Sexual Health: ಕೊಬ್ಬಿನಿಂದ ಸೆಕ್ಸ್ ಸುಖ ಕಡಿಮೆಯಾಗಬಹುದು! ಆರೋಗ್ಯದೆಡೆ ಇರಲಿ ಗಮನ

Published : May 17, 2023, 11:17 AM ISTUpdated : May 17, 2023, 12:49 PM IST
Sexual Health: ಕೊಬ್ಬಿನಿಂದ ಸೆಕ್ಸ್ ಸುಖ ಕಡಿಮೆಯಾಗಬಹುದು! ಆರೋಗ್ಯದೆಡೆ ಇರಲಿ ಗಮನ

ಸಾರಾಂಶ

ಕೊಲೆಸ್ಟ್ರಾಲ್ ಏರಿಕೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಕಾಡುತ್ತದೆ. ಲೈಂಗಿಕ ಜೀವನದ ಸುಖವನ್ನು ಕೂಡ ಅದು ಕಸಿದುಕೊಳ್ಳುತ್ತದೆ. ಮಕ್ಕಳನ್ನು ಪಡೆಯೋದ್ರಿಂದ ಹಿಡಿದು ಸೆಕ್ಸ್ ಆನಂದವನ್ನು ಹಾಳು ಮಾಡೋದ್ರಲ್ಲಿ ಇದ್ರದ್ದು ಮೇಲುಗೈ.  

ಕೆಟ್ಟ ಕೊಲೆಸ್ಟ್ರಾಲ್ ಏರಿದಂತೆ ಹೃದಯ ಸಂಬಂಧಿ ಖಾಯಿಲೆ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಳ, ವಂಶಾಭಿವೃದ್ಧಿ ಮೇಲೂ ಪರಿಣಾಮ ಬೀರುತ್ತದೆ. ಲೈಂಗಿಕ ಬಯಕೆಯನ್ನು ಕಡಿಮೆ ಮಾಡುವುದಲ್ಲದೆ ಸಂಗಾತಿಯ ಫಲವತ್ತತೆ ಮೇಲೆ ಇದ್ರ ಪ್ರಭಾವ ಹೆಚ್ಚು ಎಂದು ಈಗಾಗಲೇ ಅನೇಕ ಸಂಶೋಧನೆಗಳು ಸ್ಪಷ್ಟಪಡಿಸಿವೆ.

ಸಕ್ಕರೆ (Sugar) ಹಾಗೂ ಕೊಲೆಸ್ಟ್ರಾಲ್ (Cholesterol) ಗೆ ಆಳ ಸಂಬಂಧವಿದೆ. ಸಕ್ಕರೆ ಮತ್ತು ಇತರ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದ್ರಿಂದ ಟ್ರೈಗ್ಲಿಸರೈಡ್‌ ಹೆಚ್ಚಾಗುತ್ತದೆ. ಇದ್ರಿಂದ ಎಚ್‌ಡಿಎಲ್ (HDL) ಅಂದ್ರೆ ಉತ್ತಮ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಎಲ್ ಡಿಎಲ್ ಅಣುವಿನಲ್ಲಿ ಬದಲಾವಣೆ ತರುತ್ತದೆ. ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಅಡ್ಡಪರಿಣಾಮ ಹೆಚ್ಚು. ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕೊಲೆಸ್ಟ್ರಾಲ್ ಹೆಚ್ಚಳ ಕಾರಣವಾಗುತ್ತದೆ. ಮಹಿಳೆಯರಲ್ಲಿಯೂ ಅನೇಕ ಖಾಯಿಲೆ ಹಾಗೂ ಸಮಸ್ಯೆಗಳನ್ನು ಇದು ಸೃಷ್ಟಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಯಾವೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

Real Story : ಸಾಯಬೇಕು ಅಂದುಕೊಂಡಿದ್ದೆ, – ಅರೇಂಜ್ಡ್ ಮ್ಯಾರೇಜ್ ಹುಡುಗರ ಕಥೆ ವ್ಯಥೆ

ಲೈಂಗಿಕತೆ (Sex) ವೇಳೆ ನೋವು : ಕೊಲೆಸ್ಟ್ರಾಲ್ ಲೈಂಗಿಕ ಕ್ರಿಯೆಯ ವೇಳೆಯೂ  ಪ್ರಭಾವ ಇರುತ್ತದೆ. ಮಹಿಳೆ ಲೈಂಗಿಕವಾಗಿ ಪ್ರಚೋದನೆಗೆ ಒಳಗಾದಾಗ ಆಕೆಯ ಜನನಾಂಗದ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದಾಗಿ ಹೆಚ್ಚಿನ ರಕ್ತ (blood) ವು ಆ ಪ್ರದೇಶಕ್ಕೆ ಹರಿಯುತ್ತದೆ. ಇದು ಆಕೆ ದೇಹವನ್ನು ಲೈಂಗಿಕತೆಗೆ ಸಿದ್ಧಪಡಿಸುತ್ತದೆ. ಇದು ರಕ್ತ ನಯಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಇದು ಚಂದ್ರನಾಡಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಏರಿಕೆಯಿಂದ ರಕ್ತದ ಹರಿವು ನಿಧಾನವಾಗುತ್ತದೆ. ಈ ಕಾರಣದಿಂದಾಗಿ ಯೋನಿ ನಯಗೊಳ್ಳುವುದಿಲ್ಲ. ಯೋನಿ ಶುಷ್ಕವಾದಾಗ ಲೈಂಗಿಕ ಕ್ರಿಯೆ ನಡೆಸುವುದು ಕಠಿಣವಾಗುತ್ತದೆ. ಇದ್ರಿಂದಾಗಿ ಸಂಭೋಗದ ವೇಳೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಲೈಂಗಿಕ ಅತೃಪ್ತಿಯ ಸಮಸ್ಯೆ : ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್‌ನಲ್ಲಿನ ಅಧ್ಯಯನದ ಪ್ರಕಾರ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗ್ತಿದ್ದಂತೆ ಮಹಿಳೆಯರ ಲೈಂಗಿಕ ಪ್ರಚೋದನೆ ಕಡಿಮೆಯಾಗುತ್ತದೆ. ಮೊದಲೇ ಹೇಳಿದಂತೆ ಯೋನಿ ನಯಗೊಳ್ಳುವುದಿಲ್ಲ. ಕೆಲ ಮಹಿಳೆಯರು ಸಂಭೋಗದ ವೇಳೆ ಕಾಡುವ ನೋವಿನಿಂದ ಅತೃಪ್ತಿಗೊಳಗಾಗ್ತಾರೆ. ಇನ್ನು ಕೆಲ ಮಹಿಳೆಯರು ಸೆಕ್ಸ್ ವೇಳೆ ನೋವು ಕಾಡುವ ಕಾರಣ ಲೈಂಗಿಕತೆಯಿಂದ ದೂರ ಸರಿಯುತ್ತಾರೆ. ನಿಧಾನವಾಗಿ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. 

ಆನ್‌ಲೈನ್‌ನಲ್ಲಿ ಸೂಕ್ತ ಸಂಗಾತಿಯನ್ನು ಹುಡುಕೋದು ಹೇಗೆ?

ಗರ್ಭಧಾರಣೆಯಲ್ಲಿ ವಿಳಂಬ : ಅಮೆರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ , ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಗರ್ಭಧಾರಣೆ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ 18 ರಿಂದ 44 ವರ್ಷ ವಯಸ್ಸಿನ ಮಹಿಳೆಯರು ಮತ್ತು 18 ವರ್ಷ ಮೇಲ್ಪಟ್ಟ ಪುರುಷರು ಪಾಲ್ಗೊಂಡಿದ್ದರು. ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಸಂಗಾತಿ, ಗರ್ಭಧರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾಳೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ. ಅಧಿಕ ಕೊಲೆಸ್ಟ್ರಾಲ್, ಮಹಿಳೆಯರ ಫಲವತ್ತತೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಮಹಿಳೆಯರಲ್ಲಿ ಪಾಲಿ ಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಯೂ ಹೆಚ್ಚಾಗಿ ಕಂಡುಬಂದಿದೆ ಎಂದು ಅಧ್ಯಯನದ ವರದಿ ಹೇಳಿದೆ. 

ಚಯಾಪಚಯದ ಮೇಲೂ ಪರಿಣಾಮ : ಫಲವತ್ತತೆ, ನೋವು ಮಾತ್ರವಲ್ಲ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಡಯಾಬಿಟಿಕ್ ಡಿಸ್ಲಿಪಿಡೆಮಿಯಾವನ್ನು ರೂಪದಲ್ಲಿ ನಮ್ಮನ್ನು ಕಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ಮತ್ತು ಗ್ಲೂಕೋಸ್ ಎರಡೂ ಒಟ್ಟಾಗಿ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಚಯಾಪಚಯ ಅಸಹಜವಾದ್ರೆ ಇದು ದೇಹದ ಜೀರ್ಣಾಂಗ ವ್ಯವಸ್ಥೆ, ಮಾನಸಿಕ ಆರೋಗ್ಯ, ಹೃದಯದ ಆರೋಗ್ಯ ಸೇರಿದಂತೆ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!