Personality Tips: ಯಶಸ್ವಿ ಜನ ತಮ್ಮ ಫ್ರೀ ಟೈಮನ್ನ ಕಳೆಯೋದೇ ಹೀಗೆ!

By Suvarna News  |  First Published Aug 22, 2023, 12:00 PM IST

ಯಶಸ್ಸು ಕಂಡಿರುವ ಜನರು ತಮ್ಮ ಫ್ರೀ ವೇಳೆಯನ್ನು ಜನಸಾಮಾನ್ಯರಂತೆ ಟಿವಿ ನೋಡುತ್ತಲೋ, ಮೊಬೈಲ್ ವೀಕ್ಷಿಸುತ್ತಲೋ, ಅರ್ಥವಿಲ್ಲದ ಪಾರ್ಟಿ ಮಾಡುತ್ತಲೋ ಸಮಯ ಕಳೆಯುವುದಿಲ್ಲ. ಮನಸ್ಸನ್ನು ನಿಜಕ್ಕೂ ಅರಳಿಸುವಂತಹ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ಕನಸುಗಳ ವಿಸ್ತರಿಸಿಕೊಳ್ಳುತ್ತಾರೆ. ಅಂತರಂಗವನ್ನು ಬಲಪಡಿಸಿಕೊಳ್ಳುತ್ತಾರೆ. 
 


ಜೀವನದಲ್ಲಿ ಯಶಸ್ಸು ಗಳಿಸುವುದು ಎಲ್ಲರ ಕನಸು. ದೊಡ್ಡ ಕಂಪನಿಯ ಸಿಇಒ ಆಗುವುದು, ಸಮಾಜದಲ್ಲಿ ಗುರುತಿಸಿಕೊಳ್ಳುವುದು, ಹಣ, ಹೆಸರು ಸಂಪಾದಿಸುವುದು ಇವಷ್ಟೇ ಯಶಸ್ಸು ಎಂದುಕೊಳ್ಳುವುದು ಸಾಮಾನ್ಯ. ಉತ್ತಮ ಕೆರಿಯರ್, ಜೀವನದ ಅಗತ್ಯ ಪೂರೈಸುವಷ್ಟು ಹಣ, ಉತ್ತಮ ಜನರ ಒಡನಾಟಗಳು ಯಶಸ್ಸಿನ ಒಂದು ಭಾಗವಾಗುತ್ತವೆಯಾದರೂ ಇವುಗಳಷ್ಟೇ ಯಶಸ್ಸಲ್ಲ. ಸಿಕ್ಕಾಪಟ್ಟೆ ದುಡ್ಡು, ದುಂದುವೆಚ್ಚ, ಐಷಾರಾಮಿಯಾಗಿ ಬದುಕುವುದು ಯಶಸ್ಸು ಎಂದುಕೊಳ್ಳುವುದು ಮೂರ್ಖತನ. ಯಶಸ್ಸೆಂದರೆ, ಹೆಮ್ಮೆ, ನೆಮ್ಮದಿಯಿಂದ ಜೀವಿಸುವುದು. ಅದಕ್ಕೆ ಒಬ್ಬೊಬ್ಬರದು ಒಂದೊಂದು ವಿಶ್ಲೇಷಣೆ ಇರಲು ಸಾಧ್ಯ. ಹೆಮ್ಮೆಯಿಂದ, ನೆಮ್ಮದಿಯಿಂದ ಬದುಕುವವರು ಖಂಡಿತವಾಗಿ ಜೀವನದಲ್ಲಿ ಅವರ ದೃಷ್ಟಿಕೋನದಿಂದ ಯಶಸ್ಸು ಗಳಿಸಿರುತ್ತಾರೆ. ಆದರೆ, ಯಶಸ್ಸು ಕಂಡಿರುವ ವ್ಯಕ್ತಿಗಳ ಜೀವನ ಖಂಡಿತವಾಗಿ ಸಾಮಾನ್ಯರಂತೆ ಇರುವುದಿಲ್ಲ. ಅವರು ತಮ್ಮ ಫ್ರೀ ಸಮಯವನ್ನು ಎಲ್ಲರಂತೆ ಕಳೆಯುವುದಿಲ್ಲ. ಬಹಳಷ್ಟು ಮಂದಿ ತಮ್ಮ ಫ್ರೀ ಸಮಯವನ್ನು ಟಿವಿ ನೋಡುವುದು, ಸ್ನೇಹಿತರೊಂದಿಗೆ ಒಡನಾಡುವುದು, ವೀಕೆಂಡ್ ಪಾರ್ಟಿ ಇತ್ಯಾದಿಗಳಲ್ಲಿ ಕಳೆದುಹೋಗುತ್ತಾರೆ. ಆದರೆ, ಜೀವನದಲ್ಲಿ ಯಶಸ್ಸು ಸಾಧಿಸಿರುವವರು ಕೆಲವು ಅರ್ಥಪೂರ್ಣ ಕಾರ್ಯಗಳಲ್ಲಿ ತೊಡಗುವುದು ಕಂಡುಬರುತ್ತದೆ. ಅವರಂತೆಯೇ ಅಂತಹ ಹವ್ಯಾಸಗಳನ್ನು ರೂಢಿಸಿಕೊಂಡರೆ ಯಶಸ್ಸಿನ ಸಮೀಪ ಸಾಗಬಹುದು.

ಸ್ವಕಾಳಜಿ (Self Care): ಅವಿಶ್ರಾಂತವಾಗಿ ದುಡಿಯುವುದೇ ಜೀವನದ ಯಶಸ್ಸು ಎನ್ನುವುದು ಹಳೆಯ ನಂಬಿಕೆ. ದುಡಿಮೆಯ (Work) ನಡುವೆಯೇ ಸ್ವಂತ ಕ್ಷೇಮಕ್ಕೂ ಆದ್ಯತೆ ನೀಡಬೇಕು. ನೀವು ಗುರಿ (Goal) ಹೊಂದಿದ್ದರೆ ಅವುಗಳನ್ನು ಸಾಧಿಸಲು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಕಾರ್ಯಬಾಹುಳ್ಯದಿಂದ ಒತ್ತಡಕ್ಕೆ ಒಳಗಾದರೆ ಸ್ವಲ್ಪ ಸಮಯ ರಿಲ್ಯಾಕ್ಸ್ (Relax) ಮಾಡಿ. ರಿಲ್ಯಾಕ್ಸ್ ಮಾಡುವುದೆಂದರೆ ಟಿವಿ, ಮೊಬೈಲ್ ನೋಡುವುದಲ್ಲ. ಉತ್ತಮ ಹವ್ಯಾಸಗಳಿಂದ ಮನಸ್ಸನ್ನು ಅರಳಿಸಿಕೊಳ್ಳಬೇಕು. ಶಕ್ತಿ (Energy) ಖಾಲಿಯಾದಾಗ ತುಂಬಿಸಿಕೊಳ್ಳುವುದರಿಂದ ಗುರಿ ತಲುಪುವುದು ಸುಲಭವಾಗುತ್ತದೆ. ಆರೋಗ್ಯದ (Health) ಮೇಲೆ ಸಕಾರಾತ್ಮಕ ಪರಿಣಾಮವುಂಟಾಗುತ್ತದೆ.

Tap to resize

Latest Videos

ಬೆಳಗ್ಗೆದ್ದು ಈ ಆಕ್ಟಿವಿಟೀಸ್ ಮಾಡಿದ್ರೆ ದಿನವಿಡೀ ಸ್ಟ್ರೆಸ್ ಮಾಡೋದು ತಪ್ಪುತ್ತೆ

ಪ್ರೀತಿಪಾತ್ರರೊಂದಿಗೆ ಕ್ವಾಲಿಟಿ ಟೈಮ್ (Quality Time): ಯಶಸ್ಸು (Success) ಹೊಂದಲು ಸದೃಢವಾದ ಬಾಂಧವ್ಯ ಅಗತ್ಯ. ಕುಟುಂಬ (Family), ಸ್ನೇಹ ವಲಯ, ಸಾಮಾಜಿಕ ವಲಯದಲ್ಲಿ ಉತ್ತಮ ಸಂಬಂಧ ಹೊಂದುವುದೂ ಯಶಸ್ಸೇ. ಖುಷಿಯಾಗುವವರೊಂದಿಗೆ ಸಮಯ ಕಳೆಯುವುದರಿಂದ ಗುರಿ ಸಾಧಿಸುವ ಉತ್ಸಾಹ ತುಂಬಿಕೊಳ್ಳುತ್ತದೆ. ಪ್ರೀತಿಪಾತ್ರರಿಂದ ತಾಕತ್ತು ದೊರೆಯುತ್ತದೆ. ಆಳವಾದ ಪ್ರೀತಿ (Love) ಇರುವಾಗ ಧೈರ್ಯವೂ ಲಭಿಸುತ್ತದೆ. 

ಓದುವುದು (Reading): ಯಾವುದೇ ಯಶಸ್ವಿ ವ್ಯಕ್ತಿಗಳನ್ನು ನೋಡಿ, ತಮ್ಮ ವಿರಾಮದ (Free Time) ವೇಳೆಯಲ್ಲಿ ಓದುವುದನ್ನು ಬಿಡುವುದಿಲ್ಲ. ಹೊಸತರ ಕಲಿಕೆಯಿಂದ  ದೂರವಾಗದಿರುವುದು ಯಶಸ್ವಿ ವ್ಯಕ್ತಿಗಳ ಮನಸ್ಥಿತಿ. ಹೆಚ್ಚಿನ ಜ್ಞಾನ, ಅನುಭವಕ್ಕೆ ಒಳಗಾಗುವುದು, ಇತರರ ದೃಷ್ಟಿಕೋನಗಳ ಬಗ್ಗೆ ಮುಕ್ತವಾದ ಮನಸ್ಸನ್ನು ಹೊಂದುವುದು ಎಂದಿಗೂ ಲಾಭಕರ.

ಕ್ರಿಯಾಶೀಲ (Creative) ಮಾರ್ಗ: ಆಟವಾಡುವುದು ಉತ್ತಮ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಆಟವಾಡಿ ಯಾವ ಕಾಲವಾಯಿತು ಎನ್ನುತ್ತೇವೆ. ಯಶಸ್ವಿ ವ್ಯಕ್ತಿಗಳು ಆಟೋಟಗಳಲ್ಲಿ ಭಾಗಿಯಾಗುವ ಮೂಲಕ ಮನಸ್ಥಿತಿಯನ್ನು ಚೇತೋಹಾರಿಯಾಗಿ ಇಟ್ಟುಕೊಳ್ಳುತ್ತಾರೆ. ಆಟವಾಡುವುದರಿಂದ ಮಿದುಳು ಒತ್ತಡ ಕಳೆದುಕೊಂಡು ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಸಂಗೀತ, ಚಿತ್ರಕಲೆ, ಬರವಣಿಗೆಯಂತಹ ಯಾವುದೇ ಕ್ರಿಯಾಶೀಲವಾದ ಮಾರ್ಗಗಳನ್ನು ಅನುಸರಿಸುವ ಮೂಲಕ ನರಗಳನ್ನು (Nerves) ಶಾಂತವಾಗಿಟ್ಟುಕೊಳ್ಳುತ್ತಾರೆ.

ಮನೆಯಲ್ಲಿರೋ ಕೆಟ್ಟ ವಾತಾವರಣ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿದ್ಯಾ?

ಜಾಲದ (Network) ಬಲವರ್ಧನೆ: ಯಶಸ್ವಿ ವ್ಯಕ್ತಿಗಳು ಸುಖಾಸುಮ್ಮನೆ ಯಶಸ್ಸು ಕಾಣುವುದಿಲ್ಲ. ತಮ್ಮ ಜಾಲಗಳನ್ನು ಬಲಗೊಳಿಸಿಕೊಳ್ಳಲು ಶ್ರಮ ಹಾಕುತ್ತಾರೆ. ನೆಟ್ ವರ್ಕ್ ಬಲಪಡಿಸಿಕೊಳ್ಳಲು ಯತ್ನಿಸುತ್ತಾರೆ. ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಕನಸುಗಳ (Dreams) ಮೇಲೆ ಹೂಡಿಕೆ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಜನಸಮೂಹದ ಬೆಂಬಲ ಪಡೆದುಕೊಳ್ಳುತ್ತಾರೆ.

ಜನಸೇವೆ (Philanthropy): ಎಷ್ಟೋ ಪ್ರಮುಖ ವ್ಯಕ್ತಿಗಳು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಂಡುಬರುತ್ತದೆ. ಸೇವೆಯಿಂದ ಸಂತೃಪ್ತಿ ದೊರೆಯುತ್ತದೆ. ಜನರಿಗೆ ಸಹಕಾರಿಯಾಗುವ ಯಾವುದೇ ಕಾರ್ಯಗಳಲ್ಲಿ ನಿರತರಾಗುವುದರಿಂದ ಆಂತರಿಕ ಶಾಂತಿ ಲಭಿಸುತ್ತದೆ.

ಪ್ರವಾಸ (Travel): ಪ್ರವಾಸ ಮಾಡುವುದರಿಂದ ವ್ಯಕ್ತಿಗತ ಬೆಳವಣಿಗೆ ಸಾಧ್ಯ. ಮನಸ್ಥಿತಿಯಲ್ಲಿ ಅಪಾರ ಬದಲಾವಣೆ ಬರುತ್ತದೆ. ಹೊಸ ಸಂಸ್ಕೃತಿ, ನಂಬಿಕೆಗಳನ್ನು ಕಂಡಾಗ ಜೀವನದ ಅವಕಾಶಗಳ ಬಗ್ಗೆ ಅರಿವಾಗುತ್ತದೆ. 

click me!