖವಾಗಿರೋದಿಲ್ಲ ಎಂದಲ್ಲ. ಅವರಿಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಪ್ರೀತಿ (Love), ಗೌರವದಿಂದ ಬಾಳ್ವೆ ನಡೆಸಿದ್ರೆ ಬದುಕು ಹಸನಾಗುತ್ತದೆ. ಅದೇ ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದಾಗ ಉಸಿರುಗಟ್ಟಲು ಶುರುವಾಗುತ್ತದೆ. ಅರೇಂಜ್ಡ್ ಮ್ಯಾರೇಜ್ ಗೆ ಒಳಗಾದ ಕೆಲ ವ್ಯಕ್ತಿಗಳು ತಾವು ಅನುಭವಿಸಿದ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.

Latest Videos

undefined

KATRINA-VICKY KAUSHAL: ಡಿವೋರ್ಸ್​ಗೆ ರೆಡಿಯಾಯ್ತಾ ಕತ್ರಿನಾ-ವಿಕ್ಕಿ ಕ್ಯೂಟ್​ ಜೋಡಿ?

ಮದುವೆಯ ಮೊದಲ ಕೆಲ ತಿಂಗಳು ಉಸಿರುಗಟ್ಟಿದ ಅನುಭವ : ಈ ವ್ಯಕ್ತಿ ಕೂಡ ಭಾರತದ ಅನೇಕ ಪುರುಷರಂತೆ ಅರೇಂಜ್ಡ್ ಮ್ಯಾರೇಜ್ ಗೆ ಒಳಗಾಗಿದ್ದ. ಹೆಂಡತಿಯೊಂದಿಗೆ ಕೇವಲ ಒಂದೆರಡು ಬಾರಿ ಮಾತನಾಡಿದ್ದ. ಹುಡುಗಿ ಜೊತೆ ಮೂರ್ನಾಲ್ಕು ಬಾರಿ ಮಾತ್ರ ಔಪಚಾರಿಕವಾಗಿ ಮಾತನಾಡಿದ್ದ. ಮದುವೆ ಹಾಗೂ ಕೆಲಸದ ಬಗ್ಗೆ ಮಾತುಕತೆಯಷ್ಟೆ ನಡೆದಿತ್ತು. ಮದುವೆ (Marriage) ಯ ನಂತರ ಮೊದಲ ರಾತ್ರಿ  ಅವರಿಬ್ಬರು ಅಪರಿಚಿತರಾಗಿದ್ದರು. ರೂಮಿನಲ್ಲಿ ಮುಖಾಮುಖಿಯಾಗಿ ಕುಳಿತ್ರೂ ಮಾತನಾಡಲು ವಿಷ್ಯವಿರಲಿಲ್ಲ. ಕಾವಲುಗಾರನ ಬಗ್ಗೆ ತಿಳಿದಷ್ಟು ವಿಷ್ಯ ಪತ್ನಿ ಬಗ್ಗೆ ತಿಳಿದಿರಲಿಲ್ಲ. ಆ ರಾತ್ರಿ ಏನನ್ನೂ ಮಾಡಲಿಲ್ಲ. ಮೊದಲ ರಾತ್ರಿ ಮಾತ್ರವಲ್ಲ ಮದುವೆಯಾದ ಮೊದಲ ಕೆಲವು ತಿಂಗಳುಗಳು ಅವರಿಬ್ಬರಿಗೆ ಸಂಬಂಧ ಉಸಿರುಗಟ್ಟಿಸಿತ್ತು. ಇಬ್ಬರ ಮಧ್ಯೆ ಹೊಂದಾಣಿಕೆ ತರಲು, ಪರಿಸ್ಥಿತಿ ಬದಲಿಸಲು ನಡೆಸಿದ ಪ್ರಯತ್ನ ವಿಫಲವಾಯ್ತು. ಇಬ್ಬರ ಭಿನ್ನಾಭಿಪ್ರಾಯ ಹೆಚ್ಚಾದ ಕಾರಣ ದೂರವಾದ್ವಿ ಎನ್ನುತ್ತಾನೆ ಈ ವ್ಯಕ್ತಿ.

ಆನ್‌ಲೈನ್‌ನಲ್ಲಿ ಸೂಕ್ತ ಸಂಗಾತಿಯನ್ನು ಹುಡುಕೋದು ಹೇಗೆ?

ಅರೇಂಜ್ಡ್ ಮ್ಯಾರೇಜ್ ನಲ್ಲಿ ಸಿಕ್ತು ಪ್ರೀತಿ : ಈ ವ್ಯಕ್ತಿ ಅದೃಷ್ಟವಂತ ಎನ್ನಬಹುದು. ಈತ ತನಗಿಂತ ಐದು ವರ್ಷ ಕಿರಿಯ ಮಹಿಳೆಯನ್ನು ಮದುವೆಯಾಗಿದ್ದ. ಮದುವೆಯ ನಂತರ ಮೊದಲ ರಾತ್ರಿಯನ್ನು ಅಪರಿಚಿತಳೊಂದಿಗೆ ಕಳೆಯುವುದು ವಿಚಿತ್ರವಾಗಿತ್ತು. ನಾವಿಬ್ಬರು ಹೊಂದಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದೆವು. ಮೊದಲ ರಾತ್ರಿಯೇ ಒಬ್ಬರ ಕಾಲನ್ನ ಇನ್ನೊಬ್ಬರು ಹಿಡಿದು ಮಲಗಿದ್ದೆವು. ಡೇಟಿಂಗ್ ಮಾಡ್ತಾ, ಪ್ರೀತಿಯಿಂದ ಜೀವನ ಕಳೆಯುತ್ತಿರುವುದು ಅದೃಷ್ಟ ಎನ್ನುತ್ತಾನೆ ಈತ.  

ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ : ಅರೇಂಜ್ಡ್ ಮ್ಯಾರೇಜ್ ನಲ್ಲಿ ಸಿಕ್ಕಿಬಿದ್ದಿದ್ದ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ಈತ ಹೇಳ್ತಾನೆ. ಮೂರು ವರ್ಷಗಳ ಕಾಲ ಮಾನಸಿಕ ಹಿಂಸೆ ಅನುಭವಿಸಿದ್ದ ನಾನು, ಈಗಿನ ಪತ್ನಿ ಸಿಗದೆ ಹೋಗಿದ್ರೆ ಸಾವಿಗೆ ಶರಣಾಗುತ್ತಿದ್ದೆ ಎನ್ನುತ್ತಾನೆ. ನನ್ನ ಸಂಬಳದ ಬಗ್ಗೆಯೇ ಪತ್ನಿ ಸದಾ ಪೀಡಿಸುತ್ತಿದ್ದಳು. ಅವಿಭಾಜ್ಯ ಕುಟುಂಬದಲ್ಲಿ ವಾಸಿಸುವುದು ಆಕೆಗೆ ಇಷ್ಟವಿರಲಿಲ್ಲ. ಆಕೆ ಏನೇನನ್ನೋ ಬಯಸಿದ್ದಳು. ಅದು ನನ್ನಿಂದ ಸಾಧ್ಯವಾಗಿರಲಿಲ್ಲ. ಮಾನಸಿಕ ಸ್ಥಿತಿ ಹದಗೆಟ್ಟಿದ್ದ ಕಾರಣ ಚಿಕಿತ್ಸೆ ಪಡೆದು ಗುಣಮುಖನಾದ್ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೆ. ಪತ್ನಿ ಅದನ್ನು ಒಪ್ಪಿಕೊಂಡಿದ್ದಳು. ಆ ದಿನಗಳು ತುಂಬಾ ಭಯಾನಕವಾಗಿದ್ದವು ಎನ್ನುತ್ತಾನೆ ಈತ.
 

click me!