ಮದುವೆಗೆ ಮೊದಲೇ ಮಕ್ಕಳನ್ನು ಹೆರಬೇಕು! ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ

By Vinutha Perla  |  First Published Feb 19, 2023, 1:58 PM IST

ಭಾರತೀಯ ಸಂಸ್ಕೃತಿಯ ಪ್ರಕಾರ ಹುಡುಗ-ಹುಡುಗಿಯ ಮಧ್ಯೆ ಶಾರೀರಿಕ ಸಂಬಂಧವೇನಿದ್ದರೂ ಮದುವೆಯ ನಂತರವಷ್ಟೇ, ಆದ್ರೆ ಇಲ್ಲೊಂದೆಡೆ ಹುಡುಗಿ, ಮದುವೆಯ ಮೊದಲು ಮಕ್ಕಳನ್ನು ಹೆತ್ತರಷ್ಟೇ ಮದುವೆ ಮಾಡಲಾಗುತ್ತದೆ. ಎಲ್ಲಿರೋದು ಈ ವಿಚಿತ್ರ ಸಂಪ್ರದಾಯ. ಇಲ್ಲಿದೆ ಮಾಹಿತಿ.


ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿ ಎಲ್ಲಾ ವಿಚಾರಲ್ಲೂ ವಿಭಿನ್ನತೆಯಿದೆ. ಆಚರಣೆ, ಆಹಾರ, ಉಡುಗೆ-ತೊಡುಗೆ, ಭಾಷೆ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣಬಹುದು. ಮದುವೆ ಸಂಪ್ರದಾಯದಲ್ಲಿಯೂ ಈ ವ್ಯತ್ಯಾಸವನ್ನು ಗುರುತಿಸಬಹುದು. ಭಾರತದಲ್ಲಿ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳು ಇರುವುದರಿಂದ ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ದೇಶದ ಮೂಲೆ ಮೂಲೆಯಲ್ಲೂ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಅಲ್ಲಿ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ, ಅಲ್ಲಿ ತಾಯಿಯ ಚಿಕ್ಕಪ್ಪ-ಸೊಸೆಯ ವಿವಾಹವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿನ ಈ ವಿಶಿಷ್ಟ ವಿವಾಹ ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಇಲ್ಲಿ ಮಹಿಳೆಗೆ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶವಿದೆ
ಮೇಘಾಲಯದ ಖಾಸಿ ಬುಡಕಟ್ಟು ಜನಾಂಗದವರು (Tribal people) ವಿಶಿಷ್ಟವಾದ ವಿವಾಹ ಪದ್ಧತಿಯನ್ನು ಹೊಂದಿದ್ದಾರೆ. ಇಲ್ಲಿನ ಪದ್ಧತಿಯ ಪ್ರಕಾರ ಮಹಿಳೆ (Women) ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಬಹುದು. ಇಲ್ಲಿ ಮಹಿಳೆಯರು ಎಷ್ಟು ಬಾರಿ ಬೇಕಾದರೂ ಮದುವೆಯಾಗಬಹುದು. ಇಷ್ಟೇ ಅಲ್ಲ, ಹೆಣ್ಣಿಗೆ ಇಷ್ಟವಿದ್ದಲ್ಲಿ ಮದುವೆಯ (Marriage) ನಂತರ ತನ್ನ ಗಂಡನನ್ನು ಅತ್ತೆಯ ಮನೆಯಲ್ಲಿ ಕೂಡಾ ಇರಿಸಬಹುದು.

Tap to resize

Latest Videos

ವಿಧಿಯೇ ಎಷ್ಟು ಕ್ರೂರ..ಕಾಲಿಲ್ಲದವನ ಬಾಳಿಗೆ ಕಣ್ಣಾದಳು, ಕೈ ಬಿಟ್ಟು ಹೊರಟೇ ಹೋದ!

ಸೋದರ ಸಂಬಂಧಿಯೊಂದಿಗೆ ಮದುವೆ ಮಾಡಲಾಗುತ್ತದೆ
ಛತ್ತೀಸ್‌ಗಢದ ಧುರ್ವಾ ಬುಡಕಟ್ಟು ಜನಾಂಗದಲ್ಲಿ, ಸಹೋದರರು (Brothers) ಮತ್ತು ಸಹೋದರಿಯರು ಪರಸ್ಪರ ಮದುವೆಯಾಗುತ್ತಾರೆ. ಸೋದರ ಸಂಬಂಧಿ ಮತ್ತು ಸಹೋದರಿಯರನ್ನು ಮದುವೆಯಾಗುವ ಪದ್ಧತಿ ಇಲ್ಲಿ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ, ಮದುವೆ ಪ್ರಸ್ತಾಪವನ್ನು ತಿರಸ್ಕರಿಸುವವರಿಗೂ ದಂಡವನ್ನು ಕೂಡಾ ವಿಧಿಸಲಾಗುತ್ತದೆ.

ಮದುವೆಗೆ ಮೊದಲು ಮಕ್ಕಳನ್ನು ಹೆರಬೇಕು
ರಾಜಸ್ಥಾನ ಮತ್ತು ಗುಜರಾತ್‌ನ ಉದಯಪುರ, ಸಿರೋಹಿ, ಪಾಲಿ ಜಿಲ್ಲೆಗಳಲ್ಲಿ ವಾಸಿಸುವ ಗಾರ್ಸಿಯಾ ಬುಡಕಟ್ಟು ಜನರು ಗುಜರಾತಿ, ಮಾರ್ವಾರಿ, ಮೇವಾರಿ ಮತ್ತು ಭಿಲಿ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿ ಹುಡುಗ ಮತ್ತು ಹುಡುಗಿ ಮದುವೆಗೆ ಮುಂಚೆ ಒಟ್ಟಿಗೆ ವಾಸಿಸುತ್ತಾರೆ. ಅವರು ಮಕ್ಕಳನ್ನು ಹೆತ್ತರೆ ಮಾತ್ರ ಮದುವೆಯನ್ನು ಮಾನ್ಯಗೊಳಿಸಲಾಗುತ್ತದೆ. ಮದುವೆಗೂ ಮೊದಲೇ ಮಕ್ಕಳನ್ನು (Children) ಹೆರಲೇಬೇಕು.

ಚಿಕ್ಕಪ್ಪ ಮತ್ತು ಸೊಸೆಯ ಮದುವೆ
ದಕ್ಷಿಣ ಭಾರತದ ಸಮಾಜದಲ್ಲಿ ಚಿಕ್ಕಪ್ಪ-ಸೊಸೆಯ ಮದುವೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಪದ್ಧತಿಯ ಹಿಂದಿನ ಮುಖ್ಯ ಕಾರಣ ಭೂಮಿ-ಆಸ್ತಿ ಎಂದು ಹೇಳಲಾಗುತ್ತದೆ. ತಂಗಿ ತನ್ನ ಗಂಡನ (Husband) ಮನೆಯನ್ನು ಹೇಳಿಕೊಳ್ಳಬಾರದು ಎಂದು ಅವಳ ಸಹೋದರ ತನ್ನ ಮಗಳನ್ನು ಮದುವೆಯಾಗುತ್ತಾನೆ ಎಂದು ಹೇಳಲಾಗುತ್ತದೆ. ಒಟ್ನಲ್ಲಿ ದೇಶಾದ್ಯಂತ ಇನ್ನೂ ಜಾರಿಯಲ್ಲಿರುವ ಈ ವಿಚಿತ್ರ ಮದುವೆ ಸಂಪ್ರದಾಯಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತಿರುವುದಂತೂ ಸುಳ್ಳಲ್ಲ.

ಆ ಹುಡುಗನಲ್ಲಿ ಈ ಗುಣಗಳಿವೆಯಾ? ಮದ್ವೆಯಾಗಲು ಓಕೆ ಹೇಳ್ಬಹುದು ನೋಡಿ!

ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ. ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು (Weird tradition) ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.

ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಸಹೋದರರಲ್ಲಿ ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಆದರೆ ಈ ಮದುವೆಯ ನಂತ ಆಕೆ ಯಾರೊಂದಿಗೆ ಸಂಸಾರವನ್ನು ಮಾಡುತ್ತಾಳೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ. 

click me!