ಮದುವೆ ಮಾಡಿಸಿ ಎಂದ ದಿವ್ಯಾಂಗ ಮಗನನ್ನು ಹೊಡೆದು ಕೊಂದ ತಂದೆ-ತಾಯಿ

By Vinutha Perla  |  First Published Feb 19, 2023, 3:39 PM IST

ಅಲ್ಲ ಹೀಗೂ ಇರ್ತಾರಾ ಅಂತ. ಆತ ಮತ್ತೇನೂ ಕೇಳಿರ್ಲಿಲ್ಲ. ವಯಸ್ಸು 35 ಆಗಿದೆ. ನನಗೆ ಮದುವೆ ಮಾಡಿ ಅಂದಿದ್ದ ಅಷ್ಟೆ. ಅಷ್ಟಕ್ಕೇ ದಿವ್ಯಾಂಗ ಯುವಕನನ್ನು ತಂದೆ ಹಾಗೂ ಮಲತಾಯಿ ಸೇರಿಸಿ, ಚೆನ್ನಾಗಿ ಥಳಿಸಿ ಸಾವಿಗೆ ಕಾರಣರಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಭುವನೇಶ್ವರ್​: ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದಕ್ಕೆ ಮಲತಾಯಿ ಹಾಗೂ ತಂದೆ ದಿವ್ಯಾಂಗ ಯುವಕನನ್ನು ಹೊಡೆದು ಸಾಯಿಸಿರುವ ಘಟನೆ  ಒಡಿಶಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಒಡಿಶಾದ ನಯಾಗಢ ಜಿಲ್ಲೆಯ ದಾಸ್ಪಲ್ಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಪಥರಾಪುಂಜ ಗ್ರಾಮದ ನಿವಾಸಿ ಬಿಜಯ್​ ಪ್ರಧಾನ್​ ಎಂದು ಗುರುತಿಸಲಾಗಿದೆ. ಗ್ರಾಮಸ್ಥರು ತೀವ್ರವಾಗಿ ಗಾಯಗೊಂಡ ಬಿಜಯ್‌ನ್ನು ಮೊದಲು ದಾಸ್ಪಲ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಅವರ ಸ್ಥಿತಿ ಹದಗೆಟ್ಟಿದ್ದರಿಂದ ನಯಾಗರ್ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ, ಅವರನ್ನು ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಯಿತು., ಅಲ್ಲಿ ದಿವ್ಯಾಂಗ ಯುವಕ ಕೊನೆಯುಸಿರೆಳೆದನು.

ಮೂಲಗಳ ಪ್ರಕಾರ, ಬಿಜಯ್ (35) ದೈಹಿಕವಾಗಿ ಅಂಗವಿಕಲರಾಗಿದ್ದು, ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮದುವೆ (Marriage)ಯಾಗುವ ಆಸೆಯನ್ನು ಹೇಳಿದರು. ಅವನ ಸಂಬಂಧಿಕರೆಲ್ಲರೂ ಅವನನ್ನು ಮದುವೆಯಾಗಿ ಜೀವನದಲ್ಲಿ ನೆಲೆಸಬೇಕೆಂದು ಬಯಸಿದ್ದರು ಆದರೆ ಅವನ ಮಲತಾಯಿ (Step mother) ಮದುವೆಯ ನಂತರ ಅವನು ಎಲ್ಲಾ ಆಸ್ತಿಯನ್ನು ಹೇಳಿಕೊಳ್ಳುತ್ತಾನೆ ಎಂಬ ಭಯದಿಂದ ಆತನಿಗೆ ಮದುವೆ ಮಾಡುವುದಕ್ಕೆ ನಿರಾಕರಿಸುತ್ತಿದ್ದಳು. ಹೀಗಾಗಿ ಮದುವೆ ಮಾಡುವಂತೆ ಕೇಳಿಕೊಂಡಾಗ, ಬಿಜಯ್ ಮೇಲೆ ಕೋಪಗೊಂಡ ಆತನ ಮಲತಾಯಿ ಆತನಿಗೆ ಥಳಿಸಿ ತಿಂಗಳಾನುಗಟ್ಟಲೆ ಊಟವನ್ನು ನೀಡಿರಲ್ಲಲ್ಲ. ಶನಿವಾರ ರಾತ್ರಿ ಈ ವಿಚಾರವಾಗಿ ಮತ್ತೊಮ್ಮೆ ಜಗಳ ನಡೆದಿದ್ದು, ಆಕ್ರೋಶಗೊಂಡ ಮಲತಾಯಿ ಆತನಿಗೆ ಥಳಿಸಿ ಸಾವಿಗೆ (Death) ಕಾರಣರಾಗಿದ್ದಾರೆ ಎನ್ನಲಾಗಿದೆ.

Latest Videos

undefined

ಕೃಷಿಯಲ್ಲಿ ವಿಕಲಾಂಗನ ಹೆಜ್ಜೆ ಗುರುತು..ಕುದುರೆ ಬಳಸಿ ಕೃಷಿ ಮಾಡ್ತಾನೆ ಹಳ್ಳಿ ಹೈದಾ

ಮೂಲಗಳ ಪ್ರಕಾರ, ಮಹಿಳೆಗೆ ಆಕೆಯ ಪತಿ (Husband) ಮತ್ತು ಸ್ವಂತ ಮಕ್ಕಳು ಕೊಲೆಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಮಲತಾಯಿ ಆರೋಪವನ್ನು ಅಲ್ಲಗಳೆದಿದ್ದು, ಸಂಬಂಧಿಕರು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಮೃತಳ ಚಿಕ್ಕಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ದಿವ್ಯಾಂಗ ಪುತ್ರಿಗೆ ತಿನ್ನಿಸಲು ರೋಬೋಟ್‌ ನಿರ್ಮಿಸಿದ ಕಾರ್ಮಿಕ
ವಿಶೇಷ ಚೇತನ (ದಿವ್ಯಾಂಗ) ಮಗಳನ್ನು ಸ್ವಾಭಿಮಾನಿಯಾಗಿಸಲು ಅಪ್ಪ ಪಟ್ಟ ಶ್ರಮ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಗೋವಾದ (Goa) ಬಿಪಿನ್‌ ಕದಂ (Bipin Kadam) ಎಂಬುವವರು ತಮ್ಮ ವಿಶೇಷ ಚೇತನ (specially abled) ಮಗಳಿಗೆ ಊಟ ಮಾಡಿಸಲು ವಿಶೇಷವಾದ ರೊಬೋಟ್ ಒಂದನ್ನು ನಿರ್ಮಿಸಿದ್ದಾರೆ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದಿದ್ದರೂ ಬಿಪಿನ್‌ ಕದಂ ಆನ್‌ಲೈನ್‌ನಲ್ಲೇ ಮಾಹಿತಿ ಪಡೆದು ಧ್ವನಿ ಆದೇಶ ಅನುಸರಿಸುವ ರೋಬೋಟಿನ ಆವಿಷ್ಕಾರ (Inovation)ಮಾಡಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಒಂದೆಡೆ ಮಗಳು ಅಂಗವಿಕಲೆ. ಇನ್ನೊಂದು ಕಡೆ ಪತ್ನಿ (Wife) ಕೂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮಗಳಿಗೆ ತಿನ್ನಿಸಲು ಆಗುತ್ತಿಲ್ಲ. ಹೀಗಾಗಿ ಕದಂ ಈ ವಿಶಿಷ್ಟಆವಿಷ್ಕಾರ ಮಾಡಿದ್ದಾರೆ.

ಇದರ ಬೆನ್ನಲ್ಲೇ ಗೋವಾ ರಾಜ್ಯ ನಾವೀನ್ಯತಾ ಸಮಿತಿ (State Innovation Committee), ಕದಂ ಆವಿಷ್ಕರಿಸಿದ ಮಾ ರೋಬೋಟ್‌ಗೆ (Robot) ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ರೋಬೋಟ್‌ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಣಕಾಸಿನ ನೆರವನ್ನು ಘೋಷಿಸಿದೆ.

ದಿವ್ಯಾಂಗರ ಸಹಾಯಕ್ಕೆ ನಿಂತ ಮೈಕ್ರೋಸಾಫ್ಟ್‌, 1 ಲಕ್ಷ ಉದ್ಯೋಗಾವಕಾಶ ಸೃಷ್ಟಿ!

ದಿನವೂ 12 ಗಂಟೆ ಕೆಲಸ ಮಾಡಿ ಮನೆಗೆ ಬಂದ ಬಳಿಕ ರೋಬೋಟ್‌ ನಿರ್ಮಾಣದ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಪಡೆದು ಕದಂ ತಾವೇ ಸ್ವತಃ ರೋಬೋಟ್‌ ನಿರ್ಮಿಸಿದ್ದಾರೆ. ಈ ರೋಬೋಟ್‌ನಲ್ಲಿ ಒಂದು ತಟ್ಟೆಯಿದೆ. ಅದರಲ್ಲಿ ಎಲ್ಲ ಬಗೆಯ ಆಹಾರವನ್ನು ಹಾಕಿದ ಬಳಿಕ ಕೇವಲ ಧ್ವನಿ ಆದೇಶದ ಮೂಲಕ ಅನ್ನ ಬೇಕೋ, ತರಕಾರಿ ಅಥವಾ ಇನ್ನಿತರೆ ಯಾವುದೇ ತಿನಿಸು ಬೇಕೋ ಎಂದು ಹೇಳಿದರೆ ಸಾಕು. ರೋಬೋಟ್‌ ಆ ಪದಾರ್ಥವನ್ನು ತಿನ್ನಿಸುತ್ತದೆ.

click me!