ಕೆಲವು ಮಹಿಳೆಯರು ಎಲ್ಲರಿಗಿಂತ ವಿಭಿನ್ನರಾಗಿರುತ್ತಾರೆ. ಅವರು ತಮ್ಮ ಬಗ್ಗೆ ಪ್ರೀತಿ-ಕಾಳಜಿ ಹೊಂದಿರುತ್ತಾರೆ. ಇತರರನ್ನು ಕೇರ್ ಮಾಡುವಂತೆಯೇ ತಮ್ಮನ್ನೂ ಕೇರ್ ಮಾಡಿಕೊಳ್ಳುತ್ತಾರೆ. ಜತೆಗೆ, ಹವ್ಯಾಸಗಳಿಗೆ ಬೈ ಹೇಳದೆ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಇವರಲ್ಲಿ ಮಾನಸಿಕ ಸದೃಢತೆ ಗಟ್ಟಿಯಾಗಿರುತ್ತದೆ.
ಕೆಲವು ಮಹಿಳೆಯರಿರುತ್ತಾರೆ. ತಮ್ಮ ಹಠವನ್ನು ಎಂಥ ಸಮಯದಲ್ಲೂ ಬಿಡುವುದಿಲ್ಲ. ಇತರರಿಗೆ ಅವರು ಹಠಮಾರಿಗಳಂತೆ ಕಾಣಬಹುದು, ಕೆಲವು ಬಾರಿ ಜಗಳಗಂಟಿಯರಂತೆಯೂ ಗೋಚರಿಸಬಹುದು. ಎಲ್ಲದಕ್ಕೂ ವಾದ ಮಾಡುವವರಂತೆ ಕಾಣಬಹುದು. ಆದರೆ, ಅವರು ತಮ್ಮ ನಿಲುವನ್ನು ಮಾತ್ರ ಕೊಂಚವೂ ಸಡಲಿಸುವುದಿಲ್ಲ. ಇಂತಹ ಮಹಿಳೆಯರು ಎಲ್ಲೋ ಕಾರ್ಪೋರೇಟ್ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲೋ, ಸರ್ಕಾರದ ಐಎಎಸ್, ಐಪಿಎಸ್ ಅಧಿಕಾರಿಗಳಾಗಿಯೋ ಮಾತ್ರ ಕಾಣುತ್ತಾರೆ ಎನ್ನುವುದು ಸತ್ಯವಲ್ಲ. ಅವರು ನಮ್ಮ ನಿಮ್ಮ ನಡುವೆಯೇ, ನಮ್ಮ ಮನೆಗಳಲ್ಲೇ ಇರಬಹುದು. ಅವರು ಆಂತರಿಕವಾಗಿ ಸದೃಢರಾಗಿರುತ್ತಾರೆ. ಮನಸ್ಸು ಸಶಕ್ತವಾಗಿರುವ ಮಹಿಳೆಯರು ಯಾವುದನ್ನೂ ಕೈ ಚೆಲ್ಲುವುದಿಲ್ಲ. ಇತರರು ಹೇಗೆ ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಅವರೇನೂ ಚಿಂತೆ ಮಾಡುವುದಿಲ್ಲ. ಸುಮ್ಮನೆ ತಮ್ಮ ಹಾದಿಯಲ್ಲಿ ತಾವು ಸಾಗುತ್ತಾರೆ. ಇಂತಹ ಮಹಿಳೆಯರು ಕೆಟ್ಟ ಸಂಬಂಧದಿಂದ ಬಹುಬೇಗ ಹೊರಬರುತ್ತಾರೆ. ವೈವಾಹಿಕ ಜೀವನದಲ್ಲಿ ಅತ್ಯುತ್ತಮವಾಗಿ ತಮ್ಮ ಜವಾಬ್ದಾರಿ ನಿಭಾಯಿಸುವ ಜತೆಗೆ, ತಮ್ಮ ವೈಯಕ್ತಿಕ ಬೆಳವಣಿಗೆಗೂ ಅವಕಾಶ ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ, ದೃಢಚಿತ್ತದ ಮಹಿಳೆಯರು ಕೆಲವು ವಿಚಾರಗಳೊಂದಿಗೆ ಎಂದಿಗೂ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ.
• ಸ್ನೇಹಿತರ ಸಖ್ಯ (Meet Friends)
ತಮಗೆ ಸದಾಕಾಲ ಬೆಂಬಲ ನೀಡುವ ಸ್ನೇಹವನ್ನು ದೃಢ ಮನಸ್ಸಿನ (Strong Mentality) ಮಹಿಳೆಯರು (Woman) ಎಂದಿಗೂ ದೂರ ಮಾಡಿಕೊಳ್ಳುವುದಿಲ್ಲ. ಹಾಗೂ ಅವರನ್ನು ಆಗಾಗ ಭೇಟಿಯಾಗುತ್ತಿರುತ್ತಾರೆ. ಅವರನ್ನು ಭೇಟಿಯಾಗುವುದಕ್ಕೆ ಎಷ್ಟು ಅಡೆತಡೆ ಇದ್ದರೂ ಕೇರ್ (Care) ಮಾಡುವುದಿಲ್ಲ. ಒಂದೊಮ್ಮೆ ಪತಿಯೇ ಸ್ನೇಹಿತರನ್ನು ಭೇಟಿಯಾಗುವುದಕ್ಕೆ ಅವಕಾಶ ನೀಡದಿದ್ದರೂ ಗಮನ ಹರಿಸುವುದಿಲ್ಲ. ಮಾನಸಿಕವಾಗಿ ತಾವು ಗಟ್ಟಿಯಾಗುವುದಕ್ಕೆ ಅವರ ಸಹವಾಸ ಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತಾರೆ. ಬೇರೆಯವರಿಗಾಗಿ ತಮ್ಮ ಸ್ನೇಹದಿಂದ ದೂರವಾಗುವ ಮೂರ್ಖತನ ಮಾಡುವುದಿಲ್ಲ.
Personality Tips: ಯಶಸ್ವಿ ಜನ ತಮ್ಮ ಫ್ರೀ ಟೈಮನ್ನ ಕಳೆಯೋದೇ ಹೀಗೆ!
• ಹವ್ಯಾಸಕ್ಕೆ (Habits) ಬೈ ಹೇಳಲ್ಲ
ಜೀವನದಲ್ಲಿ ಬದಲಾವಣೆ ಸಹಜ. ಇಂತಹ ಬದಲಾವಣೆಗಳೊಂದಿಗೆ ಆದರೆ, ನಾವು ಬಹಳವಾಗಿ ಪ್ರೀತಿಸುವ (Love) ಹವ್ಯಾಸಗಳನ್ನು ಬಿಟ್ಟುಕೊಡುವುದು ಸರಿಯಲ್ಲ. ಸ್ಟ್ರಾಂಗ್ ಮಹಿಳೆಯರು ಈ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಮದುವೆಯಾದರೂ, ಮಕ್ಕಳಾದರೂ ತಮಗೆ ಜೀವ ಎನಿಸುವ ಹವ್ಯಾಸಗಳನ್ನು ದೂರ ಮಾಡಿಕೊಳ್ಳುವುದಿಲ್ಲ. ತಮ್ಮ ಪ್ರೀತಿಪಾತ್ರ ಹವ್ಯಾಸಗಳನ್ನು ಬಿಟ್ಟುಬಿಡುವ ಮಹಿಳೆಯರು ಬಹಳ ಕಾಲ ನೆಮ್ಮದಿಯಿಂದ (Relax) ಇರುವುದಿಲ್ಲ. ತಮ್ಮ ಜತೆಗೆ ಮನೆಯವರ ನೆಮ್ಮದಿಯನ್ನೂ ಹಾಳು ಮಾಡುವ ಸಾಧ್ಯತೆಯೂ ಇರುತ್ತದೆ.
• ದೈಹಿಕ ಸದೃಢತೆ (Physical Fitness)
ಬಹಳಷ್ಟು ಮಹಿಳೆಯರು ಮನೆ, ಮಕ್ಕಳು ಎಂದು ತಮ್ಮ ದೈಹಿಕ ಸದೃಢತೆಯನ್ನು ಕಡೆಗಣಿಸುತ್ತಲೇ ಇರುತ್ತಾರೆ. ಹೇಗಾದರೂ ಸಮಯ ಮಾಡಿಕೊಂಡು ದಿನದ ಯಾವುದಾದರೂ ಸಮಯದಲ್ಲಿ ತಮ್ಮ ಫಿಟ್ ನೆಸ್ ಬಗ್ಗೆಯೂ ಗಮನ ನೀಡುವುದು ಸದೃಢ ಮಹಿಳೆಯರ ಲಕ್ಷಣ. ಇವರು ಎಂದಿಗೂ ಸಿನಿಮಾ, ಧಾರಾವಾಹಿಗಳನ್ನು ನೋಡುತ್ತ ಕೂರುವುದಿಲ್ಲ. ಕಂಡಕಂಡಿದ್ದನ್ನು ತಿನ್ನುವುದಿಲ್ಲ. ಆರೋಗ್ಯದ (Health) ಬಗ್ಗೆ ಕಾಳಜಿ ಹೊಂದಿರುತ್ತಾರೆ.
• ಸಾಂಸ್ಕೃತಿಕ ಪದ್ಧತಿ, ನಂಬಿಕೆಗಳು
ಸದೃಢತೆಗೆ ಆಂತರಿಕ ಸಾಮರ್ಥ್ಯ (Inner Ability) ಬಹುದೊಡ್ಡ ಕೊಡುಗೆ ನೀಡುತ್ತದೆ. ಸ್ಟ್ರಾಂಗ್ ಮಹಿಳೆಯರು ತಮ್ಮ ತಮ್ಮ ಸಾಂಸ್ಕೃತಿಕ ಪದ್ಧತಿಗಳು ಮತ್ತು ನಂಬಿಕೆಗಳನ್ನು ಅನುಸರಿಸುತ್ತಾರೆ. ತೀರ ವ್ರತ, ದೇವರು ಎಂದು ಆಚರಿಸದೇ ಹೋದರೂ ತಮ್ಮ ಸಂಪ್ರದಾಯಗಳ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದೇ ಇಲ್ಲ. ಯಾರದ್ದೇ ಬಲವಂತದ ಮೇರೆಗೆ ಇವರು ತಮ್ಮ ಭಾವನೆಗಳನ್ನು ಮೂಡಿಸಿಕೊಳ್ಳುವುದಿಲ್ಲ. ಸ್ವಂತ ನಿಲುವು ಹೊಂದಿರುತ್ತಾರೆ.
Personality Tips: ವ್ಯಕ್ತಿತ್ವಕ್ಕೆ ತಕ್ಕಂತೆ ವೃತ್ತಿ ಆಯ್ಕೆ ಮಾಡಿಕೊಳ್ಳೋದು ಹೇಗೆ?
• ಸ್ವಯಂ ಪ್ರೀತಿ (Self Care), ಕಾಳಜಿ
ಬಹಳಷ್ಟು ಮಹಿಳೆಯರಲ್ಲಿ ಕೀಳರಿಮೆ ಹೆಚ್ಚು. ಹಾಗೆಯೇ ಆತ್ಮವಿಶ್ವಾಸ (Confidence) ಇರುವುದಿಲ್ಲ. ಏಕೆಂದರೆ, ಅವರಲ್ಲಿ ತಮಗಾಗಿ ಸಮಯವೇ ಇರುವುದಿಲ್ಲ. ಕುಟುಂಬದ ಜವಾಬ್ದಾರಿಗಳಲ್ಲಿ ಅಷ್ಟು ಮುಳುಗಿ ಹೋಗಿರುತ್ತಾರೆ. ಆದರೆ, ದೃಢ ಚಿತ್ತದ ಮಹಿಳೆಯರು ಹೀಗೆ ಮಾಡುವುದಿಲ್ಲ. ಅವರಲ್ಲಿ ಸ್ವಯಂ ಪ್ರೀತಿ, ಕಾಳಜಿ ಇರುತ್ತದೆ. ಹೀಗಾಗಿ, ಅವರು ತಮ್ಮ ಮಾನಸಿಕ ಸ್ವಾಸ್ಥ ಮತ್ತು ದೃಢತೆಯನ್ನು ಉಳಿಸಿಕೊಂಡಿರುತ್ತಾರೆ.