ಪ್ರೇಮಿಗಳ ದಿನ ಪ್ರತಿ ಲವರ್ಸ್‌ಗೂ ಸ್ಪೆಷಲ್ ಡೇ. ಈ ದಿನ ತಮ್ಮ ಸಂಗಾತಿಯೊಂದಿಗೆ ಖುಷಿಯಿಂದ ಸಮಯ ಕಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಆದ್ರೆ ಕೆಲವೊಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರದ ಕಾರಣ ಕದ್ದುಮುಚ್ಚಿ ಭೇಟಿಯಾಗಬೇಕಾಗುತ್ತದೆ. ರೆಸ್ಟೋರೆಂಟ್ ಒಂದರಲ್ಲಿ ಗಪ್‌ಚುಪ್ ಅಂತ ಪ್ರೇಮಿಯನ್ನು ಭೇಟಿ ಮಾಡ್ತಿದ್ದ ಹುಡುಗಿ ತಾಯಿ ಕೈಗೇನೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ವಾಲೆಂಟೈನ್ಸ್ ಡೇ ಕಳೆದು ದಿನಗಳೇ ಕಳೆಯಿತು. ಆದರೆ ಈ ಪ್ರೇಮಿಗಳ ದಿನವನ್ನು ಸ್ಪೆಷಲ್ ಆಗಿಸಲು ಕೆಲವೊಂದೆಡೆ ಲವರ್ಸ್ ಮಾಡಿದ ಸ್ಪೆಷಲ್ ಆರೇಂಜ್‌ಮೆಂಟ್ಸ್ ಇನ್ನೂ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ಪ್ರೇಮಿಗಳ ದಿನ ಜಗತ್ತಿನಾದ್ಯಂತ ಜೋಡಿಗಳು ಭಿನ್ನ-ವಿಭಿನ್ನವಾಗಿ ಆಚರಿಸಿದ್ದಾರೆ. ಕೆಲವೊಬ್ಬರು ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿದರೆ, ಇನ್ನು ಕೆಲವರು ಅತ್ಯದ್ಭುತ ಡೆಕೊರೇಷನ್ ಮೂಲಕ ತಮ್ಮ ಪ್ರೇಮಿಯನ್ನು ಖುಷಿಪಡಿಸಿದ್ದಾರೆ. ಆದರೆ ಈ ದಿನ ಎಲ್ಲರ ಪಾಲಿಗೂ ಖುಷಿಯಿಂದ ಕಳೆಯುವುದಿಲ್ಲ. ಮನೆಯಲ್ಲಿ ಹೇಳದೆ ಕದ್ದು ಮುಚ್ಚಿ ಪ್ರೀತಿ ಮಾಡುವವರು ಈ ದಿನ ತಮ್ಮ ಸಂಗಾತಿಯನ್ನು ಭೇಟಿ ಮಾಡಲು ಒದ್ದಾಡುವಂತಾಗುತ್ತದೆ. ಹಾಗೆಯೇ ತನ್ನ ಮನೆ ಮಂದಿಗೆ ತಿಳಿಯದಂತೆ ಕದ್ದುಮುಚ್ಚಿ ರೆಸ್ಟೋರೆಂಟ್‌ವೊಂದರಲ್ಲಿ ಪ್ರೇಮಿಯನ್ನು ಭೇಟಿ ಮಾಡಿದ ಹುಡುಗಿ ತನ್ನ ತಾಯಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಪ್ರೇಮಿಗಳ ದಿನದಂದು (Valentines Day) ಲವರ್ಸ್ ಪರಸ್ಪರ ಉಡುಗೊರೆ ವಿನಿಮಯ ಹಾಗೂ ಡೇಟಿಂಗ್, ಮೀಟಿಂಗ್ ಅಂತಾ ಇಡೀ ದಿನವನ್ನು ಎಂಜಾಯ್ ಮಾಡುತ್ತಾರೆ. ಕೆಲವರು ಪಾಲಕರ ಕಣ್ತಪ್ಪಿಸಿ ಕದ್ದುಮುಚ್ಚಿ ತಮ್ಮ ಬಾಯ್‌ಫ್ರೆಂಡ್ ಅಥವಾ ಗರ್ಲ್ಫ್ರೆಂಡ್ ಭೇಟಿಯಾಗುತ್ತಾರೆ. ಹೀಗೆ ಭೇಟಿಯಾಗುವಾಗಲೇ ಹುಡುಗಿ ತನ್ನ ತಾಯಿ (Mother) ಕೈಗೆ ಸಿಕ್ಕಿಬಿದ್ದಿದ್ದಾಳೆ.
Valentines Day: ಮದುವೆ ಪ್ರಮಾಣಪತ್ರವನ್ನು ತನ್ನ ಕೈಗೆ ಹಚ್ಚೆ ಹಾಕಿಸ್ಕೊಂಡು ಪತ್ನಿಗೆ ಸರ್‌ಪ್ರೈಸ್ ನೀಡಿದ ಪತಿ..!
ರೆಸ್ಟೋರೆಂಟ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಗಳು
ಪ್ರೇಮಿಗಳ ದಿನದಂದೇ ತಾಯಿ ತನ್ನ ಮಗಳನ್ನು ರೆಸ್ಟೋರೆಂಟ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಮಗಳನ್ನು ಯುವಕನೊಂದಿಗೆ ನೋಡಿದ ತಾಯಿ ಕೋಪದಿಂದ ಕಾಲಲ್ಲಿದ್ದ ಚಪ್ಪಲಿಯನ್ನು ಕಳೆದುಕೊಂಡು ಯುವಕನಿಗೆ ಹಿಗ್ಗಾಮುಗ್ಗಾ ಬಾರಿಸುತ್ತಾಳೆ. ಈ ವೇಳೆ ಡೈ ಬಾಯ್‌ಫ್ರೆಂಡ್ ಎದುರಿಗೆ ಕುಳಿತಿದ್ದ ಯುವತಿ ಎದ್ದು ತನ್ನ ತಾಯಿಯನ್ನು ತಡೆಯಲು ಯತ್ನಿಸುತ್ತಾಳೆ. ಆದರೆ, ಸುಮ್ಮನಾಗದ ತಾಯಿ ಮಗಳಿಗೂ ಚಪ್ಪಲಿ ಸೇವೆಯನ್ನು ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ತನ್ನ ಗರ್ಲ್ಫ್ರೆಂಡ್ಗೆ ಹೊಡೆಯಬೇಡಿ ಎಂದು ಯುವಕ ಆಕೆಯ ತಾಯಿಯನ್ನು ಕೇಳಿಕೊಳ್ಳುತ್ತಾನೆ. ಆದರೆ, ಯಾರ ಮಾತನ್ನು ಕೇಳುವ ವ್ಯವಧಾನ ಇರದ ಮಹಿಳೆ ಮನಸೋ ಇಚ್ಛೆ ಇಬ್ಬರಿಗೂ ಥಳಿಸುತ್ತಾಳೆ. ವಿಡಿಯೋವನ್ನು ಘರ್ ಕೆ ಕಲೇಶ್ ಹೆಸರಿನ ಟ್ವಿಟರ್ ಬಳಕೆದಾರ ಶೇರ್ ಮಾಡಿಕೊಂಡಿದ್ದು, 3 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಪೋಷಕರ ಕಣ್ಣು ತಪ್ಪಿಸಿ ತಿರುಗಾಡಲು ಹೋಗುವ ಮಕ್ಕಳಿಗೆ ತಕ್ಕ ಶಾಸ್ತಿಯಾಗಿದೆ ಎಂದರೆ ಇನ್ನು ಕೆಲವರು ತಾಯಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದೇ ಪರಿಸ್ಥಿತಿಯಲ್ಲಿ ತಮ್ಮ ವೈಯಕ್ತಿಕ ಜೀವನದ ಅನುಭವಗಳನ್ನು ಹಂಚಿಕೊಂಡರು.
ಮುತ್ತಿನ ಗಮ್ಮತ್ತು..ನೀರೊಳಗೆ ಬರೋಬ್ಬರಿ 4 ನಿಮಿಷ ಚುಂಬಿಸಿ ಗಿನ್ನಿಸ್ ದಾಖಲೆ ಬರೆದ ಜೋಡಿ
ಮನೆ ಟೆರೇಸ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಸಿಕ್ಕಿಬಿದ್ದ ಮಗಳು, ಅಮ್ಮನಿಂದ ಚಪ್ಪಲಿ ಪೂಜೆ!
ಕೆಲವು ದಿನಗಳ ಹಿಂದೆ ಹುಡುಗಿಯೊಬ್ಬಳು ತನ್ನ ಲವರ್‌ನ್ನು ಟೆರೇಸ್‌ನಲ್ಲಿ ಭೇಟಿಯಾಗುವಾಗ ತನ್ನ ತಾಯಿ ಕೈಗೆ ಸಿಕ್ಕಿಬಿದ್ದ ಘಟನೆ ಉತ್ತರಭಾರತದಲ್ಲಿ ನಡೆದಿತ್ತು. ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವೀಡಿಯೊವನ್ನು ಅವರ ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಟೆರೇಸ್‌ಗೆ ಆಗಮಿಸುವ ತಾಯಿ ಮೂಲೆ ಮೂಲೆಯಲ್ಲಿ ಹುಡುಕಿ ಬಾಯ್‌ಫ್ರೆಂಡ್‌ನ್ನು ಕಂಡು ಹುಡುಕುತ್ತಾಳೆ. ನಂತರ ಕಾಲಿನಿಂದ ಚಪ್ಪಲಿಯನ್ನು ತೆಗೆದು ಆತನಿಗೆ ಸರಿಯಾಗಿ ಹೊಡೆಯುತ್ತಾಳೆ. ಆತ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಆ ತಾಯಿ ನಂತರ ಮಗಳನ್ನೂ ಕರೆದು ಅವಳಿಗೂ ಚಪ್ಪಲಿಯಲ್ಲಿ (Slippers) ಹೊಡೆಯುವುದನ್ನು ನೋಡಬಹುದು.
ವೀಡಿಯೊವನ್ನು ಫೆಬ್ರವರಿ 14 ರಂದು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. 'ಆಂಟಿ, ಮಗಳ ವ್ಯಾಲೆಂಟೈನ್ಸ್ ಡೇ ಪ್ಲಾನ್‌ನ್ನು ಹಾಳು ಮಾಡಿದರು' ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ವೀಡಿಯೋಗೆ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಲಭಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಈ ತಾಯಿ ಶೀಘ್ರವೇ ತನ್ನ ಮಗಳಿಗೆ (Daughter) ಮದುವೆ ಮಾಡಿ ಕಳುಹಿಸುತ್ತಾರೆ ಎಂದಿದ್ದಾರೆ. ಇನ್ನು ಕೆಲವರು, ಸಿಂಗಲ್ ಆಗಿರುವವರು ಇದನ್ನು ನೋಡಿ ಖುಷಿ ಪಡಿ ಎಂದಿದ್ದಾರೆ. ಮತ್ತೊಬ್ಬರು 'ಹುಡುಗನ ಸ್ನೇಹಿತನೇ ಈ ವಿಷಯವನ್ನು ಲೀಕ್ ಮಾಡಿರಬಹುದು' ಎಂದು ಕಾಮೆಂಟಿಸಿದ್ದಾರೆ.
Kalesh B/w Couples and Girl’s Mom on Valentine’s Daypic.twitter.com/01Oia07RRt
— Ghar Ke Kalesh (@gharkekalesh)