ನಮ್ಮವರು ಒಂದು ಬಾರಿಯೂ ಐ ಲವ್ ಯು ಅಂದಿಲ್ಲ ಅಂತಾ ಅನೇಕರು ಆರೋಪ ಮಾಡ್ತಿರುತ್ತಾರೆ. ಪ್ರೀತಿಯನ್ನು ಮಾತಿನಲ್ಲಿ ಹೇಳೋ ಅಗತ್ಯವಿಲ್ಲ. ನಿಜವಾಗಿ ಪ್ರೀತಿಸುವ ವ್ಯಕ್ತಿ ತನ್ನೆಲ್ಲ ಕೆಲಸದಲ್ಲಿ ಇದನ್ನು ತೋರಿಸ್ತಾನೆ. ಅದಕ್ಕೆ ಈ ಲವ್ ಸ್ಟೋರಿ ಸಾಕ್ಷಿ.
ಪ್ರೀತಿಸಿದ ವ್ಯಕ್ತಿಯ ಬಾಯಲ್ಲಿ ಐ ಲವ್ ಯು ಅಂತಾ ಬಂದಾಗ ಮಾತ್ರ ಆತ ನಿಮ್ಮನ್ನು ಪ್ರೀತಿ ಮಾಡ್ತಿದ್ದಾನೆ ಎಂದರ್ಥವಲ್ಲ. ಅವರ ವರ್ತನೆ, ಕಾಳಜಿ, ಪ್ರೀತಿಯ ಸಾಂತ್ವಾನ, ನಾನಿದ್ದೇನೆ ಎಂದು ಕಣ್ಣಿನ ಮೂಲಕವೇ ನೀಡುವ ಧೈರ್ಯ, ಐ ಲವ್ ಯೂ ಎಂಬ ಮೂರು ಪದಕ್ಕಿಂತ ಬಲ ಪಡೆದಿದೆ. ನಾವು ಪ್ರೀತಿಸುವ ವ್ಯಕ್ತಿಗಿಂತ ನಮ್ಮನ್ನು ಪ್ರೀತಿಸುವ ವ್ಯಕ್ತಿ ಜೊತೆ ಬಾಳಿದ್ರೆ ಜೀವನ ಸುಖಮಯ ಎಂದು ಹಿರಿಯರು ಹೇಳಿದ್ದಾರೆ. ನಾವು ಕಷ್ಟದಲ್ಲಿರುವಾಗ್ಲೇ ನಾವು ಪ್ರೀತಿಸಿದ ವ್ಯಕ್ತಿಯ ಬೆಲೆ ತಿಳಿಯೋದು. ಅದಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಮಜಾ ಭಾರತದ ಪಿಕೆ ಪ್ರಿಯಾಂಕ ಪತಿ ಎಲ್ಲರಿಗೂ ಉತ್ತಮ ನಿದರ್ಶನ ಎನ್ನಬಹುದು. ಪ್ರಿಯಾಂಕಾ ಪತಿಗೆ ಆಕೆಯನ್ನು ಬಿಟ್ಟು ಬೇರೊಬ್ಬಳ ಜೊತೆ ಮದುವೆಯಾಗುವ ಅವಕಾಶವಿತ್ತು. ಪ್ರಿಯಾಂಕಾ ಕೂಡ ಇದನ್ನು ಬಾಯ್ಬಿಟ್ಟು ಹೇಳಿದ್ದರು. ಆದ್ರೆ ಅಮಿತ್ ಪ್ರಿಯಾಂಕಾಳನ್ನು ನಿಜವಾಗಿ ಪ್ರೀತಿಸಿದ್ದರು. ಅವರನ್ನು ಮದುವೆಯಾಗುವ, ಹೊಸ ಬಾಳು ಕಟ್ಟಿಕೊಳ್ಳುವ ಆಸೆಯಲ್ಲಿದ್ದರು. ಭಾವಿ ಪತ್ನಿ ಕಷ್ಟದಲ್ಲಿದ್ದಾಳೆ ಎನ್ನುವ ಕಾರಣಕ್ಕೆ ಅವಳನ್ನು ಕೈಬಿಡುವ ಮನಸ್ಥಿತಿಯವರು ಅಮಿತ್ ಆಗಿರಲಿಲ್ಲ. ಹಾಗಾಗಿಯೇ ಅಮಿತ್, ಪ್ರಿಯಾಂಕಾಗೆ ಧೈರ್ಯ ತುಂಬಿ ಅವರು ಮತ್ತೆ ಗೆದ್ದು ಬರಲು ಶಕ್ತಿ ನೀāಡಿದ್ದರು. ಪ್ರಿಯಾಂಕಾಗೆ ಆಗಿದ್ದೇನು, ಅವರ ಚೇತರಿಕೆಗೆ ಅಮಿತ್ ಕಾರಣವಾಗಿದ್ದು ಹೇಗೆ ಅನ್ನೋದನ್ನು ನಾವು ಹೇಳ್ತೇವೆ.
ಕಲರ್ಸ್ (Colors) ಕನ್ನಡದಲ್ಲಿ ಬರುವ ಮಜಭಾರತ, ಗಿಚ್ಚಿ ಗಿಲಿಗಿಲಿಯಲ್ಲಿ ನೀವು ಪಿಕೆಯನ್ನು ನೋಡಿರ್ತಿರಿ. ಸಿನಿಮಾ ಒಂದರಲ್ಲೂ ಪ್ರಿಯಾಂಕಾ (Priyanka) ನಟಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಮುಗಿಸಿ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟ ಪ್ರಿಯಾಂಕ, ತಮ್ಮ ಹಾಸ್ಯ ನಟನೆಯಿಂದ ಎಲ್ಲರ ಮನಸ್ಸು ಗೆದ್ದಿದ್ದರು.
PERSONALITY TIPS: ಯಶಸ್ವಿ ಜನ ತಮ್ಮ ಫ್ರೀ ಟೈಮನ್ನ ಕಳೆಯೋದೇ ಹೀಗೆ!
ಈ ಮಧ್ಯೆ ಅಮಿತ್ (Amit) ಪ್ರೀತಿ (Love)ಯಲ್ಲಿ ಬಿದ್ದಿದ್ದ ಪ್ರಿಯಾಂಕಾ, ಪ್ರೇಮಿ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದರು. ಆದ್ರೆ ಐದು ತಿಂಗಳ ನಂತ್ರ ಇದ್ದಕ್ಕಿದ್ದಂತೆ ಅವರ ಕಾಲು ಶಕ್ತಿ ಕಳೆದುಕೊಂಡಿತ್ತು. ನಿಲ್ಲಲು, ನಡೆಯಲು ಸಾಧ್ಯವಾಗ್ತಿರಲಿಲ್ಲ. ಡಿಸ್ಕ್ ಬಲ್ಜ್ ಗೆ ತುತ್ತಾಗಿದ್ದ ಪ್ರಿಯಾಂಕಾಗೆ ಎರಡು ಶಸ್ತ್ರಚಿಕಿತ್ಸೆ ಮಾಡ್ಬೇಕಾಯ್ತು, ಶೇಕಡಾ 70ರಷ್ಟು ಸೋಂಕಿಗೆ ಒಳಗಾಗಿದ್ದ ಪ್ರಿಯಾಂಕಾ ಜೀವ ಅಪಾಯದಲ್ಲಿತ್ತು. ಗುಣಮುಖರಾಗುವ ಸಾಧ್ಯತೆ ಶೇಕಡಾ 50ರಷ್ಟು ಮಾತ್ರವಿದೆ ಎಂದು ವೈದ್ಯರು ಹೇಳಿದ್ದರು. ಮೊಳೆ ಹಾಗೂ ರಾಡ್ ಪ್ರಿಯಾಂಕಾ ದೇಹವನ್ನು ಸೇರಿತ್ತು. ತುಂಬಾ ನೋವಿನಲ್ಲಿದ್ದ ಪ್ರಿಯಾಂಕಾ, ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಅಮಿತ್ ಗೆ ಹೇಳಿದ್ದರು. ಆದ್ರೆ ಇಂಥ ಸಮಯದಲ್ಲಿ ಅಮಿತ್ ಕೈ ಸಡಲಿವಾಗ್ಲಿಲ್ಲ. ಪ್ರಿಯಾಂಕಾ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದ ಅಮಿತ್, ಡ್ರೆಸ್ಸಿಂಗ್, ಡೈಪರ್ ಜೇಂಜ್ ಮಾಡಲು ಪ್ರಿಯಾಂಕಾಗೆ ಸಹಾಯ ಮಾಡಿದ್ದರು. ಸತತ 8 ತಿಂಗಳ ಕಾಲ ಹಾಸಿಗೆಯಲ್ಲೇ ಇದ್ದ ಪ್ರಿಯಾಂಕಾಗೆ ಸಂಪೂರ್ಣ ಆಸರೆಯಾಗಿದ್ದು ಅಮಿತ್. ಕೆಲ ದಿನಗಳ ನಂತ್ರ ನಿಧಾನವಾಗಿ ನಡೆಯಲು ಶುರು ಮಾಡಿದ ಪ್ರಿಯಾಂಕಾಗೆ ಧೈರ್ಯ ತುಂಬುತ್ತಿದ್ದರು ಅಮಿತ್. ಐದು ತಿಂಗಳ ನಂತ್ರ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಅಮಿತ್ , ಡಿಸೆಂಬರ್ ನಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಗಡಿ ದಾಟಿದ ಲವ್ ಸ್ಟೋರಿ; ಪ್ರಿಯಕರನಿಗಾಗಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದ ಗೆಳತಿ
ಇಷ್ಟೆಲ್ಲ ಆದ್ರೂ ಅಮಿತ್ ಐ ಲವ್ ಯು ಎನ್ನುವ ಮಾತನ್ನು ನನಗೆ ಹೇಳಿಲ್ಲ ಎನ್ನುತ್ತಾರೆ ಪ್ರಿಯಾಂಕಾ. ಆದ್ರೆ ಮಾತಿನಲ್ಲಿ ಹೇಳದ್ದನ್ನು ತಮ್ಮ ಕೃತಿಯಲ್ಲಿ ಮಾಡಿತೋರಿಸಿದ್ದಾರೆ. officialpeopleofindia ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕಾ ಸ್ಟೋರಿಯನ್ನು ಹಂಚಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಪೋಸ್ಟ್ ಆದ ಈ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಅಮಿತ್ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.